ಎಲ್ಲ ಪುಟಗಳು

ಲೇಖಕರು: rajeshnaik111
ವಿಧ: ಬ್ಲಾಗ್ ಬರಹ
December 09, 2007
ಮುಲೆವಾ ಧಾರ್ಮಿಚಂದ್: ರಾಜಸ್ಥಾನದಿಂದ ವಲಸೆ ಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡ ಎರಡನೇ ತಲೆಮಾರಿನ ಹುಡುಗ ಧಾರ್ಮಿಚಂದ್. ೧೫ನೇ ವಯಸ್ಸಿನಲ್ಲೇ ಅಂಡರ್-೧೯ ಭಾರತ ತಂಡವನ್ನು ಪ್ರತಿನಿಧಿಸಿ ಎದುರಾಳಿ ತಂಡಗಳನ್ನು ತನ್ನ ಮಾಂತ್ರಿಕ ಆಫ್ ಸ್ಪಿನ್ ದಾಳಿಯಲ್ಲಿ ನುಚ್ಚುನೂರು ಮಾಡಿದವರು ಧಾರ್ಮಿಚಂದ್. ಕರ್ನಾಟಕದ ಪರವಾಗಿ ಎಲ್ಲಾ ವಯೋಮಿತಿಯ ತಂಡಗಳಲ್ಲಿ ಆಡಿದ ಧಾರ್ಮಿಚಂದ್ ಭರ್ಜರಿ ಯಶಸ್ಸು ಕಂಡರು. ಯಾವುದೇ ತರಹದ ಪಿಚ್ ಇರಲಿ, ಅವುಗಳ ಮೇಲೆ ಧಾರ್ಮಿಚಂದ್ ಪಡೆಯುತ್ತಿದ್ದ ಸ್ಪಿನ್ ಕಂಡು ಈರಪ್ಪಳ್ಳಿ…
ಲೇಖಕರು: cmariejoseph
ವಿಧ: Basic page
December 09, 2007
ನಾನು ರಾಮಸುಬ್ಬ. ಹೇಳಿಕೇಳಿ ರಾಯಲಸೀಮೆಯ ಬೆಂಗಾಡಿನ ಒಂದು ಕುಗ್ರಾಮ ನಮ್ಮೂರು. ಈ ಬಡಹಳ್ಳಿಯ ಸರ್ಕಾರೀ ಶಾಲೆಯಲ್ಲಿನ ಏಕೈಕ ಶಿಕ್ಷಕನಾಗಿ ನಾನು ದುಡಿಯುತ್ತಿದ್ದೇನೆ. ಶಿಕ್ಷಣ ನೀಡುವುದು ನನ್ನ ವೃತ್ತಿ ಮಾತ್ರವಲ್ಲ ಅದು ನನ್ನ ಜೀವನದ ಧರ್ಮ. ಜೀವನದಲ್ಲಿ ಓದು ತುಂಬಾ ಮುಖ್ಯ. ಓದದ ಬಾಯದು ತಾನ್ ಮೇದಿನಿಯೊಳ್ ಬಿಲದ ಬಾಯ್ ಎಂದು ಹಿರಿಯರಾಡಿದ ಮಾತಿದೆಯಲ್ಲವೇ? ನನ್ನ ಈ ಹಳ್ಳಿಯ ಮಕ್ಕಳು ವಿದ್ಯಾವಂತರಾಗಿ ಹಳ್ಳಿಯ ಹೆಸರನ್ನು ಜಗದ್ವಿಖ್ಯಾತಗೊಳಿಸಬೇಕು ಎಂಬುದು ನನ್ನ ಬಯಕೆ. ಜೀವನೋಪಾಯಕ್ಕಾಗಿ ನನಗೆ…
ಲೇಖಕರು: cmariejoseph
ವಿಧ: Basic page
December 09, 2007
