ಎಲ್ಲ ಪುಟಗಳು

ಲೇಖಕರು: Shreerama Diwana
ವಿಧ: ಪುಸ್ತಕ ವಿಮರ್ಶೆ
October 15, 2020
*ಸುಂದರ ಬಾರಡ್ಕರ "ಪೊಲದ್ಯೆ": ತುಳುವರ ಜನಪದೀಯ ಚಿಕಿತ್ಸಾ ಕ್ರಮಗಳ ಉನ್ನತ ಅಧ್ಯಯನಕ್ಕೆ ಅಡಿಗಲ್ಲು* "ಪೊಲದ್ಯೆ", ಸುಂದರ ಬಾರಡ್ಕ ಅವರ ಮೂರನೇ ಪ್ರಕಟಿತ ಸಂಕಲನ. ತುಳು ಜನಪದ ಚಿಕಿತ್ಸೆ, ಆಚರಣೆ ಮತ್ತು ನಂಬಿಕೆಗಳ ಕುರಿತಾದ ಈ ಕೃತಿಯನ್ನು 2016ರಲ್ಲಿ ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆ (ರಿ) ಪ್ರಕಾಶಿಸಿದೆ. 51 + 9 ಪುಟಗಳ ಕೃತಿಯ ಬೆಲೆ 70.00 ರೂಪಾಯಿ. ನಯನರಾಜ್ ಎನ್. ಬಿ. ಇವರ ಕಲಾತ್ಮಕ ಮುಖಪುಟವಿರುವ ಸಂಕಲನಕ್ಕೆ ಸಾಹಿತಿ ಆತ್ರಾಡಿ ಅಮೃತಾ ಶೆಟ್ಟಿಯವರ ಮುನ್ನುಡಿ ಮತ್ತು ಉಪನ್ಯಾಸಕರೂ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 14, 2020
ಅಯೋಧ್ಯಾ ಪ್ರಕಾಶನದವರು ತಮ್ಮ ೧೧ನೆಯ ಪುಸ್ತಕವಾಗಿ ರೋಹಿತ್ ಚಕ್ರತೀರ್ಥ ಇವರು ಪರದೇಶದಿಂದ ಹೆಕ್ಕಿ ಕನ್ನಡಕ್ಕೆ ತಂದ ಕಥಾ ಸಂಕಲನ ‘ಮನ ಮೆಚ್ಚಿದ ಹುಡುಗಿ’ ಹೊರ ತಂದಿದ್ದಾರೆ. ರೋಹಿತ್ ಚಕ್ರತೀರ್ಥ ಇವರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಸುಮಾರು ೨೨ ಪುಸ್ತಕಗಳನ್ನು ಬರೆದು ಪ್ರಕಟಿಸಿರುವ ಇವರು ಗಣಿತ ಹಾಗೂ ವಿಜ್ಞಾನದ ಬಗ್ಗೆ ಸೊಗಸಾಗಿ, ಸರಳ ಪದಗಳಲ್ಲಿ ಬರೆಯುತ್ತಾರೆ. ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಇವರು ಅಂಕಣಗಳನ್ನು ಬರೆಯುತ್ತಾರೆ. ಪ್ರಸ್ತುತ ಟೆಸ್ಲಾ ಎಜುಕೇಷನ್ ಎಂಬ ಶಿಕ್ಷಣ…
ಲೇಖಕರು: Sharada N.
