ವಿಧ: ಪುಸ್ತಕ ವಿಮರ್ಶೆ
February 20, 2021
‘ಆಗಾಗ ಬಿದ್ದ ಮಳೆ’ ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಅವರು ಬರೆದ ಬಿಡಿ ಬರಹಗಳ ಸಂಗ್ರಹ. ತಮ್ಮ ಅಂಕಣಗಳ ಮೂಲಕ ಖ್ಯಾತರಾಗಿರುವ ವಿಶ್ವೇಶ್ವರ ಭಟ್ ಅವರ ಲೇಖನಗಳು ಮಾಹಿತಿಪೂರ್ಣ ಹಾಗೂ ಅರ್ಥ ಗರ್ಭಿತವಾಗಿರುತ್ತವೆ. ಲೇಖಕರು ತಮ್ಮ ಮುನ್ನುಡಿಯಾದ ‘ಮಳೆ ಹನಿಗಳ ಟಪ್ ಟಪ್' ಇದರಲ್ಲಿ ಬರೆಯುತ್ತಾರೆ ‘“ಪತ್ರಿಕೆಗಳ ಬರೆದ ಲೇಖನಗಳನ್ನೆಲ್ಲ ಸಂಗ್ರಹಿಸುವುದೆಂದರೆ ಪಾತರಗಿತ್ತಿ ಹಿಡಿದಂತೆ. ಕಣ್ಣಿಗೆ ಕಾಣುತ್ತದೆ. ಕೈಗೆ ಸಿಗುವುದಿಲ್ಲ. ಎಷ್ಟೋ ಸಲ ಕಾಣೆಯಾಗುತ್ತದೆ. ಕೆಲ ದಿನಗಳ ಅನಂತರ ಅವುಗಳನ್ನು…
ವಿಧ: ರುಚಿ
February 19, 2021
ಮೊದಲಿಗೆ ಬಾಣಲೆಯಲ್ಲಿ ಅರ್ಧ ಕಪ್ ತುಪ್ಪ ಹಾಕಿ ಅದು ಬಿಸಿಯಾಗುವಾಗ ಅದಕ್ಕೆ ಜಾಮೂನು ಹುಡಿಯನ್ನು ಹಾಕಿ ಕಲಸಿ. ನಂತರ ಅದಕ್ಕೆ ಹಾಲು ಮತ್ತು ಸಕ್ಕರೆಯನ್ನು ಹಾಕಿ ಮಗುಚುತ್ತಾ ಇರಬೇಕು. ಉಳಿದ ಅರ್ಧ ಕಪ್ ತುಪ್ಪವನ್ನು ಹಾಕಿ ಮಗುಚಿ, ಅದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಚೂರುಗಳನ್ನು ಹಾಗೂ ಏಲಕ್ಕಿ ಹುಡಿಯನ್ನು ಸೇರಿಸಿ. ಪಾಕ ಗಟ್ಟಿಯಾಗುತ್ತಾ ಬರುವಾಗ ಒಲೆಯಿಂದ ಕೆಳಗಿಳಿಸಿ. ಒಂದು ಪ್ಲೇಟಿಗೆ ಹಾಕಿ ಬರ್ಫಿಯ ಆಕಾರದಲ್ಲಿ ಕತ್ತರಿಸಿ.
ಮಾಹಿತಿ: ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಗುಲಾಬ್ ಜಾಮೂನು…
ವಿಧ: ಪುಸ್ತಕ ವಿಮರ್ಶೆ
February 18, 2021
*ಗುರುರಾಜ ಸನಿಲ್ ಅವರ "ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು"*
ಖ್ಯಾತ ಉರಗ ವಿಜ್ಞಾನಿ, ಪರಿಸರ ಅಧ್ಯಯನಕಾರ, ಕಥೆಗಾರ, ಲೇಖಕ ಗುರುರಾಜ ಸನಿಲ್ ಅವರ ಆರನೇ ಕೃತಿ "ಕಮರಿದ ಸತ್ಯಗಳು, ಚಿಗುರಿದ ಸುದ್ದಿಗಳು" ಎಂಬ ಲೇಖನಗಳ ಸಂಕಲನ. 2018ರಲ್ಲಿ ಪ್ರಕಟವಾದ, 12 + 106 ಪುಟಗಳ ಕೃತಿಯ ಬೆಲೆ 120 ರೂಪಾಯಿ. ಲೇಖಕರೇ (ಗುರುರಾಜ ಸನಿಲ್, ಕೊಳಂಬೆ - ಪುತ್ತೂರು, ಉಡುಪಿ - 576105, ಮೊಬೈಲ್: 9845083869) ಕೃತಿಯ ಪ್ರಕಾಶಕರು.
