ಸ್ಟೇಟಸ್ ಕತೆಗಳು (ಭಾಗ ೧೩೭೬) - ಕೂಗು
ಊರಿನ ಕೊನೆಯಲ್ಲಿ ಒಂದು ಗ್ರಾಮ ಪಂಚಾಯಿತಿ ಇದೆ. ಅದಕ್ಕೆ ಹೊಂದಿಕೊಂಡು ಗ್ರಂಥಾಲಯ ಒಂದು ಹಿಂದೆ ಇತ್ತಂತೆ. ಈಗ ಅಲ್ಲಿ ಗ್ರಂಥಾಲಯದ ಯಾವ ಸುಳಿವು ಕಾಣುತ್ತಿಲ್ಲ. ಗೋಡೆಗಳಷ್ಟೇ ಉಳಿದಿವೆ. ಚಾವಣಿಗಳು ಮಾಯವಾಗಿವೆ. ಪುಸ್ತಕಗಳು ದೂಳು ಹಿಡಿದು ಕರಗಿ ಹೋಗಿದೆಯೋ, ಓದುವವರಿಲ್ಲದೆ ಆ ಜಾಗಕ್ಕೆ ಬಂದೇ ಇಲ್ಲವೋ ಗೊತ್ತಿಲ್ಲ. ಆ ಊರಿನಲ್ಲಿ ಯಾವ ಮನೆಯಲ್ಲೂ ಪುಸ್ತಕಗಳು ಸಿಗುತ್ತಿಲ್ಲ. ಓದುವ ಹವ್ಯಾಸ ಒಬ್ಬರಿಗೂ ಇಲ್ಲ.
- Read more about ಸ್ಟೇಟಸ್ ಕತೆಗಳು (ಭಾಗ ೧೩೭೬) - ಕೂಗು
- Log in or register to post comments