ಎಲ್ಲ ಪುಟಗಳು

ಲೇಖಕರು: hamsanandi
ವಿಧ: ಬ್ಲಾಗ್ ಬರಹ
January 24, 2008
ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ. ಕಲಿಕೆ ತಗಾದೆಗೆ ಹಣವಿಹುದು ಗರುವಕೆ ಕೆಡುಕನ ಶಕುತಿಯೋ ಕಂಡವರ ಕಾಡಲಿಕೆ ಸಾಧುಗಳಿಗಾಗುವುದದು ತಿರುವುಮುರುವು-ಅರಿವಿಗೆ,ಕೊಡಲಿಕೆ ಮತ್ತು ಕಾಪಿಡಲಿಕೆ ಬೇರೆಯವರಿಗೆ ತೊಂದರೆ ಮಾಡುವಂತ ಬುದ್ಧಿಯಿರುವವವರು, ಕಲಿತದ್ದನ್ನು ವಿವಾದಕ್ಕೂ, ಹಣವನ್ನು ಅಹಂಕಾರಕ್ಕೂ, ತಮಗಿರುವ ಶಕ್ತಿಯನ್ನು ಇತರರನ್ನು…
ಲೇಖಕರು: D.S.NAGABHUSHANA
ವಿಧ: Basic page
January 24, 2008
ಜಾಗತಿಕ ರಾಜಕಾರಣದ ಕೈಗೊಂಬೆಯಾಗಿರುವ ಟಿ.ವಿ.ಮಾಧ್ಯಮ ದೂರದರ್ಶನ ಭಾರತಕ್ಕೆ ಬಂದು ಅರ್ಧ ಶತಮಾನವಾಗುತ್ತಲಿದ್ದರೂ, ಅದೊಂದು ಜನಪ್ರಿಯ ಮಾಧ್ಯಮವಾಗಿ ಬೆಳೆಯತೊಡಗಿದ್ದು ಹದಿನೈದು ವರ್ಷಗಳಿಂದೀಚೆಗಷ್ಟೇ - ಜಗತ್ತು ಇದ್ದಕ್ಕಿದ್ದಂತೆ ಎಲ್ಲ ಗಡಿ ರೇಖೆಗಳನ್ನೂ ಧಿಕ್ಕರಿಸಲು ನಿರ್ಧರಿಸಿದಂತೆ ತೋರುತ್ತಿರುವ ಪ್ರಸ್ತುತ ಜಾಗತೀಕರಣ ಘಟ್ಟದ ಅಂತಾರಾಷ್ಟ್ರೀಯ ಒಪ್ಪಂದಗಳು ಜಾರಿಯಾಗತೊಡಗಿದ ನಂತರ. ರಾಷ್ಟ್ರೀಯ ಟಿ.ವಿ. ಎನಿಸಿರುವ ದೂರದರ್ಶನ ನಿಧಾನವಾಗಿ ಬಣ್ಣಕ್ಕೆ ತಿರುಗಿ, 1985ರಿಂದ 1995ರವರೆಗೆ…
ಲೇಖಕರು: ASHMYA
ವಿಧ: ಬ್ಲಾಗ್ ಬರಹ
January 24, 2008
ತುಂಬ ಸರ್ತಿ ಸಂಪದದಲ್ಲಿ ನನ್ನ photo ಬದಲಾಯಿಸಲು ಪ್ರಯತ್ನಿಸಿ, ಸೋತಿದ್ದೇನೆ...ಯಾರಾದರು ದಯಮಾಡಿ ಸಹಾಯ ಮಾಡುವಿರ..
