ಒಂದು ಒಳ್ಳೆಯ ನುಡಿ (274) - ಹೌದಲ್ವಾ!
* ಸಹಜವಾಗಿ ಬದುಕಿನ ಭಾಗವಾಗಿ ಬಳಕೆಗೆ ಬರುವ ಮಾತೃಭಾಷೆಯನ್ನು ಎರಡನೇ ಅಥವಾ ಮೂರನೇ ದರ್ಜೆಗೆ
- Read more about ಒಂದು ಒಳ್ಳೆಯ ನುಡಿ (274) - ಹೌದಲ್ವಾ!
- Log in or register to post comments
* ಸಹಜವಾಗಿ ಬದುಕಿನ ಭಾಗವಾಗಿ ಬಳಕೆಗೆ ಬರುವ ಮಾತೃಭಾಷೆಯನ್ನು ಎರಡನೇ ಅಥವಾ ಮೂರನೇ ದರ್ಜೆಗೆ
ನರಕ ಚತುರ್ದಶಿಯ ಸಮಯದಲ್ಲಿ ಮನೆಯ ಎಲ್ಲ ಸದಸ್ಯರೂ ಬೆಳಗ್ಗೆ ಬೇಗನೆದ್ದು ತಲೆಗೆ ಮೈಗೆ ಎಣ್ಣೆ ಹಚ್ಚಿ ಬಿಸಿಬಿಸಿ ನೀರು ಸ್ನಾನ ಮಾಡುವ ಮೂಲಕ ದೀಪಾವಳಿ ಆರಂಭಗೊಳ್ಳುತ್ತದೆ.
ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು
ಬಿಡುಗಡೆಯ ಹಾಡುಗಳು ಕೃತಿಯಿಂದ ನಾವು ಈ ವಾರ ರಾ ವೆ ಕರಿಗುದರಿ ಅಥವಾ ಕರಗುದರಿ ಇವರ ಕವನವೊಂದನ್ನು ಆರಿಸಿ ಪ್ರಕಟಿಸಿದ್ಡೇವೆ. ಕರಿಗುದರಿಯವರ ಈ ಕವನ ‘ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ’ ಎಂಬ ಸಂಕಲನದಲ್ಲಿ ಮೊದಲು ಪ್ರಕಟವಾಗಿದೆ. ಇವರ ಬಗ್ಗೆ ಯಾವುದೇ ಮಾಹಿತಿಗಳು ಎಲ್ಲೂ ದೊರಕುತ್ತಿಲ್ಲ.
ವಿಜಯನಗರದ ಸಾಮ್ರಾಟರಾಗಿದ್ದ ಕೃಷ್ಣ ದೇವರಾಯರಿಗೆ ಭಾರತದ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನವಿದೆ. ಇವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿದ್ದರೂ ಸು ರುದ್ರಮೂರ್ತಿಯವರು ಬರೆದ ‘ಶ್ರೀ ಕೃಷ್ಜದೇವರಾಯ’ ಮರೆಯಲಾಗದ ಸಾಮ್ರಾಜ್ಯದ ಸಾಮ್ರಾಟ ಎನ್ನುವ ಕಾದಂಬರಿ ಅವರ ಬಗ್ಗೆ ಹೊಸ ಲೋಕವನ್ನೇ ತೆರೆದಿಡುತ್ತದೆ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಬರಹಗಾರರಾದ ಆರ್ ಶೇಷಶಾಸ್ತ್ರಿ.
ಪ್ರಚಾರವೆಂಬುದರ ಅವಶ್ಯಕತೆ ಯಾವುದಕ್ಕಾಗಿ ಮತ್ತು ಯಾರಿಗಾಗಿ, ದಯವಿಟ್ಟು ಗಂಭೀರವಾಗಿ ಯೋಚಿಸಿ. ಭರ್ಜರಿಯಾಗಿ ಉಪ ಚುನಾವಣೆಯ ಪ್ರಚಾರವೇನೋ ನಡೆಯಿತು, ನಡೆಯುತ್ತಲೇ ಇದೆ, ಮುಂದೆ ನಡೆಯುತ್ತಲೂ ಇರುತ್ತದೆ.
