ವಿಧ: ಚರ್ಚೆಯ ವಿಷಯ
July 27, 2015
ಸೋಲಿಗರು ಕಡ್ಡಿ ಸೊಪ್ಪು ಬಳಸುವುದನ್ನು ಈ ಬರಹದಲ್ಲಿ ಉಲ್ಲೇಖಿಸಿದ್ದಾರೆ. ಕಡ್ಡಿ ಸೊಪ್ಪಿನ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗಾದರೂ ಗೊತ್ತಿದ್ದಲ್ಲಿ ತಿಳಿಸುತ್ತೀರ?
http://www.downtoearth.org.in/news/the-leafy-option-42184
ವಿಧ: ಪುಸ್ತಕ ವಿಮರ್ಶೆ
July 26, 2015
ಸ್ನೇಹಿತನಿಂದ "ಮಂತ್ರಶಕ್ತಿ" ಎಂಬ ಕಾದಂಬರಿಯೊಂದನ್ನು ತಂದು ಸ್ವಲ್ಪ ಓದಿದೆ ಆದರೆ ಅದನ್ನು ಪುರ್ಣಗೊಳಿಸಲು ಸಮಯವೇ ಸಿಗುತ್ತಿರಲಿಲ್ಲ.ಒಂದು ದಿನ ವಾರಂತ್ಯದಲ್ಲಿ ಒಬ್ಬನೇ ರೂಂ ನಲ್ಲಿ ಇದ್ದೆ ತುಂಬಾ ಬೇಸರವಾಗಲಾರಂಬಿಸಿತು ಆಗ ಏನನ್ನಾದರೂ ಓದೋಣವೆಂದು ಅಪೂರ್ಣಗೊಳಿಸಿದ್ದ ಈ ಕಾದಂಬರಿ ತೆರೆದೆ ಓದುತ್ತಾ ಎಷ್ಟು ಕುತೂಹಲವಾಯಿತೆಂದರೆ ೨೫೦ ಪುಟಗಳ ಪುಸ್ತಕ ಮುಗಿದಿದ್ದೆ ತಿಳಿಯಲಿಲ್ಲ.
"ಶವವಾಗಿದ್ದ ಯುವತಿ ಜೀವಂತ ಎದ್ದು ನಿಂತಳು......"
"ಸದಾ ಮರವೇರಿ ಕುಳಿತರುತ್ತಿದ್ದ ಹುಡುಗ ಕೆಳಗಿಳಿದು ಬಂದು…
ವಿಧ: ಬ್ಲಾಗ್ ಬರಹ
July 24, 2015
ಕೊಳಲು - ಲಕ್ಷ್ಮೀಕಾಂತ ಇಟ್ನಾಳ
ಯಾರಿದ್ದೀರಿ, ತೆರೆದ ಮನೆಯಲ್ಲಿ?
ನಾವಿದ್ದೇವೆ, ನಾವು,.... ನಾವೆಂದರೆ?
ನಾನು ಇವಳು ಮತ್ತೆ ಮಗಳು
ಮೂರೇ ಜನಾನಾ?
ಇಲ್ಲ ಇಲ್ಲ, ಪುಟ್ಟ ಖುಷಿ, ವಯಸ್ಸಾದ ಬುದ್ಧಿಯೂ ಇದೆ,
ಈ ಖುಷಿಯಂತೂ ಓಡಾಡಿಕೊಂಡಿರುತ್ತದೆ ನಮ್ಮ ಮುಖಗಳಲ್ಲಿ , ಮನಗಳಲ್ಲಿ
ತಂಗಾಳಿಯಂತೆ...ಮುದವಾಗಿರುತ್ತದೆ,
ಒಂದೇ ಕಡೆಗಿರುವುದಿಲ್ಲ ಅದು....ಬೆಕ್ಕಿನಂತೆ
ಈ ಸಾರಿ ಕೈಗೆ ಸಿಕ್ಕರೆ, .....ಬೆಲ್ಟ್ ಹಾಕಿ ಬಿಡಬೇಕು ಅದಕ್ಕೆ!
