ಎಲ್ಲ ಪುಟಗಳು

ಲೇಖಕರು: subin
ವಿಧ: Basic page
January 21, 2008
ನನ್ನ ಸೆಳೆದ ಮೊಜುಗಾರ್ತಿ, ನೀನೊಂಥರ ಮಾಯೆಗಾರ್ತಿ ! ನಿನ್ನ ಕೈಯ ಉಂಗುರ, ನಾನಗಳು ಈ ಸ್ವರ ! ಕಣ್ಣ ಮುಚ್ಚಿ ಕರೆದಾಗ, ನನ್ನೇ ಕಳೆದೆ ನಾನಾಗ ! ನೀನೆ ನನ್ನ ಪ್ರಾಣ ಸಖಿ, ಆಗಲೇ ನಾ ನಿನ್ನ ಕಿವಿಜುಮುಕಿ ! - ಉಳಿದ ಪದ ಮುಂದುವರೆಯುವುದು
ಲೇಖಕರು: varunbhatbm
ವಿಧ: ಚರ್ಚೆಯ ವಿಷಯ
January 21, 2008
ನನಗೆ ಫೈರ್ ಫಾಕ್ಸ್ ನಲ್ಲಿ ಕನ್ನಡ ಅಕ್ಷರಗಳು ಸರಿಯಾಗಿ ಕಾಣುತ್ತಿಲ್ಲ. ಇದರ ಪರಿಹಾರ ಯಾರಿಗಾದರೂ ತಿಳಿದಿದೆಯೇ??
ಲೇಖಕರು: raviprakash
ವಿಧ: ಚರ್ಚೆಯ ವಿಷಯ
January 21, 2008
'ಮಳೆನಿಲ್ಲುವವರೆಗೆ' ನಾಟಕದ ಪುಸ್ತಕ ಬೆಂಗಳೂರಿನ ಯಾವ ಮಳಿಗೆಯಲ್ಲಿ ಸಿಗಬಹುದು?
ಲೇಖಕರು: manjunathsinge
ವಿಧ: ಬ್ಲಾಗ್ ಬರಹ
January 21, 2008
ಪ್ರತಿಯೊಬ್ಬರ ಮನಸ್ಸು ತನ್ನದೇ ಆದ ಲೋಕದಲ್ಲಿ ಅಲೆದಾಡುತ್ತ ತನ್ನಷ್ಟಕ್ಕೆ ತಾನು ಸಂತೃಪ್ತಿ ಹೊಂದಲು ಪರಿತಪಿಸುತ್ತಿರುತ್ತದೆ. ನಮ್ಮ ಚಿಂತನಾ ಪ್ರಪಂಚವೇ ನಮ್ಮನ್ನಾವರಿಸಿಬಿಟ್ಟಿರುತ್ತದೆ. ಎಷ್ಟೋ ಸಲ ನಮ್ಮ ಚಂತನಾ ಪ್ರಪಂಚ ಎಷ್ಟೊಂದು ಚಿಕ್ಕದೆಂಬುದರ ಪರಿವೇ ಇರುವುದಿಲ್ಲ. ನಮ್ಮ ಚಿಂತನಾ ಲೋಕವನ್ನು ಬಿಟ್ಟು, ಹೊರಗಿರುವ ಜಗತ್ತಿನ ಉದ್ದಗಲಗಳನ್ನು ಅಳೆಯುವ ಚಪಲ ಬಹಳ ದಿನಗಳಿಂದ ನನ್ನಲ್ಲಿತ್ತು. ಅವಕಾಶ ಸಿಕ್ಕಿರಲಿಲ್ಲ. ಹೊಸ ವರ್ಷದ ಹೊಸ್ತಿಲಲ್ಲೇ ಆ ಆಸೆ ಈಡೇರಬಹುದು ಅಂತ ಊಹೆ ಕೂಡ ಮಾಡಿರಲಿಲ್ಲ.…
ಲೇಖಕರು: hpn
ವಿಧ: Basic page
January 21, 2008
    "ಗಾಳಿಪಟ" ಶುದ್ಧ ಮನರಂಜನೆಯ ಚಿತ್ರ. ಮತ್ತೇನನ್ನಾದರೂ ಬಯಸಿ ಹೋದವರಿಗೆ ಸಿನಿಮಾ ಇಷ್ಟವಾಗಲಿಕ್ಕಿಲ್ಲ. ಗಂಭೀರವಾಗಿ ಅವಲೋಕಿಸಿ ಪ್ರಶ್ನೆಗಳನ್ನು ಕೇಳಿಕೊಂಡು ಹೊರಟರೆ ಸಿನಿಮಾ ಸ್ವಲ್ಪವೂ ಇಷ್ಟವಾಗಲಿಕ್ಕಿಲ್ಲ. ಪ್ರಸ್ತುತ ಕಾಲದಲ್ಲಿ ಹೆಣೆದ ಜನ ಕೇಳಬಯಸುವ ಫಿಕ್ಷನ್ ಇದರ ಕಥೆ. ಕಥೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಕುಳಿತು ನೋಡಿ ನಗುವುದನ್ನು ಬಿಟ್ಟರೆ ಸಿನಿಮಾ ವೀಕ್ಷಕನಿಂದ ಇನ್ನೇನನ್ನೂ ಬಯಸುವುದಿಲ್ಲ. ಆದರೆ ಸಿನಿಮಾ ಹೆಚ್ಚು ವಲ್ಗಾರಿಟಿ ಇಲ್ಲದೆ ನಗಿಸಿ, ಹಲವೆಡೆ ಸಹಜ…
