ವಿಧ: ಪುಸ್ತಕ ವಿಮರ್ಶೆ
January 05, 2021
ಖೋಟಾ ನೋಟು ರಹಸ್ಯಗಳು ಎಂಬ ಈ ಪುಸ್ತಕವು ಹಳೆಯ ಪುಸ್ತಕವಾದುದರಿಂದ ಹಲವಾರು ವಿಷಯಗಳು ಸ್ವಲ್ಪ ಮಟ್ಟಿಗೆ ಈಗಿನ ಸಮಯಕ್ಕೆ ಸರಿಹೊಂದಲಾರವು. ಆದರೂ ಆಗಿನ ಸಮಯದಲ್ಲಿ ನೋಟುಗಳ ವಿಷಯ ತಿಳಿದುಕೊಳ್ಳಲು ಅನುಕೂಲಕರವಾದ ಸಂಗತಿಗಳನ್ನು ಈ ಪುಸ್ತಕ ಒಳಗೊಂಡಿದೆ. ಖೋಟಾ ನೋಟಿನ ಬಗ್ಗೆ ನಿಮಗಿರುವ ಸಮಸ್ಯೆ ಬಹೆಗರಿಸಲು ಮತ್ತು ಇದರಿಂದ ನಮ್ಮ ದೇಶಕ್ಕಾಗುವ ನಷ್ಟ, ಜನಸಾಮಾನ್ಯರಿಗಾಗುವ ಮೋಸ, ವ್ಯಾಪಾರದಲ್ಲಿ ಭಯ, ಬ್ಯಾಂಕುಗಳಲ್ಲಿ ಅನುಮಾನ, ಪೋಲೀಸರಿಗೆ ಒತ್ತಡ, ಸರ್ಕಾರಿ ನೌಕರರಿಗೆ ಪ್ರತಿಯೊಂದು ನೋಟನ್ನು…
ವಿಧ: ಪುಸ್ತಕ ವಿಮರ್ಶೆ
January 02, 2021
ವಶೀಕರಣ (Hypnotism) ಎನ್ನುವ ಈ ಕಿರು ಪುಸ್ತಕವನ್ನು ಬರೆದವರು ಡಾ. ಎನ್.ಕಪನೀಪತಯ್ಯನವರು. ಬಹಳ ಹಿಂದೆ ಅಂದರೆ ೧೯೯೪ರಲ್ಲಿ ಮುದ್ರಣ ಕಂಡ ಈ ಪುಸ್ತಕ ಆ ಸಮಯದಲ್ಲಿ ಬಹಳ ಪ್ರಾಮುಖ್ಯತೆ ಪಡೆದಿತ್ತು. ಮಾಟ, ಮಂತ್ರ, ದೆವ್ವ, ಭೂತ ಇತ್ಯಾದಿಗಳನ್ನು ನಂಬುವ ಜನರ ನಡುವೆ ಸಂಮ್ಮೋಹನ ಕ್ರಿಯೆಯ ಬಗ್ಗೆ ಬರೆದಿರುವ ಈ ಪುಸ್ತಕ ತುಂಬಾ ಮಾಹಿತಿ ಪೂರ್ಣವಾಗಿದೆ.
ನಮ್ಮ ನಿತ್ಯ ಜೀವನದಲ್ಲಿ ಸಂಮ್ಮೋಹನ ಎಂಬ ಅಧ್ಯಾಯದಲ್ಲಿ ಲೇಖಕರು ಬರೆದಂತೆ ‘ ಹಿಂದಿನ ಕಾಲದಲ್ಲಿ ಜನಗಳು ನಿತ್ಯ ಸಂತೋಷವಾಗಿದ್ದರು.…
ವಿಧ: ಪುಸ್ತಕ ವಿಮರ್ಶೆ
December 31, 2020
ಮೂರು ಕೊಲೆಗಳ ಮರ್ಮ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ…
ವಿಧ: ಬ್ಲಾಗ್ ಬರಹ
December 29, 2020
ಸ್ವಾತಂತ್ರ್ಯ ಪೂರ್ವದ ಕರ್ನಾಟಕ ಚಿತ್ರ
ನೆಲ ನುಡಿ ಜನ ಗ್ರಹಣವಾಗಿದ್ದು ಸತ್ಯ!
