ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಾಯಕ ಯೋಗಿಗಳ ದಿನ

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶರಣರಿಗೆ, ಮಹಿಳೆಯರಿಗೆ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸೌಭಾಗ್ಯವನ್ನು ಕರುಣಿಸಿ, ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದರು. ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

Image

ನಿಷ್ಪಾಪಿ ಸಸ್ಯಗಳು (ಭಾಗ ೯೮) - ಮೂಂಡಿ ಗಿಡ

ನಮ್ಮ ಬಾಲ್ಯವು ಕೃಷಿ ಬದುಕಿನ ನಡುವೆ ಸಮೃದ್ಧವಾಗಿತ್ತು. ಸುಗ್ಗಿ ಬೆಳೆಯಲು ಗದ್ದೆ ಉತ್ತು ಹದಗೊಳಿಸುವ ಕಾರ್ಯದಲ್ಲಿ ಸಾಂದರ್ಭಿಕವಾಗಿ ಹಲವು ವೇಳೆ ನೆರೆಹೊರೆಯ ಎತ್ತು ಕೋಣಗಳನ್ನು ಕರೆಸಲಾಗುತ್ತಿತ್ತು.

Image

ಸ್ಟೇಟಸ್ ಕತೆಗಳು (ಭಾಗ ೧೩೦೮) - ಕಾರಣದಂಗಡಿ

ಹೊಸತೊಂದು ಅಂಗಡಿ ತೆರೆದಿದ್ದಾರೆ. ನೀವಿಲ್ಲಿಯವರೆಗೆ ಆ ತರಹದ ಅಂಗಡಿ ನೋಡಿರಲಿಕ್ಕಿಲ್ಲ, ವಿಶೇಷವಾಗಿದೆ. ಅಗತ್ಯ ಬಿದ್ದರೆ ಮಾತ್ರ ಅಂಗಡಿಯೊಳಗೆ ಪ್ರವೇಶ. ಸುಮ್ಮನೆ ಕುಳಿತು ಹರಟೆ ಹೊಡೆಯಲು ಅವಾಕಾಶವಿಲ್ಲ. ಅಲ್ಲಿ ದೊಡ್ಡ ನಾಮಫಲಕ ತೂಗುಹಾಕಿದ್ದಾರೆ. ಇಲ್ಲಿ ಕಾರಣ ಹುಡುಕಿ ಕೊಡಲಾಗುವುದು. ಬದುಕಿಗೆ ಮಾತ್ರ.

Image

ಷರ್ಲಾಕ್ ಹೋಮ್ಸ್ ಸಾಹಸಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಸರ್ ಆರ್ಥರ್ ಕಾನನ್ ಡಾಯ್ಲ್, ಕನ್ನಡಕ್ಕೆ: ಎಂ ವಿ ನಾಗರಾಜರಾವ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ: ೨೦೨೫

ಸರ್ ಆರ್ಥರ್ ಕಾನನ್ ಡಾಯ್ಲ್ ತನ್ನ ಪತ್ತೇದಾರಿ ಕಾದಂಬರಿಗೋಸ್ಕರ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಎನ್ನುವ ಪತ್ತೇದಾರನ ಪಾತ್ರವನ್ನು ಕಾಲ್ಪನಿಕ ಪಾತ್ರ ಎಂದು ಓದುಗರು ನಂಬಲೇ ಇಲ್ಲ. ಅಂತಹ ಒಂದು ಕಾಲ್ಪನಿಕ ಪಾತ್ರ ಬಿಡಿಸಿದ ೭ ರೋಚಕ ಸಾಹಸ ಕಥೆಗಳು ಈ ಕೃತಿಯಲ್ಲಿವೆ.  