ವಿಧ: ರುಚಿ
October 13, 2020
ಮೊದಲಿಗೆ ಕುಕ್ಕರ್ ನಲ್ಲಿ ಆಲೂಗಡ್ಡೆಯನ್ನು ಬೇಯಿಸಿ. ನಂತರ ಕಾರ್ನ್ ಅನ್ನು ಸ್ವಲ್ಪ ಬಿಸಿ ಮಾಡಿ.(ಓವನ್ ಇದ್ದರೆ ಅದರಲ್ಲಿ ಬಿಸಿ ಮಾಡಬಹುದು). ಕಾರ್ನ್ ಹುರಿಯಬೇಡಿ. ಬೇಯಿಸಿದ ಬಟಾಟೆಯನ್ನು ಹುಡಿ ಮಾಡಿ, ಅದಕ್ಕೆ ಹಸಿಮೆಣಸು ಕತ್ತರಿಸಿ ಮಿಕ್ಸ್ ಮಾಡಿರಿ. ನಂತರ ಅದಕ್ಕೆ ಕೊತ್ತಂಬರಿಸೊಪ್ಪು, ಕಾರ್ನ್, ಚೀಸ್, ಗರಂ ಮಸಾಲೆ, ಉಪ್ಪು ಮತ್ತು ಮೆಣಸಿನ ಹುಡಿಯನ್ನು ಸೇರಿಸಿ ಸರಿಯಾಗಿ ಬೆರೆಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದ ಬಳಿಕ ಅವುಗಳ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿರಿ. ಆ ಉಂಡೆಗಳನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 12, 2020
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದು ಮಲೆನಾಡಿನ ರೋಚಕ ಕತೆಗಳು ಸರಣಿಯ ಮೂರನೇ ಭಾಗದ ಪುಸ್ತಕ. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಾವು ಮಲೆನಾಡಿನ ಪರಿಸರದಲ್ಲಿ ಅನುಭವಿಸಿದ ರೋಚಕತೆಗಳನ್ನು ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ‘ಪಶ್ಚಿಮ ಘಟ್ಟ ಅಪರೂಪದ ಪ್ರಕೃತಿ ಸಂಪತ್ತು. ವಿಸ್ಮಯದ ಗೂಡು. ಅದನ್ನಷ್ಟು ಕಳೆದುಕೊಂಡರೆ ನಮಗೆ ಮತ್ತೇನೂ ಇಲ್ಲ. ಇಂದಿನ ತೆವಲಿಗೆ ನಾವು ಅದರ ಬೆಲೆಯೇ ತಿಳಿಯದೆ ಸೂರೆ ಮಾಡುತ್ತಿದ್ದೇವೆ. ಇಂಚಿಂಚಾಗಿ ಅರಣ್ಯ ನಾಶವಾಗುತ್ತಿದೆ. ಅದನ್ನು ಉಳಿಸಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 09, 2020
ಮೇರಿ ಶೆಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಬಹುಮಟ್ಟಿಗೆ ಚಾಲ್ತಿಯಲ್ಲಿದ್ದ ಕಾದಂಬರಿಕಾರ್ತಿ. ಅವಳು ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲೇ ಬರೆದ ‘ಫ್ರಾಂಕನ್ ಸ್ಟೈನ್’ ಎಂಬ ಕಾದಂಬರಿ ಅವಳನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿಬಿಟ್ಟಿತು. ಮೇರಿ ಶೆಲ್ಲಿ ೧೭೯೭ರ ಆಗಸ್ಟ್ ೩೦ರಂದು ಇಂಗ್ಲೆಂಡಿನಲ್ಲಿ ಹುಟ್ಟಿದಳು. ಉತ್ತಮ ಶಿಕ್ಷಣವನ್ನು ಪಡೆದ ಮೇರಿ, ತನ್ನ ಹದಿನೆಂಟನೇ ವಯಸ್ಸಿನಲ್ಲಿ ತನ್ನದೇ ತಂದೆಯ ಗೆಳೆಯನಾದ ಪರ್ಸಿ ಬಿ.