ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 19, 2020
ಸಿರಿಧಾನ್ಯವು ಸರ್ವ ರೋಗಗಳಿಗೆ ರಾಮಬಾಣ ಎನ್ನುವ ವಿಷಯವನ್ನು ಹಲವಾರು ಉದಾಹರಣೆಗಳ ಮೂಲಕ ಈ ಪುಸ್ತಕದ ಮೂಲಕ ಹೇಳಲು ಹೊರಟಿದ್ದಾರೆ ಲೇಖಕರಾದ ಎನ್. ಭವಾನಿಶಂಕರ್. ‘ಸಿರಿಧಾನ್ಯದಲ್ಲಿ ಔಷಧೀಯ ಗುಣಗಳಿವೆ. ಹೈಟೆಕ್ ಆಸ್ಪತ್ರೆಗಳಿಂದ ದೂರವಿರಿ. ಎಲ್ಲಾ ಕಾಯಿಲೆಗಳಿಗೂ ಈ ಆಹಾರಗಳು ಔಷಧ. ಅವುಗಳ ಪರಿಚಯ. ನಿಮ್ಮ ಮಕ್ಕಳಿಗೆ ಈ ವಿಷಯುಕ್ತ ಆಹಾರವನ್ನು ಕೊಡಬೇಡಿ. ನೀವೂ ತಿನ್ನಬೇಡಿ. ಭಯಾನಕ ಕಾಯಿಲೆಗಳು ಬರುತ್ತವೆ. ಹತ್ತು ವರ್ಷದ ಮಕ್ಕಳಿಗೆ ಡಯಾಬೀಟೀಸ್, ಬೇಗ ಮುಟ್ಟಾಗಲು ಕಾರಣವೇನು? ಡಯಾಬಿಟೀಸ್, ಹೃದಯ…
ಲೇಖಕರು: Shreerama Diwana
ವಿಧ: ಪುಸ್ತಕ ವಿಮರ್ಶೆ
December 17, 2020
*ಹಳೆಕೋಟೆ ಸುಂದರ ಬಂಗೇರಾ ಅವರು ಸಂಪಾದಿಸಿದ ಕವನ ಸಂಕಲನ "ಹದ್ದಿನ ಕವನ"* ಇಪ್ಪತ್ತಮೂರು ಮಂದಿ ಕವಿಗಳ ಇಪ್ಪತ್ತೇಳು ಕವನಗಳಿರುವ ಸಂಕಲನ " ಹದ್ದಿನ ಕವನ". ಕವಿ, ಪತ್ರಕರ್ತ ಹಳೆಕೋಟೆ ಸುಂದರ ಬಂಗೇರಾ ಅವರು ಸಂಕಲನವನ್ನು ಸಂಪಾದಿಸಿದ್ದಾರೆ. ಈಗಲ್ ಪ್ರಕಾಶನ, ಕೆ. ಎಂ. ರಸ್ತೆ, ಬಿಳಗುಳ, ಹೆಸಗಲ್ ಅಂಚೆ, ಮೂಡಿಗೆರೆ- 577 132, ಚಿಕ್ಕಮಗಳೂರು ಜಿಲ್ಲೆ ಸಂಸ್ಥೆಯು 2019 ರಲ್ಲಿ ಪ್ರಕಾಶಿಸಿದ ಸಂಕಲನದಲ್ಲಿ 44 + 4 ಪುಟಗಳಿದ್ದು, ಬೆಲೆ 70 ರೂಪಾಯಿ. ಸಂಕಲನದ 23 ಮಂದಿ ಕವಿಗಳಲ್ಲಿ ಒಬ್ಬರಾಗಿರುವ,…
ಲೇಖಕರು: Sharada N.
