ವಿಧ: ಬ್ಲಾಗ್ ಬರಹ
November 16, 2020
ಈ ತಿಂಗಳ ಮಯೂರದಲ್ಲಿ ಸಿದ್ದಲಿಂಗು ಪರಿಣಯ ಎಂಬ ಕಥೆ ಇದೆ. ಇದರಲ್ಲಿ ನೋಡಲು ತುಂಬ ಕುರೂಪಿಯಾಗಿರುವಾತನ ಮದುವೆ ತಡವಾಗಿ ಆಗುತ್ತದೆ. ಹುಡುಗಿ ನಂಬಲು ಅಸಾಧ್ಯವಾಗುವಷ್ಟು ಸುಂದರಿ. ಮದುವೆಯನ್ನು ಗೊತ್ತು ಮಾಡುವಾಗ ಅವಳು ಮೂಕಿ ಎಂದು ಹೇಳಿರುತ್ತಾರೆ.
ಆದರೆ ಮೊದಲ ರಾತ್ರಿ ಅವಳು ಮೂಕಿಯಲ್ಲ ಎಂದು ಗೊತ್ತಾಗುತ್ತದೆ. ಆದರೆ ಅದು ತೃತೀಯಲಿಂಗದ ವ್ಯಕ್ತಿ ! ಮುಂದೆ ಆಗುವುದೇನು ? ನೀವೇ ಕತೆಯನ್ನು ಓದಿ.
ಓದುಗರಿಗೆ ಹಳಗನ್ನಡವನ್ನು ಪರಿಚಯಿಸುವ ನಿಚ್ಚಂ ಪೊಸತು ಎಂಬ ನಿಯತ ಅಂಕಣದಲ್ಲಿ ನಾಗವರ್ಮನ…
ವಿಧ: ಪುಸ್ತಕ ವಿಮರ್ಶೆ
November 16, 2020
ಹುಣಸೆ ಮರದ ದೆವ್ವ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ…
ವಿಧ: ಪುಸ್ತಕ ವಿಮರ್ಶೆ
November 12, 2020
ಪತ್ನಿ, ಮಕ್ಕಳು ಸಂಪಾದಿಸಿದ ಸಂಸ್ಮರಣಾ ಗ್ರಂಥ "ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ"
"ಬಾಲಕೃಷ್ಣ ಆಚಾರ್ಯರ ಸ್ಮೃತಿ ಸೌರಭ", ಆಚಾರ್ಯರ ಪತ್ನಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ವಾಣಿ ಬಿ. ಆಚಾರ್ಯ ಹಾಗೂ ಇವರ ಮಕ್ಕಳಾದ ಗುರುಚರಣ ಆಚಾರ್ಯ, ಶ್ರೀಮತಿ ಪಲ್ಲವಿ ಪಿ. ಭಟ್ ಇವರು ಸಂಪಾದಿಸಿ ತಮ್ಮದೇ ಆದ ಉಡುಪಿಯ 'ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ- 576118' ಪ್ರಕಾಶನ ಸಂಸ್ಥೆಯ ಮೂಲಕ ಪ್ರಕಟಿಸಿದ ಹಲವು ಸಿದ್ಧಿಗಳ ಸಾಧಕರಾದ ಕೆ. ಬಾಲಕೃಷ್ಣ ಆಚಾರ್ಯರ ಬದುಕು, ಬರಹಗಳು ಮತ್ತು…
ವಿಧ: ಬ್ಲಾಗ್ ಬರಹ
November 11, 2020
ಈ ಸಲದ ಪ್ರಜಾವಾಣಿ ವಿಶೇಷಾಂಕವು, ಎರಡೂವರೆ ಸಾವಿರ ವರ್ಷ ಹಳೆಯದಾದರೂ ಹೊಸ ಹೊಳಹುಗಳನ್ನು ಕಾಣ್ಕೆಗಳನ್ನು ಕೊಡುತ್ತಲೇ ಇರುವ ರಾಮಾಯಣ ಕಥಾನಕಗಳ ಕುರಿತಾಗಿದೆ. ರಾಮನು ಧರ್ಮವೇ ಮೂರ್ತಿವೆತ್ತಂತೆ ಅಂತೆ . ಧರ್ಮ ಯಾವುದು, ರಾಮನು ಅದನ್ನು ಹೇಗೆ ಬದುಕಿ ತೋರಿದನು ಎಂಬೆಲ್ಲ ವಿಷಯಗಳು ಇಲ್ಲಿವೆ. ಈ ದೀಪಾವಳಿ ಸಂಚಿಕೆಯಲ್ಲಿ ಯಾವುದೇ ಕಟ್ಟುಪಾಡಿಗೆ ಸೀಮಿತಗೊಳ್ಳದೆ ತುಂಬ ವ್ಯಾಪಕವಾಗಿ ಜನಮಾನಸದಲ್ಲಿ ನೆಲೆಯೂರಿದ್ದು ಹೇಗೆ? ಇಷ್ಟೊಂದು ರಾಮನ ಕಥೆಗಳು ಏಕೆ ರೂಪುಗೊಂಡವು? ಎಂಬುದನ್ನು ಇನ್ನೊಂದು ಲೇಖನದಲ್ಲಿ…
