ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ಹೆಚ್ಚು ಹೆಚ್ಚು ನಡೆಯಲಿ

ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆಯನ್ನು ನಡೆಸಿ, ಆ ಜಿಲ್ಲೆಗೆ ಬಂಪರ್ ಕೊಡುಗೆಗಳನ್ನು ಪ್ರಕಟಿಸಿರುವುದು, ಒಟ್ಟಾರೆ ಮೈಸೂರು ವಿಭಾಗಕ್ಕೆ ೩೬೪೭ಕೋಟಿ ರೂ. ವೆಚ್ಚದ ೭೮ ಯೋಜನೆಗಳನ್ನು ಘೋಷಿಸಿರುವುದು ಉತ್ತಮವಾದ ಹೆಜ್ಜೆ.

Image

ಮತ್ತೆ ತೆರೆದ ಕಾಶ್ಮೀರಿ ಫೈಲ್ಸ್ ಪುಟಗಳು…(ಭಾಗ 1)

ಸಾಯುವ ಆಟದಲ್ಲಿ ಒಮ್ಮೆ ಅವರು, ಒಮ್ಮೆ ಇವರು..." ಕಣ್ಣಿಗೆ ಕಣ್ಣು ಎನ್ನುವ ಸಿದ್ಧಾಂತದಲ್ಲಿ ಮುಂದುವರೆದರೆ ಮುಂದೊಂದು ದಿನ ಇಡೀ ಜಗತ್ತೇ ಕುರುಡಾಗಬಹುದು " ಮಹಾತ್ಮ ಗಾಂಧಿ. ವಿಶ್ವದ ಸುಂದರ ಸ್ಥಳಗಳಲ್ಲಿ ಒಂದಾದ ಹಿಮಾಚ್ಛಾದಿತ ಕಾಶ್ಮೀರ ಕಣಿವೆಯು ಒಂದು ಸುಂದರ ಪ್ರದೇಶ ಪೆಹಲ್ಗಾವ್ ಎಂಬಲ್ಲಿ ರಕ್ತ ದೋಕುಳಿಯಾಟ ನಡೆದಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೦೩) - ಕಾರಣ

ಅವನು ಬೇಸರಗೊಂಡಿದ್ದಾನೆ. ಸಿಗದಿರುವುದಕ್ಕೆ ವ್ಯಥೆ ಪಡುತ್ತಿದ್ದಾನೆ ಇಷ್ಟು ದಿನ ಜೊತೆಗೆದ್ದು ಓಡಾಟ ನಡೆಸಿ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡವರು ದೂರವಾಗಿದ್ದಾರೆ. ಹಾಗೆ ಅವನನ್ನು ತೊರೆದು ದೂರ ಹೋಗಿದ್ದಾಳೆ. ಕಂಡ ಕನಸುಗಳು ಇಷ್ಟು ದಿನ ಆಡಿದ ಮಾತುಗಳೆಲ್ಲವೂ ಸುಳ್ಳಾಗಿದೆ. ಮತ್ತೆ ಮತ್ತೆ ವ್ಯಥೆ ಪಡುತ್ತಾ ಸುಮ್ಮನಾಗಿದ್ದಾನೆ.

Image

ಬ್ರೆಡ್ ಪುಡ್ಡಿಂಗ್

Image

ಒಂದು ಬೋಗುಣಿಯಲ್ಲಿ ಕಸ್ಟರ್ಡ್ ಹುಡಿ ಮತ್ತು ಹಾಲು ಸೇರಿಸಿ ಗಂಟು ಬಾರದಂತೆ ಚೆನ್ನಾಗಿ ಬೆರೆಸಿ. ಇನ್ನೊಂದು ಬೋಗುಣಿ (ಬೌಲ್)ಯಲ್ಲಿ ಬೆಣ್ಣೆ, ಮೊಟ್ಟೆ, ದಾಲ್ಚಿನ್ನಿ ಹುಡಿ, ವೆನಿಲ್ಲಾ ಎಸೆನ್ಸ್ ಮತ್ತು ಸಕ್ಕರೆಯನ್ನು ಚೆನ್ನಾಗಿ ಬೆರೆಸಿ. ಕಸ್ಟರ್ಡ್ ಹುಡಿ ಬೆರೆಸಿದ ಹಾಲನ್ನೂ ಈ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ಬೆರಸಿ. ಓವನ್ ನಲ್ಲಿ ಇಡುವಂತಹ ಬೋಗುಣಿಯಲ್ಲಿ ಬ್ರೆಡ್ ಹಾಳೆಗಳನ್ನು ಜೋಡಿಸಿರಿ.