ಬುದ್ಧಿಗೆ ಕಾಲಿಲ್ಲ, ಹೀಗಾಗಿ ಬಿದ್ದುಕೊಂಡಿದೆ, ವಟ ವಟ…
ವಿಧ: ಬ್ಲಾಗ್ ಬರಹ
July 22, 2015
ತಾರೀಕು ಹದಿನೈದು, ತಿಂಗಳ ಮದ್ಯಂತರ... ಕಂಪನಿ ಕೊಟ್ಟ ಸಂಬಳ ಖಾಲಿ... ಬ್ಯಾಂಕ್ ಪ್ರತಿ ತಿಂಗಳೂ ಕೊಡೋ ಸಾಲ (ಕ್ರೆಡಿಟ್ ಕಾರ್ಡ್) ನ ಮಿತಿಯು (ಕ್ರೆಡಿಟ್ ಲಿಮಿಟ್) ಸರಿ ಸುಮಾರು ಮಿತಿ ಮೀರಿತ್ತು.... ತಲೆ ಕೆಟ್ಟು ಹೋದ ಹಾಗೆ ಅನ್ನಿಸಿ ಮಾಲ್ ಗೆ ಒಂದು ರೌಂಡ್ ಹಾಕಿಕೊಂಡು ಬರೋಣ ಅಂತ ಹೊರಟೆ. ವಾಪಸ್ಸು ಬಂದಾಗ ಸುಮಾರು ಒಂದು ಮೀಟರ್ ಉದ್ದದ ಬಿಲ್ಲು, ಕೈ ತುಂಬಾ ಸಾಮಾನು, ತಲೇಲಿ ಮೂಡಿದ್ದು ಈ ಲೇಖನ......
Simply Complicated.....
ಮನೆಗೆ ರೇಶನ್ ಎಲ್ಲರಿಗೂ ಬೇಕು. ಆದ್ರೆ ಮನೆ ಪಕ್ಕದಲ್ಲಿ…
ವಿಧ: ಬ್ಲಾಗ್ ಬರಹ
July 21, 2015
ಉದಯಪುರದ ಸಿಟಿಪ್ಯಾಲೇಸ್ನಿಂದ ಈಗ ನಾವು ಸರೋವರವೊಂದನ್ನು ಸುತ್ತುಹಾಕುತ್ತ ಶಿಲ್ಪಗ್ರಾಮದೆಡೆಗೆ ತೆರಳಿದೆವು. ಈ ಶಿಲ್ಪಗ್ರಾಮದ ಕುರಿತು ಈಗಾಗಲೇ ಈ ಲೇಖನಮಾಲೆಯ ಹಿಂದಿನ ಕಂತಿನಲ್ಲಿ ವಿಚಾರಗಳನ್ನು ಹಂಚಿಕೊಂಡಿರುವುದನ್ನು ನೆನಪಿಸಲು ಬಯಸುತ್ತೇನೆ. ಯಾರೇ ಕಲಾಕಾರರಿರಲಿ, ಕಲಾಪ್ರೇಮಿಗಳಿರಲಿ, ಜನಪದೀಯ ಈ ನೆಲದ ಜನಸಂಪ್ರದಾಯಗಳನ್ನು ತಿಳಿದುಕೊಳ್ಳುವ ಬಯಕೆಯುಳ್ಳ ಸಹಜ ಆಸಕ್ತರು ಈ ಶಿಲ್ಪಗ್ರಾಮಕ್ಕೊಮ್ಮೆ ಭೇಟಿ ನೀಡಲೇಬೇಕೆಂಬ ಹಕ್ಕೊತ್ತಾಯ ನನ್ನದು. ನಮ್ಮ ಆಸಕ್ತಿಗೂ ಮೀರಿ ಅಲ್ಲಿ ಆ…
ವಿಧ: ಬ್ಲಾಗ್ ಬರಹ
July 20, 2015
SUNDARA prapancha
ವಿಧ: ಚರ್ಚೆಯ ವಿಷಯ
July 17, 2015
ಸಂಪದಿಗರಲ್ಲಿ ವಿನಂತಿ,
ನನ್ನ ಪರಿಚಯದವರೊಬ್ಬರು Conventional Hall ವೊಂದನ್ನು ಕಟ್ಟಿಸುತ್ತಿದ್ದಾರೆ. ಅದಕ್ಕೊಂದು ಹೆಸರು ಹುಡುಕುತ್ತಿದ್ದೇವೆ.
ಹೆಸರು ಸ್ವಲ್ಪ earthly ಆಗಿರಬೇಕೆಂದು ಅವರ ಭಾವ. ನಿಮಗೆ ತಿಳಿದಲ್ಲಿ, ಈ ಲೇಖನಕ್ಕೆ ಆ ಹೆಸರನ್ನು comment ಮೂಲಕ ಬರೆದು ತಿಳಿಸಿ.
