‘ವರ್ತಮಾನ ಭಾರತ' ಎನ್ನುವ ನೂತನ ಕೃತಿಯಲ್ಲಿ ಖ್ಯಾತ ಚಿಂತಕ, ಲೇಖಕ ಪುರುಷೋತ್ತಮ ಬಿಳಿಮಲೆ ಇವರು ಪ್ರಕಟ ಮಾಡಿದ್ದಾರೆ. ಸಮಕಾಲೀನ ಘಟನೆಗಳ ಬಗ್ಗೆ ಇವರು ಬರೆದ ಪುಟ್ಟ ಪುಟ್ಟ ಬರಹಗಳೇ ಸಂಗ್ರಹಗೊಂಡು ‘ವರ್ತಮಾನ ಭಾರತ’ ಎನ್ನುವ ಕೃತಿಯಾಗಿ ಹೊರಬಂದಿದೆ…
ಈ ವಿಷಯ ಸ್ವಲ್ಪ ವಿಚಿತ್ರವಾದರೂ ಇದರಲ್ಲಿರುವ ವಾಸ್ತವ ಮತ್ತು ಸತ್ಯದ ಹುಡುಕಾಟ ನಡೆಸಬೇಕಾಗಿದೆ. ಚುನಾವಣೆಗಳಲ್ಲಿ ಮತ ಹಾಕಲು ಹಣ ಪಡೆಯುವವರಿಗೆ ಬೇಡ ಎಂದು ಹೇಳುವುದಕ್ಕಿಂತ ಅತಿ ಹೆಚ್ಚಿನ ಮಹತ್ವ ಹಣ ನೀಡುವ ಖದೀಮರಿಗೆ ಕಠಿಣ ಶಿಕ್ಷೆ ನೀಡಲು ಅಥವಾ…
ಅದ್ಯಾರೋ ದೊಡ್ಡವರೊಂದು ಕಡೆ ಹೇಳಿದ್ರು. ಗುರುತ್ವಾಕರ್ಷಣ ಬಲ ಇದ್ದರೆ ಸಾಕು, ಈ ನೆಲದ ಮೇಲೆ ಗಟ್ಟಿಯಾಗಿ ನಡೆಯಬಹುದು ಅಂತ. ಅದನ್ನೇ ನಂಬಿದ್ದೆ ನಾನು. ಅದು ಒಂದಷ್ಟು ಸಮಯದವರೆಗೆ ಆಗಬಹುದು. ಆದರೆ ಕಾಲಕ್ರಮೇಣ ಹೆಚ್ಚು ಸಮಯದವರೆಗೆ ಗಟ್ಟಿಯಾಗಿ…
ದಂತ ಮಾರ್ಜನ, ಹಸ್ತ ಮಾರ್ಜನ, ಶರೀರ ಮಾರ್ಜನ ಹೀಗೆ ಅನೇಕ ಮಾರ್ಜನಗಳನ್ನು ಕೇಳಿದ್ದೇವೆ. “ಮತಿ ಮಾರ್ಜನ” ಏನಿದು? ಈ ಗೊಂದಲವು ಅನೇಕರಲ್ಲಿ ಈಗ ತಾನೇ ಹುಟ್ಟಿದ್ದರೆ ಅದಕ್ಕೆ ನಾನು ಕಾರಣನಲ್ಲ. ಆಂಗ್ಲ ಭಾಷೆಯಲ್ಲಿ, ‘Brain washing’ ಅಂತ…
ಹಸು ಗಂಡು ಕರು ಹಾಕಿತೆಂದರೆ ತಲೆಬಿಸಿ ಮಾಡಿಕೊಂಡು ಅದನ್ನು ತರಾತುರಿಯಲ್ಲಿ ಕಸಾಯಿಗೆ ೫೦೦-೧೦೦೦ರೂ. ಗಳಿಗೆ ಮಾರಬೇಡಿ. ಅದರಿಂದ ತಿಂಗಳಿಗೆ ಕನಿಷ್ಟ ೧೫೦೦ ರೂ. ಆದಾಯ ಇದೆ ಎಂದರೆ ನಂಬುತ್ತೀರಾ? ನಿಜವಾಗಿಯೂ ಇದೆ. ಒಂದು ಗಂಡು ಕರು ದಿನಕ್ಕೆ ಒಂದು…
