ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೨
1 day 12 hours ago- Ashwin Rao K Pರಾಗವಾವುದೊ…
ರಾಗವಾವುದೊ ತಾಳವಾವುದೊ
ಹಾಡನಂತೂ ಹಾಡುವೆ
ಕೇಳುಗರ ಮನ ತಣಿಯದಿದ್ದರು
ತಣಿದರೂ ನಲಿದಾಡುವೆ !
ನನ್ನ ಹಾಡನು ತೇಲಿ ಬಿಡುವೆನು
ಹೊತ್ತು ನಡೆವನು ಮಾರುತ
ಸುತ್ತಲೆಲ್ಲಾ ತೂರಿ ಕೊಡುವನು
ಹಾಡಿನೊಸಗೆಯ ಸಾರುತ !
ನಾ ಕಲಾವಿದನೆಂಬ ಹೆಸರನು
ಪಡೆದೆನೆಂದೋ ಅಂದಿಗೆ ;
ಬಿಟ್ಟಿಹೆನು ಜನಜಂಗುಳಿಯ ಮನ-
ದಿಂದ ಬರುತಿಹ ನಿಂದಗೆ !
ನಾ ಕಲಾವಿದ ನನ್ನ ಜೀವನ
ಕಲೆಗೆ ಮೀಸಲಾಗಿದೆ ;
ನನ್ನ ಜೀವನದೊಳಿತು ಕೆಡುಕುಗ-
ಳೆಲ್ಲ ಕಲೆಗೇ ಸೇರಿದೆ ;
ನಾನು ನಂಬಿದ ಕಲೆಯ ಬದುಕಿಗೆ
ಸಾನುರಾಗದ ಬೆಂಬಲ ;
ಕೋದುಕೊಂಡುದೆ ಧನ್ಯತೆಯ ಛಲ
ಮಾಸಿಹೋಗದ ಹಂಬಲ !
***
ರಾವಣ
ಹತ್ತು ಮುಖಗಳನು ಹೊತ್ತ ರಾವಣನಿ-
ಗಿತ್ತೆ ಸ್ವಸ್ಥ ಚಿತ್ತ?
ಮತ್ತೆ - ಮತ್ತೆ ಭುಗಿಲೆದ್ದ ಕಾಮನೆಗ-
ಳತ್ತ ಅವನು ವ್ಯಸ್ಥ !
ಸರ್ವಶಕ್ತನೆಂದೆನಿಸಿಕೊಂಡರೂ
ಮನಸಿಗಿರದ ಹಿಡಿತ ;
ಗರ್ವದಿಂದ ತುಂ… ಮುಂದೆ ಓದಿ...