ನೆಲ್ಮೆಯ,
ಸುಮ
ವಿಧ: ಬ್ಲಾಗ್ ಬರಹ
July 15, 2015
ರಾಜಸ್ಥಾನವೆಂಬ ಸ್ವರ್ಗದ ತುಣುಕು - 9 ರಾಣಾ ಪ್ರತಾಪನ ನೆಲದಲ್ಲಿ
ರಾಣಕ್‍ಪುರದಿಂದ ಅರಾವಳಿ ಬೆಟ್ಟ ಕಾಡುಗಳ ಮಡಿಕೆಗಳಲ್ಲಿ, ಪದರುಗಳಲಿ, ತಿರುವುಗಳಲ್ಲಿ ತಂಪನೆಯ ಹವೆಯನ್ನು ಮೊದಲ ಬಾರಿ ಅನುಭವಿಸಿದೆವು. ಕಾರಿನ ಏಸಿ ಬಂದ್ ಮಾಡಿ, ಗ್ಲಾಸುಗಳನ್ನು ಓಪನ್ ಮಾಡಿ ಆ ತಂಪನ್ನು ಮೈಮನಗಳಿಗೆಲ್ಲಾ ಮೆತ್ತಿಕೊಂಡೆವು, ನೆಂದುಕೊಂಡೆವು. ಕಾಡಿನ ಕಣಿವೆಗಳಲ್ಲಿ ಸುಳಿವ ಆ ತಂಪನೆಯ ಆಹ್ಲಾದಕರ ಗಾಳಿಯನ್ನು ಮೊದಲ ಬಾರಿ ರಾಜಸ್ಥಾನದಲ್ಲಿ ಮನದುಂಬಿ ಅನುಭವಿಸಿದೆವು.
ಹೀಗೆ ಬೆಟ್ಟಗಳನ್ನು ಏರಿಳಿಯುತ್ತ…
ವಿಧ: ಬ್ಲಾಗ್ ಬರಹ
July 12, 2015
ಇಂದು ಬೇಳಿಗ್ಗೆ ನನ್ನ ಪರಿಚಿತ ಸ್ನೇಹಿತರಾದ ರಮೇಶ ಕಾಮತರು ಫೋನ್ ಮಾಡಿ ಇಂದಿನ ದಿನ ಪತ್ರಿಕೆ ನೋಡಿದಿರಾ ಎಂದು ಕೇಳಿದರು. ಹೌದು ಏನು ವಿಶೇಷ ಎಂದು ಕೇಳಿದೆ. ಹಾಲಿವುಡ್ ನಟ ಓಮಾರ್ ಶಾರೀಫ್ ತೀರಿಕೊಂಡ ಸುದ್ದಿ ಬಂದಿದೆ ಎಂದರು. ಇಲ್ಲ ನಾನು ಗಮನಿಸಿಲ್ಲ ಎಂದೆ. ಒಂದು ಪುಟದಲ್ಲಿ ಸಣ್ಣದಾಗಿ ಸುದ್ದಿ ಪ್ರಕಟಗೊಂಡಿದೆ ಎಂದರು. ತಕ್ಷಣವೆ ಪತ್ರಿಕೆಯ ಪುಟ ತಿರುಗಿಸಿ ನೋಡಿದೆ. ಒಂದು ಸಣ್ಣ ಕಾಲಂನಲ್ಲಿ ಕೆಲ ಸಾಲುಗಳಲ್ಲಿ ಆತನ ನಿಧನದ ಸುದ್ದಿ ಪ್ರಕಟಗೊಂಡಿತ್ತು. ವೇಗದ ಇಂದಿನ ಹೊಸ ಯುಗದಲ್ಲಿ…
ವಿಧ: ರುಚಿ
July 11, 2015
ಒಂದು ದೊಡ್ಡ ತೋತಾಪುರಿ ಮಾವಿನ ಕಾಯನ್ನು [ಹಸಿರು ಸಿಪ್ಪೆ ಇರಬೇಕು] ತೊಳೆದು ಸಿಪ್ಪೆ ತೆಗೆಯಿರಿ. ಒಳಗಿನ ಕಾಯಿಯನ್ನು ವಾಟೆಯಿಂದ ಬೇರ್ಪಡಿಸಿ ತುರಿಯಿರಿ. ಒಂದು ದಪ್ಪ ತಳದ ಪಾತ್ರೆಯಲ್ಲಿ ತುರಿದ ಕಾಯನ್ನು ಹಾಕಿ ಹತ್ತು ನಿಮಿಷ ಬಾಡಿಸಿ. ನಂತರ ಮಾವಿನ ತುರಿಯಷ್ಟೇ ಅಳತೆಯಲ್ಲಿ ಸಕ್ಕರೆಯನ್ನು ಸೇರಿಸಿ. ಸುಮಾರು ಮೂವತ್ತು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಆಗಾಗ ಕೈಯಾಡಿಸುತ್ತಾ ಬೇಯಿಸಿ. ಮಿಶ್ರಣವು ಪಾತ್ರೆಯ ತಳವನ್ನು ಬಿಡಲು ಆರಂಭಿಸುತ್ತಿದ್ದಂತೆಯೇ ಒಂದು ಚಿಟಿಕೆ ಉಪ್ಪು ಸೇರಿಸಿ . ಪಾತ್ರೆಯನ್ನು…