ಗೋರಖ್ ಪುರಕ್ಕೆ ಹೋಗಬೇಕು, ಸಿದ್ಧರಾಗಿ ಎಂದು ಮೇಲಧಿಕಾರಿಗಳಿಂದ ಕರೆ ಬಂದಾಗ ಮನಸ್ಸು ಗೋರಖ ಎಂಬ ಹೆಸರಿನ ಬಗ್ಗೆ ಚಿಂತಿಸತೊಡಗಿತು. ಉತ್ತರ ಭಾರತೀಯರು ಲಕ್ಷ ಎನ್ನುವ ಕಡೆ ಲಖ ಎಂದು ಉಚ್ಛರಿಸುತ್ತಾರಷ್ಟೆ, ಹಾಗಿದ್ದಲ್ಲಿ ಗೋರಖ, ಗೋರಕ್ಷ ಇರಬಾರದೇಕೆ ಎಂದೆನ್ನಿಸಿತು.ಗೋರಕ್ಷ ಎಂದಾಕ್ಷಣವೇ ನಮ್ಮ ವಚನ ಚಳವಳಿಯ ಅಲ್ಲಮ ನೆನಪಿಗೆ ಬಂದ. ಜೈನ ಧರ್ಮದ ಬಾಹುಳ್ಯ ಹೆಚ್ಚಿ, ಶೈವ ಸಿದ್ಧಾಂತಗಳು ಮೂಲೆಗುಂಪಾಗಿ ಅಸಹನೀಯವೆನಿಸತೊಡಗಿದ್ದ ಕಾಲದಲ್ಲಿ ತನ್ನ ಸನ್ನಡತೆಯ ನಿಮಿತ್ತ ಜನಪ್ರಿಯನಾಗಿದ್ದ ಒಬ್ಬ ಸರ್ಕಾರಿ…
ಲೇಖಕರು: cmariejoseph
ವಿಧ: Basic page
December 09, 2007
ಐರೋಪ್ಯನಾಡುಗಳಿಂದ ಆಗಮಿಸಿ ಅಂದು ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಿಷನರಿಗಳು ಪ್ರತಿವರ್ಷವೂ ತಮ್ಮ ಸಾಧನೆಗಳ ಕುರಿತಂತೆ ತಮ್ಮ ವರಿಷ್ಠರಿಗೆ ವಿಸ್ತೃತ ವರದಿಗಳನ್ನು ಕಳಿಸಬೇಕಾಗಿತ್ತು. ಆ ವರದಿಗಳು ಪ್ರಚಾರಕಾರ್ಯದ ಸಾಧ್ಯಾಸಾಧ್ಯತೆ, ಅದಕ್ಕಿರುವ ವಿಘ್ನಗಳು, ಅಂದಿನ ಸಾಮಾಜಿಕ ಪರಿಸ್ಥಿತಿ, ಸಮಕಾಲೀನ ರಾಜಾಳ್ವಿಕೆಗಳು, ಯುದ್ಧಗಳು, ಜನರ ಮನೋಭಾವ, ಜೀವನಶೈಲಿ, ಆಚಾರವಿಚಾರ, ಸಂಸ್ಕೃತಿ, ಅಂದಿನ ರಾಜರುಗಳ ಏಳುಬೀಳು ಹಾಗೂ ಅವರ ಬಲಾಬಲಗಳ ಬಗ್ಗೆ ನಿಷ್ಪಕ್ಷಪಾತವಾದ ಕನ್ನಡಿ ಹಿಡಿದಿವೆ.…
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
December 09, 2007