ಲೇಖಕರು: ASHMYA
ವಿಧ: ಚರ್ಚೆಯ ವಿಷಯ
January 24, 2008
ಈ ಟಿವಿಯಲ್ಲಿ (ರಾತ್ರಿ 8.30) ಪ್ರಸಾರವಾಗುತ್ತಿರುವ ಮಂಥನ ಧಾರಾವಾಹಿಯನ್ನು ನೋಡಿದ್ದೀರ..?ತುಂಬ ಸೊಗಸಾಗಿ ಮೂಡಿಬರುತ್ತಿದೆ...ವಿಶೇಷ ಏನು ಅಂತಾನ?..ಈ ಧಾರವಾಹಿಯಲ್ಲಿ, ಬೇರೆ ಧಾರವಾಹಿಗಳ ಹಾಗೆ ಹೆಚ್ಚಿನ ಹಿನ್ನೆಲೆ ಸಂಗೀತದ ಆರ್ಭಟ ಇಲ್ಲ,ಅನಾವಶ್ಯವಾಗಿ ದ್ರುಶ್ಯಗಳನ್ನು ಎಳೆದಾಡುವುದಿಲ್ಲ..ಸಂಭಾಷಣೆಯಲ್ಲಿ ಅರ್ಥಪೂರ್ಣ ಕನ್ನಡ ಬಳಸುತ್ತಾರೆ..(!!!)ಒಂದು ಎಪಿಸೋಡ್ ನೋಡಿ ಅನಿಸಿಕೆ ತಿಳಿಸಿ...(drishya -ಇದನ್ನು ಕನ್ನಡದಲ್ಲಿ ಹೇಗೆ ಬರೆಯಬೇಕೆಂದು ಗೊತ್ತಾಗುತ್ತಿಲ್ಲ:( )
ಲೇಖಕರು: agilenag
ವಿಧ: Basic page
January 24, 2008
ವೃತ್ತಿ ರಂಗಭೂಮಿ ಹಾಗು ತೊಗಲುಗೊಂಬೆಯಾಟದ ಮಹಾನ್ ಕಲಾವಿದ ಶ್ರೀ ಬೆಳಗಲ್ಲು ವೀರಣ್ಣ, ರಾಷ್ಟ್ರೀಯ ಸ್ಥರದ ಪ್ರತಿಭಾಶಾಲಿ. ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಆಟದ ಪ್ರಕಾರವನ್ನು ಐತಿಹಾಸಿಕ ಮತ್ತು ಸಾಮಾಜಿಕ ವಸ್ತುಗಳ ಕಥಾ ಪ್ರಸಂಗಗಳನ್ನು ನಿರೂಪಿಸಲು ಮೊಟ್ಟ ಮೊದಲಿಗೆ ಭಾರತದಲ್ಲಿ ಬಳಸಿದ ಏಕೈಕ ಕಲಾವಿದರೆಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಸುಮರು ೧೯೩೬ರಲ್ಲಿ ಸಿಳ್ಳೆಕ್ಯಾತ ಜನಾಂಗದಲ್ಲಿ ಹುಟ್ಟಿದ ಈ ಕಲಾವಿದರ ಪೂರ್ವಜರು ಸಹ ಮಹಾನ್ ಕಲಾವಿದರೇ. ತಂದೆ ದೊಡ್ಡ ಹನುಮಂತಪ್ಪ…
ಲೇಖಕರು: navidyarthi
ವಿಧ: Basic page
January 24, 2008
ಸುರಾಸುರರು ಮಣಿದರೆನಗೆ ಭಕ್ಷಗಳಾದರು ಭೂ ಕಲದವರೆನಗೆ ಸುಖ ದುಃಖಗಳು ತರ್ಪಿಸುವುವೆನಗೆ ನಿನ್ನ ಇಷ್ಟ-ಕಷ್ಟಗಳೆನಿತೊ ಎನ್ನ ಗಾಲಿಗಳ ಕೆಳಗೆ ಮೂಢಾತಿ ಮೂಢರು ಎನ್ನ ಕಾಲವೆಂದೆನಿತು ಕರೆವರು
ಲೇಖಕರು: hpn
ವಿಧ: ಕಾರ್ಯಕ್ರಮ
January 24, 2008
ತಾರಿಣಿ ಶುಭದಾಯಿನಿ ಅವರಿಗೆ ಅಕ್ಷರದಾಹ ಕಾವ್ಯಪ್ರಶಸ್ತಿ ೨೦೦೭ ಮತ್ತು ಅವರ ಚಿತ್ತಗ್ಲಾನಿಯ ಮಾತು ಕವನಸಂಕಲನ ಬಿಡುಗಡೆ ಹಾಗೂ ಗಂಗಾಧರ ಚಿತ್ತಾಲರ ನೆನಪಿನ ಕವಿಸಮಯ ಚಿತ್ತಾಲರ ಕಾವ್ಯದ ಬಗ್ಗೆ: ಜಯಂತ ಕಾಯ್ಕಿಣಿ ಪುಸ್ತಕದ ಬಗ್ಗೆ: ಸಿ ಎನ್ ರಾಮಚಂದ್ರನ್ ಬಂಜಗೆರೆ ಜಯಪ್ರಕಾಶ್ ಕವಿಸಮಯ: ಎಲ್ ಹನುಮಂತಯ್ಯ, ಚಿಂತಾಮಣಿ ಕೊಡ್ಲೆಕೆರೆ, ಸಂಧ್ಯಾದೇವಿ, ಡಿ ಎಸ್ ರಾಮಸ್ವಾಮಿ, ನಾಗರಾಜ ವಸ್ತಾರೆ, ಮಲಿಕಾರ್ಜುನ ಗೌಡ ತೂಲಹಳ್ಳಿ, ಸಂದೀಪ ನಾಯಕ, ವಾಸುದೇವ ನಾಡಿಗ್, ಅಂಕುರ್ ಬೆಟಗೇರಿ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 23, 2008
