ಎಲ್ಲ ಪುಟಗಳು

ಲೇಖಕರು: puchhappady
ವಿಧ: ಕಾರ್ಯಕ್ರಮ
February 02, 2008
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.೧ ರಂದು ವಾರ್ಷಿಕ ಜಾತ್ರೆ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ದೇವರ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ ನಡೆಯಿತು.ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡರು. ಈ ದೇವಸ್ಥಾನವು ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದು ನಾಗ ದೋಷ ನಿವಾರಣೆಗೆ ಪ್ರಸಕ್ತವಾದ ಸ್ಥಳವಾಗಿದೆ.ಇಲ್ಲಿ ಆಶ್ಲೇಷ ಬಲಿ ಪೂಜೆ ಸೇರಿದಂತೆ ಹಲವು ಕಾರ್ಯಕ್ರಮಗಳು ಅತ್ಯಂತ ಮಹತ್ವ ಪಡೆದುಕೊಂಡಿದೆ.ಸದ್ಯ ಈ ದೇವಸ್ಥಾನವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಮುಂದೆ ನೂತನ…
ಲೇಖಕರು: omshivaprakash
ವಿಧ: ಬ್ಲಾಗ್ ಬರಹ
February 02, 2008
ಲಿನಕ್ಸ್ ಬಹಳಷ್ಟು ಜನರಿಗೆ ಕಬ್ಬಿಣದ ಕಡಲೆ. ಆದ್ರೆ ಲಿನಕ್ಸ ಅನ್ನ ಉಪಯೋಗಿಸ್ಲಿಕ್ಕೆ ಒಮ್ಮೆ ಶುರು ಮಾಡಿ ನೋಡಿ. ಪ್ರಶ್ನೆಗಳಿವೆಯೆ? ಸಂಪದಕ್ಕೆ ಒಂದು ಚರ್ಚೆಯ ವಿಷಯವನ್ನ ಸೇರಿಸಿ. ನಿಮಗೆ ಅರ್ಥವಾಗುವ ಹಾಗೆ, ಲಿನಕ್ಸ್ ಉಪಯೋಗದ ಬಗ್ಗೆ ತಿಳಿಸುವ. ಲಿನಕ್ಸಾಯಣ ನಿಮ್ಮಲ್ಲಿಗೆ ಲಿನಕ್ಸಿನ ಎಷ್ಟೋ ವಿಷಯಗಳನ್ನ ಕನ್ನಡದಲ್ಲಿ ತರುವ ಒಂದು ಪುಟ್ಟ ಪ್ರಯತ್ನ. ಲಿನಕ್ಸ್ ಕಲಿಯೋದು ತುಂಬಾ ಸುಲಭ, ಆದ್ರೇ ಇಂಟರ್ನೆಟ್ ಸಂಪರ್ಕ ಮತ್ತು ಲಿನಕ್ಸ್ ತಿಳಿದವರ ಅಭಾವ ನಿಮ್ಮನ್ನ ಅದರಿಂದ ದೂರ ಇಡ್ತಾನೇ…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 02, 2008
ನಾವು-ನೀವು ಓದುವ ಪತ್ರಿಕೆಗಳ ವರದಿಗಳೇ. ೧.ಹೈದರಾಬಾದ್ ಮಸೀದಿ ಸ್ಫೋಟದ ‘ಪ್ರಮುಖ ರೂವಾರಿ’- ಅಣೆಕಟ್ಟು,ಸೇತುವೆ ಕಟ್ಟಿದಲ್ಲ.ಎಲ್ಲೋ ಅಡಗಿ ಕುಳಿತು ಯಾರದೋ ಕೈಯಲ್ಲಿ ಬಾಂಬ್ ಉಢಾಯಿಸಿದ ಪಾಪಿ-ಪ್ರಮುಖ ರೂವಾರಿ. ೨.ಪೋಲೀಸ್ ತನಿಖೆಯದಾರಿ ತಪ್ಪಿಸುತ್ತಿರುವ ‘ಉಗ್ರ’..- ಉಗ್ರ ನರಸಿಂಹ ಎಂದಿಲ್ಲ ಪುಣ್ಯ. ೩. ವಿಧ್ವಂಸಕ ಕೃತ್ಯ ೪. ಶಂಕಿತ ಉಗ್ರರ ಸೂತ್ರದಾರ- ಅಹಹಾ,ಕೃಷ್ಣ ಪರಮಾತ್ಮಾ.. ೫. ಭಯೋತ್ಪಾದಕ=ಹೆದರಿಕೆಯ ತಯಾರಕ? ಇದು ರಾಷ್ಟ್ರೀಯ ಮಟ್ಟದ ಸುದ್ದಿಯಾದುದರಿಂದ…