ಯುದ್ಧವೆಂದರೆ…

ಯುದ್ಧವೆಂದರೆ, ಎದುರಿಗಿರುವವರನ್ನು ನಮ್ಮ ಶತ್ರುಗಳೆಂದು ಭಾವಿಸಿ ಹೊಡೆಯುವುದು, ಗಾಯಗೊಳಿಸುವುದು, ಶರಣಾಗಿಸುವುದು, ಕೊಲ್ಲುವುದು, ಆ ಜಾಗವನ್ನು ಆಕ್ರಮಿಸುವುದು, ವಶಪಡಿಸಿಕೊಳ್ಳುವುದು, ನಮ್ಮ ಪ್ರತಿಸ್ಪರ್ಧಿಯೂ ಸಹ ನಮ್ಮನ್ನು ಶತ್ರುವೆಂದು ಪರಿಗಣಿಸಿ ನಮ್ಮನ್ನೂ ಅದೇ ರೀತಿಯಲ್ಲಿ ಕೊಲ್ಲುವುದು ಮತ್ತು ವಶಪಡಿಸಿಕೊಳ್ಳುವುದು, ನಮ್ಮನ್ನು ರಕ್ಷಣೆ ಮಾಡಿಕೊಳ್ಳುವುದು, ವಿರೋಧಿಯನ್ನು

Image

ಸ್ಟೇಟಸ್ ಕತೆಗಳು (ಭಾಗ ೧೩೦೭) - ವಿಷ

ನದಿ ನೀರನ್ನ ಕುಡಿದವರೆಲ್ಲಾ ಸಾಯುತ್ತಿದ್ದಾರೆ, ಸುದ್ದಿ ಹರಿದಾಡಿತು, ವಿಷಯ ನಿಜವಾಗಿತ್ತು. ಎಲ್ಲರೂ ನದಿಗೆ ತೆಗಳುವವರೇ, ಬೈಯುವವರೇ ಹೆಚ್ಚಾಗಿದ್ದಾರೆ, ಆದ್ರೆ ಒಬ್ಬರೂ ಕೂಡ ನದಿಗೆ ವಿಷವನ್ನು ಹಾಕುತ್ತಿರುವವರ ಬಗ್ಗೆ ಯೋಚನೆ ಮಾಡ್ತಾ ಇಲ್ಲ. ನದಿಯಿಂದಾಗಿ ಸಮಸ್ಯೆಗಳು ಉದ್ಭವಿಸಿದೆ ಎಂದು ಘಂಟಾಘೋಷವಾಗಿ ಘೋಷಣೆಗಳನ್ನು ಹೊರಡಿಸಿದ್ದಾರೆ. ಆ ನದಿಗಿಂತ ಸ್ವಲ್ಪ ದೂರದಲ್ಲಿ ಇನ್ನೊಂದು ನದಿಯು ಹರಿಯುತ್ತಾ ಇದೆ.

Image

ಕಷ್ಟ - ಸುಖ

"ಅಯ್ಯೋ ದೇವರೇ, ನಿನಗೆ ನನ್ನ ಮೇಲೇಕೆ ಹಗೆ? ನನಗೆಷ್ಟು ಕಷ್ಟಗಳನ್ನು ಒಡ್ಡುತ್ತಿದ್ದೀಯಾ? ನಾನು ನಿನಗೇನು ಅನ್ಯಾಯ ಮಾಡಿದ್ದೇನೆ? ನನಗಿಂತಹ ಕಠಿಣ ಪರೀಕ್ಷೆಯಾದರೂ ಏಕೆ ಭಗವಂತಾ!" ಎಂದು ಗೋಳಾಡುವವರನ್ನು ನಿತ್ಯವೂ ನೋಡುತ್ತಿರುತ್ತೇವೆ. ಅತ್ಯಂತ ಸುಖಿಯೂ ಕಷ್ಟಗಳ ಬಗ್ಗೆ ಕರುಬುತ್ತಿರುತ್ತಾನೆ ಎಂದರೆ ಅತಿಶಯದ ಮಾತಾಗದು.

Image

ಅಕ್ಷಯ ತೃತೀಯದ ಶುಭದಿನದಂದು…

‘ಅಕ್ಷಯ’ ಎಂದೊಡನೆ ನೆನಪಾಗುವುದು ಕ್ಷಯವಾಗದೆ ಹೆಚ್ಚಾಗುವುದು. ಕ್ಷಯ ಎಂದರೆ ಕ್ಷೀಣಿಸುವುದು. ಬರಿದಾಗುವುದು, ಇಲ್ಲವಾಗುವುದು, ’ಅಕ್ಷಯ’ ಅಂದರೆ ಹೆಚ್ಚೆಚ್ಚು ಆಗುವುದು, ವೃದ್ಧಿಸುವುದು. 

Image