ಒಬ್ಬ ರಾಜಾ ಇದ್ದ , ಅವಂಗ ಒಂದ್ ವಿಚಾರಾ ಬಂತು , ನಮ್ಮ ಮಂದಿ ಎಲ್ಲಾನೂ ಮೈತುಂಬ ಅರಿವಿ ಹಾಕ್ಕೊಂಡು ಡೀಸೆಂಟಾಗಿ ಇರ್ಲಿ ಅಂತ . ಅದಕ್ಕೊಂದು ಕಾಯ್ದೆ ಮಾಡಿದ . ಅವನ ಸೈನಿಕರು ಕಾಯ್ದೇ ನಡಸ್ ಬೇಕಲ್ಲ? ಮೈ ತುಂಬ ಅರಿವಿ ಹಾಕ್ಕೊಳ್ದೇ ಕಾಯ್ದೆ ಮೀರಿದೋರನ್ನ ಎಳಕೊಂಬಂದ್ರು . ಅವರೊಳಗ ಒಬ್ಬಾಂವಾ ಸಾಧೂ ಇದ್ದ . ಅವಂಗ ಶಿಕ್ಷಾ ಕೊಡಲಿಕ್ಕೆ ಆಗ್ತದS? ಎಲ್ಲಾ ಬಿಟ್ಟಾಂವ ಅಂವ , ರಾಜಾನ ಶಿಕ್ಷಾದಿಂದ ಏನು ಅವಂಗ ? ಮತ್ತ ಮಂದಿ ಏನ ಅಂದಾರು ? ಸೆನ್ಸಿಟಿವ್ ಮತ್ತ ಪಾಲಿಟಿಕಲ್ ವಿಷ್ಯ ನೋಡ್ರಿ . ಮತ್ತS…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 23, 2008
ಕತೆಗಳಿಗೆ ತುಂಬಾ ಡಿಮಾಂಡ್ ಇರೋ ಹಾಗಿದೆ :) , ಸಣ್ಣದರಲ್ಲಿ ಒಂದು ತೆಲುಗು ಕತೆ ಕೇಳಿ . ಮೇಲಿನದು ಪಂಚ್ ಲೈನ್. ಇವಳು ಮಧ್ಯವಯಸ್ಕಳು , ಉನ್ನತ ಹುದ್ದೆಯಲ್ಲಿದ್ದಾಳೆ , ಮದುವೆ ಆಗಿಲ್ಲ . ಇವಳ ಭೆಟ್ಟಿಗೆ ಅವನು ಈಗ ಬಂದಿದ್ದಾನೆ , ಮನೆಗೆ. ಅದೇಕೋ ? ಹಿಂದಿನದೆಲ್ಲ ನೆನಪಾಯಿತು ಅವಳಿಗೆ. ಅವಳ ಹರೆಯದಲ್ಲಿ ಅವನು ಇವಳ ಸುತ್ತ ಸುತ್ತುತ್ತಿದ್ದ . ಮನೆಯವರು ಎಲ್ಲರೂ ಇವಳನ್ನ ಮದುವೆ ಆಗ್ತಾನೆ ಅಂತ ತಿಳಕೊಂಡಿರುವಾಗ , ಸುಂದರಿಯೂ ಜಾಣೆಯೂ ಆದ ಇವಳನ್ನ ಬಿಟ್ಟು , ಅಷ್ಟೇನೂ ಚೆನ್ನಾಗಿಲ್ಲದ ,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 23, 2008
ಇತ್ತೀಚೆಗೆ ’ಜೋಗಿಕತೆಗಳು’ ಸಣ್ಣಕಥಾಸಂಕಲನ ಓದಿದೆ . ಅಲ್ಲಿನ ಒಂದು ಕತೆ , ಕೇವಲ ೩-೪ ಪುಟದ್ದಾದರೂ ಮರೆಯಲಾಗದ ಚಮತ್ಕಾರಿಕ ಕತೆ . ಅದನ್ನು ಓದಿ ಭರ್ತೃಹರಿಯ ವೈರಾಗ್ಯದ ಕತೆ ನೆನಪಾಯಿತು. ಇರಲಿ , ಈಗ ಕತೆ ಕೇಳಿ . ... ಡಾಕ್ಟರು ಹೇಳ್ತಾ ಇದ್ದಾರೆ - ನೋಡಿ , ಆಕೆ ಹಾರ್ಟ್ ಪೇಷಂಟು , ಗಂಡ ಅಪಘಾತದಲ್ಲಿ ಸತ್ತ ಸುದ್ದಿ ಕೇಳಿ ಆಕೆಯ ಜೀವಕ್ಕೆ ಅಪಾಯ ಆಗಬಹುದು . ಆದ್ರೆ ಸುದ್ದಿ ಹೇಳದೇ ಇರೋದು ಹೇಗೆ ? ಅಲ್ಲಿ ಇದ್ದ ಆಕೆಯ ಗೆಳತಿ ಈ ವಿಷಯವನ್ನು ಆಕೆಗೆ ಆಘಾತ ಆಗದ ಹಾಗೆ ತಾನು ತಿಳಿಸುವದಾಗಿ…