ವಿಧ: ರುಚಿ
December 16, 2020
ಚೆನ್ನಾಗಿ ಹಣ್ಣಾದ ಪಪ್ಪಾಯಿಯ ಸಿಪ್ಪೆ ಮತ್ತು ಬೀಜವನ್ನು ತೆಗೆದು ಸಣ್ಣ ಸಣ್ಣ ಹೋಳುಗಳಾಗಿ ತುಂಡರಿಸಿ. ಅದರ ಜೊತೆ ಹಾಲು ಬೆರೆಸಿ ಒಲೆಯ ಮೇಲಿಟ್ಟು ತುಸು ಮೆದುವಾಗುವವರೆಗೆ ಬೇಯಿಸಿ. ಅದನ್ನು ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿರಿ. ನಂತರ ಟೊಮೆಟೊ ಹಣ್ಣನ್ನು ಮಿಕ್ಸಿಗೆ ಹಾಕಿ ರಸವನ್ನು ತೆಗೆದು ಇಟ್ಟುಕೊಂಡಿರಿ. ನಂತರ ಬಾಣಲೆಗೆ ರುಬ್ಬಿದ ಮಿಶ್ರಣ ಮತ್ತು ಟೊಮೆಟೋ ರಸವನ್ನು ಜೊತೆಯಾಗಿ ಹಾಕಿ ಕಲಡಿಸಿ. ಅದಕ್ಕೆ ಸಕ್ಕರೆಯನ್ನು ಸೇರಿಸಿ. ಹದವಾದ ಉರಿಯ ಮೇಲೆ ಈ ಮಿಶ್ರಣ ತಳ ಹಿಡಿಯದಂತೆ ಕಲಡಿಸುತ್ತಾ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 15, 2020
ಕನ್ನಡದ ಖ್ಯಾತ ಪತ್ರಕರ್ತ, ಲೇಖಕ ರವಿ ಬೆಳಗೆರೆಯ ಲೇಖನಿಯಿಂದ ಮೂಡಿ ಬಂದ ‘ಆತ್ಮ' ಕಾದಂಬರಿ ನಿಜಕ್ಕೂ ಕುತೂಹಲಕಾರಿ ಕಥಾ ಹಂದರವನ್ನು ಹೊಂದಿದೆ. ಬೆಳಗೆರೆಯವರೇ ಹೇಳುವಂತೆ ಇದು ವರ್ಷಗಟ್ಟಲೆ ಕಾದು ಕುಳಿತ ಕಾದಂಬರಿಯಂತೆ. ಇದರ ಕೆಲವು ಭಾಗಗಳು ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಮೂಡಿಬಂದು ಓದುಗರ ಆಸಕ್ತಿಯನ್ನು ಕೆರಳಿಸಿದ್ದವು. ಪ್ರತೀ ವಾರ ‘ಮುಂದೇನಾಗುತ್ತೆ' ಎಂದು ಕೇಳುವಂತೆ ಮಾಡಿದ್ದವು. ಕೆಲವರಂತೂ ಹೀಗೆ ಕಂತು ಕಂತುಗಳಲ್ಲಿ ಓದಲು ಪ್ರಾರಂಭಿಸಿದರೆ ಈ ಘಟನೆಗಳೆಲ್ಲಾ ನಮ್ಮ ಜೀವನದಲ್ಲಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 12, 2020
ಮ.ನವೀನಚಂದ್ರ ಪಾಲ್ (ಮ.ನ) ಎಂಬ ಪತ್ರಕರ್ತರನ್ನು ಬಹುತೇಕರು ಮರೆತೇ ಹೋಗಿದ್ದಾರೆ. ಒಂದು ಸಮಯದ ಧೀಮಂತ ಪತ್ರಕರ್ತ ನವೀನಚಂದ್ರ ಪಾಲ್ ಬಗೆಗಿನ ಪುಸ್ತಕವು ಕನ್ನಡ ಸಂಘ ಕಾಂತಾವರ ತಮ್ಮ ‘ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ ಯೋಜನೆಯ ಅಡಿಯಲ್ಲಿ ಪ್ರಕಟಿಸಿದ ೨೪೮ನೇ ಕುಸುಮ. ಈ ಕೃತಿಯನ್ನು ಪತ್ರಕರ್ತರೇ ಆಗಿರುವ ಉಡುಪಿಯ ಶ್ರೀರಾಮ ದಿವಾಣ ಇವರು ಬರೆದಿದ್ದಾರೆ. ಪುಸ್ತಕ ಸಣ್ಣದಾಗಿದ್ದರೂ ನವೀನಚಂದ್ರ ಪಾಲ್ ಅವರ ಸಾಧನೆ ಸಣ್ಣದಲ್ಲ.  ಪುಸ್ತಕದ ಬೆನ್ನುಡಿಯಲ್ಲಿ ಲೇಖಕ, ವಿಮರ್ಶಕ…