ಮಂಗಳೂರಿನ ಪ್ರಸಿದ್ಧ ಮುದ್ರಕ, ಲೇಖಕ ಕಲ್ಲೂರು ನಾಗೇಶ್ ಅವರ ಮುನ್ನುಡಿ…
ವಿಧ: ಪುಸ್ತಕ ವಿಮರ್ಶೆ
February 16, 2021
ಪ್ರಚಂಡ ಪತ್ತೇದಾರ ಪುಸ್ತಕದ ಲೇಖಕರಾದ ಬಿ.ಎಲ್.ಕೃಷ್ಣಮೂರ್ತಿಯವರು ಬೆಂಗಳೂರಿನ ಸಹಾಯಕ ಪೋಲೀಸ್ ಕಮೀಷನರ್ ಆಗಿ ನಿವೃತ್ತ ಹೊಂದಿದವರು. ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ಆಂಗ್ಲರ ಆಡಳಿತದಲ್ಲಿದ್ದ ಬೆಂಗಳೂರು ದಂಡು ಪ್ರದೇಶದ ಬೆಂಗಳೂರು ಪೋಲೀಸ್ ಫೋರ್ಸ್ (BPF) ನಲ್ಲಿ ೧೯೪೨ರಲ್ಲಿ ಕಾನ್ ಸ್ಟೇಬಲ್ ದರ್ಜೆಯಲ್ಲಿ ನೌಕರಿಗೆ ಸೇರಿದ ಇವರು, ತರಭೇತಿ ಸಮಯದಲ್ಲಿ ತೋರಿದ ತಮ್ಮ ಅಸಾಧಾರಣ ಪ್ರತಿಭೆಯ ಕಾರಣದಿಂದ ಕೇವಲ ೧೬ ತಿಂಗಳಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಭಡ್ತಿ ಪಡೆದರು. ಭಾರತದಲ್ಲಿ ಇದೊಂದು ಅಪರೂಪದ…
ವಿಧ: ಬ್ಲಾಗ್ ಬರಹ
February 15, 2021
ಕನ್ನಡ ರಂಗಭೂಮಿಯ ನಿರ್ದೇಶಕ ರೂ ಕ್ರಿಯಾಶೀಲ ರಂಗ ಕಾರ್ಯಕರ್ತರೂ ಆದ ಪ್ರಸನ್ನ ಅವರು ಬರೆದ 'ಮೂಲ' ರಾಮಾಯಣ - ಭಾಗ ಒಂದು ಎಂಬ ಪುಸ್ತಕವನ್ನು ಇತ್ತೀಚೆಗೆ ಓದಿದೆ. ಅದರಲ್ಲಿ ಮನುಷ್ಯ ಮತ್ತು ನಿಸರ್ಗ ಇವುಗಳ ನಡುವಿನ ಸಮತೋಲನವನ್ನು ಪ್ರತಿಪಾದಿಸುತ್ತ ರಾಮಾಯಣದ ಕಥೆಯನ್ನು ಹೇಳಲಾಗಿದೆ. ಕಥೆಯ ಚೌಕಟ್ಟಿನ ಮಟ್ಟಿಗೆ ಹೇಳುವುದಾದರೆ ಇದು ವಾಲ್ಮೀಕಿ ರಾಮಾಯಣವನ್ನು ಅನುಸರಿಸಿದರೂ ಕೂಡ ಶ್ರೀರಾಮನನ್ನು ಇಲ್ಲಿ ವಿಶ್ವಮಾನವನನ್ನಾಗಿ ನೋಡಲಾಗಿದೆ. ಇದರ ಎರಡನೆಯ ಭಾಗ ನನಗೆ ಓದಲು ಸಿಕ್ಕಿಲ್ಲವಾದರೂ ಮೊದಲೇ…
ವಿಧ: ಪುಸ್ತಕ ವಿಮರ್ಶೆ
February 13, 2021
ಹುಚ್ಚಾಟದ ಹುಲಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ…
ವಿಧ: ಪುಸ್ತಕ ವಿಮರ್ಶೆ
February 12, 2021
‘ಪನ್ನೀರು' ಹನಿಗವಿತೆಗಳ ಪುಸ್ತಕವನ್ನು ರಚಿಸಿದವರು ಶಿಕ್ಷಕರಾದ ಪರಮೇಶ್ವರಪ್ಪ ಕುದರಿಯವರು. ಇವರ ಬಗ್ಗೆ ಬೆಂಗಳೂರಿನ ಸಾಹಿತಿ ವೈ.ಬಿ.ಎಚ್. ಜಯದೇವ್ ಅವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ- “ ಕನ್ನಡ ಸಾರಸ್ವತ ಲೋಕದಲ್ಲಿ ಸುಮಾರು ಮೂರು ದಶಕಗಳಿಂದಲೂ ಕವಿಯಾಗಿ, ಸಾಹಿತಿಯಾಗಿ ತಮ್ಮನ್ನು ಗುರುತಿಸಿಕೊಂಡಿರುವ ಶ್ರೀ ಪರಮೇಶ್ವರಪ್ಪ ಕುದರಿ ಅವರು ಹಳ್ಳಿಯ ಬಡನೆಂಟನಂತಹಾ ಸ್ನೇಹ ಜೀವಿ. ಕಲಾವಿದನಾಗಿ, ಹಾಡುಗಾರರಾಗಿ, ಉತ್ತಮ ಸಂಘಟಕರಾಗಿ, ಪ್ರಕಾಶಕರಾಗಿ ಹೀಗೆ ಬಹುಶ್ರುತ ವ್ಯಕ್ತ್ವಿತ್ವದ ಈ…
