ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಣ್ಣದೊಂದು ಕೆಲಸ !

ಅಂದಿನ ಕಡೆಯ ರೈಲು ಪ್ಲಾಟ್‌ಫಾರ್ಮ್ ಬಿಟ್ಟು ಹೊರಟುಹೋಗಿತ್ತು. ವೃದ್ಧ ಮಹಿಳೆಯೊಬ್ಬರು ಒಬ್ಬಂಟಿಯಾಗಿ ಕುಳಿತಿದ್ದರು. ಗಮನಿಸಿದ ಕೂಲಿಯೊಬ್ಬ ಹತ್ತಿರ ಬಂದು "ಅಮ್ಮಾ, ಯಾರಿಗೆ ಕಾಯುತ್ತಿದ್ದೀರಿ? ಎಲ್ಲಿಗೆ ಹೋಗಬೇಕು?" ಎಂದು ಕೇಳಿದ.

Image

ವಾರೆನ್ ಹೇಸ್ಟಿಂಗ್ಸ್ ನ ಹೋರಿ

ಪುಸ್ತಕದ ಲೇಖಕ/ಕವಿಯ ಹೆಸರು
ಹಿಂದಿ ಮೂಲ : ಉದಯ ಪ್ರಕಾಶ, ಕನ್ನಡಕ್ಕೆ: ಪ್ರಕಾಶ ಗರುಡ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೩೦.೦೦, ಮುದ್ರಣ: ೨೦೨೫

‘ವಾರೆನ್ ಹೇಸ್ಟಿಂಗ್ಸ್ ನ ಹೋರಿ’ ಎನ್ನುವುದು ಉದಯ ಪ್ರಕಾಶ ಅವರು ಹಿಂದಿಯಲ್ಲಿ ಬರೆದ ಜನಪ್ರಿಯ ಕಿರು ಕಾದಂಬರಿ. ಈ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಪ್ರಕಾಶ ಗರುಡ. ಇವರು ತಮ್ಮ ಅನುವಾದಕರ ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಭಾವನೆಗಳ ಸಾರ ನಿಮ್ಮ ಓದಿಗಾಗಿ…

ಸೈನಿಕರ ಜೀವವೂ ಅತ್ಯಮೂಲ್ಯ

ಅವರು ಸಹ ತಾಯಿಯ ಕರುಳಿನ ಕುಡಿಗಳೇ, ಸಂಯಮವಿರಲಿ. ಯಾವುದೋ ಧಾರಾವಾಹಿ, ಸಿನಿಮಾ, ನಾಟಕದ ಭಾವನಾತ್ಮಕ ದೃಶ್ಯಗಳನ್ನು ನೋಡುವಾಗಲೇ ಅಥವಾ ಯಾವುದಾದರೂ ನೋವಿನ, ಸಂಕಷ್ಟದ, ಕಥೆ, ಕಾದಂಬರಿ, ಕವಿತೆ ಓದುವಾಗಲೇ ನಮಗರಿವಿಲ್ಲದಂತೆ ದುಃಖದಿಂದ ಕಣ್ಣಿನಲ್ಲಿ ಧಾರಾಕಾರ ನೀರು ಸುರಿಯುತ್ತದೆ. ಯಾರದೋ ಅಪರಿಚಿತರ ಸಾವು ನಮ್ಮನ್ನು ಕದಡುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೩೦೫) - ಹೂವು

ಹೂವಿನೊಂದಿಗೆ ಮಾತುಕತೆ ಶುರುವಾಗಿತ್ತು. ‌ಅಲ್ಲೋ ಹೂರಾಯ ನೀನು‌ನಿನ್ನ ಗಿಡದಲ್ಲಿ ಮಾತ್ರ ಅರಳಿ ಪರಿಮಳ ಬೀರುತ್ತೀಯಾ. ಸ್ವಲ್ಪ ಹೊರಗಡೆ ಬೇರೆಯವರಿಗೂ ಬೇರೆ ಸ್ಥಳದಲ್ಲಿ ಅರಳಿ ಬಿಡು. ಇಲ್ಲಿ ಮಾತ್ರ ಅರಳಿ ಆಗುವುದೇನು? ನೋಡು ನಿನಗೆ ಅದರ ಮೌಲ್ಯ ಗೊತ್ತಿಲ್ಲ ಮಾನವ, ನಾವು ಎಲ್ಲಿ ಬೇರು ಬಿಟ್ಟಿದ್ದೇವೋ ಅಲ್ಲೇ ಅರಳಿ ಬಿಡಬೇಕು.

