ವಿಧ: Basic page
December 08, 2007
ಹಳೆಯ ನೆನಪೇ
ಚುಚ್ಚದಿರು ಮತ್ತೆ ಮತ್ತೆ
ಮರೆಯಲೆಂದೇ ನಿನ್ನ
ಸೋತಿಹೆನು ಪ್ರತಿದಿನ
ಕಹಿಯಾದ ಘಟನೆಗಳ
ಹಳೆಯ ಪುಟಗಳಲಿ
ಮುಚ್ಚಿಟ್ಟು ಆಳದಲಿ
ಮತ್ತೆ ಎದ್ದು ಬರದಿರಲೆಂದು
ಹತ್ತಾರು ವರುಷಗಳಿಂದ
ಹಲವು ಊರುಗಳದಾಟಿ
ನಿತ್ಯ ಹಸಿರನು ಹೊತ್ತು
ನಿನ್ನ ಮರೆಯಲೆಂದೇ
ನಿನ್ನ ತೊರೆಯಲು ನಾ
ಮರಳಿ ಯತ್ನವ ಮಾಡೆನು
ಇರುವೆ ನಿನ್ನ ಜೊತೆಗೇ
ನಾ ಮರೆಯಾಗುವವರೆಗೆ
ವಿಧ: Basic page
December 08, 2007
- ಚಿಂತೆ... -
ಗೆಳತಿ...."
ಭಾರತದ ಜನಸಂಖ್ಯೆ ನೂರುಕೋಟಿ
ದಾಟಿತು ಎಂಬ ಚಿಂತೆಯೇ...
ಅಥವಾ ಅದರಲ್ಲಿ
ನಮ್ಮದಿಲ್ಲ ಒಂದು ಮಗು
ಎಂಬ ಚಿಂತೆಯೇ ....?
ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.
ವಿಧ: Basic page
December 08, 2007
ಬದುಕಿಗಾಗಿ...
ಸಮಯ ನೀಡಿ
ಉಳಿವಿಗಾಗಿ...
ಭೇದ ಭಾವ ಮರೆಸಿ
ಒಳಿತಿಗಾಗಿ...
ಎಚ್ಚರಿಕೆ ವಹಿಸಿ
ಬದುಕಿಗಾಗಿ...
ಜಾಗ್ರತಿ ಮೂಡಿಸಿ
"ಎಡ್ಸ್" ಹರಡದಂತೆ ಮುಗ್ಧ ಜನರಿಗಾಗಿ...
("ಎಡ್ಸ್‍ನ್ನು ಅಳಿಸಿ; ದೇಶವನ್ನು ಉಳಿಸಿ")
ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.
ವಿಧ: Basic page
December 08, 2007
- ಬಾ ಗೆಳತಿ... -
ಸೊಂಪಾದ ಗಿಡದಲ್ಲಿ ಹೂವೊಂದು ಅರಳಿ
ಕೆದಡಿದ ಕೆಸರಲ್ಲಿ ಕಮಲವೊಂದು ಅರಳಿ
ಬಾಳೆಂಬ ಮನದಲ್ಲಿ ಪ್ರೀತಿ ಬೀಜವನ್ನು ಬಿತ್ತಿ
ಒಲವೆಂಬ ಹಾದಿಯಲಿ ಹ್ರದಯ ರಾಗವನ್ನು ಮೀಟಿ
ತನುವೆಂಬ ಲತೆಗೆ ನಿನ್ನಾಸರೆಯೊಂದಿರಲು
ಒಂಟಿ ಜೀವನದ ಕತ್ತಲ ಬಾಳಿಗೆ ಬೆಳದಿಂಗಳ
ಶಶಿಯಾಗಿ ಬಾ ಗೆಳತಿ..........
:ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.