ಲೇಖಕರು: Shreerama Diwana
ವಿಧ: ಪುಸ್ತಕ ವಿಮರ್ಶೆ
December 10, 2020
*ಪೇರೂರು ಜಾರು ಅವರ ಮಹಾಕಾವ್ಯ "ಗುರುಗಳ ಗುರು ನಾರಾಯಣ*" ಗುರುಗಳ ಗುರು ನಾರಾಯಣ" , ಪೇರೂರು ಜಾರು ಅವರು ತನ್ನದೇ ಆದ ನೂತನ ಅಯ್ನಿಲೆ ಬಂಧ ಛಂದಸ್ಸಿನಲ್ಲಿ ರಚಿಸಿದ ಮಹಾ ಕಾವ್ಯ. ಲೇಖಕರದ್ದೇ ಆದ "ತೂಟೆ ಪ್ರಕಟನಾಲಯ" , ಅಂಗಡಿ ಮನೆ, ಪೇರೂರು - 576213, ಉಡುಪಿ ಜಿಲ್ಲೆ" ಕೃತಿಯನ್ನು ಪ್ರಕಾಶಿಸಿದೆ. 2018ರಲ್ಲಿ ಪ್ರಕಟವಾದ 216 + 4 ಪುಟಗಳ ಕೃತಿಯ ಬೆಲೆ 150 ರೂಪಾಯಿ. "ಗುರುಗಳ ಗುರು ನಾರಾಯಣ"ದಲ್ಲಿ ಕವಿ ಪೇರೂರು ಜಾರು ಅವರ 'ಮೊದಲ ಮಾತು' ಮತ್ತು ಜಾರು ಅವರೇ ಆವಿಷ್ಕರಿಸಿದ ಹೊಸದಾದ  "…
ವಿಧ: ರುಚಿ
December 09, 2020
ಸಣ್ಣ ಗಾತ್ರದ ಬದನೆಕಾಯಿಗಳನ್ನು ಸ್ವಚ್ಛ ಗೊಳಿಸಿ, ಅರಶಿನ ಮತ್ತು ಉಪ್ಪು ಬೆರೆಸಿದ ನೀರಿನಲ್ಲಿ  ಸಣ್ಣ ಸಣ್ಣ ಹೋಳುಗಳನ್ನಾಗಿ ಮಾಡಿ ಹಾಕಬೇಕು. ನೀರುಳ್ಳಿಯನ್ನು ತೆಳ್ಳಗೆ ಕತ್ತರಿಸಿಟ್ಟು ಕೊಳ್ಳಬೇಕು. ಬಾಣಲೆಗೆ  ಸಾಸಿವೆ, ಚಿಟಿಕೆ ಉದ್ದಿನಬೇಳೆ, ಜೀರಿಗೆ, ಒಣಮೆಣಸು, ಎಣ್ಣೆ, ಅರಶಿನ ಹುಡಿ, ಚಿಟಿಕೆ ಇಂಗು, ಹಾಕಿ ಒಗ್ಗರಣೆ ಆಗುವಾಗ, ಕರಿಬೇವು, ಬೆಳ್ಳುಳ್ಳಿ ಬೀಜ ಹಾಕಿ, ಜೊತೆಗೆ ನೀರುಳ್ಳಿ ಸೇರಿಸಿ ಹುರಿಯಬೇಕು. ಒಂದು ತುಂಡು ಶುಂಠಿ ಜಜ್ಜಿ ಹಾಕಬಹುದು. ಇಲ್ಲದಿದ್ದರೆ ಶುಂಠಿ ಬೆಳ್ಳುಳ್ಳಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
December 07, 2020
ಹಿಂದೂ ವಾಯ್ಸ್ ಸಂಪಾದಕರಾದ ಪಿ.ದೈವಮುತ್ತು ಅವರು ಆಂಗ್ಲ ಭಾಷೆಯಲ್ಲಿ ಬರೆದ ‘655 thruths’ ಎಂಬ ಪುಸ್ತಕವನ್ನು ಆದರ್ಶ್ ಗೋಖಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪಿ. ದೈವಮುತ್ತು ಅವರು ಹೇಳುವಂತೆ ‘ಇಸ್ಲಾಂ, ಕ್ರೈಸ್ತ ಹಾಗೂ ಕಮ್ಯೂನಿಷ್ಟರಂತೆ ‘ಜಾತ್ಯಾತೀತವಾದ' ಎಂಬುದು ಹಿಂದೂಗಳ ಶತ್ರುವಾಗಿ ರೂಪುಗೊಳ್ಳುತ್ತಿರುವ ಹೊಸದಾದ ಮತ. ನಾಸ್ತಿಕವಾದವೆಂದು ಹೇಳಿಕೊಂಡರೂ ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದೇ ಈ ನವಮತದ ಧ್ಯೇಯವಾಗಿದೆ. ಸತ್ಯ ಅರಿಯದೆ ಆ ಮತವನ್ನು ಸೇರಿರುವ ಅನೇಕರು ನಮ್ಮ…
ಲೇಖಕರು: Sharada N.