ಬೇಕಿರುವ ಸಾಮಗ್ರಿ

ಸಣ್ಣ ಚೌಕಾಕಾರದ ತುಂಡುಗಳನ್ನಾಗಿ ಮಾಡಿದ ಬ್ರೆಡ್ ಹಾಳೆಗಳು ೩, ಬೆಣ್ಣೆ ೪ ಚಮಚ, ದಾಲ್ಚಿನ್ನಿ ಹುಡಿ ೧ ಚಿಟಿಕೆ, ವೆನಿಲ್ಲಾ ಕಸ್ಟರ್ಡ್ ಹುಡಿ ೨ ಚಮಚ, ಮೊಟ್ಟೆ ೩, ಹಾಲು ೨ ಕಪ್, ವೆನಿಲ್ಲಾ ಎಸೆನ್ಸ್ ೨ ಹನಿ, ಸ್ವಲ್ಪ ಒಣದ್ರಾಕ್ಷಿ, ರುಚಿಗೆ ತಕ್ಕಷ್ಟು ಸಕ್ಕರೆ

ಕಾಕರಣೆ ಹಕ್ಕಿ

ಭಾರತದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಹೆಚ್ಚಾಗಿ ನೋಡಲು ಸಿಗುವ, ಅಪರೂಪದ, ಅಷ್ಟೇ ವರ್ಣಮಯವಾದ ಹಕ್ಕಿಯೊಂದನ್ನು ನಿಮಗೆ ಪರಿಚಯ ಮಾಡಬೇಕು ಎಂದುಕೊಂಡಿದ್ದೇನೆ. ಹಕ್ಕಿಗಳ ಬಗ್ಗೆ ಅಧ್ಯಯನ ಮಾಡಲು ಪ್ರಾರಂಭಿಸಿದ ಹೊಸತರಲ್ಲಿ ಪಕ್ಷಿವೀಕ್ಷಕರ ಗುಂಪೊಂದು ಫೇಸ್‌ ಬುಕ್‌ ನಲ್ಲಿ ಪರಿಚಯವಾಯಿತು.

Image

ಘಟ್ಟಗಳ ನಡುವೆ ಘಾಟಿ ಸುಬ್ರಮಣ್ಯ ದೇವಸ್ಥಾನ

ಘಟ್ಟಗಳ ಮಧ್ಯೆ ಇರುವ ಯಾತ್ರಾ ಸ್ಥಳಕ್ಕೆ ಘಾಟಿ ಸುಬ್ರಮಣ್ಯ ಎಂದು ಹೆಸರು ಬಂದಿದೆ. ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡ ಬಳ್ಳಾಪುರದ ಬಳಿ ಇರುವ ಪ್ರಸಿದ್ಧ ಪವಿತ್ರ ಯಾತ್ರಾಸ್ಥಳ. ಇಲ್ಲಿರುವ ಸುಬ್ರಮಣ್ಯ ದೇವಾಲಯವು ಭವ್ಯ ಬೆಟ್ಟಗಳ ನಡುವಿನ ಹೆಸರಾಂತ ಪುಣ್ಯ ಸ್ಥಳ. ವರ್ಷಕ್ಕೊಮ್ಮೆ ಇಲ್ಲಿ ಜರುಗುವ ದನಗಳ ಜಾತ್ರೆ ಕರ್ನಾಟಕ ಮಾತ್ರವಲ್ಲ ಆಂಧ್ರಪ್ರದೇಶ, ತಮಿಳುನಾಡುಗಳಿಂದ ರೈತರನ್ನು ಸೆಳೆಯುತ್ತದೆ.

Image