ವಿಧ: ಪುಸ್ತಕ ವಿಮರ್ಶೆ
November 09, 2020
ಬಿಟ್ ಕಾಯಿನ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಬಗ್ಗೆ ಈಗೀಗ ಬಹಳಷ್ಟು ಮಾತುಗಳು ಕೇಳಿ ಬರುತ್ತಿವೆ. ಬಿಟ್ ಕಾಯಿನ್ಸ್ ಬಗ್ಗೆ ಜನ ಸಾಮಾನ್ಯರಿಗೆ ಏನೇನೂ ತಿಳಿದಿಲ್ಲ. ಸುಮ್ಮನೇ ವಿವರಗಳನ್ನು ಕೊಡುತ್ತಾ ಹೋದರೆ ಅರ್ಥವೂ ಆಗಲಾರದು. ಅದಕ್ಕಾಗಿಯೇ ವಿಠಲ್ ಶೆಣೈ ಅವರು ಕಾದಂಬರಿ ರೂಪದಲ್ಲಿ ‘ನಿಗೂಢ ನಾಣ್ಯ' ಎಂಬ ಪುಸ್ತಕವನ್ನು ಬರೆದು ಓದುಗ ಪ್ರಭುವಿನ ಮಡಿಲಿಗೆ ಹಾಕಿದ್ದಾರೆ. ‘ನಿಗೂಢ ನಾಣ್ಯ' ಬಹಳ ಹಿಂದೆಯೇ ‘ಮೈಲ್ಯಾಂಗ್ ಬುಕ್ಸ್’ ಎಂಬ ಇ-ಬುಕ್ಸ್ ಮತ್ತು ಆಡಿಯೋ ಬುಕ್ಸ್ ಮಾರುವ ಸಂಸ್ಥೆಯ ಮೂಲಕ…
ವಿಧ: ಪುಸ್ತಕ ವಿಮರ್ಶೆ
November 07, 2020
ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೭ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೧೮ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ್ದಾರೆ. ಮೌಲ್ಯಯುತವಾದ ೧೦ ಲೇಖನಗಳು ಈ ಪುಸ್ತಕದಲ್ಲಿವೆ. ತಮ್ಮ ಸಂಪಾದಕೀಯದಲ್ಲಿ ಜಮದಂಡಿಯವರು ಅಲ್ಲಮಪ್ರಭುಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದಾರೆ. ಅವರು ಬರೆಯುತ್ತಾರೆ ‘ಅಲ್ಲಮ ಪ್ರಭು ವಿಶ್ವದ ಶ್ರೇಷ್ಟ ದಾರ್ಶನಿಕ ಮಹಾಜ್ಞಾನಿ. ಮಾನವನಾದಿಯಾಗಿ ಸಕಲ ಜೀವಿಗಳ…
ವಿಧ: ಪುಸ್ತಕ ವಿಮರ್ಶೆ
November 05, 2020
*ಆರ್. ರಂಗಸ್ವಾಮಿಯವರ "ಮಲೆನಾಡಿನಲ್ಲಿ ಸುತ್ತಾಡಿದಾಗ"*
"ಮಲೆನಾಡಿನಲ್ಲಿ ಸುತ್ತಾಡಿದಾಗ", ಮೈಸೂರಿನ ಆರ್. ರಂಗಸ್ವಾಮಿ (" ರವಿ - ಕಿರಣ್") ಇವರ ಪ್ರವಾಸನುಭವದ ಕೃತಿ. ಇದು ಲೇಖಕರ ಮೊದಲ ಕೃತಿಯೂ ಹೌದು. 2013ರಲ್ಲಿ ಲೇಖಕರ ಪತ್ರಮಿತ್ರ ಮಂಗಳೂರು ಪದವಿನಂಗಡಿಯ ಕೆ. ಪಿ. ಅಶ್ವಿನ್ ರಾವ್ ಅವರು ಹಾಗೂ ಲೇಖಕರು ಜೊತೆಯಾಗಿ ಪ್ರಕಾಶಿಸಿದ, 80 + 4 ಪುಟಗಳ ಕೃತಿಗೆ ಸಾಂಕೇತಿಕವಾಗಿ ಹತ್ತು ರೂಪಾಯಿ ಬೆಲೆ. ಕೃತಿಯಲ್ಲಿ ಲೇಖಕರ "ಸ್ನೇಹದ ನುಡಿಗಳು" ಇವೆ. ಅಶ್ವಿನ್ ರಾವ್ ಅವರ ಬೆನ್ನುಡಿ ಇವೆ.…
ವಿಧ: ಪುಸ್ತಕ ವಿಮರ್ಶೆ
November 03, 2020