ಲೇಖಕರು: br.hari5
ವಿಧ: Basic page
February 01, 2008
ಅಗುವುದಲ್ಲಾ ಒಳ್ಳೆಯದಕ್ಕೆ ಅಗಿದೆ ಅಗುವುದಲ್ಲಾ ಒಳ್ಳೆಯದಕ್ಕೆ ಅಗುತ್ತಿದೆ ಅಗುವುದಲ್ಲಾ ಒಳ್ಳೆಯದಕ್ಕೆ ಆಗಲಿದೆ ರೋಧಿಸಲು ನೀನೇನು ಕಳೆದು ಕೊಂದಿರುವೇ ? ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು? ನಾಶವಾಗಲು ನೀನುಮಾಡುವುದಾದರೂ ಏನು? ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ ಏನನ್ನು ನೀಡಿದ್ದರೂ ಅದನ್ನು ಇಲ್ಲೆಗೇ ನೀಡಿರುವೆ ನೆನ್ನೆ ಬೇರ್ಯಾರದ್ದೋ ಆಗಿದ್ದದ್ದು ಇಂದು ನಿನ್ನದಾಗಿದೆ ** ಪರಿವರ್ತನೆ ಜಗದ ನಿಯಮ**
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 01, 2008
ಭಾರತೀಯರು ಉತ್ತಮ ಉಳಿತಾಯದಾರರು ; ಉತ್ತಮ ಹೂಡಿಕೆದಾರರಲ್ಲ . ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ದೇಶದ ಜನರ ಬಡತನವನ್ನು ತೊಲಗಿಸಬಹುದು . ಷೇರುಪೇಟೆಯಲ್ಲಿ ಹಣ ತೊಡಗಿಸುವದು ಲಾಭಗಳಿಕೆಯ ನ್ಯಾಯಸಮ್ಮತ ಹಾಗೂ ಕಾನೂನುಬದ್ಧ ಮಾರ್ಗ ; ಹಣದುಬ್ಬರದ ದರಕ್ಕಿಂತ ವೇಗವಾಗಿ ನಮ್ಮ ಹಣ ಬೆಳೆಯುವಂತೆ ಮಾಡಬಹುದು ; ಸಂಪತ್ತು ಮತ್ತು ಷೇರುಪೇಟೆಯ ಕುರಿತು ಕನ್ನಡದಲ್ಲಿ ಪುಸ್ತಕಗಳೇ ಇಲ್ಲ ; ಕನ್ನಡಿಗರು ಷೇರುಪೇಟೆಯ ಲಾಭದಿಂದ ವಂಚಿತರಾಗಿದ್ದಾರೆ . ಇಂಗ್ಲೀಷ ಸಿರಿವಂತರ ಭಾಷೆ , ಸಿರಿವಂತಿಕೆ ಗಳಿಸುವ…
ಲೇಖಕರು: ಹಿರಣ್ಯಾಕ್ಷ
ವಿಧ: ಚರ್ಚೆಯ ವಿಷಯ
February 01, 2008
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕಾದ್ದು ನ್ಯಾಯ. ಆದರೆ ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ (ಬೆ.ಅ.ವಿ.ನಿ.) ಕಥೆಯೆ ಬೇರೆಯಾಗಿದೆ. ಬೆ.ಅ.ವಿ.ನಿ. ದ ಕಾರ್ಯ ಶುರುವಾದಾಗ ದೇವನಹಳ್ಳಿಯ ರೈತರಿಗೆ ಕೆಲಸ ನೀಡುವುದಾಗಿ ಬರವಸೆ ಇತ್ತು, ಅವರಿಂದ ಬೆ.ಅ.ವಿ.ನಿ.ಕ್ಕೆ ಜಮೀನನ್ನು ಬಿ.ಐ.ಏ.ಎಲ್. ಪಡೆದು ಕೊಂಡಿತು. ಆದರೆ, ಬರವಸೆಯನ್ನು ಹುಸಿ ಗೊಳಿಸಿ, ಈಗ ಬೆ.ಅ.ವಿ.ನಿ. ದಲ್ಲಿ ಹೊರ ರಾಜ್ಯದವರಿಗೆ ಕೆಲಸನೀಡಲಾಗುತ್ತಿದೆ. ಇದೇ ವಿಷಯಕ್ಕಗಿ ಜನವರಿ ೩೦ತ್ತ ರಂದು ಕ.ರ.ವೇ.…
ಲೇಖಕರು: Narayan666
ವಿಧ: Basic page
February 01, 2008
