ಎಲ್ಲ ಪುಟಗಳು

ಲೇಖಕರು: rashmi_pai
ವಿಧ: ಬ್ಲಾಗ್ ಬರಹ
March 15, 2008
ಕನಸುಗಳ ಮರಳದಂಡೆಯಲಿ ನೋವ ಹೊತ್ತು ನಡೆವೆವು ಬೆನ್ನಿಗಂಟಿದ ಹೊಟ್ಟೆ, ಅಳುವ ಕೂಸು ಹೊತ್ತು, ಇನ್ನೊಂದು ಮೂಟೆ ರಟ್ಟೆಯಲಿ ವೇದನೆಯ ಗಂಟು ಅಲ್ಲ ಇದು, ಜೀವನದ ಕುಂಟುಗಳಿವು ಪ್ರಕ್ಷುಬ್ಧ ಬದುಕಿನ ಭಗ್ನ ಕನವರಿಕೆ ಅಲೆಮಾರಿಗಳು ನಾವು, ಬದುಕ ಅಲೆ ಸುಳಿಗೆ ಸಿಕ್ಕಿದರೂ ತುಂಡು ರೊಟ್ಟಿ, ಹೊತ್ತು ಕೂಳಿಗಾಗಿ ಸಾಗುವೆವು ಇನ್ನೂ ಮುಂದೆ ಮುಂದೆ ಬರಿಗಾಲ ಪಾದ ಒಡೆದು ರಕ್ತ ಚಿಮ್ಮುತಿರೆ ಬೆವರ ಹನಿ ಮಾಲೆಗಳು ಎದೆ ನಡುವೆ ಹರಿದು ಹೊಕ್ಕಳ ಬಳ್ಳಿಯಲ್ಲಿ ತಂಗಿ ಮತ್ತೂ ಹರಿದಾಗ ಎದೆಗೂಡಿನೊಳು ಚಿಗುರೊಡೆದ…
ಲೇಖಕರು: Aravinda
ವಿಧ: ಬ್ಲಾಗ್ ಬರಹ
March 15, 2008
ನಿನ್ನೆ ನನ್ನ ರೂಮಿಗೆ ಒಂದು ಸೊಳ್ಳೆ ಬಂದು ಬಿಟ್ಟಿತ್ತು, ಫ್ಯಾನ್ ಹಾಕ್ಕೊಂಡು ಮಲ್ಗೋಣ ಅಂದ್ರೆ ನಂಗೆ ಜೋರು ನೆಗಡಿ. ಅದಕ್ಕೆ ಸೊಳ್ಳೆ ನ ಬೇಟೆ ಆಡಿ ನಾನು ನೆಮ್ಮದಿಯಿಂದ ಮಲಗಲು ತೀರ್ಮಾನ ಮಾಡಿದೆ. ಪ್ರಯೋಗ ಒಂದು ನಾನು ಮಲಗೋ ಜಾಗದಿಂದ ಸಲ್ಪ ದೂರ ನಿಲ್ಲೋದು, ಸೊಳ್ಳೆ ನಾನು ಮಲ್ಗಿರೊ ಜಾಗಕ್ಕೆ ಹೊಗಿ ಹುಡುಕುತ್ತೆ ಅವಾಗ ಟಪ್ ಅಂತ ಹಿಡಿದು ಬಿಡೊದು ಅಂತ ಪ್ಲಾನ್ ಮಾಡಿದೆ. ಸೊಳ್ಳೆ ಬಂದ ತಕ್ಷಣ ಹೊಡೆಯಕ್ಕೆ ಎಲ್ಲಾ ತಯಾರಿ ಮಾಡಿಕೊಂಡು ನಿಂತೆ, ಸಲ್ಪ ಹೊತ್ತಿಗೆ ಕಾಲಿಗೆ ಏನೋ ಕಚ್ಚಿದಂಗಾಯ್ತು !.…

ಲೇಖಕರು: vinyasa
ವಿಧ: Basic page
March 15, 2008
ಇಬ್ಬನಿ - ಎರಡು ಹನಿ ಶ್ವೇತವಸ್ತ್ರಧಾರಿಣಿ ಶುಭ್ರತೆಯ ಪ್ರತಿರೂಪಿಣಿ ಎಳೆಬಿಸಿಲಿಗೆ ಮಾಯವಾಗುವ ವಿಸ್ಮಯದ ಮಣಿ ************* ನಿರಾಭರಣ ಸುಂದರಿ ಪಾರದರ್ಶಕ ಕಿನ್ನರಿ ಕಣ್ಮನ ತುಂಬುವ ಮಂಜಿನ ಹನಿ ನೀ ಚೇತೋಹಾರಿ *************
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
March 15, 2008
ಈ ಕಂಪ್ಯೂಟರ್ ಯುಗದವರಿಗೆ ನಮ್ಮ ಕಾಲದವರ(ಮುದುಕರ?) ಕಷ್ಟ ಗೊತ್ತಾಗಲಿಕ್ಕಿಲ್ಲ. ಹಿಂದೆ ಏನಾದರೂ ವಿಷಯ ತಿಳಕೊಳ್ಳಲು ಮನೆಯಲ್ಲಿರುವ ಅಥವಾ ಲೈಬ್ರೇರಿಯ ಪುಸ್ತಕಗಳನ್ನು ಹುಡುಕಾಡಬೇಕಿತ್ತು. ಲೈಬ್ರೇರಿಗೆ ಹೋಗಿ ಪುಸ್ತಕಗಳನ್ನು ಹುಡುಕಿ, ಖಾಲಿ ಕುರ್ಚಿ ಸರಿಮಾಡಿ, ಬ್ಯಾಲೆನ್ಸ್ ಮಾಡಿಕೊಂಡು ಕುಳಿತು, ಪುಸ್ತಕ ತೆರೆದು ನಮಗೆ ಬೇಕಾದ ಪುಟ ಹುಡುಕಿದರೆ ಆ ಹಾಳೆನೇ ನಾಪತ್ತೆ. ಮನೆಯಲ್ಲಿದ್ದ ಪುಸ್ತಕಗಳಲ್ಲಿ ನಾವು ಹುಡುಕುತ್ತಿದ್ದ ವಿಷಯಗಳನ್ನೇ ಯಾರೋ ತಿಂದು ಬಿಟ್ಟಿರುತ್ತಿದ್ದರು. ಲೈಬ್ರೇರಿಯಲ್ಲಿ…