ಅಯೋಧ್ಯಾ ಪ್ರಕಾಶನದ ೧೪ ನೇ ಪುಸ್ತಕವಾಗಿ ಹೊರಬಂದಿರುವ ‘ಗಣಿತಜ್ಞರ ರಸಪ್ರಸಂಗಗಳು' ಬರೆದಿರುವವರು ಸ್ವತಃ ಗಣಿತ ಬೋಧಕರಾದ ರೋಹಿತ್ ಚಕ್ರತೀರ್ಥ ಇವರು. ಗಣಿತ ಬಹುತೇಕ ಮಂದಿಗೆ ಕಬ್ಬಿಣದ ಕಡಲೆಯೇ. ಪಿಯುಸಿಯಿಂದ ಪದವಿಯವರೆಗೆ ನಾನೂ ಗಣಿತವನ್ನೇ ಒಂದು ವಿಷಯವಾಗಿ ಕಲಿತರೂ ನನಗಿನ್ನೂ ಗಣಿತ ಅರ್ಥವೇ ಆಗಿಲ್ಲ. ಇದು ನನ್ನ ವೈಯಕ್ತಿಕ ಸಮಸ್ಯೆ. ಆದರೆ ಗಣಿತದಲ್ಲಿ ಬರೆದದ್ದು ಸರಿಯಾದರೆ ನೂರಕ್ಕೆ ನೂರು ಅಂಕ ಗ್ಯಾರಂಟಿ ಎಂದು ಆಗ ಪ್ರಚಲಿತವಾಗಿದ್ದ ಮಾತು. (ಆದರೆ ಈಗ ಭಾಷಾ ವಿಷಯದಲ್ಲೂ ಶೇಕಡಾ ನೂರು…
ವಿಧ: ಪುಸ್ತಕ ವಿಮರ್ಶೆ
October 31, 2020
ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯವರು ಉಗ್ರರ ಪುಲ್ವಾಮಾ ದಾಳಿಯ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್, ನಮ್ಮ ಧೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಅವರ ದಾಳಿ ಹಾಗೂ ಶತ್ರು ದೇಶವಾದ ಪಾಕಿಸ್ತಾನದಲ್ಲಿ ಸೆರೆ ಸಿಕ್ಕಾಗ ತೋರಿದ ಕೆಚ್ಚು ಇವುಗಳ ಬಗ್ಗೆ ಬರೆದ ಒಂದು ಫುಟ್ಟ ಪುಸ್ತಕವೇ ‘ಫ್ರಮ್ ಪುಲ್ವಾಮಾ’. ಪುಸ್ತಕದ ರಕ್ಷಾಪುಟದಲ್ಲೇ ವಿಂಗ್ ಕಮಾಂಡರ್ ಅಭಿನಂದನ್ ಅವರ ಭಾವಚಿತ್ರವನ್ನು ಮುದ್ರಿಸಿ ಅದಕ್ಕೆ ಧೀರಾಭಿನಂದನ್ ಎಂದು ಗೌರವ ಸಲ್ಲಿಸಿದ್ದಾರೆ. ಆ ಸಮಯ ಕನ್ನಡದ ನ್ಯೂಸ್ ಚಾನೆಲ್ ಆಗಿರುವ…
ವಿಧ: ರುಚಿ
October 30, 2020
ಮೊದಲಿಗೆ ಗೋಧಿಯನ್ನು ೧-೨ ಗಂಟೆ ನೆನೆಸಿ. ಹೆಚ್ಚು ಮೆದುವಾಗುವುದು ಬೇಡ. ನೆನೆದ ಮೇಲೆ ಅದಕ್ಕೆ ಬೆಲ್ಲ ಮತ್ತು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿರಿ. ನಯವಾಗಿ ರುಬ್ಬ ಬಾರದು. ಗೋಧಿ ತುಂಡು ಕೈಗೆ ಸಿಗುವಂತಿರಬೇಕು. ರುಬ್ಬಿದ ಬಳಿಕ ಅದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಸ್ವಲ್ಪ ಕಾಯಿತುರಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ನಂತರ ಒಂದು ಕಾವಲಿಯನ್ನು ಬಿಸಿಮಾಡಿ ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ. ರುಬ್ಬಿದ ಮಿಶ್ರಣವನ್ನು ಕೈಯಿಂದಲೇ ಕಾವಲಿಯ ಮೇಲೆ ತಟ್ಟಬೇಕು. ಕಾಯುವಾಗ…