ಎಲ್ಲ ಪುಟಗಳು

ಲೇಖಕರು: olnswamy
ವಿಧ: ಬ್ಲಾಗ್ ಬರಹ
December 05, 2007
'ನಾನು ಮನೇಗೆ ಹೋಗಬೇಕು, ಅಪ್ಪನ ಹತ್ತಿರ ಹೋಗಬೇಕು' ಅಂದಳು. 'ಹೆದರಬೇಡ. ನಿನಗೇನು ತೊಂದರೆ?' ಫಾದರ್ ಸೆರ್ಗಿಯಸ್ ಕೇಳಿದ. 'ಎಲ್ಲವೂ ತೊಂದರೆಯೇ, ಮೈಯೆಲ್ಲ ನೋವು' ಅಂದಳು. ಮುಗಳು ನಗು ತಟ್ಟನೆ ಅವಳ ಮುಖವನ್ನು ಬೆಳಗಿತು. 'ವಾಸಿಯಾಗುತ್ತದೆ, ಪ್ರಾರ್ಥನೆಮಾಡು' ಅಂದ. 'ಪ್ರಾರ್ಥನೆ ಮಾಡಿದರೆ ಏನು ಉಪಯೋಗ? ಬೇಕಾದಷ್ಟು ಪ್ರಾರ್ಥನೆ ಮಾಡಿದ್ದೇನೆ. ಏನೂ ಅಗಿಲ್ಲ' ಮುಗುಳು ನಗುತ್ತಾ ಮಾತನಾಡಿದಳು. 'ನನ್ನ ಪರವಾಗಿ ನೀವು ಪ್ರಾರ್ಥನೆಮಾಡಿ. ನನ್ನ ಮೇಲೆ ಕೈ ಇಡಿ. ಕನಸಿನಲ್ಲಿ ನಿಮ್ಮನ್ನು ಕಂಡಿದ್ದೆ'…
ಲೇಖಕರು: olnswamy
ವಿಧ: ಬ್ಲಾಗ್ ಬರಹ
December 05, 2007
[ಏಳನೆಯ ಅಧ್ಯಾಯ ಮುಂದುವರೆದಿದೆ.] 'ಸರಿ, ಸರಿ, ನಾನೇನೂ ಅವರನ್ನು ಓಡಿಸುತ್ತಾ ಇಲ್ಲ, ದೊಡ್ಡವರ ಹತ್ತಿರ ಹೇಗೆ ಇರಬೇಕು ಎಂದು ಹೇಳುತ್ತಿದ್ದೆ. ಈ ಜನಕ್ಕೆ ಕರುಣೆ ಅನ್ನುವುದೇ ಇಲ್ಲ, ಜೀವ ತಿಂದುಬಿಡುತ್ತಾರೆ. ತಮ್ಮ ಕೆಲಸವಾದರೆ ಸಾಕು, ಬೇರೆಯವರ ಗತಿ ಏನು ಅನ್ನುವ ಯೋಚನೆಯೇ ಇಲ್ಲ. ಏಯ್, ನೀನು, ಎಲ್ಲಿಗೆ ಹೋಗುತ್ತಿದ್ದೀ? ಇವತ್ತು ಮುಗೀತು, ನಾಳೆ ಬಾ ಹೋಗು.' ವ್ಯಾಪಾರಿಯಂತೂ ಎಲ್ಲರನ್ನೂ ಕಳಿಸಿಬಿಟ್ಟ. ಎಲ್ಲವೂ ವ್ಯವಸ್ಥಿತವಾಗಿರಬೇಕು ಅನ್ನುವ ಆಸೆ, ಜನರಮೇಲೆ ದಬ್ಬಾಳಿಕೆ ಮಾಡುವುದರಿಂದ ಬರುವ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
December 05, 2007