ಕ್ರಿಮಿ,ಕೀಟ,ಪಕ್ಷಿ,ಪ್ರಾಣಿಗಳನ್ನು ಸೃಷ್ಠಿ ಮಾಡುವಾಗ ಬ್ರಹ್ಮನು ಹೆಚ್ಚಿನ ಸೌಂದರ್ಯವನ್ನು ಗಂಡಿಗೇ ಕೊಟ್ಟನು. ಅದೇ ದೇವತೆಗಳ ಮತ್ತು ಮಾನವರ ಸೃಷ್ಠಿಯಲ್ಲಿ ತಪ್ಪಿದ. ಸ್ವತಃ ತನಗೆ ನಾಲ್ಕು ತಲೆ, ವಿಷ್ಣುವನ್ನು ನೀಲ,ಶಿವನಿಗೆ ಹಣೆಯಲ್ಲಿ ಕಣ್ಣು, ‘ಅಗಲ ಕಿವಿ,ಸಣ್ಣಕಣ್ಣು’ಗಣೇಶ,ಆರು ಮುಖದ ಸುಬ್ರಹ್ಮಣ್ಯ... .,-ಸ್ತ್ರೀದೇವತೆಗಳೆಲ್ಲಾ ಅಪ್ರತಿಮ ಸುಂದರಿಯರು.(ಕಾಳಿ ಇತ್ಯಾದಿ ಅವತಾರಗಳನ್ನು ಬಿಡಿ.) ಯಾಕೆ…
ಲೇಖಕರು: prasadbshetty
ವಿಧ: Basic page
December 09, 2007
ಕೆಲವು ಆಲೋ(ಯೋ)ಚನೆಯ ಹನಿ" ಗಳು...ಇದಕ್ಕೆ ಒಂದು ಶೀರ್ಷಿಕೆ ಹುಡುಕಿ ಪ್ಲೀಸ್.... ~ ವಿಧುರ ವಿಧವೆಯನ್ನು ಮದುವೆಯಾದರೆ.....ಬಾಳು ಮಧುರವಾಗಬಹುದಲ್ಲವೇ.... ~ ಈಗಿನ ಕೆಲವು ಹುಡುಗಿಯರು ಬಟ್ಟೆ ಧರಿಸುತ್ತಾರೆ..... ಅಂಗಪ್ರದರ್ಶನ ಗ್ಯೆಯಲು!!!.. ~ ಮನದಾಳದಲ್ಲಿನ ಅಪರಿಚಿತ ಶಬ್ಧಗಳ ತುಡಿತ.....ಪರಿಚಿತ ಶಬ್ಧಗಳ ತನಿಖೆ...ವಿಚಾರಣೆಯಾಗಿರಬಹುದೇ....(?) ~ ಯೋಚನೆಗಳು ಎಲ್ಲಿಂದಲೋ ತಂಗಾಳಿಯಂತೆ ಉದ್ಭವಿಸಿ.....ಎತ್ತಲೋ ಸಾಗಿವೆ ಬಿರುಗಾಳಿಯಂತೆ..... ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.
ಲೇಖಕರು: prasadbshetty
ವಿಧ: Basic page
December 09, 2007
! ಹನಿಗವನಗಳು ! ಪರೀಕ್ಷೆ... ವಿದ್ಯಾರ್ಥಿಗಳ ಬಾಳಿನ ನಾಳಿನ ನಿರೀಕ್ಷೆ...? !!!ಭಗವಂತ!!! ಜನರನ್ನು ತನ್ನ ವಿಧ ವಿಧವಾದ ವೇಷ ಭೂಷನಗಳಿಂದ ಹೆದರಿಸಿ ಬೆದರಿಸಿ ಕಾಪಾಡುವವ...(?) - ಬಹುಮಾನ... - ಪ್ರೀತಿಯ ಆಟದಲ್ಲಿ ಸೋತ ... ಗೆಳತಿಗೆ ಗೆಳೆಯನು ಕೊಟ್ಟ ಮಗು ! ಎಂಬ ಬಹುಮಾನ... ! ಕುರಿಗಳು ಸಾರ್... ಹುಟ್ಟಿದ್ದು, ಬೆಳೆದದ್ದು ಸಸ್ಯಹಾರಿಯಾಗಿ... ಸತ್ತದ್ದು ಮಾತ್ರ ಮಾಂಸಹಾರಿಗಾಗಿ.... ವಾಲ್ಪಾಡಿ, ಪ್ರಸಾದ್ ಬಿ. ಶೆಟ್ಟಿ, ಫುಣೆ.
