ದೋಸೆ, ಇಡ್ಲಿ ಪ್ರಿಯರಿಗೆ ತಮಿಳುನಾಡಿನ ಸಾಮಾನ್ಯ ಹೋಟೆಲ್ಗಳು ಸ್ವರ್ಗ!
1 day 6 hours ago - ಬರಹಗಾರರ ಬಳಗವಾಸ್ತವದಲ್ಲಿ ತಿಂಡಿಪೋತನಾಗಿರುವ ನನಗೆ ಯಾವುದೇ ಪ್ರದೇಶಕ್ಕೆ ಹೋದಾಗ ಮೊದಲು ಲವ್ ಅಥವಾ ಹೇಟ್ ಆಗುವುದು ಅಲ್ಲಿಯ ತಿಂಡಿ-ಆಹಾರಗಳ ಮೇಲಾಗಿರುತ್ತದೆ. ನನ್ನ ಪುಣ್ಯಕ್ಕೆ ತಮಿಳುನಾಡಿನಲ್ಲಿದ್ದ ಐದು ದಿನಗಳಲ್ಲಿ ಒಂದು ಹೊತ್ತಿನ ಬೆಳಗಿನ ಉಪಹಾರ ಬಿಟ್ಟರೆ ಉಳಿದೆಲ್ಲೆಡೆ ಅದ್ಭುತವಾಗಿತ್ತು. ಕರ್ನಾಟಕ, ಬೆಂಗಳೂರಿನ ದೋಸೆಗಳೇ ಮಹಾನ್ ಎನ್ನುವ ತಲೆಯಿಲ್ಲದವನಿಗೆ ತಮಿಳುನಾಡಿನ ದೊಡ್ಡ ದೊಡ್ಡ ಕ್ರಿಸ್ಪಿ ದೋಸೆ ಹಾಗೂ ಅದಕ್ಕೆ ನೀಡುವ ಚಟ್ನಿಗೆ ಫಿದಾ ಆಗಿತ್ತು. ಕೊನೆಯಲ್ಲಿ ಕರ್ನಾಟಕದ ಗಡಿ ಹತ್ತಿರ ಬಂದ ಬಳಿಕವೂ ಮಧ್ಯಾಹ್ನದ ಊಟಕ್ಕೂ ದೋಸೆ ತಿನ್ನಬೇಕು ಎನ್ನುವಷ್ಟರ ಮಟ್ಟಿಗೆ ಹುಚ್ಚು ಹಿಡಿಸಿತ್ತು.
ತಮಿಳುನಾಡಿಗೆ ಹೊರಡುವ ಪ್ಲ್ಯಾನ್ ಮಾಡಿದಾಗ ನನ್ನ ತಮಿಳು ಸಹೋದ್ಯೋಗಿಗಳ ಬಳಿ ನಿಮ್ಮೂರಿನ ವಿಶೇಷ ತಿಂಡಿಗಳ ಪಟ್ಟಿ ಕೊಡಿ ಎಂದು ಕೇಳಿದ್ದೆ. ಏಕೆಂದರೆ ನಾವು ಹೋಗಿರುವ ಊರಿನ ವಿಶೇಷ ಸ್ಥಳೀಯ ಆಹಾರಗಳನ್ನು ಸವಿಯುವುದು ನನ್ನಲ್ಲಿ ಮೊದಲಿನಿಂದಲೂ ಬಂದ ಅಭ್ಯಾಸ. ನಮ್ಮೂರಿಗೆ ಬಂದವರಿಗೆ ತೆಳ್ಳೇವು, ತೊಡೆದೇವು, ಅಪ್ಪೆಹುಳಿ, ಹಲಸಿನಕಾಯಿ ಪೋಳ್ದ್ಯ, ಬಾಳೆಕಾಯಿ ಹಶಿ, ನುಗ್ಗೆಸೊಪ್ಪಿನ ಪಲ್ಯ, ಕೆಸುವಿನ ಸೊಪ್ಪಿನ ಕರಕಲಿ, ಪತ್ರೊಡೆ, ವಂದಾನೆ ಜಡೆ ತಂಬಳಿ, ಅಪ್ಪೆಮಿಡಿ ಉಪ್ಪಿನಕಾಯಿಯನ್ನೇ ಬಾಳೆಯಲ್ಲಿ ಅಲಂಕರಿಸುವ ರೂಢಿ ನಮ್ಮದು. ಸಾವಿರಕ್ಕೂ ಅಧಿಕ ಜನ ಬಂದಿದ್ದ ನನ್ನ ಮದುವೆಯಲ್ಲೂ ಇದನ್ನೇ ಪಾಲಿಸಲಾಗಿತ್ತು. ಹೀಗಾಗಿ ಯಾವುದೇ ಊರಿಗೆ ಹೋದಾಗ ಅಲ್ಲಿಯ ಸ್ಥಳೀಯ ಆಹಾರದ ರುಚಿಯನ್ನು ಆನಂದಿಸದಿದ್ದರೆ, ಆ ಪ್ರವಾಸ ಪರಿಪೂರ್ಣ ಎನಿಸುವುದೇ ಇಲ್ಲ. ಆದರೆ ನನ್ನ ಸಹೋದ್ಯೋಗಿಗಳು ಒಂದಿಷ್ಟು ಬೇಕರಿಯಲ್ಲಿ ಸಿಗುವ ಸ್ವೀಟ್ಗಳ ಹೆಸರನ್ನು ನನಗೆ ಹೇಳಿದ್ದರು. ಆದರೆ ಯಾವಾಗ ಮೊದಲ ದಿನದಂದು ಕೃಷ್ಣಗಿರಿ, ತಿರುಚಿ ಹಾಗೂ ತಂಜಾವೂ… ಮುಂದೆ ಓದಿ...