ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 29, 2020
ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪ ನೀಡಿ ‘ಕಾಫಿ ನಾಡಿನ ಕಿತ್ತಳೆ’ ಎಂಬ ಹೆಸರಿನಲ್ಲಿ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿ ರೂಪದಲ್ಲಿ ಪ್ರಕಟವಾಯಿತು. ಅದರಲ್ಲಿನ ಚಿಂಟಿಯ ಪಾತ್ರದ ಚಿತ್ರಣದ ಭಾಗ ಮಕ್ಕಳ ಸಾಹಿತ್ಯಕ್ಕೆ ಸ್ವೀಕೃತವಾಯಿತು. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮಲೆನಾಡಿಗೆ ಸಂಬಂಧಪಟ್ಟ ಬರಹಗಳ ಪ್ರಭಾವವೂ ಈ ಕೃತಿ ರಚನೆಗೆ ಪ್ರಮುಖ ಕಾರಣ ಎನ್ನುತ್ತಾರೆ ಲೇಖಕರು. ‘…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 27, 2020
ರೋಹಿತ್ ಚಕ್ರತೀರ್ಥ ಗಣಿತ ಉಪನ್ಯಾಸಕರು. ಕನ್ನಡದಲ್ಲಿ ವಿಜ್ಞಾನ ಹಾಗೂ ಗಣಿತದ ವಿಷಯದಲ್ಲಿ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆಯುತ್ತಾರೆ. ಪತ್ರಿಕೆಗಳಲ್ಲಿ ಅಂಕಣಗಳನ್ನೂ ಬರೆಯುತ್ತಾರೆ. ಅಜ್ಜಿ ಹೇಳಿದ ಕಥೆಗಳು ಎಂಬ ಹೆಸರಿನಲ್ಲಿ ದೇಶ, ವಿದೇಶಗಳ ಮಕ್ಕಳ ಕಥೆಗಳನ್ನು ಹುಡುಕಿ ತಂದು ಪ್ರಕಟಿಸಿದ್ದಾರೆ. ಈಗಿನ ಮಕ್ಕಳು ಕಥೆ ಪುಸ್ತಕ ಓದುವುದೇ ಇಲ್ಲ ಎಂಬ ಅಪವಾದವಿದೆ. ಆದರೆ ರೋಹಿತ್ ಅವರ ಈ ಪುಸ್ತಕವನ್ನು ಮಕ್ಕಳು ಸರಾಗವಾಗಿ ಓದಿ ಮುಗಿಸಬಹುದು ಏಕೆಂದರೆ ಬಹುತೇಕ…
ಲೇಖಕರು: Shreerama Diwana
ವಿಧ: ಪುಸ್ತಕ ವಿಮರ್ಶೆ
September 25, 2020
ಸಾವಿರದ ಶರಣವ್ವ ತಾಯೇ..... `ಕಣ್ಣಾ ಮುಚ್ಚೆ... ಕಾಡೇ ಗೂಡೇ...’ ಒಂದು ಯಶೋಗಾಥೆ. ಕಲಾವಿದೆಯೊಬ್ಬಳ ಯಶಸ್ಸಿನ ಹಿಂದಿನ ಅಗ್ನಿದಿವ್ಯಗಳ ಅನಾವರಣ. ಇಲ್ಲಿ ಬದುಕು ಒಂದು ಸಮುದ್ರದ ಘನತೆ ಪಡೆದುಕೊಂಡಿದೆ. ಅದನ್ನು ಮೊಗೆಯಲು ಬೊಗಸೆಯನ್ನು ನಂಬಿ ಹೊರಟ ಪ್ರೀತಿ ನಾಗರಾಜರು ತಮ್ಮ ಪುಟ್ಟ ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಾದಷ್ಟನ್ನು ನಮಗೂ ಹಂಚಿದ್ದಾರೆ. ಪದ್ಮಶ್ರೀ ಡಾ. ಬಿ. ಜಯಶ್ರೀ ಈ ನಾಡು ಕಂಡ ಅಸಾಧಾರಣ ಕಲಾವಿದೆ. ಬಾಲ್ಯವೆಲ್ಲ ರಂಗದ ಮೇಲೆಯೇ ಕಳೆದ ಬಾಲೆ ಆ ದಿನಗಳನ್ನು ನೆನಪಿಸಿಕೊಳ್ಳುವ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 24, 2020
