July 2025

  • July 04, 2025
    ಬರಹ: Shreerama Diwana
    ಜುಲೈ 1. ವೈದ್ಯರ ದಿನ - ಪತ್ರಕರ್ತರ ದಿನ -  ಲೆಕ್ಕಪರಿಶೋಧಕರ ದಿನ - ಅಂಚೆ ಕಾರ್ಮಿಕರ ದಿನ. ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು…
  • July 04, 2025
    ಬರಹ: ಬರಹಗಾರರ ಬಳಗ
    ನೀನ್ಯಾಕೆ ಕೈ ಮುಗಿಯೋದ್ದಕ್ಕೆ ಬಂದಿದ್ದೀಯಾ? ಗುಡಿಯ ಒಳಗಿರುವ ನನಗೆ ಕೈ ಮುಗಿದ ಕೂಡಲೇ ನಿನಗೆ‌ಒಳಿತಾಗುತ್ತದೆ ಅಂದುಕೊಂಡಿದ್ದೀಯಾ? ಓ ಮಾರಾಯ ನಾನು ನಿನ್ನ ಪರಿಶ್ರಮಕ್ಕೆ ಬೆಲೆ‌ಕೊಡುವವನು ಹೊರತು ಸೋಮಾರಿತನಕ್ಕೆ‌ ಬಹುಮಾನ‌ ನೀಡುವವನಲ್ಲ,…
  • July 04, 2025
    ಬರಹ: ಬರಹಗಾರರ ಬಳಗ
    ನಾವು ಮತ್ತೆ ಮತ್ತೆ ಹೊರಟ ಬಿಂದುವಿಗೇ ಮರಳುತ್ತಿದ್ದೇವೆ ಅಂತನ್ನಿಸುತ್ತಿದೆ ಅಲ್ಲವೇ. ವಿಷಯಗಳೇ ಹಾಗೆ ಒಂದೊರೊಳಗೊಂದು ತಳುಕು ಹಾಕಿಕೊಂಡಿರುವುದರಿಂದ ಈ ತಳುಕನ್ನು ಬಿಡಿಸಲು ನಾವು ಪುನಃ ಪುನಃ ಹೊರಟ ಬಿಂದುವಿಗೆ ಬರಲೇಬೇಕಾಗುತ್ತದೆ.  ನಾವು…
  • July 04, 2025
    ಬರಹ: ಬರಹಗಾರರ ಬಳಗ
    ತಾನು ಮಾತ್ರ ಉತ್ತಮ, ಉಳಿದವರೆಲ್ಲ ಅಧಮರು. ಮಧ್ಯಮರು, ಏನೂ ಪ್ರಯೋಜನವಿಲ್ಲದವರೆಂದು ಯಾವತ್ತೂ ಭಾವಿಸಬಾರದು. ಒಂದಿಲ್ಲೊಂದು ವಿಶೇಷಗುಣಗಳನ್ನು ಪ್ರತಿಯೊಂದು ಜೀವಿಯಲ್ಲೂ ದೇವ ನೀಡಿರುತ್ತಾನೆ. ನಾವೆಲ್ಲ ಅದನ್ನು ಕಂಡವರು. ಆದರೂ ಹೇಳುವುದೊಂದು ಚಪಲ…
  • July 04, 2025
    ಬರಹ: ಬರಹಗಾರರ ಬಳಗ
    ಅವಳೆ ಇವಳು ಇವಳೆ ಅವಳು ನನ್ನ ಮೋಹ ರಾಗಿಣಿ ಒಲುಮೆ ಬಲುಮೆ ಚಿಲುಮೆಯರಳೆ ಚೆಲುವ ಪಡೆದ ಮೋಹಿನಿ    ಅಂತರಂತರಂಗದೊಳಗೆ  ಮೀಟಿ ಪ್ರೇಮ ಹೂ ನಗೆ ಬಂತು ಮನಕೆ ವೇಣುಗಾನ  ಚಿತ್ತದೊಳಗೆ ಸವಿಬಗೆ   ರೂಪವರಳಿ ತನುವು ಹೊರಳಿ  ತೀರ ಸೇರಿ ನಲಿಯಿತು 
  • July 03, 2025
    ಬರಹ: Ashwin Rao K P