ಏಳು ಕೆಲವು ವಾರಗಳಿಂದ ಫಾದರ್ ಸೆರ್ಗಿಯಸ್‌ನನ್ನು ಒಂದೇ ಯೋಚನೆ ನಿರಂತರವಾಗಿ ಕಾಡುತ್ತಿತ್ತು: ನಾನು ಈಗಿರುವ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಸರಿಯೇ? ಇದು ನನ್ನ ಇಚ್ಛೆಯಿಂದ ದೊರೆತದ್ದಲ್ಲ, ಬದಲಾಗಿ ಆರ್ಕಿಮಾಂಡ್ರೈಟ್* ಮತ್ತು ಮಠದ ಗುರುಗಳ ಇಚ್ಛೆಯಂತೆ ದೊರೆತಿರುವ ಸ್ಥಾನ ಇದು. ನಾನು ಮಾಡುತ್ತಿರುವುದು ಸರಿಯೇ ಅನ್ನುವ ಯೋಚನೆ ಅದು. ಹದಿನಾಲ್ಕು ವರ್ಷದ ಹುಡುಗನ ಕಾಯಿಲೆ ವಾಸಿಯಾದಾಗಿನಿಂದ ಅವನಿಗೆ ಈ ಸ್ಥಾನಮಾನ ದೊರೆತಿದ್ದವು. ಅಂದಿನಿಂದ ತಿಂಗಳು, ವಾರ, ದಿನ ಕಳೆದಂತೆಲ್ಲಾ ಅಂತರಂಗದ ಬದುಕು…
ಲೇಖಕರು: olnswamy
ವಿಧ: ಬ್ಲಾಗ್ ಬರಹ
December 05, 2007
ಆರು ಫಾದರ್ ಸೆರ್ಗಿಯಸ್ ಇನ್ನೂ ಏಳು ವರ್ಷಗಳನ್ನು ಏಕಾಂತವಾಸದಲ್ಲಿ ಕಳೆದ. ಮೊದಮೊದಲು ಅವನನ್ನು ಕಾಣಲು ಬಂದ ಜನ ತಂದುಕೊಡುತ್ತಿದ್ದ ಟೀ, ಸಕ್ಕರೆ, ಬಿಳಿಯ ಬ್ರೆಡ್ಡು, ಹಾಲು, ಬಟ್ಟೆ, ಸೌದೆಗಳನ್ನು ಸ್ವೀಕರಿಸುತ್ತಿದ್ದ. ಆದರೆ ಕಾಲ ಕಳೆದಂತೆ ಮತ್ತೂ ನಿಷ್ಠುರವಾಗಿ ಸರಳವಾಗಿ ಬದುಕತೊಡಗಿದ. ಸುಖಕ್ಕೆ ಕಾರಣವಾಗುವ ಎಲ್ಲವನ್ನೂ ನಿರಾಕರಿಸಲು ತೊಡಗಿದ. ಕೊನೆಗೆ ಜನ ತಂದುಕೊಡುವ ರೈ ಬ್ರೆಡ್ಡನ್ನು ಮಾತ್ರ ವಾರಕ್ಕೆ ಒಂದು ಸಲ ತೆಗೆದುಕೊಳ್ಳುತ್ತಿದ್ದ. ಅವರು ತಂದ ಮಿಕ್ಕೆಲ್ಲವನ್ನೂ ತನ್ನ ಬಳಿಗೆ ಬಂದ…
ಲೇಖಕರು: srinivasps
ವಿಧ: Basic page
December 05, 2007
ಓ ನಲ್ಲ... -~-~-~- ಎಲ್ಲಿ ಹೋದೆಯೋ, ಓ ನನ್ನ ನಲ್ಲ...! ನೀನಿಲ್ಲದೇ, ಸೊರಗಿದೆ ನನ್ನ ಗಲ್ಲ... ಹೋಗಿರುವೆ ಎತ್ತ? ಕದ್ದು ನನ್ನಯ ಚಿತ್ತ... ಬೇಗ ಬಾರೋ ನನ್ನಿನಿಯ, ನನ್ನ ಗುಂಡಿಗೆಯೊಡೆಯ... ಸೊರಗಿ ಸಾಯುತ್ತಿದೆ ನನ್ನ ಗಲ್ಲ ಬಾ...ಮತ್ತೆ ಉಣಿಸೆನಗೆ, ಬೆಲ್ಲ, ಮುತ್ತ ಸವಿ ಬೆಲ್ಲ... --ಶ್ರೀ