ವಿಧ: Basic page
December 08, 2007
ನನ್ನ ಪ್ರೀತಿಸಲು
ಇಲ್ಲಾ ದ್ವೇಷಿಸಲು
ಗುರುತಿಸಲು ಇಲ್ಲಾ
ಗುರುತಿಸದಿರಲು
ಬೆನ್ನು ತಟ್ಟಲು ಇಲ್ಲ
ಅದಕೆ ಚೂರಿ ಇಡಲು
ನನ್ನ ಒಪ್ಪಲು
ಇಲ್ಲಾ ಹೊರತಬ್ಬಲು
ಕೊನೆಗೆ ಬದುಕಲು
ಇಲ್ಲಾ ಸಾಯಲು
ದಯೆತೋರಿ ಒಂದು
ಅವಕಾಶ ನೀಡಿ
ಕೂಗುವೆನು ಎಲ್ಲರನು ಮನುಕುಲಕೆ
ಜಾತಿ ಮತಬೇಧವಿರದೆಡೆಗೆ
ರಾಗ ದ್ವೇಷಗಲಿಲ್ಲದೆಡೆಗೆ
ಪ್ರೀತಿಯಸಾಗರದೆಡೆಗೆ
ವಿಧ: Basic page
December 08, 2007
ಏಕತಾನತೆಯ ಭೂತ
ಕಾಡುತಿಹುದು ಸತತ
ಬೆನ್ನತ್ತಿ ಬರುತಿದೆ
ನೊಂದ ನನ್ನ ಬಿಡದೆ
ಎಷ್ಟೊಂದು ಘೋರ
ಇನ್ನೆಷ್ಟು ದೂರ
ಏಕಾಂಗಿ ನಾನು
ಬಂದೊಮ್ಮೆ ನೋಡ
ಎಲ್ಲೆಲ್ಲು ಕಗ್ಗತ್ತಲು
ಸುತ್ತಿ ಬಳಸಿವೆ ನೂರಾರು
ದ್ವೇಷ ರಾಗದ ತಂತಿಗಳು
ಮೀಟಿದ ಹಾಡ ಕೇಳುವವರಾರು
ನಾ ಹೆಣೆದ ಜೇಡರ ಬಲೆ
ನನ್ನೇ ಮುತ್ತಿದೆ ಇಂದು
ತಿಳಿಯದೆ ಸೇರಿದ ನೆಲೆ
ಯಿಂದ ಹೊರಬರುವೆನು ನಾ ಎಂದು
ಬಿಡುಗಡೆಯ ಕೋರಿ
ಕೂಗುವೆನು ಪ್ರತಿಸಾರಿ
ಬಿಟ್ಟು ಬಂದವರನು
ನಾ ಎಂದು ಸೇರುವೆನು
ವಿಧ: ಬ್ಲಾಗ್ ಬರಹ
December 08, 2007
ಹುಟ್ಟು ಅಲೆಮಾರಿಯಾದಂತಹ ನಾನು. ಕಣ್ಣಿಗೆ ಕಂಡಿದ್ದು ಮನಸ್ಸಿಗೆ, ನಾಟಿದ್ದು ನನ್ನ ಕ್ಯಾಮೆರಾ ಕಣ್ಣಿನಲ್ಲಿ ಬಂಧಿಸಿದ್ದೇನೆ.
ವಿಧ: ಬ್ಲಾಗ್ ಬರಹ
December 08, 2007
ಮೂಲ : Denis R. Soreng
(.........)
ಎಂದಿನಂತೆ ನಾನು ಹಾವ್ಡಾ ಸ್ಟೇಸನ್ ತಲುಪಿದಾಗ ಸಂಜೆಯ ಮಬ್ಬುಗತ್ತಲು ಕವಿದಿತ್ತು. ಸ್ಟೇಸನ್ ಇಡೀ ದಿನವೆಲ್ಲ ದುಡಿದು ಮನೆಗೆ ಹೋಗಲು ಹಾತೊರೆಯುತ್ತಿದ್ದ ದೇಹ, ಮನಸ್ಸುಗಳಿಂದ ಗಿಜಿಗುಡುತ್ತಿತ್ತು. ನನಗೆ ಮನೆಗೆ ಹೋಗಲು ಒಂಚೂರೂ ಮನಸ್ಸಿರಲಿಲ್ಲ. ನನ್ನ ಗಂಡ,ನನ್ನ ನಡುವೆ ಪ್ರೀತಿ ಅನ್ನುವದು ಸತ್ತು ಮಲಗಿತ್ತು. ನಾವಿಬ್ಬರೂ ಪ್ರೀತಿಯಿಂದ ಮಾತಾಡಿ ವರುಸಗಳೇ ಆಗಿದ್ದವು. ಆಪೀಸಿನಲ್ಲಿ ನಡಿಯುವ ಲಗು ಹಾಸ್ಯಗಳೇ ನನ್ನ ನೀರಸ ಜೀವನಕ್ಕೆ ತುಸು ಜೀವ…
ವಿಧ: ಬ್ಲಾಗ್ ಬರಹ
December 08, 2007
ಮೂಲ : Denis R. Soreng
(.........)