ಆತ ತುಂಬಾ ಸಿಟ್ಟುಗೊಳ್ಳುತ್ತಾನೆ, ಎದುರಿಗೆ ಯಾವುದೇ ವ್ಯಕ್ತಿ ಇದ್ದರೂ ಆ ಕ್ಷಣ ಆತ ಹಿಂದೆ ಮುಂದೆ ನೋಡೋದಿಲ್ಲ, ಎದುರಿನವನ ಜನ್ಮ ಜಾಲಾಡುತ್ತಾನೆ. ಆತನ ಸಿಟ್ಟಿಗೂ ಒಂದು ಕಾರಣವಿದೆ, ಅನ್ನದ ತಟ್ಟೆಯಲ್ಲಿ ಒಂದಗುಳನ್ನ ಒಂದಷ್ಟು ತರಕಾರಿ ತುಂಡುಗಳನ್ನು ಯಾರಾದರೂ ವ್ಯರ್ಥ ಮಾಡುವುದು ಕಂಡ್ರೆ ಆತನಿಗೆ ತುಂಬಾ ಸಿಟ್ಟು ಬರುತ್ತೆ.
ಕಾಯಿತುರಿಯ ಜೊತೆ ಮಾವಿನ ಹೂವು ಮತ್ತು ಚಿಟಕಿ ಉಪ್ಪು, ಹಸಿಮೆಣಸಿನ ಚೂರು, ಹಾಕಿ ನುಣ್ಣಗೆ ರುಬ್ಬಿ ಪಾತ್ರಗೆ ಹಾಕಿ. ಇದಕ್ಕೆ ಕಡೆದ ಮಜ್ಜಿಗೆ, ರುಚಿಗೆ ಬೇಕಾದಷ್ಟು ಉಪ್ಪು, ಹಾಕಿ ಹದ ಮಾಡಿ, ಎಣ್ಣೆ, ಉದ್ದಿನ ಬೇಳೆ, ಒಣ ಮೆಣಸಿನ ಚೂರುಗಳು, ಕರಿಬೇವು, ಸಾಸಿವೆ, ಚಿಟಕಿ ಇಂಗು ಹಾಕಿ ಒಗ್ಗರಣೆ ಮಾಡಿ. ಊಟಕ್ಕೆ ಉಪಯೋಗಿಸಲು ಚೆನ್ನಾಗಿರುತ್ತದೆ.
ಮಾವಿನ ಹೂವು, ಕಾಯಿ ತುರಿ , ಹಸಿಮೆಣಸಿನ ಚೂರು (ಬೇಕಾದರೆ ಮಾತ್ರ), ಕಡೆದ ಮಜ್ಜಿಗೆ, ಒಗ್ಗರಣೆಗೆ ಒಣ ಮೆಣಸು, ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಇಂಗಿನ ಚೂರು, ಎಣ್ಣೆ, ರುಚಿಗೆ ಉಪ್ಪು.
ರಮೇಶ ಗುಬ್ಬಿಯವರು ಇತ್ತೀಚೆಗೆ ಪ್ರಕಟಿಸಿದ “ಕಾಲ” ಕುರಿತ ಚುಟುಕುಗಳ ಮಾಲೆಯೊಳಗೆ ಒಂದು ಸುಂದರ ನಾಲ್ಕೆಸಳಿನ ಚುಟುಕು ಕುಸುಮವಿದೆ. ಈ ಕುಸುಮದ ಪರಿಮಳವು ಈ ಲೇಖನಕ್ಕೆ ಪ್ರೇರಣೆಯೂ ಹೌದು.
ಅಮ್ಮಾ ಬಾರಮ್ಮ ಶ್ರೀತುಳಸಿ ಬಾರಮ್ಮ