ವಿಧ: ಪುಸ್ತಕ ವಿಮರ್ಶೆ
February 03, 2021
ಮೈಸೂರು ವಿಶ್ವವಿದ್ಯಾನಿಲಯದ ‘ಪ್ರಸಾರಾಂಗ' ವಿಭಾಗದಿಂದ ೧೯೮೦ರಲ್ಲಿ ಪ್ರಕಟವಾದ ಪುಸ್ತಕವೇ ‘ಸುವರ್ಣ ಸಂಪುಟ' ಕನ್ನಡದ ಖ್ಯಾತ ಕವಿಗಳ ಕನ್ನಡ ಭಾವಗೀತೆಗಳ ಸಂಕಲನವಿದು. ಪು.ತಿ.ನ., ದೇ, ಜವರೇಗೌಡ, ಚೆನ್ನವೀರ ಕಣವಿ, ಹಾ ಮಾ ನಾಯಕ ಹಾಗೂ ಪ್ರಭುಶಂಕರ ಮುಂತಾದ ಪ್ರಸಿದ್ಧ ವ್ಯಕ್ತಿಗಳು ಸಂಪಾದಿಸಿದ ಅಮೂಲ್ಯ ಪುಸ್ತಕವಿದು. ಈ ಪುಸ್ತಕ ಮತ್ತೆ ಮರು ಮುದ್ರಣ ಕಂಡಿದೆಯೋ ತಿಳಿದಿಲ್ಲ. ಇದೊಂದು ಸಂಗ್ರಹ ಯೋಗ್ಯ ಕೃತಿ. ಹಲವಾರು ಮಹಾನ್ ಕವಿಗಳ ಅತ್ಯಮೂಲ್ಯ ಕವನಗಳು ಈ ಪುಸ್ತಕದಲ್ಲಿವೆ.
ಇಲ್ಲಿರುವ ಕವಿಗಳ…
ವಿಧ: ಪುಸ್ತಕ ವಿಮರ್ಶೆ
February 02, 2021
ಖ್ಯಾತ ಮಲಯಾಳಂ ನಾಟಕಕಾರರಾದ ದಿ.ಕೆ.ಟಿ.ಮುಹಮ್ಮದ್ ಅವರ ‘ಸಂಹಾರಂ’ ನಾಟಕವನ್ನು ಕನ್ನಡಕ್ಕೆ ತಂದಿದ್ದಾರೆ ಖ್ಯಾತ ರಂಗಕರ್ಮಿ, ಚಿತ್ರ ನಟರಾದ ಕಾಸರಗೋಡು ಚಿನ್ನಾ ಅವರು. ಈ ಪುಟ್ಟ ನಾಟಕದ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ನಟ-ನಿರ್ದೇಶಕರಾದ ಟಿ.ಎಸ್. ನಾಗಾಭರಣ ಇವರು. ಅವರ ಪ್ರಕಾರ ‘ನಟ, ನಿರ್ದೇಶಕ, ಅನುವಾದಕ ಕಾಸರಗೋಡು ಚಿನ್ನಾ ಕನ್ನಡ, ಕೊಂಕಣಿ, ತುಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಪರಿಶ್ರಮವಿರುವವರು. ಹೀಗಾಗಿ ಬಳಸಿರುವ ಪದಗುಚ್ಚಗಳು, ನುಡಿಕಟ್ಟುಗಳು ಪ್ರಸ್ತುತ ಮತ್ತು…
ವಿಧ: ಬ್ಲಾಗ್ ಬರಹ
February 01, 2021
ಯಾ ದೇವಿ ಸರ್ವಭೂತೇಷು ನಿದ್ರಾ ರೂಪೇಣ ಸಂಸ್ಥಿತಾ||2||
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್. ಶಯನೇ ಯ: ಸ್ಮರೇನ್ನಿತ್ಯಂ ದುಸ್ವಪ್ನಮ್ ತಸ್ಯ ನಶ್ಯತಿ!