    ಪೇರಳೆ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಮತ್ತು ಮಧುಮೇಹವನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಪೇರಳೆ ಎಲೆಗಳು ಪೇರಳೆ ಹಣ್ಣಿಗಿಂತ ಹೆಚ್ಚು…
  • July 03, 2025
    ಬರಹ: Ashwin Rao K P
    ಭಾರತವನ್ನು ಹೊರಗಿಟ್ಟು ನೂತನ ದಕ್ಷಿಣ ವಿಶ್ಯಾ ರಾಷ್ಟ್ರಗಳ ಒಕ್ಕೂಟವೊಂದನ್ನು ರಚಿಸಲು ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳು ಪ್ರಯತ್ನಿಸುತ್ತಿವೆ ಎಂದು ಕೇಳಿಬಂದಿರುವ ವರದಿಗಳು ನಿಜವಾಗಿದ್ದಲ್ಲಿ ಅದನ್ನು ಭಾರತವು ಕಡೆಗಣಿಸುವಂತಿಲ್ಲ. ಈ…
  • July 03, 2025
    ಬರಹ: Shreerama Diwana
    ಎಣಿಸುವುದು, ಮಾಹಿತಿ ಸಂಗ್ರಹಿಸುವುದು, ಲೆಕ್ಕ ಹಾಕುವುದು, ಅಂಕಿ ಸಂಖ್ಯೆ ದಾಖಲಿಸುವುದು, ವಿಷಯ ಕಲೆ ಹಾಕುವುದು ಮುಂತಾದ ಅರ್ಥಗಳನ್ನು ಒಳಗೊಂಡಿರುತ್ತದೆ. ಇದೀಗ ಜನಗಣತಿ, ಜಾತಿಗಣತಿ, ಉಪಜಾತಿ ಗಣತಿ, ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿ, ಆರ್ಥಿಕ…
  • July 03, 2025
    ಬರಹ: ಬರಹಗಾರರ ಬಳಗ
    ಆಗಾಗ ಸಿಕ್ಕಿದವರೆಲ್ಲ ಹೇಳ್ತಾರೆ ನೀವು ಊರು ಬಿಟ್ಟು ಬಂದ್ಮೇಲೆ ನಿಮ್ಮ ಮನೆ ಪೂರ್ತಿ ಬದಲಾಗಿ ಬಿಟ್ಟಿದೆ. ನೀವಿದ್ದಾಗ ನಿಮ್ಮ ಮನೆ ಸುತ್ತಮುತ್ತ ಆಗಾಗ ಬರ್ತಾ ಇರಬೇಕು ನೋಡ್ತಾ ಇರಬೇಕು ಅಂತ ಅನ್ನಿಸ್ತಾ ಇತ್ತು. ನೀವು ಬೆಳಿತಾ ಇದ್ದ ತರಕಾರಿಗಳು,…
  • July 03, 2025
    ಬರಹ: ಬರಹಗಾರರ ಬಳಗ
    ಮಳೆಗಾಲದ ಸುಂದರವಾದ ದಿನಗಳು ನಮ್ಮ ಜೊತೆಗಿವೆ. ನಾವಿಂದು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ಡಾಕ್ಟರ್ ವಾರಿಜಾ ನಿರ್ಬೈಲ್ ರವರ ಮನೆಗೆ ಹೋಗೋಣ. ಅವರು ನಿವೃತ್ತರಾದರೂ ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡವರು.…
  • July 03, 2025
    ಬರಹ: ಬರಹಗಾರರ ಬಳಗ