ದೇಶದ ಈಶಾನ್ಯ ಪ್ರದೇಶದ ರಾಜ್ಯಗಳಲ್ಲಿ ಅದರಲ್ಲೂ ಅರುಣಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಮೂಲ ಸೌಕರ್ಯಗಳ ವಿಸ್ತಾರ ಚೀನಾದ ಕಣ್ಣನ್ನು ಕೆಂಪಾಗಿಸಿದೆ. ಹಿಂದೆ ಭಾರತ ಗಡಿಪ್ರದೇಶಗಳ ಅಭಿವೃದ್ಧಿಯತ್ತ ಅಷ್ಟೊಂದು ಗಮನ…
ತನ್ನ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ನಿಯಂತ್ರಣ ಹೊಂದಿ, ಆಸೆಗಳನ್ನೆಲ್ಲ ಜಯಿಸಿದ, ಜ್ಞಾನೋದಯವನ್ನು ಹೊಂದಿದ ಗೌತಮ ಬುದ್ಧರಿಗೂ ತಮ್ಮ ಪರಿನಿರ್ವಾಣ ಸಮಯದಲ್ಲಿ ಕಿಬ್ಬೊಟ್ಟೆಯ ನೋವು ಕಾಡುತ್ತಿತ್ತು ಎಂಬ ಮಾತೊಂದಿದೆ. ಅದರ ಅರ್ಥ ಕಷ್ಟಗಳು…
ವಯಸ್ಸು ಹೆಚ್ಚಾಗ್ತಾ ಹೋದ ಹಾಗೆ ಕಿವಿ ಹಾಗೂ ಮನಸ್ಸಿಗೆ ಹೊಸ ಹೊಸತು ರುಚಿಸುತ್ತದೆ ಎಂದುಕೊಳ್ಳುತ್ತೇನೆ. ಸಣ್ಣ ವಯಸ್ಸಿನಲ್ಲಿ ಯಾವುದೆಲ್ಲ ಪ್ರಿಯವಾಗ್ತಾ ಇದೆಯೋ ಅದೀಗ ಆಪ್ತವಾಗ್ತಾ ಇಲ್ಲ. ನನ್ನದು ಅನ್ನಿಸ್ತಾ ಇಲ್ಲ. ಅಂದು ಅಮ್ಮ ಹಾಡುತ್ತಿದ್ದ…
ಈ ಘಟನೆ ಓದಿ. ಶ್ಯಾಮ ಎಂಬ ತರುಣನಿದ್ದನು. ಒಂದು ಒಳ್ಳೆಯ ಉದ್ಯೋಗದಲ್ಲಿದ್ದನು. ಗಳಿಕೆ ತುಂಬಾ ಜೋರಾಗಿತ್ತು. ಆತ ತುಂಬಾ ದೊಡ್ಡವನಾಗಬೇಕು ಎಲ್ಲರೂ ನನ್ನನ್ನು ಗೌರವಿಸಬೇಕು ಎಲ್ಲರಿಗಿಂತ ನಾನು ಮೇಲೆ ಇರಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದನು. ಆಗ…