ಹಂಚಿ ಹರಿದು ಆವರಿಸಿದ ಧೂಳು ನಿರಾಸೆ;
ಬತ್ತಿತ್ತು ನಾಡಲ್ಲಿ ಸಮಗ್ರತೆಯ ಆಸೆ
ಮುಂಬಯಿಯಲ್ಲೋದಿ ಧಾರವಾಡಕೆ ಬಂದು
ವಕೀಲ ವೃತ್ತಿಗೆ ತೊಡಗಿದ ಕನ್ನಡದ ಬಂಧು
ವಿದ್ಯಾವರ್ಧಕ ಸಂಘ ಪ್ರವರ್ತಕನು ಅಂದು
ಜಯ ಕರ್ನಾಟಕ ಪತ್ರಿಕೆ ಸ್ಥಾಪಕನು ಮುಂದು
ಗೋಖಲೆ ಸಾವರ್ಕರರಿಗೆ ನಿಕಟವರ್ತಿ
ತಿಲಕರ ಗೀತಾ ಕನ್ನಡಕ್ಕನುವಾದಿಸಿ
ನಾಡ ಹಬ್ಬ ಕನಸ ಕನ್ನಡಿಗರಿಗೆ ಹಚ್ಚಿ
ಅಸ್ಮಿತೆಗೆ ನಾಂದಿಯ ಹಾಡಿದನಾ ಮುತ್ಸದ್ಧಿ
ಅಂದು…
ವಿಧ: ಪುಸ್ತಕ ವಿಮರ್ಶೆ
December 29, 2020
ಪತ್ರಕರ್ತ, ಸಂಘಟಕ ಶ್ರೀರಾಮ ದಿವಾಣರದ್ದು ಬಹುಮುಖ ಪ್ರತಿಭೆ. ಅವರೊಬ್ಬ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ. ‘ವ್ಯವಸ್ಥೆಯೆಂಬ ಅವ್ಯವಸ್ಥೆ' ಇದು ಶ್ರೀರಾಮ ದಿವಾಣರ ಎರಡನೇ ಪ್ರಕಟಿತ ಲೇಖನಗಳ ಸಂಕಲನ. ಈಗಾಗಲೇ ೩೧ ಆಯ್ದ ಲೇಖನಗಳನ್ನು ‘ಕೃಷ್ಣಾರ್ಪಣ!’ ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಈ ಪುಸ್ತಕದಲ್ಲಿರುವ ಲೇಖನಗಳು ೨೦೧೧ ರಿಂದ ೨೦೧೪ರ ನಡುವಿನ ಅವಧಿಯಲ್ಲಿ ಜಯಕಿರಣ ಪತ್ರಿಕೆ, ಹಾಯ್ ಉಡುಪಿ ಮತ್ತು ಉಡುಪಿ ಬಿಟ್ಸ್.ಇನ್ ಇವುಗಳಲ್ಲಿ ಬರೆದ ಅಂಕಣ ಬರಹಗಳು. ೬೧…
ವಿಧ: ಪುಸ್ತಕ ವಿಮರ್ಶೆ
December 26, 2020
