ಎಲ್ಲ ಪುಟಗಳು

ಲೇಖಕರು: D.S.NAGABHUSHANA
ವಿಧ: Basic page
March 14, 2008
ಕೃಷ್ಣಾಗಮನ : ಕಾಂಗ್ರೆಸ್ಸಿನ ಸೋಲಿನ ರಾಜಕಾರಣ ಕಾಂಗ್ರೆಸ್ಸಿಗರಿಗೆ ಕಾಂಗ್ರಸ್ಸಿಗರೇ ಶತ್ರುಗಳು ಎಂದು ಕಾಣುತ್ತದೆ. ಇಲ್ಲದಿದ್ದರೆ, ಚುನಾವಣೆಗಳು ಮೇನಲ್ಲೇ ಖಚಿತ ಎಂಬ ಸೂಚನೆ ಸಿಗುತ್ತಿದ್ದಂತೆ, ತರಾತುರಿಯಲ್ಲಿ ಎಸ್.ಎಂ.ಕೃಷ್ಣರನ್ನೇಕೆ ಮಹಾರಾಷ್ಟ್ರದ ರಾಜ್ಯಪಾಲರ ಹುದ್ದೆಯಿಂದ ಬಿಡುಗಡೆಗೊಳಿಸಿ ರಾಜ್ಯ ರಾಜಕೀಯಕ್ಕೆ ಕಳಿಸಲಾಗುತ್ತಿತ್ತು. ಮೊದಲಾಗಿ, ರಾಜ್ಯಪಾಲರಾಗಿದ್ದವರೊಬ್ಬರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವುದೇ ಅನೈತಿಕ ಹಾಗೂ ರಾಜ್ಯಪಾಲರ ಹುದ್ದೆಯ ಘನತೆಗೆ ಮಾಡುವ ಅವಮಾನ.…
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 14, 2008
ನಮ್ಮ ನಾಡಿನ ಯಾವ ಜಿಲ್ಲೆಯಲ್ಲಿ ಅತಿ ವಿಸ್ತಾರವಾದ ಅರಣ್ಯ ಪ್ರದೇಶವೂ ಬಹುಸಂಖ್ಯೆಯ ಜಲಪಾತಗಳೂ ಇವೆ?
ಲೇಖಕರು: agilenag
ವಿಧ: Basic page
March 14, 2008
ಮಾವಿನ ಮರವನ್ನು ನೋಡದವರಾರಿದ್ದಾರೆ? ಮಾವಿನ ಹಣ್ಣಿನ ಸವಿ ಅರಿಯದವರಾರಿದ್ದಾರೆ? ಮಾವಿಗೂ ಕೋಗಿಲೆಗೂ ಸಂಬಂಧವನ್ನು ಕಲ್ಪಿಸದ ಕವಿಗಳಾರಿದ್ದಾರೆ? ಆದರೆ, ಮಾವಿನ ಹೂವಿನ ಸೌಂದರ್ಯವನ್ನು ಕಂಡಿದ್ದೀರಾ? ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಅರಳಿ ತನ್ನ ಬಿನ್ನಾಣವನ್ನು ಹೊರಸೂಸುವ ಮಾವಿನ ಹೂವಿನ ಸುಂದರ ಚಿತ್ರ ಇಲ್ಲಿದೆ, ಸಂಪದದ ಓದುಗರಿಗಾಗಿ. ನೋಡಿ, ಸೌಂದರ್ಯೋಪಾಸನೆಯಲ್ಲಿ ತೊಡಿಗಿಸಿಕೊಳ್ಳಿ.