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 05, 2007
ಹಲವಾರು ವರ್ಷಗಳ ಹಿಂದೆ ಸಿಡ್ನಿಗೆ ಅಮೇರಿಕಾದ ೨೫ ವರ್ಷದ ತರುಣಿಯೊಬ್ಬಳು ಬಂದಿದ್ದಳು. ತನ್ನ ಡಾಕ್ಯುಮೆಂಟರಿವೊಂದನ್ನು ನಮಗೆ ತೋರಿಸಿದಳು. (ಅವಳ ಮತ್ತು ಅವಳ ಚಿತ್ರದ ಹೆಸರು ಈಗ ಮರೆತಿದ್ದೇನೆ) ಆಕೆಯ ಚಿತ್ರ ಅಮೇರಿಕಾ, ಕ್ಯಾನಡಾದ ಡಾಕ್ಯುಮೆಂಟರಿಕಾರರ ಬಗ್ಗೆ. ಕಾವ್ಯಾತ್ಮಕವಾಗಿತ್ತು. ಅವರ ಯೋಚನಾಕ್ರಮ ಮತ್ತು ಕೆಲಸದ ಕ್ರಮಗಳನ್ನು ಚಿತ್ರವಾಗಿಸಿದ್ದಳು. ಆ ಚಿತ್ರವನ್ನು ಮಾಡುವಾಗ ಆಕೆ ಮೈಕಲ್ ಮೋರ್‌ನನ್ನು ಮಾತಾಡಿಸಲು ಶತ ಪ್ರಯತ್ನ ಮಾಡಿದ್ದಳು. "ಆ ಬಿಲ್ಡಿಂಗಿನ, ಇಷ್ಟನೇ ಮಹಡಿಗೆ ಬಾ" ಎಂದು…
ಲೇಖಕರು: veenadsouza
ವಿಧ: ಬ್ಲಾಗ್ ಬರಹ
December 05, 2007
ಮೈ ಜುಂ ಎನ್ನಿಸುವ ಕ್ರಿಸ್ಮಸ್ ಮತ್ತೆ ಬರುತ್ತಿದೆ. ಇದಕ್ಕಾಗಿಯೇ ವಿಶ್ವದಲ್ಲೆಡೆ ಕ್ರಿಸ್ಮಸ್ ಗಾಗಿನ ತಯಾರಿ ಭರ್ಜರಿ ನಡೆಯುತ್ತಿದೆ. ಗೋದಲಿ ನಿರ್ಮಾಣ, ಕ್ರಿಸ್ಮಸ್ ಟ್ರೀಗೆ ಬೇಕಾಗುವ ಅಲಂಕಾರಿಕ ವಸ್ತುಗಳ ಖರೀದಿ, ಕ್ರಿಸ್ಮಸ್ ಸಂದೇಶಗಳುಳ್ಳ ಸಂದೇಶಗಳ ರವಾನೆ, ಕ್ರಿಸ್ಮಸ್ ಸ್ನೇಹಿತರಿಗಾಗಿ ಉಡುಗೊರೆಯ ಖರೀದಿ, ನಕ್ಷತ್ರಗಳ ತಯಾರಿ ಗಡದ್ದಾಗಿಯೇ ನಡೆಯುತ್ತಿದೆ. ಮಂಗಳೂರಿನಲ್ಲಂತೂ ಕ್ರಿಸ್ಮಸ್ ಗಾಗಿ ಕುಸ್ವಾರ್ ತಯಾರಿಸುತ್ತಾರೆ. ಕ್ರಿಸ್ಮಸ್ ತಿಂಡಿಯನ್ನು ಇಲ್ಲಿನ ಜನ ಪ್ರೀತಿಯಿಂದ ಕುಸ್ವಾರ್…
ಲೇಖಕರು: veenadsouza
ವಿಧ: ಬ್ಲಾಗ್ ಬರಹ
December 05, 2007