‘ಪಾರಿವಾಳಗಳು’ ಎಂಬ ಲಲಿತ ಪ್ರಬಂಧಗಳನ್ನು ಒಳಗೊಂಡಿರುವ ಪುಸ್ತಕವನ್ನು ಕೈಯಲ್ಲಿ ಓದಲು ಹಿಡಿದುಕೊಂಡಾಗ ನನಗೆ ಅದರ ಕಥಾ ವಸ್ತುವಿನ ಮೇಲೆ ಬಹಳವೇನೂ ಅಪೇಕ್ಷೆಯಿರಲಿಲ್ಲ. ಆದರೆ ಸ್ವಲ್ಪ ಕುತೂಹಲ ಖಂಡಿತಾ ಇತ್ತು. ಇದು ಲೇಖಕರಾದ ವಿಠಲ್ ಶೆಣೈ ಅವರ ಮೊದಲ ಪ್ರಕಟಿತ ಪುಸ್ತಕ. ಈಗಾಗಲೇ ಅವರು ಬಿಟ್ ಕಾಯಿನ್ ಬಗ್ಗೆ ಬರೆದ ‘ನಿಗೂಢ ನಾಣ್ಯ' ಮತ್ತು ‘ಹುಲಿವೇಷ’ ಎಂಬ ಕಥಾ ಸಂಕಲನವನ್ನು ಓದಿ, ಮಾಹಿತಿ ಹಂಚಿಕೊಂಡಿರುವುದರಿಂದ ಅವರ ಮೊದಲ ಪುಸ್ತಕ ಹೇಗಿರಬಹುದು? ಎಂಬುವುದರ ಬಗ್ಗೆ ಕೊಂಚ ಕುತೂಹಲವಿತ್ತು. ಆದರೆ…
ವಿಧ: ಬ್ಲಾಗ್ ಬರಹ
December 25, 2020
ನಿಮಗೆ ಅಂಗುಲಿಮಾಲನ ಬಗೆಗೆ ಗೊತ್ತು , ಅಲ್ಲವೇ? ಅದೇ, ಗೌತಮ ಬುದ್ಧನ ಕತೆಯಲ್ಲಿ ಬರುವವನು . ಅವನು ದಾರಿಹೋಕರ ಮೇಲೆ ದಾಳಿ ಮಾಡಿ ಅವರನ್ನು ಕೊಲ್ಲುತ್ತಿದ್ದನು, ಅವರ ಹಣವನ್ನು ಲೂಟಿ ಮಾಡುತ್ತಿದ್ದವನು. ಅವರ ಬೆರಳು (ಅಂಗುಲಿ)ಗಳನ್ನು ಮಾಲೆ ಮಾಡಿ ಕೊರಳಿಗೆ ಹಾಕಿಕೊಂಡವನು. ಪ್ರಯಾಣಿಕರು ಅವನನ್ನು ನೋಡಿದ ಕೂಡಲೇ ಓಡಿ ಹೋಗುತ್ತಿದ್ದರು.
ಒಂದು ಸಲ ಒಬ್ಬ ಬೌದ್ಧ ಸನ್ಯಾಸಿಯು ಅವನನ್ನು ನೋಡಿದರೂ ಹೆದರದೆಯೇ ಮಾಮೂಲಿನಂತೆ ನಡೆದು ಹೋಗುತ್ತಿದ್ದ. ''ಯಾರದು? ನಿಲ್ಲು ! 'ಎ೦ದು ಅಂಗುಲಿಮಾಲನು…
ವಿಧ: ಬ್ಲಾಗ್ ಬರಹ
December 24, 2020
ಚಳಿಗಾಲದ ಹನಿಗಳು
1. ಏಕೀ ನಿಧಾನ?
ಎಲೆ ಎಳೆ ಬಿಸಿಲೆ
ತಡವಾಗಿ ಬರುವ
ಸೋಮಾರಿಯಾದೆಯೇಕೆ?
ಕಾವಳ ಹೊದ್ದ
ತಮದ ಮಾರಿಯ
ತಟ್ಟಿ ಅಟ್ಟಿಬಿಡು
ಸುರಿ ಬೆಳಕ ಭೇರಿ
ಸೋಂಭೇರಿ!
2. ಚಳಿಯೋ ಛಳಿ
ಚಳಿ ಚಳಿ ಮಾಗಿ
ಈಗ ಛಳಿ ಛಳಿ
ಅಕಟಕಟಾ
ದಂತಗಳೇಕೋ
ಕಟಕಟಕಟಾ
ಮಸೆಯುತ್ತಿವೆಯಲ್ಲಾ
ನಕ್ಕರಂತೂ ವಿಕಟ!
