ಎಲ್ಲ ಪುಟಗಳು

ಲೇಖಕರು: rameshbalaganchi
ವಿಧ: Basic page
December 30, 2007
ಮದುವೆಯಾದ ಹೊಸದರಲ್ಲಿ ನಮ್ಮ ಸಂಸಾರ ಹೂಡಿಸಿಕೊಡಲು ನನ್ನಮ್ಮ ನನ್ನಪ್ಪನೊಡನೆ ಬಂದಿದ್ದಳು. ನಾಲ್ಕು ದಿನ ಮುಳ್ಳಿನ ಮೇಲಿದ್ದಂತೆ ಇದ್ದು ಹೊರಟ ನನ್ನಪ್ಪನಂತೂ ಹೊರಡುವ ಗಳಿಗೆಯಲ್ಲಿ ಏಕಾಂತದಲ್ಲಿ ನನ್ನ ಕೈಹಿಡಿದು ಬಿಸುಸುಯ್ದರು. "ಕೋಟೆ ಆಂಜನೇಯ ನಿನ್ನನ್ನು ಕಾಪಾಡಲಿ" ಎಂದಷ್ಟೆ ಚುಟುಕಾಗಿ ಹಾರೈಸಿದರು. ಮುಂಜಾನೆ ಅವರನ್ನು ಬಸ್ ಹತ್ತಿಸಿ ಬರುವಾಗ "ಮಗು, ನಿನ್ನ ಮನೆಯ ಪಕ್ಕದ ಸೈಟಿನಲ್ಲಿ ಬೆಳೆದಿರುವ ಹಾಳು ಎಕ್ಕದ ಗಿಡಗಳನ್ನು ಬೇರುಸಹಿತ ಕೀಳಿಸಿಬಿಡು." ಎಂದು ಒಗಟಿನಂಥ…
ಲೇಖಕರು: kulmanju
ವಿಧ: ಬ್ಲಾಗ್ ಬರಹ
December 30, 2007
ಶರಣ್ರಿಯಪ್ಪಾ. ನನ್ನ ಹೆಸರ ಮಂಜುನಾಥ ಕುಲಕರ್ಣಿ.ಗುಲ್ಬರ್ಗಾದವಾ. ಈಗ ದೇಶಾ ಬಿಟ್ಟ ಬಂದಿನಿ.ಈವತ್ತ ಮೊದಲ್ನೆ ಸರ್ತಿ ಕಂಪ್ಯುಟರ್ನಾಗ ಕನ್ನಡದಾಗ ಬರಿಲಿಕ್ ಹತ್ತಿನಿ. ಇಷ್ಟ ದಿನಾ ನೀವೆಲ್ಲ ಬರ್ದಿದ್ದ ನೊಡಿ ನನಗೂ ಬರಿಬೇಕಂತ ಭಾಳ ಮನಸ್ಸಾಗ್ತಿತ್ತು. ಈವತ್ತ್ ಒಂದ ಪೊಣ ಘಂಟಾ ಕುಂತ ಇದನ್ನ ಕುಟ್ಟಿನಿ. ಮುಂದ ಇನ್ನಮುಂದ ಬರೀಬೇಕಂತ ಆಶಾ ಅದ. ಈಗ ಸ್ವಲ್ಪ ತ್ರಾಸ ಆಗೆದ. ಮುಂದ ಬರ್ತಾ ಬರ್ತಾ ಬರ್ಯೊದು ಭಾಳ ತ್ರಾಸ ಆಗ್ಲಿಕ್ಕಿಲ್ಲ.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
December 30, 2007
ಸಂತ್ಯಾಗ ಕಾಯಿಪಲ್ಲೇ ಕುಟ್ರಿ ಹಾಕಿದಂಗ ಇಲ್ಲಿ ಒಂದಿಷ್ಟು ಶಬ್ದ ಕುಟ್ರಿ ಹಾಕೇನಿ , ನೋಡ್ರಿ , ನಿಮಗ ಎಷ್ಟು ಗೊತ್ತ್ ಅವ ಅಂತ , ನಿಮಗ ಏನಾದ್ರೂ ಉಪಯೋಗ ಆಗ್ತಿದ್ರ ತಕೊಂಡು ಬಳಸ್ಲಿಕ್ಕೆ ಶುರು ಮಾಡ್ರಿ ! ಕುಟ್ರಿ = ಗುಡ್ಡೆ ವಸ್ತ= ಒಡವೆ ಒಡವಿ-ವಸ್ತ = ಒಡವೆ( ಜೋಡುಪದವಾಗಿ ) ಜಿನ್ನೆ - ಅಟ್ಟ ? ಸೆಲ್ಲೆ = ಶಲ್ಯ ದೈನಾಸಪಡು = ದೈನ್ಯಭಾವ ಹೊಂದು ಮೈ ತೊಳಕೊಳ್ಳುವದು / ಜಳಕ = ಸ್ನಾನ ಮಾಡು (ಅಪ್ಪಟ ಕನ್ನಡ - ಗಮನಿಸಿ) ಸ್ನಾನಾ-ಮೈ = ಸ್ನಾನ ಇತ್ಯಾದಿ ಕಡಿಗಿ =ಮುಟ್ಟು ( ಕಡಿಗಿ-ಮುಟ್ಟು…