ಶೆಲ್ಲಿ ಜೊತೆ ಪ್ರೇಮಾಂಕುರವಾಗಿ ಅವನ ಜೊತೆ ಪ್ಯಾರಿಸ್ಸಿಗೆ ಓಡಿ ಹೋದಳು…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
October 09, 2020
ಯಾವುದೋ ಒಂದು ಹಳೆಯ ಕಾದಂಬರಿ. ಸುಮಾರು ಮುನ್ನೂರು ಪುಟಗಳದು .  ಅದರ ಹೆಸರು ಬೇಡ . ಬರೆದವರ ಹೆಸರು ಬೇಡ.  ವಿಷಯ ಎರಡನೇ ಸಂಬಂಧದ ಕುರಿತು. ಅಂದರೆ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟ ಕತೆ.  ಇದು ಹಳೆಯ ಕಾಲದ ಕಾದಂಬರಿ.  ಮೊದಲ ಐವತ್ತು-ಅರವತ್ತು ಪುಟಗಳು ಗಂಡ-ಹೆಂಡತಿಯರು  ಪರಸ್ಪರರಿಗೆ ಬರೆದ ಪತ್ರಗಳು. ಗಂಡ ರಾಮನಾಥ / ರಾಮಚಂದ್ರ.  ಹೆಂಡತಿಯ ಹೆಸರು ಜಾನಕಿ.  ಬೇರೊಂದು ಊರಿನಲ್ಲಿ ಮೊದಲು ಕಲಿಯುತ್ತಿದ್ದ .  ಆಮೇಲೆ ಏನೋ ಒಂದು ನೌಕರಿ ಮಾಡುತ್ತಿದ್ದ.  ಹಣದ ತೊಂದರೆ ಬೇರೆ.  ಊರಿಗೆ ಹೋಗುವದೂ…
ಲೇಖಕರು: Shreerama Diwana
ವಿಧ: ಪುಸ್ತಕ ವಿಮರ್ಶೆ
October 07, 2020
*ಹಾ. ಮ. ಸತೀಶರ "ಆಸರೆ" : ಪ್ರಕೃತಿಪ್ರೀತಿ, ಪ್ರೇಮದುಯ್ಯಾಲೆ, ಬದುಕಿನ ಕನ್ನಡಿ*  "ಆಸರೆ", ಹಾ. ಮ. ಸತೀಶ ಅವರ ಮೊದಲ ಕವನ ಸಂಕಲನ. 1997ರಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆ ಗೂಡಿನಬಳಿ (ಬಂಟ್ವಾಳ ತಾಲೂಕು) ಪ್ರಕಟಿಸಿದ ಆಸರೆಗೆ ಪ್ರೊ. ಡಾ. ಅಮೃತ ಸೋಮೇಶ್ವರರ ಮುನ್ನುಡಿ ಮತ್ತು ಕವಿ, ಗಮಕಿ ಬೆಳ್ತಂಗಡಿಯ ಟಿ. ಸುಬ್ರಹ್ಮಣ್ಯ ಭಟ್ ಅವರ ಬೆನ್ನುಡಿ ಇದೆ. "ಆಸರೆ" ಯಲ್ಲಿರುವ ಕವನಗಳು, "ಛಂದೋಬದ್ಧವಾದ ಗೇಯ ರಚನೆಗಳು" ಎನ್ನುವುದನ್ನು ತಮ್ಮ ಮುನ್ನುಡಿಯಲ್ಲಿ ಉಲ್ಲೇಖಿಸಿರುವ ಅಮೃತ ಸೋಮೇಶ್ವರರು, "…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 05, 2020
ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪಕೊಟ್ಟು ಪ್ರಕಟಿಸಿದ ‘ಮಲೆನಾಡಿನ ರೋಚಕ ಕಥೆಗಳು’ ಎಂಬ ಓದುಗರಿಗೆ ಮೆಚ್ಚುಗೆಯಾಯಿತು. ಅದರ ಫಲವೇ ಅರಮನೆ ಗುಡ್ಡದ ಕರಾಳ ರಾತ್ರಿಗಳು ಪುಸ್ತಕ. ಇದು ಮಲೆನಾಡಿನ ರೋಚಕ ಕಥೆಗಳು ಸರಣಿಯ ಎರಡನೇ ಪುಸ್ತಕ. ಇದು ಕರ್ಮವೀರ ವಾರಪತ್ರಿಕೆಯಲ್ಲಿ ಧಾರವಾಹಿ ರೂಪದಲ್ಲಿ ಈಗಾಗಲೇ ಪ್ರಕಟವಾಗಿದೆ.  ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಗಿರಿಮನೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
October 02, 2020
ಮಂಡೂಕ ಮಹಾರಾಜ ಎಂಬ ಹೆಸರಿನಲ್ಲಿ ನೆರೆಹೊರೆಯ ದೇಶಗಳ ಮಕ್ಕಳ ಕಥೆಗಳನ್ನು ಹುಡುಕಿ ತಂದು ರೋಹಿತ್ ಚಕ್ರತೀರ್ಥ ಪ್ರಕಟಿಸಿದ್ದಾರೆ. ಈಗಿನ ಮಕ್ಕಳು ಕಥೆ ಪುಸ್ತಕ ಓದುವುದೇ ಇಲ್ಲ ಎಂಬ ಅಪವಾದವಿದೆ. ಈಗಾಗಲೇ ನೀವು ಅಜ್ಜಿ ಹೇಳಿದ ಕಥೆಗಳು ಓದಿದ್ದರೆ, ಈ ಪುಸ್ತಕದ ಕಥೆಗಳೂ ಅವೇ ಸಾಲಿಗೆ ಸೇರುತ್ತವೆ. ಪುಟ್ಟ ಪುಟ್ಟ ಕಥೆಗಳು ಮಕ್ಕಳಿಗೆ ಓದಲೂ ಚೆನ್ನ, ಮಕ್ಕಳಿಗೆ ಕಥೆಯನ್ನು ಓದಿ ಹೇಳುವ ಹಿರಿಯರಿಗೂ ಅನುಕೂಲ.ರೋಹಿತ್ ಚಕ್ರತೀರ್ಥ ಗಣಿತ ಉಪನ್ಯಾಸಕರು. ಕನ್ನಡದಲ್ಲಿ ವಿಜ್ಞಾನ ಹಾಗೂ ಗಣಿತದ ವಿಷಯದಲ್ಲಿ…
ಲೇಖಕರು: Sharada N.
ವಿಧ: ರುಚಿ
September 30, 2020
ಮೊದಲಿಗೆ ಎಳೆ ಬಿದಿರ ತುದಿಯನ್ನು ಸಣ್ಣದಾಗಿ ಹುಡಿ ಹುಡಿಯಾಗುವಂತೆ ಕತ್ತರಿಸಿ. ಈ ಕತ್ತರಿಸಿದ ಸಣ್ಣ ಚೂರುಗಳನ್ನು ಬಟ್ಟೆಯಲ್ಲಿ ಕಟ್ಟಿ ಒಂದು ದಿನ ನೀರಿನಲ್ಲಿ ಮುಳುಗಿಸಿ ಇಡಿ. ನೀರನ್ನು ಆಗಾಗ ಬದಲಿಸಿ. ಆಗ ಇದರ ಕಹಿ ಚೊಗರಾದ ರುಚಿ ಕಡಿಮೆಯಾಗುತ್ತದೆ. ಹಲಸಿನ ಬೀಜಗಳನ್ನು ಸಣ್ಣದಾಗಿ ಕತ್ತರಿಸಿಟ್ಟು, ನಂತರ ಈ ಕತ್ತರಿಸಿದ ಕಣಿಲೆ ಮತ್ತು ಹಲಸಿನ ಬೀಜವನ್ನು ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿ ಬೇಯಿಸಬೇಕು. ೨-೩ ಶೀಟಿ ಬೇಯಿಸಿದರೆ ಸಾಕು.  ಕೊತ್ತಂಬರಿ, ಮೆಂತೆ, ಉದ್ದಿನಬೇಳೆಯನ್ನು ಸ್ವಲ್ಪ ಎಣ್ಣೆ…