ಸಾರ್ವಜನಿಕ: ಏನು ಸಾರ್ ನಿಮ್ಮ ಬಸ್ ಗೆ ಎಫ್.ಎಂ. ಬಂದಮೇಲೆ ನೀವು ತುಂಬಾ ಖುಷಿಯಿಂದ ಇದ್ದೀರಾ ಯಾಕೇ? ಕಂಡಕ್ಟರ್: ಯಾಕಂದ್ರೆ ಬಸ್ ನಲ್ಲಿ ಒಳ್ಳೊಳ್ಳೆ ಹಾಡನ್ನು ಜನ ಕೇಳ್ತಾ ಕೇಳ್ತಾ ಚಿಲ್ಲರೆ ಕೇಳೋದ್ ಮರೆತುಹೋಗುತ್ತಾರೆ
ಲೇಖಕರು: subin
ವಿಧ: Basic page
February 01, 2008
ಓ ಮುದ್ದು ಮಳೆಯೇ ಕದ್ದು ಮುಚ್ಚಿ ಕುಣಿಯುವುದು ಸರಿಯೇ ತಂಪು ಹನಿಗಳಿಂದ ಜಾರಿ ಬಾರೆ ಅಂಗಳದಿಂದ ನಿನ್ನ ಸ್ಪರ್ಶ ಚಂದ ದರೆಗೆ ತಾರೆ ಮುತ್ತಿನ ಬಂದ ಚೆಲ್ಲೋ ಹನಿಗಳಲ್ಲಿ ನಾದ ಸ್ವರವ ನುಡಿಯುವ ಮಲ್ಲಿ ಓ ಮುದ್ದು ಮಳೆಯೇ ಕದ್ದು ಮುಚ್ಚಿ ಕುಣಿಯುವುದು ಸರಿಯೇ ನಿನ್ನ ಜೋತೆ ನಲಿಯಲು ಆಸೆ ಸುರಿದು ಬಾರೆ ಮುದ್ದಿನ ಕೂಸೆ ಹಸಿರು ಎಲೆಗೆ ಮುಗುತ್ತಿ ನನಗು ನೀನೆ ಸಂಗಾತಿ ಓ ಮುದ್ದು ಮಳೆಯೇ ಕದ್ದು ಮುಚ್ಚಿ ಕುಣಿಯುವುದು ಸರಿಯೇ
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
February 01, 2008
ಇಲ್ಲಾ.ನಾನು ನನ್ನ ಆತ್ಮಕತೆಯನ್ನು ಬರೆಯಲು ಸುರುಮಾಡಿಲ್ಲ.ಯಾರ ಲವ್ ಸ್ಟೋರಿನೂ ಅಲ್ಲ.ಇದು ಡಿಫರೆಂಟ್ ಆಗಿದೆ. ಇಲ್ಲಿ ಯಾವುದೇ ಡಬಲ್ ಮೀನಿಂಗ್ ಡಯಲಾಗ್ ಇಲ್ಲ. ಮಾಸ್ ಗೆ ಬೇಕಾದ ಹಾಸ್ಯ,ಫೈಟ್,ಟ್ರಾಜಿಡಿ ಎಲ್ಲಾ ಇದೆ. ಮನೆ ಮಂದಿಯೆಲ್ಲಾ ಕುಳಿತು ನೋಡ ಸ್ಸಾರಿ ಓದಬಹುದಾದ ಬ್ಲಾಗ್.ಅರ್ಧವಾಸಿ ಔಟ್ ಡೋರ್ ಶೂಟಿಂಗ್ ಇದೆ. ಕತೆ ಸುರುವಾಗುವುದು ಮಾತ್ರ ಇನ್‌ಡೋರ್‌ನಿಂದ. ಮೊದಲ ಸೀನು-“ ಬೆಡ್ರೂಮ್”. ಕಲಾತ್ಮಕವಾಗಿದೆ. ನೆನಪಿಡಿ ಕತೆಯ ಹೀರೋ ನಾನೇ. ನೋಡೋ(ಓದೋ)ನು ನೀನೇ ಎಂದ್ರಾ. ಬಿಡಿ. ಓದದೇ ನೋಡದೇ…
ಲೇಖಕರು: ravikreddy
ವಿಧ: ಬ್ಲಾಗ್ ಬರಹ
January 31, 2008
- ಕರ್ನಾಟಕದ ಆರನೆ ಒಂದರಷ್ಟು ಜನತೆ ಇವತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. - ಬೆಂಗಳೂರು ಮಹಾನಗರ ಪಾಲಿಕೆಯ 2007-08 ರ ಅಂದಾಜು ವರಮಾನ 3302 ಕೋಟಿ ರೂಪಾಯಿ - (ಇದೇ ಸಮಯದಲ್ಲಿ ಗೋವಾ ರಾಜ್ಯದ ವರಮಾನ 2263 ಕೋಟಿಗಳು ಮಾತ್ರ) - ಇಷ್ಟು ದೊಡ್ಡ ನಗರದ ಇತ್ತೀಚಿನ ಪ್ರಜಾ-ಮುಖ್ಯಸ್ಥ, ಕಾರ್ಪೊರೇಷನ್‌ನ ಮೇಯರ್‍ಗಳ ಹೆಸರು ಎಷ್ಟು ಜನ ಬೆಂಗಳೂರಿಗರಿಗೆ ತಿಳಿದಿದೆ? - ಮೇಯರ್ ಆಗಲು ಬೇಸಿಕ್ ಕ್ವಾಲಿ‍ಫಿಕೇಶನ್ ಏನೆಂದರೆ ಯಾವುದಾದರೂ ಒಂದು ವಾರ್ಡಿಗೆ ಕಾರ್ಪೊರೇಟರ್ ಆಗುವುದು ಮತ್ತು ತನ್ನದೇ…