ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಖಾತ್ರಿ ಕೇಳದೆ ಶಿಕ್ಷಣ ಸಾಲ: ದೊಡ್ಡ ಸುಧಾರಣೆಗೆ ಶ್ರೀಕಾರ

ಕೇಂದ್ರ ಸರಕಾರ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಯಾವುದೇ ಖಾತ್ರಿ (ಶೂರಿಟಿ) ಕೇಳದೆ ೧೦ ಲಕ್ಷದ ವರೆಗೆ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಇದು ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅತ್ಯಂತ ಅಗತ್ಯವಿದ್ದ ಬಹುದೊಡ್ಡ ಉಪಕ್ರಮ. ನಮ್ಮ ದೇಶದಲ್ಲಿ ಪ್ರತಿಭಾವಂತ ಯುವಶಕ್ತಿಗೆ ಕೊರತೆಯಿಲ್ಲ. ಆದರೆ ಅವರ ಉನ್ನತ ಶಿಕ್ಷಣಕ್ಕೆ ಸಂಪನ್ಮೂಲದ ಕೊರತೆಯಿದೆ.

Image

ಕಪಟ ನಾಟಕ ಸೂತ್ರಧಾರಿಗಳ ಭ್ರಷ್ಟಾಚಾರ

ಸುಮಾರು 30 ವರ್ಷಗಳ ಕರ್ನಾಟಕದ ರಾಜಕೀಯ ಮತ್ತು ಆಡಳಿತಾತ್ಮಕ ಇತಿಹಾಸವನ್ನು ನೋಡಿದರೆ ಯಾವುದೇ ಪಕ್ಷದ ಯಾವ ಸರ್ಕಾರ ಬಂದರೂ ಭ್ರಷ್ಟಾಚಾರ ಮಾತ್ರ ಕಡಿಮೆಯಾಗುತ್ತಿಲ್ಲ‌. ದಿನೇ ದಿನೇ ಭ್ರಷ್ಟಾಚಾರ ಪರ್ಸೆಂಟೇಜ್ ಲೆಕ್ಕದಲ್ಲಿ ಹೆಚ್ಚಾಗುತ್ತಲೇ ಇದೆ‌‌. ಪ್ರತಿ ಸರ್ಕಾರಗಳಲ್ಲೂ ಒಂದಲ್ಲ ಒಂದು ಹಗರಣಗಳು ಬೆಳಕಿಗೆ ಬರುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೩೪)- ಬಂದಿ

ಅವನೊಬ್ಬನಿದ್ದ, ಕಿಟಕಿಯ ಸರಳ ಹಿಡಿದುಕೊಂಡು ಹೊರಬರಲಾಗದೆ ಚಡಪಡಿಸುತ್ತಿದ್ದ ಈ ಕಿಟಕಿಯ ಸರಳುಗಳನ್ನ ಹಿಡಿದುಕೊಂಡು ಗೋಗರೆಯುತ್ತಿದ್ದ.

Image

ಹೊಯ್ಸಳರ ಗತವೈಭವ ನೆನಪಿಸುವ ಹಳೇಬೀಡು

ಹೊಯ್ಸಳರ ಪ್ರಾರಂಭದ ರಾಜಧಾನಿ ಸೊಸೆಯೂರು, ನಂತರ ಕೆಲವು ಕಾಲ ಬೇಲೂರು ರಾಜಧಾನಿಯಾಯಿತು. ಹೊಯ್ಸಳ ರಾಜ್ಯ ವಿಸ್ತರಿಸಿದಾಗ ಆ ರಾಜಧಾನಿ ಹಳೇಬೀಡಿಗೆ ಬದಲಾಯಿಸಲ್ಪಟ್ಟಿತು. ಅದೇ ದ್ವಾರಸಮುದ್ರ, ದ್ವಾರಾವತಿ ಎಂತಲೂ ಕರೆದಿರುವರು. ದ್ವಾರಸಮುದ್ರವೆಂದರೆ ಬಾಗಿಲುಗಳ ಸಮುದ್ರ, ಹನ್ನೆರಡು ಬಾಗಿಲುಗಳು ನಗರಕ್ಕೆ ಇದ್ದವೆಂದು ಆ ಹೆಸರು. 