ಪ್ರತಿದಿನ ಮಲಗುವ ಮುನ್ನ ಶ್ರೀ ರಾಮ, ಸ್ಕಂದ, ಹನುಮಂತ,ಗರುಡ ಹಾಗು ಭೀಮನನ್ನು ಯಾರು ನೆನೆಯುತ್ತಾರೋ ಅವರಿಗೆ ಕೆಟ್ಟ ಕನಸು ಗಳು ಬೀಳುವುದಿಲ್ಲ ಎಂದು, ಮೇಲಿರುವ ಎರಡು ಶ್ಲೋಕಗಳನ್ನ ಎರಡು ಸಾರಿ ಅಂದು , ರಾತ್ರಿ ೨:೩೦ ಮಲಗಲು ಪ್ರಯತ್ನಿಸಿ ವಿಫಲವಾಗಿ ಎದ್ದು ಕುಳಿತೆ. ನನ್ನ ಮಡದಿಯ…
ವಿಧ: ಪುಸ್ತಕ ವಿಮರ್ಶೆ
January 30, 2021
ವಿಭಿನ್ನ ಶೈಲಿಯ ಕಥೆಗಳು ಹಾಗೂ ಲೇಖನಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಚಿತ್ರ ನಿರ್ದೇಶಕರೂ ಆಗಿರುವ ನಾಗತಿಹಳ್ಳಿ ಚಂದ್ರಶೇಖರವರ ೭ ಕಥೆಗಳ ಪುಟ್ಟ ಕಥಾ ಸಂಕಲನವೇ ‘ಛಿದ್ರ'. ಡಾ. ಯು.ಆರ್. ಅನಂತಮೂರ್ತಿಯವರು ಮುನ್ನುಡಿ ಬರೆದಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ ಇವರ ಬಗ್ಗೆ ಅನಂತಮೂರ್ತಿಯವರು ಹೀಗೆ ಬರೆಯುತ್ತಾರೆ ‘ನಾಗತಿಹಳ್ಳಿ ನನ್ನ ಸಮಕಾಲೀನರಿಂದ ಕಲಿತವರಾಗಿದ್ದೂ ನವ್ಯವನ್ನು ದಾಟಿದವರು ; ಬಂಡಾಯ ಚಳುವಳಿಯಿಂದ ಪ್ರಭಾವಿತರಾಗಿದ್ದೂ ಅದನ್ನು ಮೀರಿದವರು. ನಾನು ತುಂಬಾ ಇಷ್ಟ ಪಡುವ ಈಚಿನ…
ವಿಧ: ಬ್ಲಾಗ್ ಬರಹ
January 28, 2021
I would like to write in kannada regularly
ವಿಧ: ಪುಸ್ತಕ ವಿಮರ್ಶೆ
January 28, 2021
*ಮೂಡಿಗೆರೆ ಎಂ. ಎಸ್. ನಾಗರಾಜರ "ಭಾವತರಂಗ"*
"ಭಾವತರಂಗ" , ಎಂ. ಎಸ್. ನಾಗರಾಜ್, ಮೂಡಿಗೆರೆ ಇವರ 2017ರಲ್ಲಿ ಪ್ರಕಟವಾದ ಹನಿಗವನ ಸಂಕಲನ. 60 ಪುಟಗಳ, 70 ರೂಪಾಯಿ ಬೆಲೆಯ ಸಂಕಲನವನ್ನು ಕವಿ ನಾಗರಾಜ್ ಅವರೇ ತಮ್ಮ ಅಭಿನವ ಪ್ರಕಾಶನ, ಮಾರ್ಕೆಟ್ ರಸ್ತೆ, ಮೂಡಿಗೆರೆ- 577132, ಚಿಕ್ಕಮಗಳೂರು ಜಿಲ್ಲೆ ಮೂಲಕ ಪ್ರಕಟಿಸಿದ್ದಾರೆ.
ಸಂಕಲನಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಕಳಸಾಪುರ ಇಲ್ಲಿನ ಪ್ರಾಚಾರ್ಯರಾದ ಎಚ್. ಎಂ. ನಾಗರಾಜ ರಾವ್ ಕಲ್ಕಟ್ಟೆ ಅವರ ಮುನ್ನುಡಿ ಮತ್ತು ಸಾಹಿತಿ ಮೂಡಿಗೆರೆಯ…
ವಿಧ: ರುಚಿ
January 27, 2021
ಗಸಗಸೆ ಮತ್ತು ಸಣ್ಣ ರವೆಗಳನ್ನು ಹುರಿದು ಕೊಳ್ಳಬೇಕು. ಗೋಡಂಬಿ, ಬಾದಾಮಿ, ಚಿಟಿಕೆ ಏಲಕ್ಕಿ ಹಾಕಿ , ಎಲ್ಲವನ್ನೂ ನುಣ್ಣಗೆ ರುಬ್ಬಿ ಪಾತ್ರೆಗೆ ಹಾಕಬೇಕು. ತೆಂಗಿನಕಾಯಿ ತುರಿ (ಸುಳಿ)ಯನ್ನು ರುಬ್ಬಿ ಹಾಲು ತೆಗೆದು ಇಟ್ಟುಕೊಳ್ಳಬೇಕು. ೨ನೇ ಮತ್ತು ೩ನೇ ಕಾಯಿಹಾಲನ್ನು ರುಬ್ಬಿದ ಪೇಸ್ಟಿಗೆ ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ, ಸಣ್ಣ ಉರಿಯಲ್ಲಿ ಸೌಟಲ್ಲಿ ಕಲಕುತ್ತಾ ಕುದಿಸಬೇಕು.(ಇಲ್ಲದಿದ್ದರೆ ಅಡಿ ಹಿಡಿಯುತ್ತದೆ, ಗಂಟು ಗಂಟಾಗುತ್ತದೆ) ಹದ ಕುದಿದಾಗ ಬೆಲ್ಲ ಅಥವಾ ಸಕ್ಕರೆ ಸೇರಿಸಿ, ಚೆನ್ನಾಗಿ…
ವಿಧ: ಬ್ಲಾಗ್ ಬರಹ
January 26, 2021
ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿನಲ್ಲಿ ಭಾರತಕ್ಕೆ ಬಂದ ಫೋಟೋ ಜರ್ನಲಿಸ್ಟ್ ಬರ್ಕ್ ವೈಟ್ ಆ ಸಮಯದಲ್ಲಿ ಭಾರತದಲ್ಲಿ ಕಂಡುದನ್ನು ಫೋಟೋ ತೆಗೆದಳು ಅಷ್ಟೇ ಅಲ್ಲ ಹಾಫ್ ವೇ ಟು ಫ್ರೀಡಂ (ಸ್ವಾತಂತ್ರ್ಯದೆಡೆಗೆ ಅರೆಪಯಣ) ಎಂಬ ಪುಸ್ತಕವನ್ನು ಬರೆದಳು. ಇದನ್ನು ಒಂದು ಸೃಜನಶೀಲ ದಾಖಲೆ ಎಂದು ಪರಿಗಣಿಸಲಾಗುತ್ತದೆ.
