ಸ್ಟೇಟಸ್ ಕತೆಗಳು (ಭಾಗ ೧೩೦೨) - ಕರಗಿದೆ ಮಂಜು
ಮಂಜಿನ ಮೇಲೆ ಬಿದ್ದ ರಕ್ತದ ಹನಿಗಳು ನೀರಿನೊಂದಿಗೆ ಕರಗಿ ಇಳಿಯಲಾರಂಭಿಸಿದವು. ಮಂಜುಗಳು ಎಷ್ಟೇ ಕರಗಿದರು ಕೂಡ ರಕ್ತದ ಕಲೆ ಅಲ್ಲೇ ಉಳಿದುಕೊಂಡುಬಿಟ್ಟಿತ್ತು. ಮಂಜು ನೋವಿನಿಂದ ಕರಗಲಾರಂಬಿಸಿತು. ಕ್ಷಣಗಳ ಹಿಂದೆ ಸ್ವರ್ಗದಂತಿದ್ದ ಸ್ಥಳವು ನರಕದ ಬಾಗಿಲಾಯಿತು. ಆಸೆಗಳನ್ನ ಹೊತ್ತುಕೊಂಡಿದ್ದ ದೇಹದಲ್ಲೆಲ್ಲಾ ಮದ್ದು ಗುಂಡುಗಳು ತುಂಬಿ ದೇಹ ಒದ್ದಾಡಿ ಒದ್ದಾಡಿ ಸತ್ತುಹೋಗಿತ್ತು.
- Read more about ಸ್ಟೇಟಸ್ ಕತೆಗಳು (ಭಾಗ ೧೩೦೨) - ಕರಗಿದೆ ಮಂಜು
- Log in or register to post comments