    ಮಾತು ಅಲ್ಲಿಯೆ ಇರಲಿಲ್ಲ, ಬೇಡಿಯೇ ಇದ್ದ ಸೋಲು ಇದೆ, ಕೂಡಲಿಲ್ಲ  ನೋಡಿಯೇ ಇದ್ದ   ಬಾಳು ಕರಗದೇ, ಮತ್ಯಾಕೆ ನಡೆದು ಹೋದ ದಾಳ ಕದಲಲಿಲ್ಲ, ಆದರೂ ಆಡಿಯೇ ಇದ್ದ   ಜಾಲು ಕಾಣಲಿಲ್ಲ ,ಮಲಗಿದೆ ಕಂಬನಿ ಜಾರದೆ ತೇಲಿ ಹಾಡಲಿಲ್ಲ, ಹೆಣಗಳೆಡೆ ಓಡಿಯೇ ಇದ್ದ…
  • July 03, 2025
    ಬರಹ: Ashwin Rao K P
    ‘ಜೀವರತಿ’ ಎನ್ನುವ ಸುಮಾರು ೪೦೦ ಪುಟಗಳ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ ಜ ನಾ ತೇಜಶ್ರೀ. ಇವರು ತಾವು ಬರೆದ ಕಾದಂಬರಿಯ ಬಗ್ಗೆ, ಅದನ್ನು ಬರೆಯಲು ಸಿಕ್ಕ ಪ್ರೇರಣೆಯ ಬಗ್ಗೆ ತಮ್ಮ ಮಾಹಿತಿನಲ್ಲಿ ಬರೆದಿರುವುದು ಹೀಗೆ… “ಇದೆಲ್ಲ ಎಲ್ಲಿಂದ…
  • July 02, 2025
    ಬರಹ: Ashwin Rao K P
    ರಾಗವಾವುದೊ… ರಾಗವಾವುದೊ ತಾಳವಾವುದೊ ಹಾಡನಂತೂ ಹಾಡುವೆ ಕೇಳುಗರ ಮನ ತಣಿಯದಿದ್ದರು ತಣಿದರೂ ನಲಿದಾಡುವೆ !   ನನ್ನ ಹಾಡನು ತೇಲಿ ಬಿಡುವೆನು ಹೊತ್ತು ನಡೆವನು ಮಾರುತ ಸುತ್ತಲೆಲ್ಲಾ ತೂರಿ ಕೊಡುವನು ಹಾಡಿನೊಸಗೆಯ ಸಾರುತ !   ನಾ ಕಲಾವಿದನೆಂಬ…
  • July 02, 2025
    ಬರಹ: Shreerama Diwana
    ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು, ವಿದ್ಯಾರ್ಥಿಗಳು ಹೃದಯಘಾತದಿಂದ ದಿಢೀರನೆ ಯಾವುದೇ ಪೂರ್ವ ಮುನ್ಸೂಚನೆ ಇಲ್ಲದೆ ಸಾಯುತ್ತಿರುವುದು ಹೆಚ್ಚಾಗುತ್ತಿದೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಅದನ್ನು…
  • July 02, 2025
    ಬರಹ: ಬರಹಗಾರರ ಬಳಗ
    ಆ ಊರಲ್ಲಿ ಒಂದು ಎತ್ತರವಾದ ಬೆಟ್ಟವಿತ್ತು. ಆ ಬೆಟ್ಟವನ್ನು ಹಲವು ಜನ ಹತ್ತಬೇಕು ಅಂತ ಬಯಸಿದ್ದರು. ಆದರೆ ಹಲವರು ಅರ್ಧ ಹತ್ತಿ ಇಳಿದು ವಾಪಸು ಹೋಗಿಬಿಟ್ಟಿದ್ದರು. ಆ ಬೆಟ್ಟದ ಮೇಲೆರಿ ಬಾವುಟವನ್ನು ಹಾರಿಸುವವರು ವಿಜಯಶಾಲಿಗಳು ಜಗತ್ತಿನ ಅದ್ಭುತ…
  • July 02, 2025
    ಬರಹ: addoor
    ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳನ್ನು ರಚಿಸಿದ ಪ್ರತಿಭಾವಂತ ಸಾಹಿತಿ ದೇವುಡು ನರಸಿಂಹ ಶಾಸ್ತ್ರಿ. ತಮ್ಮ ಮೂರು ಬೃಹತ್ ಕಾದಂಬರಿಗಳಾದ “ಮಹಾ ಬ್ರಾಹ್ಮಣ”, “ಮಹಾ ಕ್ಷತ್ರಿಯ” ಮತ್ತು “ಮಹಾ ದರ್ಶನ”ಗಳಿಂದ ಮೇರು ಸದೃಶ ಸಾಹಿತಿಗಳಾಗಿ ಕನ್ನಡದ…
  • July 02, 2025
    ಬರಹ: ಬರಹಗಾರರ ಬಳಗ
    ತಾನು ಕೈಗೆತ್ತಿದ ಕಾರ್ಯವು ಯಶಸ್ವಿಯಾಗಬೇಕೆಂಬುದು ಎಲ್ಲರ ಅಪೇಕ್ಷೆ. ಹೊಸದಾದ ಕೆಲಸವನ್ನು ಕೈಗೆತ್ತಿಕೊಳ್ಳುವಾಗ ಹಿರಿಯರ ಶುಭಾಶೀರ್ವಾದ ಬೇಡುವುದು, ಗಣಪತಿ ಹವನ ಅಥವಾ ಇನ್ನಿತರ ಪೂಜೆಗಳ ಮೂಲಕ ಭಗವಂತನಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥನೆ…
  • July 02, 2025
    ಬರಹ: ಬರಹಗಾರರ ಬಳಗ
    ನಾನು ಕವಿಯಲ್ಲ!!... ನೊಂದವರ ಕಣ್ಣಿನ ಆಶಾಕಿರಣವಾಗಲಿಲ್ಲ  ಸಂತ್ರಸ್ತ ಮನಸುಗಳ ಸಂತೈಸಲಿಲ್ಲ  ಆಕ್ರೋಶದ ಧ್ವನಿಗಳಿಗೆ  ಗಂಟಲು ಗೂಡಿಸಲಿಲ್ಲ  ನಾನೇನೂ ಮಾಡಿಲ್ಲ  ನಾನು ಕವಿಯಲ್ಲ!..   ಸರ್ಕಾರ ಸರ್ವಾಧಿಕಾರವಾದಾಗ  ತೆಪ್ಪಗೆ…
  • July 02, 2025
    ಬರಹ: Kavitha Mahesh
    ಬೇಯಿಸಿ ಮಸೆದ ಆಲೂಗೆಡ್ಡೆ (ಬಟಾಟೆ), ಬಟಾಣಿ, ಜೀರಿಗೆ, ಮೆಣಸಿನ ಹುಡಿ, ಆಮ್ ಚೂರು ಹುಡಿ, ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಉಪ್ಪು ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ. ಬ್ರೆಡ್ ಹಾಳೆಗಳ (ಸ್ಲೈಸ್) ಮೇಲೆ ಸ್ವಲ್ಪ ನೀರು…
  • July 01, 2025
    ಬರಹ: Ashwin Rao K P
    ಮಳೆಗಾಲ ಪ್ರಾರಂಭವಾಗಿ ಬರೋಬರಿ ಒಂದು ತಿಂಗಳಾಗುತ್ತಾ ಬಂತು. ಬೇಸಿಗೆ ಕಾಲಕ್ಕಿಂತಲೂ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳ ಕಾಟ ಬಹಳ. ಈ ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗ್ಯೂ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆ ಅಧಿಕ. ಸೊಳ್ಳೆಗಳ ಕಾಟವನ್ನು…