ಲೇಖಕರು: agilenag
ವಿಧ: Basic page
March 14, 2008
ಚಿಕ್ಕಮಗಳೂರು ತಾಲ್ಲೂಕು, ಲೇಕ್ಯಾ ಹೋಬಳಿಯಲ್ಲಿರುವ ಬೆಳವಾಡಿ ಗ್ರಾಮವು ಒಂದಾನೊಂದು ಕಾಲದಲ್ಲಿ ಏಕಚಕ್ರನಗರವೆಂಚು ಖ್ಯಾತಿಯನ್ನು ಹೊಂದಿದ್ದು, ೨ನೇ ವೀರಬಲ್ಲಾಳರಾಯನ (ವಿಷ್ಣುವರ್ಧನ)ನ ಕಾಲದಲ್ಲಿ ನಿರ್ಮಿತವಾದ, ಎಂದರೆ ಸುಮಾರು ೧೨ನೇ ಶತಮಾನದ ಸುಂದರ ದೇವಾಲಯಗಳಿಗೆ ಪ್ರಸಿದ್ದವಾಗಿದೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ತ್ರಿಕೂಟೇಶ್ವರ ದೇವಾಲಯ ಅಥವಾ ವೀರನಾರಾಯಣ ದೇವಾಲಯ. ಈ ದೇವಾಲಯದಲ್ಲಿ ವೀರನಾರಾಯಣ, ವೇಣುಗೋಪಾಲಸ್ವಾಮಿ ಹಾಗು ಉಘ್ರನರಸಿಂಹ ದೇವರುಗಳ ಮೂರು ಗರ್ಭಗುಡಿಗಳಿದ್ದು, ನವರಂಗವು…
ಲೇಖಕರು: subin
ವಿಧ: Basic page
March 14, 2008
ಆಕಾಶ ಎದೆ ತುಂಬಾ ಕರ್ರಗಿನ ಕರಿ ಬಣ್ಣ ಬಿಕ್ಕರಿಸಿತು ಕೋಗಿಲೆ ನವಿಲಾಡಿತು ಗುಣಗಾನ ತನ್ನೊಳಗೆ ಮಾಗಿದ ಜೀವಕ್ಕೆ ಬಿಡುಗಡೆ ಮನದೊಳಗಿನ ಬಾವಕ್ಕೆ ಬಾಷ್ಪವೆ ಸೇರೆಪಡೆ
ಲೇಖಕರು: ravikreddy
ವಿಧ: ಬ್ಲಾಗ್ ಬರಹ
March 14, 2008
ಪ್ರಜಾವಾಣಿಯಲ್ಲಿ ಪ್ರಕಟಗೊಳ್ಳುವ ನಾಗೇಶ್ ಹೆಗಡೆಯವರ "ವಿಜ್ಞಾನ ವಿಶೇಷ" ಅಂಕಣಕ್ಕೆ ಈಗ 26 ವರ್ಷ! ಬಹುಶಃ ಕನ್ನಡದ ಸುದೀರ್ಘ ಅಂಕಣ ಇದೆ ಇರಬೇಕು. (ಇಲ್ಲದಿದ್ದಲ್ಲಿ, ಖಂಡಿತವಾಗಲೂ ಅವುಗಳಲ್ಲಿ ಒಂದು.) ಹಲವಾರು ವೇದಿಕೆಗಳಲ್ಲಿ ಚರ್ಚಿಸಲ್ಪಟ್ಟ, ಓದಲ್ಪಟ್ಟ ಕನ್ನಡದ ಕೆಲವೆ ಪತ್ರಕರ್ತರಲ್ಲಿ ನಾಗೇಶ್ ಹೆಗಡೆಯವರೂ ಒಬ್ಬರು. ಕರ್ನಾಟಕದ ಪರಿಸರ, ಜಲ, ನೆಲ, ಕೃಷಿ, ವಿಜ್ಞಾನ, ತಂತ್ರಜ್ಞಾನಗಳ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು. ಸುಮಾರು ಮೂರು ದಶಕಗಳ ಕಾಲ ಸುಧಾ-ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ…
ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 13, 2008
ಓ...ಪ್ರೀತಿಯೇ.... ಅನುರಾಗದ ಅಲೆಗಳಂತೆ ಬಾಳಲ್ಲಿ ಬಂದು ವೈವಿದ್ಯಮಯವಾದ ಪ್ರೀತಿ-ಪ್ರೇಮದ ಅಮಲೇರಿಸಿ ಕ್ಷಣಕಾಲ ಮರೆಯಾದ ಓಲವಿನ ಗೆಳತಿಯೇ... ಮನದ ಭಾವನೆಗಳಿಗೆಲ್ಲಾ ಮಾತುಕೊಟ್ಟು ಶಬ್ದವಿರದ ಮೌನಗಳಿಗೆ ಸಂವೇದನೆಯ ಸಂಭಾವನೆಯಿಟ್ಟು ನೇವರಿಸಿ ಕಣ್ಣಮುಂದೇಯೇ ಇದ್ದರೂ ಹೃದಯದ ಕದ ತಟ್ಟದ ಬಂಧು-ಬಾಂದವರ ಬಂಧನಗಳೆಲ್ಲದರ ಮುಸುಕು ತೆಗೆದು ಮನಸ್ಸಿನ ಮನಸ್ಸೋಲ್ಲಾಸಗಳಿಗೆಲ್ಲಾ ಭಾವನೆಯ ಭಾವಗೀತೆಗಳ ಲಹರಿ ಹರಿಸಿ, ನಿನ್ನ ಪ್ರೀತಿಯನ್ನು ಬೇಡುವೆ ಈ ಪರಿ. ಇಳಿಬಿಟ್ಟ ಮುಂಗುರುಳ ಒಳಗಿನ ಚಂದ್ರಮನ ಕಾಣಲು…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
March 13, 2008
ನಾಣ್ಣುಡಿಗಳು ನಮ್ಮ ಹಿರಿಗನ್ನಡದ ಕಬ್ಬಗಳಲ್ಲಿ ಹಲವು ಕಡೆ  ಕಂಡುಬರುತ್ತವೆ. ನಯಸೇನನ ದರ್ಮಾಮ್ರುತಂ ಇದಕ್ಕೆ ಹೊರತಲ್ಲ. ಬೇಡಂ ಮಾಣಿಕಮೊಂದಂ ಕಾಡೊಳ್ ಕಂಡೊರ್ಮೆ ಮೆಲ್ದು ಪಗಿನಲ್ಲೆಂದೀ ಡಾಡಿದನೆಂಬೀ ನಾಣ್ಣುಡಿ ನಾಡೆಯುಮೆಸೆದಪುದು ದುರಿತವಶದಿಂದಿವನೊಳ್ ಬಿಡಿಸದರೆ, ಬೇಡಂ ಮಾಣಿಕಮ್ ಒಂದಂ ಕಾಡೊಳ್ ಕಂಡ್ ಒರ್ಮೆ ಮೆಲ್ದು ಪಗಿನಲ್ ಎಂದ್ ಈಡಾಡಿದನ್ ಎಂಬ್ ಈ ನಾಣ್ಣುಡಿ ನಾಡೆಯುಮ್ ಎಸೆದಪುದು ದುರಿತವಶದಿಂದ್ ಇವನೊಳ್ ಬೇಡಂ = ಬೇಡ (ಬೇಟೆಗಾರ…
ಲೇಖಕರು: cmariejoseph
ವಿಧ: Basic page
March 13, 2008
ಕರ್ನಾಟಕದಲ್ಲಿ ಅತಿ ಹೆಚ್ಚು ಶಾಸನಗಳನ್ನು ಓದಿ ಅರ್ಥೈಸಿ ಟೀಕಾರ್ಥಗಳೊಂದಿಗೆ ಪ್ರಕಟಿಸಿ ಕರ್ನಾಟಕ ಇತಿಹಾಸಕ್ಕೆ ಹೊಸ ಮಾರ್ಗ ತೋರಿದ,ಬೆಂಗಳೂರಿನಲ್ಲೇ ಹುಟ್ಟಿದ ವಿದೇಶೀ ವಿದ್ವಾಂಸ ಯಾರು?
ಲೇಖಕರು: prasadbshetty
ವಿಧ: Basic page
March 13, 2008
ಪ್ರೀತಿಯ(ಲವ್)ನ 'Side Effect' ಏನು.....?