ಮೈ ಜುಂ ಎನ್ನಿಸುವ ಕ್ರಿಸ್ಮಸ್ ಮತ್ತೆ ಬರುತ್ತಿದೆ. ಇದಕ್ಕಾಗಿಯೇ ವಿಶ್ವದಲ್ಲೆಡೆ ಕ್ರಿಸ್ಮಸ್ ಗಾಗಿನ ತಯಾರಿ ಭರ್ಜರಿ ನಡೆಯುತ್ತಿದೆ. ಗೋದಲಿ ನಿರ್ಮಾಣ, ಕ್ರಿಸ್ಮಸ್ ಟ್ರೀಗೆ ಬೇಕಾಗುವ ಅಲಂಕಾರಿಕ ವಸ್ತುಗಳ ಖರೀದಿ, ಕ್ರಿಸ್ಮಸ್ ಸಂದೇಶಗಳುಳ್ಳ ಸಂದೇಶಗಳ ರವಾನೆ, ಕ್ರಿಸ್ಮಸ್ ಸ್ನೇಹಿತರಿಗಾಗಿ ಉಡುಗೊರೆಯ ಖರೀದಿ, ನಕ್ಷತ್ರಗಳ ತಯಾರಿ ಗಡದ್ದಾಗಿಯೇ ನಡೆಯುತ್ತಿದೆ. ಮಂಗಳೂರಿನಲ್ಲಂತೂ ಕ್ರಿಸ್ಮಸ್ ಗಾಗಿ ಕುಸ್ವಾರ್ ತಯಾರಿಸುತ್ತಾರೆ. ಕ್ರಿಸ್ಮಸ್ ತಿಂಡಿಯನ್ನು ಇಲ್ಲಿನ ಜನ ಪ್ರೀತಿಯಿಂದ ಕುಸ್ವಾರ್…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
December 05, 2007
ನಾನು ಇತ್ತೀಚಿಗೆ ತಿರುಳ್ಗನ್ನಡ ನಾಡು(ಬಾದಾಮಿ,ಐಹೊಳೆ ಮತ್ತು ಪಟ್ಟದಕಲ್ಲು) ಮತ್ತು ಬೇಂದ್ರೆ ನಾಡು(ಧಾರವಾಡ)ಗಳಲ್ಲಿ ಸುತ್ತಾಡಿದಾಗ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಎರಡು ವಿಶ್ಯಗಳು ಇವು ಈ ಕಪ್ಪೆ ಅರಬಟ್ಟ ಯಾರು? (ಬಾದಾಮಿಯಲ್ಲಿ ಕಪ್ಪೆ ಅರಬಟ್ಟನ ಶಾಸನ ಇದೆ) ಅರವಟ್ಟಿಗೆ ಅಂದ್ರೆ ಏನು? ( ಧಾರವಾಡದ ಸುಬಾಸ್ ರೋಡಿನಲ್ಲಿ, ಪೊಲೀಸ್ ಟಾಣೆ ಎದುರು ಈ ಅರವಟ್ಟಿಗೆ ಇದೆ). ಇವೆರಡನ್ನು ಇಲ್ಲಿ ಚನ್ನಾಗಿ ಬಿಡಿಸಿ ಹೇಳಲಾಗಿದೆ(ಬರೆದಿರುವವರು: ಶಿಕಾರಿಪುರ ಕೆ. ಹರಿಹರೇಶ್ವರ,ಸರಸ್ವತೀಪುರಂ, ಮೈಸೂರು…
ಲೇಖಕರು: shekarsss
ವಿಧ: Basic page
December 05, 2007
ಸಕಲ ಬಲ್ಲವನೆಂಬವರ ಅರಿವಿಲ್ಲದೆ ನುಡಿವವರ ಎಲ್ಲರ ನಡಿಗೆ ಕತ್ತಲೆಯೆಡೆಗೆ ಭಾವಗಳ ಬೆಸೆಯದವ ಕನಸುಗಳ ಬೆನ್ನತ್ತದವ ಆಸೆಯ ಕುದುರೆಯನೇರಿ ಮದ, ಮತ್ಸರಗಳ ತೋರಿ ನೆರೆಹೊರೆಯ ಪರಿವಿರದೆ ಜೊತೆಗಾಗಿ ಯಾರಿರದೆ ಸಾಗುವ ನಡಿಗೆ ಕತ್ತಲೆಯೆಡೆಗೆ