ವಿಧ: ಪುಸ್ತಕ ವಿಮರ್ಶೆ
February 09, 2021
ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ನಿಧನದ ಬಳಿಕ ಹೊರ ಬಂದ ಪುಸ್ತಕವಿದು. ಬಹಳ ಹಿಂದೊಮ್ಮೆ ಪ್ರಕಟವಾಗಿದ್ದರೂ, ಪ್ರತಿಗಳು ಈಗ ಮುಗಿದಿವೆ ಎಂದು ರವಿ ಬೆಳಗೆರೆಯವರು ಬರೆದಿದ್ದರು. ‘ಹಿಮಗಿರಿಯ ಗರ್ಭದಲ್ಲಿ' ಪುಸ್ತಕವು ಒಂದು ಪ್ರವಾಸ ಕಥನ. ರವಿ ಬೆಳಗೆರೆಯವರು ತಮ್ಮ ಅರುಣಾಚಲ ಪ್ರದೇಶದ ಪ್ರವಾಸದ ಅನುಭವಗಳನ್ನು ತಮ್ಮದೇ ಆದ ಶೈಲಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅರುಣಾಚಲ ಪ್ರದೇಶಕ್ಕೆ ಹೋಗುವುದು ಅಷ್ಟೊಂದು ಸುಲಭವಿಲ್ಲ.
ಲೇಖಕರೇ ಬರೆದಂತೆ “.... ಈ ಮುಂಚೆ ನಾನು ಅರುಣಾಚಲವನ್ನು…
ವಿಧ: ಪುಸ್ತಕ ವಿಮರ್ಶೆ
February 06, 2021
ಸ್ವರಾಜ್ಯ ಎಂಬುದು ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರ ಸಮಗ್ರ ಕೃತಿ ಸಂಪುಟ. ಸ್ವಾತಂತ್ರ್ಯ ಹೋರಾಟಕ್ಕೆ ಕಾವ್ಯವನ್ನು ಮಹತ್ವದ ಮಾಧ್ಯಮವಾಗಿ ದುಡಿಸಿಕೊಂಡ ಕವಿ ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚತ್ತಾಯರು. ಇವರ ಬದುಕಿನ ಮೇಲೂ ಬರವಣಿಗೆಯ ಮೇಲೂ ಗಾಂಧೀತತ್ವದ ಗಾಢ ಪ್ರಭಾವವಿದೆ. ಭಾರತೀಯ ಆರ್ಷ ಚಿಂತನೆಯೊಂದಿಗೆ, ಸುಧಾರಣಾವಾದಿ ನಿಲುವುಗಳೂ ಸೇರಿಕೊಂಡು ಅವರೊಬ್ಬ ಪ್ರಾಮಾಣೀಕ ದೇಶ ಭಕ್ತ ಕವಿಯಾಗಿ ರೂಪುಗೊಂಡವರು. ಬರೆದರು, ಬರೆದಂತೆ ಬದುಕಿದರು. ಮದುವೆ ಹಾಡುಗಳಲ್ಲೂ ಸ್ವಾತಂತ್ರ್ಯದ…
ವಿಧ: ಪುಸ್ತಕ ವಿಮರ್ಶೆ
February 04, 2021
*ಕೆ. ಪಿ. ಅಶ್ವಿನ್ ರಾವ್ ಅವರ "ಡಿಸೆಂಬರ್ 31- ಯಾಕೋ ನೆನಪಾಯ್ತು...!"*
" ಡಿಸೆಂಬರ್ 31- ಯಾಕೋ ನೆನಪಾಯ್ತು...!" , ಕೆ. ಪಿ. ಅಶ್ವಿನ್ ರಾವ್ ಅವರ ಮೊದಲ ಲೇಖನಗಳ ಸಂಕಲನ. 84 + 8 + 4 ಪುಟಗಳ, ಹತ್ತು ರೂಪಾಯಿ ಬೆಲೆ (ಸಾಂಕೇತಿಕ) ಯ ಸಂಕಲನ 2014ರಲ್ಲಿ ಪ್ರಕಟವಾಗಿದೆ. ಸ್ಟೆಲ್ಲಾ ಮನೋಜ್ ರವರು ವಿನ್ಯಾಸಗೊಳಿಸಿದ ಆಕರ್ಷಕ ಮುಖಪುಟದ ಸಂಕಲನವನ್ನು ಲೇಖಕರೇ (ಕೆ. ಪಿ. ಅಶ್ವಿನ್ ರಾವ್, ಪದವಿನಂಗಡಿ, ಅಂಚೆ: ಬೊಂದೇಲ್, ಮಂಗಳೂರು- 575008, ದ. ಕ. ಜಿಲ್ಲೆ, ಮೊಬೈಲ್: 9448253815)…