ಎಂದಿನಂತೆ ನಾನು ಹಾವ್ಡಾ ಸ್ಟೇಸನ್ ತಲುಪಿದಾಗ ಸಂಜೆಯ ಮಬ್ಬುಗತ್ತಲು ಕವಿದಿತ್ತು. ಸ್ಟೇಸನ್ ಇಡೀ ದಿನವೆಲ್ಲ ದುಡಿದು ಮನೆಗೆ ಹೋಗಲು ಹಾತೊರೆಯುತ್ತಿದ್ದ ದೇಹ, ಮನಸ್ಸುಗಳಿಂದ ಗಿಜಿಗುಡುತ್ತಿತ್ತು. ನನಗೆ ಮನೆಗೆ ಹೋಗಲು ಒಂಚೂರೂ ಮನಸ್ಸಿರಲಿಲ್ಲ. ನನ್ನ ಗಂಡ,ನನ್ನ ನಡುವೆ ಪ್ರೀತಿ ಅನ್ನುವದು ಸತ್ತು ಮಲಗಿತ್ತು. ನಾವಿಬ್ಬರೂ ಪ್ರೀತಿಯಿಂದ ಮಾತಾಡಿ ವರುಸಗಳೇ ಆಗಿದ್ದವು. ಆಪೀಸಿನಲ್ಲಿ ನಡಿಯುವ ಲಗು ಹಾಸ್ಯಗಳೇ ನನ್ನ ನೀರಸ ಜೀವನಕ್ಕೆ ತುಸು ಜೀವ…
ವಿಧ: ಬ್ಲಾಗ್ ಬರಹ
December 07, 2007
ಕಳೆದ ತಿಂಗಳು ಕಡಿಮೆ ಸಮಯದಲ್ಲೇ ಬನಶಂಕರಿಯ ಬಾಡಿಗೆ ಮನೆ ಖಾಲಿ ಮಾಡಿ ಹೊಸತೊಂದು ಬಾಡಿಗೆ ಮನೆಗೆ ಹೋಗುವ ಸನ್ನಿವೇಶ ಎದುರಾಯಿತು. ಹೆಚ್ಚು ಕಾಲ ಬಾಡಿಗೆ ಮನೆಗಳಲ್ಲೇ ಇದ್ದದ್ದರಿಂದ ಮನೆ ಬದಲಾಯಿಸುವುದು, ಸಾಮಾನು ಸಾಗಿಸುವುದು ಈಗ ಕಷ್ಟವೆನಿಸುವುದಿಲ್ಲ. ಕಷ್ಟವಾಗುವುದು ಹೊಸ ಜಾಗದಲ್ಲಿ ಇಂಟರ್ನೆಟ್ ಕನೆಕ್ಷನ್ ತೆಗೆದುಕೊಳ್ಳುವುದು!
ಹಿಂದಿದ್ದ ಮನೆಯಲ್ಲಿ ಏರ್ಟೆಲ್ ಬ್ರಾಡ್ ಬ್ಯಾಂಡ್ ಹಾಕಿಸಿಕೊಂಡಿದ್ದೆ. ಬಿ ಎಸ್ ಎನ್ ಎಲ್ ಶಿಫ್ಟ್ ಮಾಡೋದು ತಿಂಗಳುಗಟ್ಟಲೆ ಹಿಡಿಯಬಹುದೆಂದು ಅದರ…