ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 30, 2021
‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭದಲ್ಲಿ ಪ್ರತೀ ದಿನ ಮೂಡಿ ಬರುತ್ತಿತ್ತು. ಇದನ್ನು ಪುಸ್ತಕ ರೂಪದಲ್ಲಿ ತಮ್ಮದೇ ಆದ ರಮಣಶ್ರೀ ಪ್ರಕಾಶನದಿಂದ ಹೊರತಂದಿದ್ದಾರೆ ಲೇಖಕರಾದ ಎಸ್.ಷಡಾಕ್ಷರಿಯವರು. ಇಲ್ಲಿರುವ ಪುಸ್ತಕ ಭಾಗ ೭. ಮೊದಲ ಭಾಗಕ್ಕೆ ಎಸ್.ಎಲ್ ಭೈರಪ್ಪನವರು ಬರೆದ ಮುನ್ನುಡಿಯನ್ನೇ ಇದಕ್ಕೂ ಬಳಸಿಕೊಳ್ಳಲಾಗಿದೆ. ಪುಟ್ಟ ಪುಟ್ಟ ಕಥೆಗಳ ಮೂಲಕ, ಮಹನೀಯರ ಬದುಕಿನಲ್ಲಿ ನಡೆದ ಘಟನೆಗಳ ಉದಾಹರಣೆಗಳ ಮೂಲಕ ಬರೆದ ಲೇಖನಗಳ ಗುಚ್ಚ ಇವು. ಈ ಪುಸ್ತಕದಲ್ಲಿ ೭೫…
ಲೇಖಕರು: venkatesh
ವಿಧ: ಬ್ಲಾಗ್ ಬರಹ
March 29, 2021
-ಎಚ್. ಆರ್. ಲಕ್ಷ್ಮೀವೆಂಕಟೇಶ್, ಮುಂಬೈ. ಇದು ಆಸ್ಟ್ರೇಲಿಯಾ ದೇಶದ ಮೆಲ್ಬೋರ್ನ್ ನಲ್ಲಿ ಜನಿಸಿದ ಒಬ್ಬ ಸರ್ಬಿಯಾ ದೇಶದ ಮೂಲದವನಾದ ನಿಕೊಲಸ್ ಜೇಮ್ಸ್ ವಿವಚೆಚ್ ಎಂಬ ದಿವ್ಯಾಂಗ ಮಗುವಿನ ಅತ್ಯಂತ ರೋಚಕ ಕತೆ. ಕೇವಲ ರುಂಡ ಮುಂಡಗಳು,ಹಾಗೂ ಕೈಕಾಲುಗಳಿಲ್ಲದೆ ಹುಟ್ಟಿದ ಮಗುವನ್ನು ತಂದೆತಾಯಿಗಳೇ ನೋಡಿ ಎತ್ತಿಕೊಂಡು ಲಾಲನೆ ಪಾಲನೆ ಮಾಡಲು ಇಷ್ಟಪಡಲಿಲ್ಲ. ಕಾಲಾನುಕ್ರಮದಲ್ಲಿ ಇಂತಹ ದುರದೃಷ್ಟಮಗುವನ್ನು ಒಪ್ಪಿಕೊಂಡು ಅದಕ್ಕೆ ತಮ್ಮ ಪ್ರೀತಿಯ ಅಮೃತವೆರೆದು ವಿದ್ಯಾಭ್ಯಾಸವನ್ನು ಕೊಡಿಸಿ ಜೀವನ ಪಥದಲ್ಲಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 28, 2021
  ಒಂದು ಕಚೇರಿ. ಅಲ್ಲಿ ಒಬ್ಬಳು ಮಹಿಳಾ ಉದ್ಯೋಗಿಗೆ ಆಕೆಯ ಬಾಸ್ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ. ಒಂದು ಹಂತದಲ್ಲಿ ಅವಳು ಮೇಲಿನ  ಅಧಿಕಾರಿಗೆ ಈ ಸಂಗತಿಯನ್ನು ತಿಳಿಸಿ ತನ್ನನ್ನು ಬೇರೆಯ ಸೆಕ್ಷನ್ ಗೆ ಹಾಕಲು ಕೇಳಿಕೊಳ್ಳುತ್ತಾಳೆ. ಆ  ಮೇಲಧಿಕಾರಿಗೆ  ಆಕೆಯ ಬಾಸ್ ಬಗ್ಗೆ ತುಂಬಾ ಸಿಟ್ಟು ಬಂದು ಕೇಂದ್ರ ಕಚೇರಿಗೆ ಫೋನ್ ಮಾಡಿ ಆತನನ್ನು ತುಂಬಾ ದೂರಕ್ಕೆ ವರ್ಗ ಮಾಡಿಸುತ್ತಾನೆ.    ಆಮೇಲೆ ನಡೆಯುವುದೇನು?  ಈ ಸಂಗತಿ ತಿಳಿದ ದಿನ ಅವಳು  ಈ ಮೇಲಧಿಕಾರಿಯ ಕ್ಯಾಬಿನ್ನಿಗೆ  ನುಗ್ಗಿ ಕಿರುಚುತ್ತಾಳೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 27, 2021