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 30, 2007
ಪಟ್ಟಣದಲ್ಲಿ ಕ್ರಿಸ್ಮಸ್‌ ದೀಪಗಳು..   ಹಬ್ಬದಡುಗೆ ಉಂಡು ತಿಂದು ಕುಡಿದು ಬೀಗಿ ತೇಗಿ...   ದೊಡ್ಡಕೆ ನೋಡಲು ಚಿತ್ರದ ಮೇಲೆ ಚಿಟಕಿಸಿ
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
December 30, 2007
- ಗೆಳೆಯರೆಲ್ಲಾ ಒಂದು ಕಡೆ ಸೇರಿ ಪಿಕ್ನಿಕ್ ಹೋಗಲು ರೆಡಿಯಾಗಿದ್ದೆವು.ರಾಜು(ನಿಜ ಹೆಸರಲ್ಲ) ಇನ್ನೂ ಬರದಿದ್ದುದರಿಂದ, ಮೊಬೈಲ್ ಸಹ ರಿಸೀವ್ ಮಾಡದಿದ್ದುದರಿಂದ “ನಾನು ಹೋಗಿ ಅವನೊಂದಿಗೆ ಬರುವೆ,ನೀವು ಕಾಯುವುದು ಬೇಡ” ಎಂದು ರಾಜು ಮನೆಗೆ ಹೋದೆ. ಬಾಗಿಲು ತೆರೆದೇ ಇತ್ತು. ಹೊರಟು ರೆಡಿಯಾಗಿದ್ದ ರಾಜು ವಾಂತಿ ಮಾಡುತ್ತಿದ್ದನು. ವಿಚಾರಿಸಿದಾಗ “ಹೆಂಡತಿ ಅರ್ಜೆಂಟಿಗೆ ಪುಳಿಯೊಗರೆ ಮಾಡಿಟ್ಟು ಕೆಲಸಕ್ಕೆ ಹೋಗಿರುವಳು.ಪಿತ್ತವಾಗಿದೆ.ಅದಕ್ಕೆ ವಾಂತಿಯಾಯಿತು.ಸ್ವಲ್ಪ ಸುಧಾರಿಸಿಕೊಂಡು ಬರುವೆನು.”ಎಂದನು.…
ಲೇಖಕರು: Ashwini
ವಿಧ: ಬ್ಲಾಗ್ ಬರಹ
December 29, 2007
ಎಕಾದೆ? ಕತ್ತಲೆಯ ಕಣ್ಣಲ್ಲಿ ಬೆಳಕಾಗಿ ನೀ ಬಂದೆ ಬತ್ತಲೆಯ ಬಾನಲ್ಲಿ ಚುಕ್ಕಿ ಚಂದ್ರಮನಾದೆ ಬಿತ್ತರ ಹೊಲದಲ್ಲಿ ಚಿಕ್ಕ ಸಸಿಯೂದೆ ಎಲ್ಲವಾಗಿ ಕಡೆಗೆ ಕಡುಕ್ರೂರಿ ಎಕಾದೆ? ಲೆಕ್ಕ ನನ್ನ ಜೀವನವೆಂಬ ಗಣಿತ ಪುಸ್ತಕದಲ್ಲಿ ಕೂಡು ಕಳೆಯುವ ಲೆಕ್ಕ... ಕೂಡಿದೆಷ್ಟೂ... ಕಳೆದಿದೆಷ್ಟೂ... ಗುಣಿಸಿ ಭಾಗಿಸದಿದ್ದರು ಉಳಿದಿದೆ ಶೇಷ
ಲೇಖಕರು: rameshbalaganchi
ವಿಧ: Basic page
December 29, 2007
ಮದುವೆಗೆ ಮುಂಚೆ "ಗಂಡಹೆಂಡಿರ ಜಗಳ ಗಂಧ ತೀಡಿಧ್ಹಾಂಗ" ಎಂಬ ಯಾವುದೋ ಕವಿಯ ಉತ್ಸ್ಫೂರ್ತ ಕವಿವಾಣಿಯ ಮೋಡಿಗೆ ಮರುಳಾಗಿ ಫಣಿರಾಯನಂತೆ genuine appreciationನಿಂದ ತಲೆದೂಗಿದ್ದೆ. ಅದು ಅನುಭವದ ನುಡಿಯೆಂದೂ, ಆದ್ದರಿಂದಲೇ ಗಾದೆಗಳಂತೆ ವೇದಾತೀತ ಸತ್ಯವೆಂದೂ ಮುಗ್ಧವಾಗಿ ನಂಬಿದ್ದೆ. ಈ "ಗಂಧ"ದ ಎಲರು ನನ್ನ ಮೂಗಿಗೆ ತೀಡುವುದೋ ಇಲ್ಲವೋ ಎಂಬ ಸಂಶಯವೂ ಮದುವೆಗೆ ಮೊದಲು ನನಗಿತ್ತು. ಯಾಕೆಂತೀರೋ? ನಮ್ಮದು ಸತಿಧರ್ಮದ ಪರಂಪರೆ!! ನಮ್ಮಮ್ಮನಂತೂ ನಾನು ತನ್ನ ಹಿರಿಯ ಸುಪುತ್ರನೆಂಬ plus pointಗೂ ಕೇರ್…