Image

ಮನಸ್ಸಿನಲ್ಲಿ ಏಕಾಗ್ರತೆ ಏಕೆ ಬೇಕು?

ಇಂದು ನಾವು ಮನಸ್ಸಿನಲ್ಲಿ ಏಕಾಗ್ರತೆ ಏಕೆ ಬೇಕು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಒಂದು ಬಂಡೆ ಉರುಳುತ್ತಿದ್ದರೆ, ಅದಕ್ಕೆ ಏನೂ ಅಂಟುವುದಿಲ್ಲ. ಅದು ಸ್ಥಿರವಾದರೆ ಅದರ ಮೇಲೆ ಮಣ್ಣು ಮೆತ್ತಿಕೊಳ್ಳುತ್ತದೆ. ಹಾಗೆ ಮನಸ್ಸು ಸ್ಥಿರವಾದರೆ, ಏಕಾಗ್ರವಾದರೆ ಜ್ಞಾನ ಬೆಳೆಯುತ್ತದೆ. ಮನಸ್ಸಿನ ಶಕ್ತಿ ವಿಕಾಸವಾಗುತ್ತದೆ. ಯಾವಾಗ ಅಂದರೆ ಮನಸ್ಸು ಒಂದಕ್ಕೆ ಅಂಟಿದರೆ.

Image

ನಮ್ಮ ಜೀವನದ ಅತ್ಯಮೂಲ್ಯ ಆಸ್ತಿ ತಾಯಿ

ಒಮ್ಮೆ ಒಬ್ಬ ತನ್ನ ಮನೆಯ ಹಸು ಕರುವನ್ನು ಕರೆದುಕೊಂಡು ರಾಜನ ಆಸ್ಥಾನ ಸಭೆಗೆ ಬಂದನು. ಹಸು ಕರು ಇದರಲ್ಲಿ ವಿಶೇಷ ಎಂದರೆ, ಅಲ್ಲಿಗೆ ತಂದಿದ್ದ ಹಸು-ಕರು (ತಾಯಿ- ಮಗು) ನೋಡಲು ಒಂದೇ ತರ ಇದ್ದವು. ಕರು ತಾಯಿಯಷ್ಟೇ ಬೆಳದಿದೆ. ಗಾತ್ರದಲ್ಲಿ ಯಾವುದು ತಾಯಿ? ಯಾವುದು ಕರು? ಎಂದು ನೋಡಿದರೆ ಗೊತ್ತಾಗುತ್ತಿರಲಿಲ್ಲ, ಎರಡು ಅವಳಿ ಜವಳಿ ಎನ್ನುವಂತಿದ್ದವು.

Image

ಸ್ಟೇಟಸ್ ಕತೆಗಳು (ಭಾಗ ೧೩೦೪) - ಬೆಕ್ಕಿನ ಪಾಠ

ಮನೆಯ ಅಂಗಳದಲ್ಲಿ ಎರಡು ಬೆಕ್ಕುಗಳು ಬದುಕುತ್ತಿವೆ. ಮೊದಲನೆಯ ಬೆಕ್ಕು ಹಾಕಿದ್ದನ್ನು ತಿಂದುಕೊಂಡು, ಪ್ರತಿದಿನದ ದಿನಚರಿಯನ್ನಷ್ಟೇ ಮಾಡ್ತಾ ಇದೆ. ಮಲಗುವುದು, ಏಳುವುದು, ಓಡಾಟ, ತಿಂಡಿ ಮತ್ತೆ ನಿದ್ರೆ ಇದನ್ನೇ ಮುಂದುವರೆಸಿಕೊಂಡು ದಿನವನ್ನು ದೂಡುತ್ತಿದೆ. ಅದರ ಜೊತೆಗೆ ಬದುಕುತ್ತಿರುವ ಇನ್ನೊಂದು ಬೆಕ್ಕು ಪ್ರತಿದಿನದ ದಿನಚರಿಯ ಜೊತೆಗೆ ಹೊಸತನ್ನು ಹುಡುಕುತ್ತಿದೆ.

Image