3. ಹೇಮಂತ - ಶಿಶಿರರಿಗೆ
ಹೇ
ಹೇಮಂತ
ಹೊರಟೆಯೇನು?
ಶಿರವಿಟ್ಟಿರುವ
ಶಿಶಿರನ
ಸಾವರಿಸುವ ಸಹನೆ
ನಮ್ಮೊಳಗಿಟ್ಟ ನಿನಗೆ
ಇದೋ, ಶೀತಲ ವಿದಾಯ!
ವಿಧ: ಪುಸ್ತಕ ವಿಮರ್ಶೆ
December 24, 2020
*ಡಾ. ರಘುಪತಿ ಕೆಮ್ತೂರು (ಆರ್.ಕೆ. ಮಣಿಪಾಲ್) ಅವರ "ತುಳುನಾಡಿನ ಸ್ಥಳನಾಮಾಧ್ಯಯನ"*
ನಿವೃತ್ತ ಪ್ರಾಂಶುಪಾಲರೂ, ಖ್ಯಾತ ವಿಮರ್ಶಕರೂ, ಸಂಶೋಧಕರೂ ಆದ ಡಾ. ರಘುಪತಿ ಕೆಮ್ತೂರು (ಆರ್. ಕೆ. ಮಣಿಪಾಲ್, 7 - 2 - 105 ಎ 5, "ಪುದರ್", ಹರಿಶ್ಚಂದ್ರ ಮಾರ್ಗ, ಉಡುಪಿ- 576101) ಇವರು 1980ರಲ್ಲಿ ರಚಿಸಿದ ಸಂಶೋಧನಾ ಗ್ರಂಥ "ತುಳುನಾಡಿನ ಸ್ಥಳನಾಮಾಧ್ಯಯನ". ಈ ಮಹಾ ಸಂಶೋಧನಾ ಪ್ರಬಂಧಕ್ಕಾಗಿ ಮೈಸೂರು ವಿ.ವಿ.ಯು 1981ರಲ್ಲಿ ಡಾ. ರಘುಪತಿ ಕೆಮ್ತೂರು ಅವರಿಗೆ ಪಿಎಚ್.ಡಿ ಪದವಿಯನ್ನು ನೀಡಿತು.
ತುಳುನಾಡಿನ…
ವಿಧ: ಪುಸ್ತಕ ವಿಮರ್ಶೆ
December 22, 2020
ಕಥೆಗಾರ, ಪತ್ರಕರ್ತ ಜೋಗಿಯವರು ಫೇಸ್ ಬುಕ್ ಡಾಟ್ ಕಾಮ್/ಮಾನಸ ಜೋಶಿ ಎಂಬ ವಿಲಕ್ಷಣ ಹೆಸರುಳ್ಳ ಕಥಾ ಸಂಗ್ರಹವನ್ನು ಬರೆದಿದ್ದಾರೆ. ಇದಕ್ಕೆ ಕಥೆಗಳು ಮತ್ತು ಕಥೆಯಾಗದ ಕಥೆಗಳು ಎಂದು ಹೆಸರು ಬೇರೆ ನೀಡಿದ್ದಾರೆ. ಜೋಗಿಯವರ ಕಥೆಗಳೇ ಹಾಗೆ ಕಾಡುತ್ತಾ ಇರುತ್ತವೆ. ಅವರೇ ಹೇಳುವಂತೆ ‘ಇನ್ನು ಸಣ್ಣ ಕಥೆಗಳನ್ನು ಬರೆಯಬಾರದು ಎಂಬ ಬಹುದಿನದ ನಿರ್ಧಾರ ಕರಗಿದ ನಂತರ ಹುಟ್ಟಿದ ಕಥೆಗಳು ಇವು. ಸಣ್ಣ ಕಥೆಗಳ ದೊಡ್ಡ ಸಮಸ್ಯೆ ಇದು: ಅವು ಪುಟಗಳ ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ ಒಂದು ಕಾದಂಬರಿಯ ಆತ್ಮವನ್ನೇ…