ಜೋಗಿ ಅಂದರೆ ಗಿರೀಶ್ ಹತ್ವಾರ್ ನಮ್ಮ ನಡುವಿನ ಅದ್ಭುತ ಬರಹಗಾರರು. ಇವರ ಸಣ್ಣ ಕಥೆ ತುಂಬಾನೇ ಸೊಗಸಾಗಿರುತ್ತದೆ. ‘ಜರಾಸಂಧ' ಕಥಾ ಸಂಕಲನವು ಬರೆಯದೇ ಉಳಿದ ಕಥೆಗಳು ಎಂದು ಅವರೇ ಹೇಳಿಕೊಂಡಿದ್ದಾರೆ. ತಮ್ಮ ಮುನ್ನುಡಿ ‘ಕತೆ ಕತೆ ಕಾರಣ'ದಲ್ಲಿ ಬರೆಯುತ್ತಾರೆ ‘...ಎಂದಿನಂತೆ ಇವುಗಳ ಪೈಕಿ ಹೆಚ್ಚಿನ ಕತೆಗಳನ್ನು ಗೆಳೆಯ ರವಿ ಬೆಳಗೆರೆ ತಮ್ಮ ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಂದು ಕಥೆ ‘ದೇಶಕಾಲ' ಪತ್ರಿಕೆಯಲ್ಲೂ, ಮತ್ತೊಂದು ತರಂಗ ವಿಶೇಷಾಂಕದಲ್ಲೂ ಪ್ರಕಟವಾಗಿದೆ. ಉಳಿದೆಲ್ಲಾ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 26, 2021
ಒಬ್ಬ ತಂದೆ ಮಗನ ಜೊತೆ ಬೀದಿಯಲ್ಲಿ ಇದ್ದಾನೆ. ಮಗನಿಗೆ ಹಸಿವಾಗಿದೆ. ತಂದೆಯ ಕೈಯಲ್ಲಿ ಬಿಡಿಗಾಸಿಲ್ಲ. 'ಅಪ್ಪ ನನಗೆ ತುಂಬಾ ಹಸಿವು' - ಹುಡುಗ ಮತ್ತೆ ಹೇಳುತ್ತಾನೆ. ತಂದೆಯು 'ಇಲ್ಲೇ ಇರು - ಈಗ ಬಂದೆ' ಎಂದು  ಹೇಳಿ ಬೀದಿಯನ್ನು  ದಾಟಿ ಅಲ್ಲಿರುವ ಒಂದು ಅಂಗಡಿಯಿಂದ ತಿಂಡಿಯೊಂದನ್ನು ಎತ್ತಿಕೊಂಡು ಮಗನತ್ತ ಓಡುತ್ತಾನೆ. ಅಂಗಡಿಯವರು 'ಕಳ್ಳ, ಕಳ್ಳ! ಅವನನ್ನು ಹಿಡಿಯಿರಿ' ಎಂದು ಕಿರುಚಿ ಅವನನ್ನು  ಹಿಡಿಯಲು ಹಿಂದೆ ಬರುತ್ತಾರೆ. ಸಮೀಪದಲ್ಲಿದ್ದ ಒಬ್ಬ ಪೊಲೀಸ್ ಕೂಡ ಅತ್ತ ಧಾವಿಸುತ್ತಾನೆ. ಓಹ್,…
ಲೇಖಕರು: Shreerama Diwana
ವಿಧ: ಪುಸ್ತಕ ವಿಮರ್ಶೆ
March 25, 2021
ಡಾ. ಪಿ. ಶ್ರೀಕೃಷ್ಣ ಭಟ್ ಅವರು ಬರೆದ "ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ ಕಾಂತಾವರ ಕನ್ನಡ ಸಂಘ (ರಿ)ದ 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 80ನೆಯ ಕುಸುಮವೇ "ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ" (ಲೇಖಕರು: ಡಾ. ಪಿ. ಶ್ರೀಕೃಷ್ಣ ಭಟ್). 52 ಪುಟಗಳ, 33 ರೂಪಾಯಿ ಬೆಲೆಯ ಕೃತಿಯನ್ನು 2013ರಲ್ಲಿ ಕನ್ನಡ ಸಂಘ (ಕಾಂತಾವರ - 574129, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ) ಪ್ರಕಟಿಸಿದೆ. ಕೃತಿಯ ಆರಂಭದಲ್ಲಿ, ಪ್ರಧಾನ ಸಂಪಾದಕರಾದ ಡಾ. ನಾ.…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 23, 2021
ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನಾರನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 22, 2021
ಈ ಪುಸ್ತಕದಲ್ಲಿ ಗಂಡ ಹೆಂಡಿರ ಸರಸಮಯ ಕತೆಗಳಿವೆ. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ.   ಈ ಪುಸ್ತಕವನ್ನು   https://archive.org/details/dli.osmania.3122 ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.  (ಇಲ್ಲಿನ ತಿಳಿಹಾಸ್ಯ , ಸುಲಲಿತ ಬರವಣಿಗೆಯು ನನಗೆ ಈಶ್ವರಯ್ಯ ಅವರ ' ಸರಸ '  ಲೇಖನಗಳ ನೆನಪಾಯಿತು. ಅವು ತುಷಾರ ತಿಂಗಳ    ಪತ್ರಿಕೆಯಲ್ಲಿ ನಾಲ್ಕೈದು ದಶಕಗಳ ಹಿಂದೆ ಪ್ರಕಟವಾಗಿ ನಂತರ ಪುಸ್ತಕ ರೂಪದಲ್ಲಿ ಬಂದಿತ್ತು.)
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 21, 2021
ಈ ಪುಸ್ತಕದ ಕತೆಗಳನ್ನು ಹಿಂದೆ ಓದಿದುದಾಗಿ ಅಲ್ಲಿ ಗುರುತು ಹಾಕಿದ್ದೆ . ಈಗ ಈ ಪುಸ್ತಕವನ್ನು ಇನ್ನೊಮ್ಮೆ ಓದಿದೆ. ಆಗ ಗಮನಕ್ಕೆ ಬರದೆ ಇದ್ದುದು ಈಗ ಗಮನಕ್ಕೆ ಬಂದಿತು.  ಆಗ ಹೇಗೆ ಓದಿದ್ದೆನೋ? ಇಲ್ಲಿನ  ಬಹುತೇಕ ಕತೆಗಳು ಚೆನ್ನಾಗಿವೆ. ಶೈಲಿ ಮತ್ತು  ಹೂರಣದಲ್ಲಿ ಕನ್ನಡ ಸಣ್ಣಕತೆಗಳ ಜನಕ ಶ್ರೀಯುತ ಮಾಸ್ತಿ ವೆಂಕಟೇಶ ಅಯ್ಯಂಗಾರರ ಕತೆಗಳನ್ನು ಹೋಲುತ್ತವೆ.       ಸೀತೆಯ ಅಗ್ನಿಪ್ರವೇಶ ಮತ್ತು ಕೈಕೇಯಿಯ ಪಶ್ಚಾತ್ತಾಪ ಕುರಿತಾದ ಕತೆಗಳಂತೂ ಮಾಸ್ತಿಯವರೇ ಬರೆದ ಕತೆಗಳೇನೋ ಎಂದು ಅನ್ನಿಸುತ್ತದೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 20, 2021
ಇದೊಂದು ಪುಟ್ಟ ಪುಸ್ತಕದಲ್ಲಿ ಒಂದು ಕಾಲಕ್ಕೆ ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ ಆರುಷಿ ಹತ್ಯಾ ಪ್ರಕರಣದ ವಿವರಗಳಿವೆ. ರವಿ ಬೆಳಗೆರೆಯವರು ಕ್ರೈಂ ಸಾಹಿತ್ಯವನ್ನು ಬಹಳ ಸೊಗಸಾಗಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಾರೆ. ಆದರೆ ಈ ಆರುಷಿ ಹತ್ಯೆಯ ಪುಸ್ತಕವನ್ನು ಸ್ವಲ್ಪ ಗಡಿಬಿಡಿಯಲ್ಲಿ ಬರೆದು ಮುದ್ರಿಸಿದಂತೆ ತೋರುತ್ತದೆ. ಕೆಲವೆಡೆ ಕಥೆ ಓದುತ್ತಾ ಓದುತ್ತಾ ಬೇರೆ ಕಡೆಗೆ ತಿರುಗುತ್ತದೆ. ಆದರೂ ಈ ಪುಸ್ತಕ ಬರೆಯಲು ಅವರು ತೆಗೆದುಕೊಂಡ ಶ್ರಮ ಅಭಿನಂದನೀಯ. ಏಕೆಂದರೆ ಎಲ್ಲೂ ದೊರೆಯದ…