ಲೇಖಕರು: ವೈಭವ
ವಿಧ: Basic page
January 20, 2008
(೧) ಅಱಿವುಳ್ಳವರೊಳ್ ಬೆರಸದು ದಱಿಂದಮರಿಯದರೊಳಪ್ಪ ಪರಿಚಯದಿಂದಂ ನೆಱೆಯಿಂದ್ರಿಯಮಂ ಗೆಲ್ಲದು ದಱಿಂದಮಕ್ಕುಂ ಜನಕ್ಕೆ ಪೀನಂ ಬೆಸನಂ [ಅರಿವುಳ್ಳವರೊಂದಿಗೆ ಬೆರೆಯದಿರುವುದರಿಂದಲೂ, ದಡ್ಡರೊಂದಿಗೆ ಆಗುವ ಪರಿಚಯದಿಂದಲೂ, ಇಂದ್ರಿಯಗಳನ್ನು ಚೆನ್ನಾಗಿ ಗೆಲ್ಲದೆ ಇರುವುದರಿಂದಲೂ ಮಂದಿಗೆ ಹೆಚ್ಚು ಬೆಸನವು ಒದಗುತ್ತದೆ ] ಪೀನಂ= ಹೆಚ್ಚು, ಬೆಸನ= ವ್ಯಸನ (೨) ಸಮಱುಗೆಯಿಲ್ಲದ ಮುಱಕಮು ಮಮರ್ದಿರೆ ಕೆಯ್ಗೆಯ್ಯದೊಪ್ಪುವಂದಮುಮವಳಾ ನೆವಮಿಲ್ಲದ ದರಹಸಮುಂ ಸಮದಾಲಸಲಲಿತಗಮನಮುಂ ಸೊಗಯಿಸಗುಂ [ಚೆನ್ನಾಗಿ…
ಲೇಖಕರು: shashikannada
ವಿಧ: ಬ್ಲಾಗ್ ಬರಹ
January 20, 2008
ಭಾಗ-1 ರಲ್ಲಿ ಬಹುರೂಪಿಯೊಂದಿಗಿನ ನನ್ನ ಸಂಬಂಧ ಹಾಗೂ ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ನನ್ನ ನೆಚ್ಚಿನ ಸಾಹಿತಿ, ಚಿಂತಕ ಡಾ.ಯು.ಆರ್.ಅನಂತಮೂರ್ತಿಯವರ ಭಾಷಣವನ್ನು ತಪ್ಪಿಸಿಕೊಂಡುದಕ್ಕೆ ನನಗಾದ ಬೇಸರವನ್ನು ವಿವರಿಸಿದ್ದೆ. ಭಾಗ-2 ಈ ಸಮಾರೋಪ ಸಮಾರಂಭದ ನಂತರ, ಗೆಲಿಲಿಯೊ ನಾಟಕ ಪ್ರದರ್ಶನಗೊಳ್ಳಲಿದೆ. ಅದಕ್ಕೆ ವೇದಿಕೆ ಸಿದ್ಧಗೊಳಿಸಿಕೊಳ್ಳಬೇಕಾಗಿರುವುದರಿಂದ ನೋಡುಗರು ಹತ್ತು ನಿಮಿಷಗಳ ಕಾಲ ಹೊರಗಡೆ ಇದ್ದು, ನಾಟಕ ನೋಡಲು ಟಿಕೆಟ್ ಖರೀದಿಸಿ ಬರಬೇಕೆಂದು ಸೂಚನೆ…

ಲೇಖಕರು: nuthan.hb
ವಿಧ: Basic page
January 20, 2008
ಎಡೆಬಿಡದೆ ಎದೆಯೊಳಗೆ ಕದವ ತಟ್ಟುವಿಯಲ್ಲ, ಉರಿಯಾಗಿ ಎದೆಯಲ್ಲಿ, ಮಿಂಚಾಗಿ ಮೈಯ್ಯಲ್ಲಿ, ಕುದಿರಕ್ತದಲ್ಲಿ, ನಡುನಾಡಿಯಲ್ಲಿ, ಎರಕದಂದದಿ ಹರಿದು ಬುಸುಗುಟ್ಟುತಿಹೆಯಲ್ಲ, ಹೊಟ್ಟೆಯಲಿ ಹಸಿವಾಗಿ, ದಿಟ್ಟನೆಯ ಮಗುವಾಗಿ, ಕಚ್ಚಿಬಿಡದೆನ್ನ ರಚ್ಚೆಹಿಡಿದು ಕಾಡುವಿಯಲ್ಲ, ಏನು ನೀನು? ನಿನ್ನ ತೊದಲು ತುಂಟಾಟ ಸುಮ್ಮನಲ್ಲ, ನಿನ್ನ ಹಠ- ನಿನ್ನಾಟ ಬರಿದೇನಲ್ಲ! ನಿನಗೆಂದ ಜೋಗುಳ ಕವಿತೆಯಾಗುವುದಲ್ಲ, ಅಲ್ಲಿ ಬದುಕಿನ ಕೊರಡು ಚಿಗುರುವುದಲ್ಲ, ಓ ಆತ್ಮರತಿಯಾತ್ಮವೇ ನೀನು ಯಾರು?