ಒಂದು ಊರಿನ ಬಯಲು. ಹಲವಾರು ಕುರಿಗಳು, ಟಗರುಗಳು ಬಯಲಲ್ಲಿರುವ ಹುಲ್ಲನ್ನು ಮೇಯುತ್ತಿದ್ದವು. ಅದೇ ಸಂದರ್ಭಕ್ಕೆ ಅಲ್ಲಿಗೆ ಹಸಿದ ತೋಳವೊಂದು ಆಹಾರ ಹುಡುಕುತ್ತಾ ಬಂತು. ಸುತ್ತಲೂ ನೋಡಿದಾಗ ಅನೇಕ ಕುರಿ, ಟಗರುಗಳು ಅಲ್ಲಿ ಹುಲ್ಲು ಮೇಯುತ್ತಿರುವುದು…
ಕನ್ನಡ ನಾಡಿದು ನಮ್ಮದು ಎನ್ನುವ
ಹೆಮ್ಮೆಯು ಹರಿದಿದೆ ನರನಾಡಿ
ಕನ್ನಡ ಮಾತೆಗೆ ಮಣಿಯುವ ಭಕ್ತಿಯು
ನಮ್ಮಯ ಎದೆಯಲಿ ಮನೆಮಾಡಿ
ನೌಕರಿ ಹಿಡಿಯಲು ಬರುವರು ಕೆಲವರು
ಜೀವನ ಪಯಣಕೆ ರಹದಾರಿ
ಅಂಗಡಿ ಇರಿಸಲು ಬರುವರು ಹಲವರು
ಲಾಭವ ದೃಷ್ಟಿಯ ವ್ಯಾಪಾರಿ
…
ನಾವು ಯಾವುದಾದರೂ ವಸ್ತು ತುಂಬಾ ತೆಳು ಇದೆ ಎನ್ನುವುದಕ್ಕೆ ಈರುಳ್ಳಿ ಸಿಪ್ಪೆಯಂತೆ ಎಂದು ಹೇಳುವುದಿದೆ. ಈರುಳ್ಳಿ ಎಂಬುದು ಬಹು ತೆಳು ಸಿಪ್ಪೆಗಳಂತಹ ವಸ್ತುಗಳು ಸೇರಿ ಆಗಿರುವ ಒಂದು ಅಪರೂಪದ ಬಹು ಉಪಯೋಗಿ ತರಕಾರಿ. ಈರುಳ್ಳಿಯ ಎಲ್ಲಾ ಭಾಗಗಳು…
ನಿವೃತ್ತ ಮುಖ್ಯ ಶಿಕ್ಷಕಿ, ಕವಯತ್ರಿ ಶ್ರೀಮತಿ ರತ್ನಾ ಕೆ ಭಟ್ ತಲಂಜೇರಿ ಇವರ ನೂತನ ಕೃತಿ 'ಹನಿ ಹನಿಗಳ ನಡುವೆ' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕೃತಿಯ ಪ್ರಮುಖ ಅಂಶವೆಂದರೆ ಇದೊಂದು ‘ಆಲ್ ಇನ್ ಒನ್' ಎನ್ನುವಂಥ ಪುಸ್ತಕ. ಏಕೆಂದರೆ ಹನಿ ಕವನದ…
ನನ್ನ ಆತ್ಮೀಯ ಮಿತ್ರನೊಬ್ಬ Aeronautical Engineering ನಲ್ಲಿ ಮೊದಲ Rank ಬಂದು ಚಿನ್ನದ ಪದಕ ಪಡೆದ. ಕಾಲೇಜಿನಲ್ಲಿ ಇರುವಾಗಲೇ ವಿಶಿಷ್ಟ ವಿಮಾನದ ಮಾದರಿಯನ್ನು ವಿನ್ಯಾಸಗೊಳಿಸಿ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ವೈಮಾನಿಕ ಉತ್ಸವದಲ್ಲಿ…
