ವಿಧ: ಬ್ಲಾಗ್ ಬರಹ
July 09, 2015
ರಾಜಸ್ಥಾನವೆಂಬ ಸ್ವರ್ಗದ ತುಣುಕು-8 ಬೇಡಿದ ವರ ನೀಡುವ ಅತೀಂದ್ರಿಯ ಶಕ್ತಿ - ಲಕ್ಷ್ಮೀಕಾಂತ ಇಟ್ನಾಳ
ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಕುಚಮನ್ ಹವೇಲಿಯ ಹೋಟೆಲ್‍ನಲ್ಲಿ ಬೆಳಗಿನ ತಿಂಡಿಗಾಗಿ ಕೆಳಗಿಳಿದೆವು. ಅದು ಅಂದಿನ ಮಂತ್ರಿಯೊಬ್ಬರ ಹವೇಲಿ ಇದ್ದುದರಿಂದ ಎಲ್ಲೆಡೆಯೂ ಅದ್ದೂರಿಯಾಗಿತ್ತು, ಕಟ್ಟಡದ ಒಳಗೇ ಕಾರಂಜಿಗಳು. ದೊಡ್ಡ ಜಾಲರಿಗಳ ಕಿಟಕಿಗಳು, ಪರದೆಗಳು, ಸುಮ್ಮನೆ ಒಂದೇ ಪದದಲ್ಲಿ ಅದು ಅರಮನೆ.. ಬಹುತೇಕ ವಿದೇಶೀಯರಿಂದಲೇ ತುಂಬಿತ್ತು,. ಹತ್ತಾರು ವಿದೇಶೀಯರು ಅಲ್ಲಿಯೇ ಒಂದೆಡೆ…
ವಿಧ: ಬ್ಲಾಗ್ ಬರಹ
July 04, 2015
ಹುಡುಗ ಮತ್ತು ಬುದ್ಧಿಜೀವಿ
.
ಹುಡುಗನೊಬ್ಬ ಹೊಟೇಲಿನಿಂದ ತಿಂಡಿಪೊಟ್ಟಣ ತೆಗೆದುಕೊಂಡು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾನೆ.ಹಸಿವಿನಿಂದ ಬಳಲಿ ಮಲಗಿದ್ದ ನಾಯಿಮರಿಯೊಂದು ಈ ಹುಡುಗನನ್ನು ನೋಡಿದ ಕೂಡಲೇ ಬಾಲ ಅಲ್ಲಾಡಿಸಿಕೊಂಡು ಹತ್ತಿರಕ್ಕೆ ಬರುತ್ತದೆ.ಅ ಹುಡುಗನಿಗೆ ನಾಯಿಮರಿಯನ್ನು ನೋಡಿದ ಕೂಡಲೆ ಏನನ್ನಿಸಿತೋ ಏನೋ,ತನ್ನಲ್ಲಿದ್ದ ತಿಂಡಿಪೊಟ್ಟಣವನ್ನು ಅದಕ್ಕೆ ಹಾಕುತ್ತಾನೆ.ಇದನ್ನು ಅಲ್ಲೆ ಪಕ್ಕದಲ್ಲಿ ಕೆದರಿದ ಕೂದಲಿನ ಜೊತೆಗೆ ಫ್ರೆಂಚ್ ಗಡ್ಡಬಿಟ್ಟುಕೊಂಡು ಸಿಗರೇಟ್ ಸೇದುತ್ತ…
ವಿಧ: ಬ್ಲಾಗ್ ಬರಹ
July 04, 2015
ಭೂವಿಮಾನ ಯಾನ
ಭೂವಿಮಾನವೇರಿ ಯಾನ
ವ್ಯೋಮಕಕ್ಷೆಯಲ್ಲಿ
ಅವ್ಯಾಹತವಾಗಿ ಸದಾ
ನಿಲ್ಲದಲ್ಲಿ ಇಲ್ಲಿ !!
ದೊಡ್ಡದಾದ ಈ ವಿಮಾನ
ದಲ್ಲಿ ಎಲ್ಲ ಉಂಟು
ಗುಡ್ಡ ಬೆಟ್ಟ ನದಿ ಸಾಗರ
ಜನ್ಮಾಂತರ ನಂಟು !!
ಕೋಟ್ಯಂತರ ಜೀವ ನಿ-
-ರ್ಜೀವವನ್ನು ಹೊತ್ತು
ನಿಷ್ಠೆಯಿಂದ ನೀಲ ನಭದಿ
ಸೂರ್ಯನಿಂಗೆ ಸುತ್ತು !!
ಅಜ್ಜ ಅಜ್ಜಿಯೆಂಬ ಮೂಲ
ದವರು ಇಲ್ಲಿ ಹುಟ್ಟಿ
ನಿಜ ವಿಮಾನದೊಳಗೆ ಮಾಡಿ
ಜೀವ ಯಾನ ಗಟ್ಟಿ !!