ಲೇಖಕರು: anivaasi
ವಿಧ: ಬ್ಲಾಗ್ ಬರಹ
December 09, 2007
ಹಿಂದುಳಿದ ದೇಶಗಳ ಅವಸ್ಥೆಗೆ ಜಾಗತಿಕ ಬಲಿಷ್ಟ ದೇಶಗಳನ್ನು ದೂರುವುದು ಆಂಶಿಕ ಸತ್ಯ ಅಷ್ಟೆ ಎಂದು ಇತ್ತೀಚಿನ [http://www.sampada.net/blog/anivaasi/27/09/2007/5805#comment-12364|ನನ್ನ ಬರಹಕ್ಕೆ ಶ್ರೀಕಾಂತರು ಪ್ರತಿಕ್ರಯಿಸಿದ್ದರು.] ಅದು ನಿಜವೂ ಹೌದು. ಆದರೆ, ಅದು  ಎಷ್ಟಂಶ ಅನ್ನೋದು ಅವರವರ ನಿಲುವಿಗೆ ತಳುಕು ಹಾಕಿಕೊಂಡಿರತ್ತದೆ ಅಲ್ಲವೆ ಎಂದು ಕೇಳಿದ್ದೆ. ಅವರ ಪ್ರತಿಕ್ರಿಯೆ ಬಗ್ಗೆ, ಮತ್ತು ನನ್ನ ಉತ್ತರದ ಬಗ್ಗೆ ಯೋಚಿಸಿದಾಗ ನಾನು ಹಾಗೆ ಯಾಕೆ ಹೇಳಿದೆ ಎಂದು ವಿವರಿಸಬೇಕು,…
ಲೇಖಕರು: ವೈಭವ
ವಿಧ: Basic page
December 08, 2007
ಬರ್ತ-ಮಾಯ್ಸರ ಹರಟೆ ----------- ಮಾಯ್ಸ: ಏನಣ್ಣ, ಬರ್ತಣ್ಣ ಏನ್ ಪತ್ತೇನೆ ಇಲ್ಲ. ಎಲ್ಗೆ ಓಗಿದ್ದಣ್ಣ? ಬರ್ತ:  ಇದ್ಯಾಕಣ್ಣ ನಾನು ನಿಂಗೆ ದೂರುಲಿ ಮಾಡಿರ್ನಿಲ್ವ  ಕಿಸುವೊಳಲಿಂದ. ಯೋಳಿದ್ನಲ್ಲಪ್ಪ ತಿರುಳ್ಗನ್ನಡ ನಾಡು,ಬೇಂದ್ರೆ ನಾಡು ಸುತ್ತಕ್ಕೆ ಹೊಂಟಿವ್ನಿ ಅಂತ. ನೀನೊಳ್ಳೆ ಮಾಯ್ಸ: ಹೂಂ. ಈಗ ಗೆಪ್ತಿ ಬಂತು. ಎಂಗಯ್ತಣ್ಣ ನಮ್ ಪುಲಿಕೇಸಿ ಆಳಿದ ನೆಲ ? ಬರ್ತ: ಚಂದಾಗೈತೆ. ಏನ್ ಗವಿ, ಏನ್ ಗುಡಿಗಳು. ಬದುಕಿದ್ ಮ್ಯಾಕೆ ಒಂದ್ ಕಿತ ನೋಡ್ಲೆ ಬೇಕು ಕಣಣ್ಣ. ಅಂಗೆ ಗವಿಗಳ್ನೇ ಕೊರದ್ಬುಟ್ಟವ್ರೆ…
ಲೇಖಕರು: shekarsss
ವಿಧ: Basic page
December 08, 2007
ಎಂದೋ ಕಲಚಿದಕೊಂಡಿ ಮತ್ತೆ ಕೂಡಿಕೊಂಡಾಗ ಸಂತಸದ ಹೊನಲು ಮುಟ್ಟಿತ್ತು ಮುಗಿಲು ಯಾರ್ಯಾರು ಎಲ್ಲೆಲ್ಲಿ ಏನೇನು ಮಾಡುವರು ಮಾಸಿ ಮರೆಯಾಗಿರುವ ನೆನಪುಳಿಸಿ ಹೊಂಟವರು ಒಮ್ಮೆ ನೋಡಿಬರುವೆ ಇರುವ ಗೆಳೆಯರನೆಲ್ಲ ಕಡೆತನಕ ಹಿಡಿಯುವೆನು ಕೂಡಿರುವ ಕೊಂಡಿಯನು