ವಿಧ: ರುಚಿ
December 05, 2020
ಮೊದಲಿಗೆ ಲಿಂಬೆ ಹಣ್ಣಿನ ಗಾತ್ರದ ಹುಣಸೆ ಹುಳಿಯ ರಸವನ್ನು ಮಾಡಿ ಇಟ್ಟುಕೊಂಡಿರಿ. ಮೆಂತ್ಯೆ, ಕೊತ್ತಂಬರಿ ಮತ್ತು ಬ್ಯಾಡಗಿ ಮೆಣಸನ್ನು ಹುರಿದು ಮಿಕ್ಸಿಯಲ್ಲಿ ಹಾಕಿ ಹುಡಿ ಮಾಡಿರಿ. ಹಾಗಲಕಾಯಿಯನ್ನು ವೃತ್ತಾಕಾರದಲ್ಲಿ ಸ್ವಲ್ಪ ದೊಡ್ಡ ಗಾತ್ರದಲ್ಲಿ ಕತ್ತರಿಸಿ ಇಟ್ಟುಕೊಂಡಿರಿ. ಒಲೆಯ ಮೇಲೆ ಬಾಣಲೆಯನ್ನು ಇರಿಸಿ ಮೊದಲೇ ಕತ್ತರಿಸಿದ ಹಾಗಲ ಕಾಯಿಯ ತುಂಡುಗಳನ್ನು ಅದಕ್ಕೆ ಹಾಕಿ. ಹುಣಸೇಕಾಯಿ ರಸ, ಕಾಯಿಮೆಣಸು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಅದರಲ್ಲಿ ಹಾಗಲಕಾಯಿಯು ಅರ್ಧ ಬೆಂದ ನಂತರ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
December 04, 2020
ಇದು ಓದಿ ಮರೆಯಬಹುದಾದ ಪುಸ್ತಕವಲ್ಲ. ಮತ್ತೆಮತ್ತೆ ಓದಬೇಕಾದ ಚಿಂತನೆಗಳು, ಸಂಗತಿಗಳು, ಘಟನೆಗಳು, ಒಳನೋಟಗಳು, ವಿಶ್ಲೇಷಣೆಗಳು ತುಂಬಿದ ಪುಸ್ತಕ. “ಸಮಯವಿಲ್ಲವೇ ಹೇಳಿ” ಎಂಬ ಮೊದಲ ಅಧ್ಯಾಯದಲ್ಲಿಯೇ ನೇಮಿಚಂದ್ರ ಬರೆಯುತ್ತಾರೆ: “.... ನಿಜಕ್ಕೂ "ನಾಳೆ" ಎಂಬುದು ನಮಗಿದೆಯೇ? ಸಾವಿನ ಭಯದಲ್ಲಿ ಇವರು (ಅಧ್ಯಾಯದಲ್ಲಿ ಉಲ್ಲೇಖಿಸಿದ ಕ್ಯಾನ್ಸರ್ ಪೀಡಿತರು) ಬದುಕು ಬಿಟ್ಟವರಲ್ಲ. ಆದರೆ ಸಾವಿನ ನಿರ್ಭಯದಲ್ಲಿ ಬದುಕದವರುಂಟು. ನನ್ನ ಬದುಕಿನ ಆದ್ಯತೆಗಳನ್ನು ಗುರುತಿಸಿಕೊಳ್ಳಲು ಕ್ಯಾನ್ಸರಿಗೆ ಕಾಯಬೇಕೇ?…