ನಮ್ಮ ಯಾನ ವೀ ವಿಮಾನ
ವೇರಿ ವೇಗದಲ್ಲಿ
ಹೆಮ್ಮೆಯೋಟ ಕೂಟವೆಂಬ
ಬಲು ಮಾಟಗಳಿಲ್ಲಿ !!
ಸೆಳೆತಕಾಗಿ ತಿರುಗಾಟದ…
ವಿಧ: ಬ್ಲಾಗ್ ಬರಹ
July 03, 2015
ನಾವಿದ್ದೇವೆ
ನಾವಿದ್ದೇವೆ ನಾವಿದ್ದೇವೆ
ಕಳ್ಳರ ಜೊತೆಗೆ ನಾವಿದ್ದೇವೆ
ಸುಳ್ಳರ ಜೊತೆಗೆ ನಾವಿದ್ದೇವೆ
ಮಳ್ಳರ ಜೊತೆಗೆ ನಾವಿದ್ದೇವೆ
ಎಲ್ಲರ ಜೊತೆಗೂ ನಾವಿದ್ದೇವೆ
ನಾವಿದ್ದೇವೆ ನಾವಿದ್ದೇವೆ !!
ಲೆಕ್ಕಕ್ಕಿಲ್ಲ ನಾವಿದ್ದೇವೆ
ಸೊಕ್ಕಲ್ಲೆಲ್ಲ ನಾವಿದ್ದೇವೆ
ನೆಕ್ಕಿದ್ದಿಲ್ಲ ನಾವಿದ್ದೇವೆ
ನಕ್ಕಲ್ಲೆಲ್ಲ ನಾವಿದ್ದೇವೆ
ಪಕ್ಕಕ್ಕೆಲ್ಲ ನಾವಿದ್ದೇವೆ
ನಾವಿದ್ದೇವೆ ನಾವಿದ್ದೇವೆ !!
ಹೇಸಿಗೆಯೆನ್ನದೆ ನಾವಿದ್ದೇವೆ
ಬೇಸರವಿಲ್ಲದೆ ನಾವಿದ್ದೇವೆ
ಮೋಸವ ಮಾಡಿರಿ ನಾವಿದ್ದೇವೆ
ಕಾಸಿಗೆ ಲೇಸಿಗೆ ನಾವಿದ್ದೇವೆ…
ವಿಧ: ಬ್ಲಾಗ್ ಬರಹ
July 01, 2015
ರಾಜಸ್ಥಾನವೆಂಬ ಸ್ವರ್ಗದ ತುಣುಕು-7 : ಚಲ್ಲಿದರು ಮಲ್ಲಿಗೆಯಾ, ಬಾಣಾಸೂರ ಏರಿಮ್ಯಾಗೆ...
ಮಳೆನಿಂತ ಮೇಲೂ ಮರದ ಹನಿ ನಿಲ್ಲದ ಹಾಗೆ ಮರಳರಾಣಿ ಜೈಸಲ್ಮೇರ್‍ನಿಂದ ಹೊರಟು ಬರುವಾಗ ಚಂದದ ಬಾಲ್ಯದ ಗುಬ್ಬಚ್ಚಿಗಳನ್ನು ತನ್ನ ಮಡಿಲಲ್ಲಿ ಸಾಕಿ, ಅಂದಿನ ಆ ನಮ್ಮೆಲ್ಲರ ಬಾಲ್ಯಗಳನ್ನು ಪೋಷಿಸುತ್ತಿರುವುದಕ್ಕೆ ವಿಶೇಷವಾಗಿ ಅಭಿನಂದಿಸಿದೆ. ಬೆಚ್ಚಗಿನ ಬಾಲ್ಯದ ನೆನಪುಗಳೊಂದಿಗೆ, ಮರಳರಾಣಿಯ ಮಡಿಲಿನ ಸ್ವರ್ಗಸದೃಶ ಅನುಭವ ನೀಡಿ ಆತ್ಮದ ಬಾಯಾರಿಕೆಯ ಹಸಿವಿಗೆ ಅಮೃತಸಿಂಚನ ಉಣಿಸಿ ತಣಿಸಿದ 'ಥಾರ್' ಗೆ ವಂದಿಸಿ,…
ವಿಧ: ಬ್ಲಾಗ್ ಬರಹ
June 29, 2015
ದೇವನನು ಬಂಧಿಸಲು ಹೊರಟ ಲಿಪಿಕಾರ...