ಪತ್ರಕರ್ತ ರಮೇಶ್ ದೊಡ್ಡಪುರ ಇವರು ೨೦೧೯ರ ಲೋಕಸಭಾ ಚುನಾವಣೆಯನ್ನು ಹತ್ತಿರದಿಂದ ಕಂಡು ವರದಿ ಮಾಡಿದವರು. ಅವರು ಕಂಡ ಚುನಾವಣೆಯ ಸಾರ ಸಂಗ್ರಹವೇ ಬಿಜೆಪಿ ೨೫ + ೧ ಕರ್ನಾಟಕದಲ್ಲಿ ಕಮಲ ಅರಳಿದ ಕತೆ ಎಂಬ ಪುಸ್ತಕ. ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ ‘೨೦೧೮ರ ವಿಧಾನ ಸಭೆ ಚುನಾವಣೆ ಹಾಗೂ ೨೦೧೯ ರ ಲೋಕಸಭಾ ಚುನಾವಣೆ ಅವಧಿಯೇ ದಾಖಲೆಗಳ ಕಾಲಮಾನ. ದೇಶದ ಇತಿಹಾಸದಲ್ಲೇ ಒಂದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರವನ್ನು ಪ್ರವಾಸ ಮಾಡಿದ ದಾಖಲೆ ನಿರ್ಮಾಣವಾದದ್ದು (ಬಿ.ಎಸ್. ಯಡಿಯೂರಪ್ಪ) ಇದೇ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 22, 2020
"ಎಲ್ಲಕಾಲಕ್ಕೂ ಬರುವ ಕಥೆಗಳು " - ಇದು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡಿದ್ದ ಪುಸ್ತಕ. ಈಗ archive.org ನಲ್ಲಿ ಸಿಕ್ಕೀತು.  ಇದು ಮಕ್ಕಳಿಗಾಗಿ ನ್ಯಾಷನಲ್ ಬುಕ್ ಟ್ರಸ್ಟ್ ನವರು ಹೊರತಂದ ಪುಸ್ತಕ.  ಇದರಲ್ಲಿ ಖಾಂಡವ ದಹನ , ಬಕಾಸುರನ ವಧೆ , ಉಪಮನ್ಯುವಿನ ಕಥೆ , ಪರೀಕ್ಷಿತನ ಕಥೆ ಮತ್ತು ಸತ್ಯವಾನ ಸಾವಿತ್ರಿ ಕಥೆ ಇವೆ.  ಇಲ್ಲಿನ ಕಥೆಗಳ ವಿಶೇಷ ಹೀಗಿವೆ: - ೧) ಸತ್ಯವಾನ ಸಾವಿತ್ರಿ ಕಥೆಯಲ್ಲಿ ಸಾವಿತ್ರಿಯು ಸತ್ಯವಾನನನ್ನು ಮೆಚ್ಚಿ , ಅವನು ಬೇಗನೆ ಸಾಯಲಿರುವ ಬಗ್ಗೆ…
ಲೇಖಕರು: Shreerama Diwana
ವಿಧ: ಪುಸ್ತಕ ವಿಮರ್ಶೆ
September 21, 2020
 “ಮೂಕ ಹಕ್ಕಿಯ ಹಾಡು” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ.  ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ ಅತ್ಯಾಚಾರದಂತಹ ಕ್ರೌರ್ಯಕ್ಕೆ ಬಲಿಯಾದ ನಂತರ ಅನುಭವಿಸುವ ತೊಳಲಾಟಗಳನ್ನೆಲ್ಲಾ ಮೀರಿಯೂ ಆಕೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ದೂರ ದೃಷ್ಟಿ ಮತ್ತು ಪ್ರಬುದ್ಧತೆ ಇದೆ. ತನ್ನ ಹಳ್ಳಿಯಲ್ಲಿ ಶಾಲೆ ಆರಂಭಿಸಿದ ಆಕೆ, ಶಾಲೆಗೆ ಸಿಕ್ಕಿದ ಪರಿಹಾರದ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 20, 2020
ಸಾಮಾನ್ಯವಾಗಿ ಧಾರ್ಮಿಕರು ಆಧ್ಯಾತ್ಮಿಕ ಜೀವಿಗಳು ಸಂಗ್ರಹ ಬುದ್ಧಿ ಅಂದರೆ ಕೂಡಿಹಾಕುವ  ಬುದ್ಧಿಯು ಒಳ್ಳೆಯದಲ್ಲ ಅಂತ ಹೇಳುತ್ತಾರೆ. ಅವರು ಹೇಳುತ್ತಿರುವುದು ಆಸ್ತಿಪಾಸ್ತಿ ಹಣ ಮುಂತಾದವುಗಳ ಬಗ್ಗೆ ಇರಬೇಕು.  ಆದರೆ ಒಳ್ಳೆಯ ಸಂಗತಿಗಳನ್ನು, ವಿಚಾರಗಳನ್ನು, ನೆನಪುಗಳನ್ನು, ಹೇಳಿಕೆಗಳನ್ನು, ಹಾಡುಗಳನ್ನು, ಕಥೆಗಳನ್ನು, ಮತ್ತೆ ಅಂತಹ ಇನ್ನಾವುದೇ ಸಂಗತಿಗಳನ್ನು ಸಂಗ್ರಹಿಸುವುದು ಒಳ್ಳೆಯದೇನೋ. ಅಂತಹ ಸಂಗ್ರಹವನ್ನು ನಮ್ಮ ಸಂತೋಷಕ್ಕೂ, ಬೇರೆಯವರ ಸಂತೋಷಕ್ಕೂ , ಬಳಸಬಹುದು.  ಒಳ್ಳೆಯ ವಿಚಾರಗಳನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