Image

ಸೋರೆಕಾಯಿ ಮೊಸರು ಗೊಜ್ಜು

Image

ಸೋರೆಕಾಯಿ ತುಂಡು, ಉಪ್ಪು, ಬೆಲ್ಲ, ಸ್ವಲ್ಪ ನೀರು ಹಾಕಿ ಬೇಯಿಸಿ. ತಣ್ಣಗಾದ ಮೇಲೆ ತೆಂಗಿನ ತುರಿ, ಹಸಿಮೆಣಸು ಸೇರಿಸಿ ನುಣ್ಣಗೆ ರುಬ್ಬಿ ಸೇರಿಸಿ. ಮೊಸರು ಹಾಕಿ. ನಂತರ ಎಣ್ಣೆಯಲ್ಲಿ ಸಾಸಿವೆ, ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಬೇಸಿಗೆಯ ಬಿಸಿಲ ಝಳಕ್ಕೆ ಈ ಮೊಸರು ಗೊಜ್ಜು ಹೊಟ್ಟೆಗೆ ಹಿತ.

ಬೇಕಿರುವ ಸಾಮಗ್ರಿ

ಹೆಚ್ಚಿದ ಸೋರೆಕಾಯಿ ೧ ಕಪ್, ಮೊಸರು ೧/೨ ಕಪ್, ಸಾಸಿವೆ ೧ ಚಮಚ, ಹಸಿಮೆಣಸು ೧, ಎಣ್ಣೆ ೧ ಚಮಚ, ಒಣಮೆಣಸು ೧, ತೆಂಗಿನತುರಿ ೧/೨ ಕಪ್, ಕರಿಬೇವು ೨ ಎಸಳು, ಬೆಲ್ಲ ಹುಣಸೆ ಗಾತ್ರ, ಉಪ್ಪು ರುಚಿಗೆ ತಕ್ಕಷ್ಟು.

ಮಹಿಳಾ ಸಮಾನತೆ ಮತ್ತು ಸ್ವಾತಂತ್ರ್ಯ.

೧೨ ಶತಮಾನದ ಬಸವಾದಿ ಶರಣರ ವೈಚಾರಿಕ ಪ್ರಜ್ಞೆ ನೆಲೆಗಟ್ಟಿನ ಆಧಾರದ ಮೇಲೆ ಅನುಭವ ಮಂಟಪದಲ್ಲಿ ಮಹಿಳಾ ಸಮಾನತೆಯ ಬೀಜವನ್ನು ಬಿತ್ತಿದ್ದಾರೆ. ಹೀಗೆ ಮಾಡುವ ಮೂಲಕ ಮಹಿಳಾ ವರ್ಗಕ್ಕೆ ಪುರುಷರ ಸರಿ ಸಮಾನತೆಯ ಸ್ಥಾನವನ್ನು ಅಂದಿನ ಶರಣರು ನೀಡಿರುತ್ತಾರೆ.

Image

ಹಲ್ಲು ನೋವಿಗೆ ಕೆಲವು ಮನೆಮದ್ದುಗಳು

ಸಹಿಸಲಸಾಧ್ಯವಾದ ನೋವು ಎಂದರೆ ಹಲ್ಲು ನೋವು ಎನ್ನುತ್ತಾರೆ ನೋವು ತಿಂದವರು. ಈಗಿನ ಯುಗದಲ್ಲಿ ಎಲ್ಲರೂ ರಾಸಾಯನಿಕ ಭರಿತ ಆಹಾರವನ್ನು ಸೇವಿಸಿ, ಹಲ್ಲಿನ ಆರೋಗ್ಯವನ್ನು ಕಡೆಗಣಿಸಿದ ಪರಿಣಾಮ ಎಲ್ಲರ ಹಲ್ಲು ಹುಳ ತಿಂದಿದೆ. ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಹಲ್ಲಿನ ಸಮಸ್ಯೆ.

Image

ಒಡಲುಗೊಂಡವರು

ಪುಸ್ತಕದ ಲೇಖಕ/ಕವಿಯ ಹೆಸರು
ಹಳೆಮನೆ ರಾಜಶೇಖರ
ಪ್ರಕಾಶಕರು
ಕ್ರಿಯೇಟಿವ್ ಪುಸ್ತಕ ಮನೆ, ಕಾರ್ಕಳ
ಪುಸ್ತಕದ ಬೆಲೆ
ರೂ. ೨೩೫.೦೦, ಮುದ್ರಣ: ೨೦೨೪

ಹಳೆಮನೆ ರಾಜಶೇಖರ ಅವರು ಬರೆದ ವಿಭಿನ್ನ ಕಾದಂಬರಿ ‘ಒಡಲುಗೊಂಡವರು’. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಅನುಪಮಾ ಪ್ರಸಾದ್ ಅವರು. ಮುನ್ನುಡಿಯ ಕೆಲವು ಸಾಲುಗಳು ನಿಮ್ಮ ಓದಿಗಾಗಿ…