ಸುಟ್ಟ ಕಟ್ಟಿಗೆ ಇದ್ದಿಲನ್ನು ನುಣ್ಣಗೆ ಅರೆದು,
ಕಿತ್ತು ಒಣಗಿಸಿದ ತಾಳೆಯ ಪತ್ರಗಳ ಕೊರೆದು,
ಒಟ್ಟುಗೂಡಿಸಿ, ಪತ್ರಗಳ ದಾರದೊಳು ಕಟ್ಟಿ,
ಭಕ್ತಿಯೊಳಗೆಡಬಲದೊಳೆಮ್ಮ ಕೆನ್ನೆಯ ಮುಟ್ಟಿ,
ಕುಂಕುಮಾದಿಗಳಿಂದ, ಗಂಧ ದೂಪಗಳಿಂದ,
ಪುಷ್ಪಮಾಲೆಗಳಿಂದ, ಸಕಲ ಮಂತ್ರಗಳಿಂದ,
ಕೊರೆವ ಚಳಿ, ಸುರಿವ ಮಳೆಗಳನೊಂದು ಲೆಕ್ಕಿಸದೆ,
ಮಡಿಯುಟ್ಟು, ಮೂಗೆರೆಗಳನು ಹಣೆಯ ಮೇಲಿರಿಸಿ,
ದೇವನನು ಬಂಧಿಸಲು ಹೊರಟ ಲಿಪಿಕಾರ...
ಕಂಡುದನು ಕಂಡಂತೆ ಚಿತ್ರಿಸಲು ಬಯಸುತ್ತ,
ಮಿನುಗಿ ತಾ…
ವಿಧ: ಬ್ಲಾಗ್ ಬರಹ
June 29, 2015
ಸರಳ ಪ್ರಾಮಾಣಿಕತೆ ಪಾರದರ್ಶಕವಾಗಿ ಅರಿ ಷಡ್ ವೈರಿಗಳು ಕಾಮ,ಕ್ರೋಧ,ಲೋಭ,ಮೋಹ,ಲೋಭ,ಮಧಮತ್ತು ಮತ್ಸರದಿಂದ ದೂರ ಅತೀ ಆಶೆಯಿಲ್ಲದೆ ಪರೋಪಕಾರಿಯಾಗಿ ಇರಬೇಕು
ಮುಂಜಾನೆಯ ಶುಭಾಶಯಗಳು
ವ್ಯಕ್ತಿತ್ವ ವಿಕಸನೆ ಕೇಂದ್ರ ಮೈಸೂರು
ಕುಂದಾಪುರ ನಾಗೇಶ್ ಪೈ.
ವಿಧ: ಬ್ಲಾಗ್ ಬರಹ
June 27, 2015
ಕಲ್ಪನೆ ಮತ್ತು ವಿವೇಕಗಳು
ಕಲೆಯ ಮೂಲ ವಸ್ತುಗಳು
ಶಕ್ತಿಶಾಲಿ ಕಲ್ಪನೆಯಿಂದ
ಮಾತ್ರ ಮರು ಸೃಷ್ಟಿ ಸಾಧ್ಯ
ಕಲಾವಿದನ
ಮಹೋನ್ನತಿಯಡಗಿರುವುದು
ಕಲ್ಪನಾ ಗ್ರಹಿಕೆಯಲ್ಲಿ
ಮುಗ್ಧ ಕಲಾರಸಿಕ
ವಶವರ್ತಿಯಾಗುವುದು
ಆತನ
ಕಲ್ಪನಾಶೀಲ ವೈಭವಕೆ
ಕಲ್ಪನೆ ಕಲೆಗಳೆರಡೂ ಶ್ರೇಷ್ಟ
ಕಲ್ಪನಾ ಸ್ಪರ್ಶದಿಂದಲೆ
ಮನೋ
ಸಂವೇದನಾಕಾರಗಳುಗಮ
ಆಗ ಹೊರ ಹೊಮ್ಮುವ ಕಲೆ
ಶ್ರೇಷ್ಟ ಕಲೆ
ಕಲ್ಪನೆ
ಕೇವಲ ಹಗಲುಗನಸಲ್ಲ
ಚಿಂತನೆಗೆ ಹಚ್ಚುವ ಸಾಧನ
ಕಲೆ
ಚಿಂತನೆ ಸಾಧನೆ
ಎರಡೂ ಹೌದು
*
ಚಿತ್ರ ಅಂತರ್ ಜಾಲದಿಂದ
ವಿಧ: ಬ್ಲಾಗ್ ಬರಹ
June 27, 2015
ನಾವು ದಿನ ನಿತ್ಯ ಆಹಾರದಲ್ಲಿ ಅನ್ನದಾತನ ರೈತನ ಬಗ್ಗೆ ಚಿಂತಿಸಬೇಡವೇ ಅವನ ಸಾಲ ಭಾಧೆ ಕೊನೆಯಲ್ಲಿ ಆತ್ಮಹತ್ಯೆ ನಿರ್ದಾರಕ್ಕೆ ಸಮಾಜದಲ್ಲಿ ಗಿರವಿ,ಬ್ಯಾಂಕುಗಳು ಸರಕಾರದಿಂದ ಸಹಾಯ ಹಸ್ತಕ್ಷೇಪ ಏಕೇ ಬರುವುದಿಲ್ಲಾ
ವ್ಯಕ್ತಿತ್ವ ವಿಕಸನ /ಸುಧಾರಣೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು
ಕುಂದಾಪುರ ನಾಗೇಶ್ ಪೈ.