September 19, 2020
ಮೂಡಬಿದರೆ ಸಮೀಪದ ಊರಿನಲ್ಲಿ ಹುಟ್ಟಿದ ಎಸ್.ಸುರೇಂದ್ರನಾಥ್ ಓದಿ ಬೆಳೆದದ್ದು ದಾವಣಗೆರೆಯಲ್ಲಿ. ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಭೇತಿ. ಹುಲಗೂರ ಹುಲಿಯವ್ವ, ಸಂಕ್ರಮಣ, ಜನತೆಯ ಶತ್ರು, ಆತಂಕವಾದಿಯ ಆಕಸ್ಮಿಕ ಸಾವು ಮುಂತಾದ ಹಲವಾರು ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ. ನಾಗಮಂಡಲ, ಕಾನೂರು ಹೆಗ್ಗಡತಿ, ಕೆಂಡಸಂಪಿಗೆ ಮೊದಲಾದ ಕೆಲವು ಚಲನ ಚಿತ್ರಗಳಿಗೆ ಕತೆ/ಚಿತ್ರಕತೆ/ಸಂಭಾಷಣೆ ಬರೆದಿದ್ದಾರೆ. ಹದಿಮೂರು ವರ್ಷಗಳ ಕಾಲ ಈಟಿವಿಯಲ್ಲಿ ಕಾರ್ಯಕ್ರಮಗಳ ಜವಾಬ್ದಾರಿಯನ್ನು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
September 18, 2020
ಶಬ್ದಗಳ ಬಳಕೆಯಲ್ಲಿ ನಮ್ಮ ಆಯ್ಕೆಯು ನಮ್ಮ ಯೋಚನೆಗಳ ಗುಣಮಟ್ಟವನ್ನು ತೋರಿಸುತ್ತದಂತೆ.  ಹಾಗಾಗಿ ನಾವು ಜಾಣತನದಿಂದ ಸರಿಯಾದ ಶಬ್ದಗಳನ್ನು ಆಯ್ದುಕೊಳ್ಳಬೇಕಿದೆ. ಸತ್ತರು ಅಂತ ಹೇಳಕೂಡದು . ಬದುಕಿ ಉಳಿಯಲಿಲ್ಲ ಅನ್ನಬೇಕು .  'ಸಾಯೋತನಕ '  ಅನ್ನಬಾರದು - ' ಇರೋತನಕ' ಅನ್ನಬೇಕು . ಒಬ್ಬರು ಬೆಂಕಿಕಡ್ಡಿಗೆ ದೀಪದ ಕಡ್ಡಿ ಎನ್ನುವುದನ್ನು ನೋಡಿದ್ದೇನೆ.  ಕನ್ನಡದ ಬಗ್ಗೆ ಮಾತನಾಡುವಾಗ 'ಉರ್ದು/ ತಮಿಳು ಹಿನ್ನೆಲೆಯಿಂದ '  ಅನ್ನುವ ಬದಲು 'ಕನ್ನಡ ವಲ್ಲದ ಹಿನ್ನೆಲೆಯಿಂದ ' ಎನ್ನಬೇಕು .   ಇನ್ನೊಂದು…
ಲೇಖಕರು: Shreerama Diwana
ವಿಧ: ಪುಸ್ತಕ ವಿಮರ್ಶೆ
September 18, 2020
ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡಿರಿಳ ಆತ್ಮಕಥೆ “ಮರುಭೂಮಿಯ ಹೂ”. ವಾರಿಸ್ ಡಿರಿ ಜಗತ್ತಿನ ಜಾಹಿರಾತು ಲೋಕದಲ್ಲಿ ಒಂದು ಅಚ್ಚಳಿಯದ ಹೆಸರು. ಆತ್ಮಕಥೆಯ ವಸ್ತು, ವಿವರ ಹಾಗೂ ಜಗತ್ ಪ್ರಸಿದ್ಧ ರೂಪದರ್ಶಿಯಾಗಿದ್ದುಕೊಂಡು ವಾರಿಸ್ ಡಿರಿ ತೆರೆದಿಟ್ಟ ತನ್ನ ಬದುಕಿನ ಬಡತನ, ಅಪಮಾನ, ಅತ್ಯಾಚಾರದಂತಹ ಸಂಗತಿಗಳು ಹಾಗೂ ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಎಂಬ ಕ್ರೂರ ಪದ್ಧತಿ ಇವೆಲ್ಲವುಗಳಿಂದಾಗಿ ಈ ಕೃತಿಯು ಓದುಗರನ್ನು ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಗುಣವನ್ನು…