ಮಹಾತ್ಮಾ ಗಾಂಧಿ , ಜವಾಹರ ಲಾಲ್ ನೆಹರು, ಸರದಾರ್ ಪಟೇಲ್, ಜಿನ್ನಾ, ಅಂದಿನ ಕಾಲದ ಪ್ರಮುಖ ಕೈಗಾರಿಕೋದ್ಯಮಿಗಳಾದ ಟಾಟಾ , ಬಿರ್ಲಾ, ಕಾಶ್ಮೀರದ ಸಿಂಹ ಶೇಖ್ ಅಬ್ದುಲ್ಲಾ ಎಂಥವರು…
ವಿಧ: ಪುಸ್ತಕ ವಿಮರ್ಶೆ
January 26, 2021
‘ಇಡ್ಲಿ, ಆರ್ಕಿಡ್ ಆಣಿ ಮಿ' ಎಂಬ ಪುಸ್ತಕವನ್ನು ಮರಾಠಿ ಭಾಷೆಯಲ್ಲಿ ಬರೆದವರು ಭಾರತದ ಖ್ಯಾತ ಹೋಟೇಲ್ ಉದ್ಯಮಿ ವಿಠಲ ವೆಂಕಟೇಶ ಕಾಮತ್. ಈ ಪುಸ್ತಕವನ್ನು ಕನ್ನಡಕ್ಕೆ ಅಕ್ಷತಾ ದೇಶಪಾಂಡೆಯವರು ತಂದಿದ್ದಾರೆ. ಅವರದ್ದೇ ಮಾತಿನಲ್ಲಿ ಹೇಳುವುದಾದರೆ ‘ಈ ಪುಸ್ತಕದ ಕನ್ನಡಾನುವಾದ ನನಗಾಗಿ ಒಂದು ಅಭೂತಪೂರ್ವ ಅನುಭವ. ಅನುವಾದ ಮಾಡುವಾಗಿನ ಅನುಭವ, ಇದನ್ನು ಓದಬೇಕಾದರೆ ಊಟ ತಿಂಡಿ ಮರೆತ ಅನುಭವ ಬೇರೆಯಾಗಿರಲಿಲ್ಲ. ಈ ಪುಸ್ತಕದ ಪ್ರತಿಯೊಂದು ವಾಕ್ಯದಲ್ಲಿ ಜಿದ್ದಿದೆ, ಆತ್ಮವಿಶ್ವಾಸವಿದೆ, ಅತ್ಮೀಯತೆ ಇದೆ…
ವಿಧ: ಪುಸ್ತಕ ವಿಮರ್ಶೆ
January 23, 2021
ನಾವೆಲ್ಲಾ ಸಣ್ಣವರಿರುವಾಗ ಓದುತ್ತಿದ್ದ ಪುಸ್ತಕವಿದು. ‘ಅರೇಬಿಯನ್ ನೈಟ್ಸ್' ಎಂಬ ಪುಸ್ತಕದ ಕಥೆಗಳನ್ನು ಅರೇಬಿಯದ ಇರುಳು ಎಂಬ ಹೆಸರಿನಲ್ಲಿ ಎಸ್. ರಮಾನಂದ ಇವರು ಅನುವಾದಿಸಿದ್ದಾರೆ. ಪ್ರಕಾಶಕರು ಪ್ರಸ್ತಾವನೆಯಲ್ಲಿ ಅರೇಬಿಯನ್ ನೈಟ್ಸ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ಹಲವಾರು ಸಣ್ಣ ಹಾಗೂ ದೊಡ್ಡ ಕಥೆಗಳು ಇವೆ. ಬಹಳ ಹಿಂದೆ ಮಧ್ಯಪೂರ್ವ ದೇಶಗಳು ಎಂದು ಕರೆಯಲ್ಪಡುವ ಅರೇಬಿಯಾದಲ್ಲಿ ಅರಸರು (ಖಲೀಫರು) ಆಳುತ್ತಿದ್ದರು. ಶಹರಿಯಾರ್ ಎಂಬ ದೊರೆಯು ಆಳುತ್ತಿದ್ದ…