ನಾನು ಎಷ್ಟು ಸಾಮರ್ಥ್ಯಗಳನ್ನು ನನ್ನೊಳಗೆ ತುಂಬಿಸಿಕೊಳ್ಳಬೇಕು, ಯಾವ ಯಾವ ಸಾಮರ್ಥ್ಯಗಳು ನನ್ನೊಳಗೆ ಗಟ್ಟಿಯಾಗಿ ಸ್ಥಿರವಾಗಿರಬೇಕು, ಇದನ್ನ ನಾನು ಹೇಗೆ ಅರ್ಥ ಮಾಡಿಕೊಳ್ಳುವುದು ಒಂದು ಗೊತ್ತಾಗ್ತಾ ಇಲ್ಲ. ಈ ಪ್ರಶ್ನೆಗೆ ಉತ್ತರ ಬೇಕಿತ್ತು.ಕಾರಣ…
ಯಾರೋ ಒಬ್ಬರು ಏನೋ ವಿಷಯ ಹೇಳಿದಾಗ ಅದನ್ನು ಪೂರ್ತಿ ಕೇಳಿ ಉತ್ತರಿಸುವಷ್ಟು ತಾಳ್ಮೆ ನಮ್ಮಲ್ಲಿಲ್ಲ. ಆಗ ಕೊಡುವ ತಕ್ಷಣದ ಪ್ರತಿಕ್ರಿಯೆಯಿಂದ ನಾವು 'ಮೂರ್ಖ'ರೆನಿಸಿಕೊಳ್ತೇವೆ. ಇಲ್ಲಿ ಬುದ್ಧಿ ಕಡಿಮೆಯಾದ ಮೂರ್ಖ ಅಲ್ಲ. ಒಂದು ರೀತಿಯ 'ತಮಾಷೆ,ಹಾಸ್ಯ…
“ಅಮ್ಮ ಆ ಸ್ಕೂಟರ್ ನೋಡು ಎಷ್ಟು ಚೆನ್ನಾಗಿದೆ" ಎಂದ ರಮೇಶ. ತಾಯಿ ಯಶೋಧಾ ಅಷ್ಟೊಂದು ಆಸಕ್ತಿ ತೋರಲಿಲ್ಲ. ಮಗ ಪ್ರತಿಬಾರಿಯೂ ಸ್ಕೂಟರ್ ಬಗ್ಗೆ ಮಾತಾಡುತ್ತಿದ್ದ. ತನ್ನ ಗೆಳೆಯರು ಸ್ಕೂಟರ್ ಮೇಲೆ ಓಡಾಟ ಮಾಡುತ್ತಿದ್ದ ಬಗ್ಗೆ ತಾಯಿಗೆ ತಿಳಿಸುತ್ತಿದ್ದ…
"ನೀನ್(ನೀವು) ಕವಿಯಲ್ಲ ಮಾರಾಯ(ಸರ್) ಸಾಹಿತ್ಯ ಸಮ್ಮೇಳನ ಅಂದ್ರೆ ಹೋಗದಿರ್ತೀಯ(ರ)...?" ಅಂತ ಕೆಲ ಕೆಲವರು ಅನ್ನುತ್ತಿರಬೇಕಾದರೆ "ಹೌದಲ್ಲ, ನಾನು ಹೋಗದೆ ಮತ್ಯಾರು ಹೋಗೋದು" ಎಂದು ಕವಿಮಹಾಶಯನೆಂಬ ಕೊಂಬು ತುಸು ಉದ್ದವೇ ಮೂಡಿ, ಕೂತಲ್ಲಿಂದೆದ್ದು…
ಈ ಕಾಲದಲ್ಲೂ
ಜಾತಿಗಳೆಂಬ ಹೆಗ್ಗಣಗಳು
ಇರುವುದು ವಿಶೇಷ
ಆ ಜಾತಿ ಈ ಜಾತಿ
ಎನ್ನುತ್ತಲೇ ನಾವು
ಅಜಾದಿಗಳು
ಜಾತ್ಯಾತೀತವೆನ್ನುವರ
ಕಂಡಾಗ, ನಗುವುದೋ
ಅಳುವುದೋ !
ಜನಸಾಮಾನ್ಯರೆ
ನೀವೇ ಹೇಳಿ...?