ಲೇಖಕರು: shekarsss
ವಿಧ: Basic page
December 29, 2007
ಇವ ಸರ್ವಸೃಷ್ಟಿಯ ಜನಕ ಜೀವರಾಷಿಗಳ ಪೋಷಕ ಸಕಲ ಕಾರ್ಯಗಳ ನಿಯಂತ್ರಕ ಎಲ್ಲಿರುವೆಯೋ ನೀ ಮಾಂತ್ರಿಕ ಕಲ್ಪನೆಗೆ ಎಟುಕದ ಜಗವೋ ಹಲವು ವಿಸ್ಮಯಗಳ ತಾಣವೋ ಕಾಣದ ಕನಸುಗಳ ಬೆನ್ನತ್ತಿ ಹುಡುಕುತ ನಡೆವೆವು ನಾವು ಅದ್ಭುತ ಮಾನವ ಕುಲವು ಇಲ್ಲಿರುವುದು ನಾಕ ನರಕವು ನಿನ್ನ ಶಕ್ತಿಯ ಸ್ಮರಿಸುತ ನಾವು ಬಾಳಿನ ಬಂಡಿ ನಡೆಸುವೆವು
ಲೇಖಕರು: shekarsss
ವಿಧ: Basic page
December 29, 2007
ಹಕ್ಕಿಯ ಹಾಡಿಗೆ ರಾಗಗಳುಂಟೆ ಹರಿಯುವ ನದಿಗೆ ಜಾಗದನಂಟೆ ಬೀಸುವ ಗಾಳಿಗೆ ಯಾರ ಚಿಂತೆ ಸುರಿಯುವ ಮಳೆಗೆ ಸುಳಿಯುಂಟೆ ಕುಣಿಯುವ ನವಿಲಿಗೆ ತಾಳಗಲಿವೆಯೇ ಬಣ್ಣದ ಚಿಟ್ಟೆಗೆ ಅಂದದ ಕೊರತೆಯೇ ವನ್ಯ ಮೃಗಗಳಿಗೆ ಸ್ನೇಹದ ಬರವೆ ಹಸಿರಿನ ವನಕೆ ಭೇದಗಲಿವೆಯೇ ಕಾಣುವ ಕಣ್ಣು ಕುರುಡಾಯಿತೇಕೆ ಕೇಳುವ ಕಿವಿಯು ಕಿವುಡಾಯಿತೇಕೆ ಶಾಂತಿ ಚಿತ್ತದಿ ಸಂತಸ ಮನಕೆ ನೆಮ್ಮದಿ ಬದುಕಿಗೆ ಬೇರೆ ಬೇಕೆ
ಲೇಖಕರು: veenadsouza
ವಿಧ: ಬ್ಲಾಗ್ ಬರಹ
December 28, 2007
ಬೆನಜೀರ್ ಬುಟ್ಟೊ ಹತ್ಯೆಯಾದದ್ದು ಬಹುಶಃ ಮುಸ್ಲಿಂ ದೇಶದಲ್ಲಿ ಮಹಿಳೆಯರಿಗೆ ಅಧಿಕಾರ ನೀಡುವಂತಿಲ್ಲ, ನೀಡಬಾರದು ಎಂಬ ಉದ್ದೇಶವನ್ನು ಹೊಂದಿದೆ ಎಂದು ಕಾಣುತ್ತಿದೆ. ಒಬ್ಬ ಮಹಿಳೆಯನ್ನು ಈ ರೀತಿ ಹೀನಾಯವಾಗಿ ಅಂತ್ಯಕಾಣಿಸಿದ್ದು ನಿಜಕ್ಕೂ ಪುರುಷ ಪ್ರಧಾನ ಸಮಾಜಕ್ಕೆ ಹೇಸಿಗೆ ತರುವಂತಹ ವಿಷಯ. ಪ್ರಜಾಪ್ರಭುತ್ವದ ಅಂತ್ಯ ಅನ್ನುವುದಕ್ಕಿಂತಲೂ ಮಹಿಳಾ ರಾಜಕೀಯದ ಅಂತ್ಯವೆಂದರೂ ತಪ್ಪಾಗದು. ಈ ಘಟಣೆ ಸೋನಿಯಾ ಗಾಂಧಿಯನ್ನು ಚಿಂತಿಸುವಂತೆ ಮಾಡಿದೆ ಎನ್ನುವುದು ಸುಳ್ಳಲ್ಲ... ವಿಪರ್ಯಾಸವೆಂದರೆ ರಾಜಕಾರಣಿಗಳ…