ಲೇಖಕರು: vinyasa
ವಿಧ: Basic page
March 14, 2008
ಇಬ್ಬನಿಯ ಒಂದೊಂದು ಹನಿ ಚೈತ್ರನಾಗಮ ಸಾರುವ ಮುನ್ನುಡಿ ಪ್ರಕೃತಿದೇವಿಯ ಸಿಂಗಾರ್‍ಅಕ್ಕೆ ಅಣಿಗೊಳಿಸಿದ ಕನ್ನಡಿ
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
March 14, 2008
ಬಾೞೆಯ ಕರ್ಜೂರದ ಕಿ ತ್ತೀಳೆಯ ಕಂಮರದ ರಂಜಿಪಿಮ್ಮಾವಿನ ಪೇ ರೀಳೆಯ ನಾರಂಗದ ಕಂ ಚೀಳೆಯ ತನಿವಣ್ಣನಿಕ್ಕೆ ಮೇಲ್ದಾದರದಿಂ ತನಿ= ಒಳ್ಳೆಯ, ಚೆನ್ನಾದ ತನಿವಣ್ಣು = ಒಳ್ಳೆಯ ಹಣ್ಣುಗಳು ಕಿತ್ತೀಳೆ = ಕಿತ್ತಳೆ ಕಂಚೀಳೆ = ? ಕಂಮರ = ? ಪೇರೀಳೆ = ? ರಂಜಿಪಿಮ್ = ರಂಜಿಸಿ
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
March 14, 2008
ಕೆಳಗಿನ ಪದ್ಯ ಬಲು ಚೆನ್ನು. ಯಾವುದು ಹಿರಿದಾದ ಮಿಗೆ/ವಿಶೇಶ ಸಂತಸ ? ಬಿತ್ತರದಿಂ ಕುರುಡಂ ಕ ಣ್ಬೆತ್ತಂತಿರೆ ರಾಗಮೊದವೆ ಬೆಲೆವೆಣ್ ಪೆಣ್ಣಂ ಪೆತ್ತಂತಿರೆ ಪಾರ್ವಂ ಮ ಣ್ಬೆತ್ತಂತಿರೆ ಪಿರಿದು ಸಂತಸಂ ಮಿಗೆ ಮನದೊಳ್ ಎಲ್ಲರಿಗೂ ಗೊತ್ತಿರುವಂತೆ ಕುರುಡನೊಬ್ಬನಿಗೆ ಕಣ್ ಬಂದರೆ ಎಲ್ಲರಿಗೂ ಗೊತ್ತಿರುವಂತೆ ಬೆಲೆವೆಣ್ಣೊಬ್ಬಳು ಪೆಣ್ಣಂ ಹೆತ್ತಿದರೆ (??) ಎಲ್ಲರಿಗೂ ಗೊತ್ತಿರುವಂತೆ ಹಾರುವ ಮಣ್ಬೆತ್ತಂತಿರೆ ( ??) ಅದು ಹಿರಿದಾದ ವಿಶೇಶವಾದ ಸಂತಸ
ಲೇಖಕರು: vinyasa
ವಿಧ: Basic page
March 14, 2008
ಚುಕ್ಕಿ ಚಂದ್ರಮರ ಜೂಟಾಟ (ಒಂದೆರಡು ವರುಷಗಳ ಹಿಂದೆ ನಭದಲ್ಲಿ ನಕ್ಷತ್ರ-ಚಂದಿರ ಒಂದಾಗಿ ಪ್ರಜ್ವಲಿಸಿದ ದೃಶ್ಯ ನಮ್ಮೆಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತ್ತು. ಅದನ್ನು ಕಂಡ ಪುಟ್ಟ ಬಾಲೆ ತನ್ನ ತಾಯಿಯೊಂದಿಗೆ ನಡೆಸಿದ ಸಂವಾದದ ತುಣುಕು ಇಲ್ಲಿದೆ) ಬಾಲೆ:- ಮನೆಯಂಗಳಕೆ ನೀ ಬಾರಮ್ಮಾ ಸೊಬಗಿನ ಚಂದ್ರನ ನೋಡಮ್ಮ ಕಾಡಿದೆ ಪ್ರಶ್ನೆ ನನಗಮ್ಮ ಉತ್ತರ ನೀನು ಹೇಳಮ್ಮ ಬಿದಿಗೆ ಚಂದ್ರನ ಕಾಣಮ್ಮ ತೇಲುವ ದೋಣಿ ಇವನಮ್ಮ…