ಸಾಮಾನ್ಯನ ಓದು - ನವೆಂಬರ್ 2020 ರ 'ಮಯೂರ' ತಿಂಗಳ ಪತ್ರಿಕೆ

ಸಾಮಾನ್ಯನ ಓದು - ನವೆಂಬರ್ 2020 ರ 'ಮಯೂರ' ತಿಂಗಳ ಪತ್ರಿಕೆ

 

ಈ ತಿಂಗಳ ಮಯೂರದಲ್ಲಿ ಸಿದ್ದಲಿಂಗು ಪರಿಣಯ ಎಂಬ ಕಥೆ ಇದೆ. ಇದರಲ್ಲಿ ನೋಡಲು ತುಂಬ ಕುರೂಪಿಯಾಗಿರುವಾತನ ಮದುವೆ ತಡವಾಗಿ ಆಗುತ್ತದೆ. ಹುಡುಗಿ ನಂಬಲು ಅಸಾಧ್ಯವಾಗುವಷ್ಟು ಸುಂದರಿ. ಮದುವೆಯನ್ನು ಗೊತ್ತು ಮಾಡುವಾಗ ಅವಳು ಮೂಕಿ ಎಂದು ಹೇಳಿರುತ್ತಾರೆ.  

 

ಆದರೆ ಮೊದಲ ರಾತ್ರಿ ಅವಳು ಮೂಕಿಯಲ್ಲ ಎಂದು ಗೊತ್ತಾಗುತ್ತದೆ. ಆದರೆ ಅದು ತೃತೀಯಲಿಂಗದ ವ್ಯಕ್ತಿ ! ಮುಂದೆ ಆಗುವುದೇನು ? ನೀವೇ ಕತೆಯನ್ನು ಓದಿ. 

 

ಓದುಗರಿಗೆ ಹಳಗನ್ನಡವನ್ನು ಪರಿಚಯಿಸುವ ನಿಚ್ಚಂ ಪೊಸತು ಎಂಬ ನಿಯತ ಅಂಕಣದಲ್ಲಿ ನಾಗವರ್ಮನ ಕರ್ನಾಟಕ ಕಾದಂಬರಿಯ ಬಗೆಗೆ ಲೇಖನ ಇದೆ.

 

ಜಾಗತಿಕ ವಲಸೆಗಾರರ ಜೀವನದ ಕುರಿತಾದ , ಕರ್ಕಿ ಕೃಷ್ಣಮೂರ್ತಿಅವರು ಬರೆದ ಚುಕ್ಕಿ ಬೆಳಕಿನ ಜಾಡು ಕಾದಂಬರಿಯ ಪರಿಚಯವನ್ನು ನರೇಂದ್ರ ಪೈಯವರು ಮಾಡಿಕೊಟ್ಟಿದ್ದಾರೆ

 

ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಕೆಲಸ ಕಳೆದುಕೊಂಡು ಹಳ್ಳಿಗೆ ಹೋದವರು ಅಲ್ಲಿಯ ಜನಕ್ಕೆ ಬೇಡವಾದ ಚಿತ್ರಣದ ಕಥೆಯೊಂದು ಇಲ್ಲಿದೆ. 

 

ಇಂಗ್ಲಿಷ್ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾದ ನಂತರ 35 ವರ್ಷಗಳ ಕಾಲ ಕನ್ನಡದಲ್ಲಿ ಅಧ್ಯಯನ ಬರಹ ವಿಮರ್ಶೆಗಳಲ್ಲಿ ತೊಡಗಿದ ಜಿ ಎಸ್ ಅಮೂರ ಅವರ ಕುರಿತು ಎರಡು ಲೇಖನಗಳಿವೆ. 

 

ಶರ್ಲಾಕ್ ಹೋಂಸ್ ಪಾತ್ರ ಸೃಷ್ಟಿಯ ಜಾತಿಯ ಅರ್ಥರ್ ಕಾನನ್ ಡೈಲ್ ಅವರು ಬರೆದ ಒಂದು ರಹಸ್ಯಮಯ ಕಥೆ ಕೂಡ ಇದೆ.

 

ಇನ್ನೊಂದು ಕಥೆಯಲ್ಲಿ ಮಾರಿಗೆ ಬಿಟ್ಟ ಕೋಣವೊಂದು ಒಂದು ಊರಿನಲ್ಲಿ ನುಗ್ಗಿ ಹಾವಳಿ ಎಬ್ಬಿಸಿದಾಗ ಸುತ್ತಮುತ್ತಲ ಹಳ್ಳಿಯವರು ಅದು ತಮ್ಮ ಕೋಣ ಎನ್ನುವರು. ಆಮೇಲೆ ಅದು ತಮ್ಮ ಊರಿನದಲ್ಲ ಎನ್ನುವರು.

 

ಸಂಸಾರದ 108 ತಾಪತ್ರಯಗಳ ನಡುವೆ ಗಟ್ಟಿಗಿತ್ತಿಯಾದ ಅಡಿಗೆಯವಳ ಕಥೆಯು ನನಗೆ ಇಷ್ಟವಾಯಿತು. 

 

ಕೇಶವರೆಡ್ಡಿ ಹಂದ್ರಾಳ ಅವರ ಇನ್ನಾದರೂ ಸಾಯಬೇಕು ' ಎಂಬ  ನೀಳ್ಗತೆ ಇಲ್ಲಿದೆ. ಅದರಲ್ಲಿ  ಆತ್ಮಹತ್ಯೆಯ ಪ್ರಯತ್ನದಲ್ಲಿ ಆಸ್ಪತ್ರೆ ಸೇರಿದವನಿಗೆ ಕಥೆಯ ಮುಖ್ಯಪಾತ್ರವು ಹೇಳುವುದೇನು ಗೊತ್ತೆ? - ಏನು ಅವಿವೇಕ ಮಾಡಿದೆಯಪ್ಪ, ನೀನು ಆತ್ಮಹತ್ಯೆಗೆ ಸರಿಯಾಗಿ ತಯಾರಿ ಮಾಡಬೇಕಾಗಿತ್ತು. ಆಗ ಸರಿಯಾಗಿ ಹತ್ತಿಪ್ಪತ್ತು ಸೆಕೆಂಡಿನಲ್ಲಿ ಪ್ರಾಣ ಹೋಗಿರೋದು, ಮುಂದಿನ ಸಾರಿ ಪ್ರಯತ್ನ ಮಾಡುವಾಗ ನಾನು ಹೇಳುವ ಹಾಗೆ ಮಾಡು, ಡಿಫಿನೇಟ್ಲೀ ಯೂ ವಿಲ್ ನಾಟ್ ಫೈಲ್ . (ಅಯ್ಯಯ್ಯೋ!)

 

ಕವಿತೆಗಳು ಪ್ರಬಂಧ ಇವೆಲ್ಲ ಎಂದಿನಂತೆ ಇವೆ. ಅವುಗಳಲ್ಲಿ ನನಗೆ ರುಚಿ ಇರದ ಕಾರಣನಾನು ಓದಲಿಲ್ಲ. ಅಷ್ಟೇ . 

Rating
Average: 4 (1 vote)