ವಿಧ: ಚರ್ಚೆಯ ವಿಷಯ
July 29, 2007
ಕಳೆದ ವಾರ ಸಂಪದದಲ್ಲಿ ಹಲವಾರು ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿದೆವು. ಸದಸ್ಯರು ಕಳುಹಿಸಿದ ಸಲಹೆಗಳನ್ನು ಪರಿಶೀಲಿಸಿ ಸಾಧ್ಯವಾದಾಗಲೆಲ್ಲ ಉತ್ತಮಪಡಿಸುವತ್ತ ಗಮನಹರಿಸಿದ್ದೇವೆ. ಕೆಲವು ಬದಲಾವಣೆಗಳು ಎಲ್ಲರಿಗೂ ಹಿಡಿಸದಿರಬಹುದು. ಹಿಡಿಸದಿದ್ದರೆ [:http://sampada.net/contact|ತಪ್ಪದೆ ನಮಗೆ ತಿಳಿಸಿ, ನಿಮ್ಮ ಸಲಹೆ/ಅಭಿಪ್ರಾಯಗಳನ್ನೂ ಕಳುಹಿಸುತ್ತಿರಿ]. ಸಂಪದಕ್ಕಾಗಿ ಕೆಲಸ ಮಾಡುತ್ತಿರುವ ನಾವೆಲ್ಲರೂ ಬಿಡುವಿನ ಸಮಯದಲ್ಲಿ ಈ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಸಲಹೆಗಳನ್ನು…
ವಿಧ: ಚರ್ಚೆಯ ವಿಷಯ
July 28, 2007
ನಮ್ಮ ನಾಡ ಭಾಷೆಯ ಮೇಲೆ ಅಭಿಮಾನ ಖಂಡಿತ ನಮಗಿರಬೇಕು ಒಪ್ಪುತ್ತೇನೆ, ಆದರೆ ಕೆಲಮಟ್ಟಿಗೆ practical ಆಗಿಯೂ ಇರುವುದು ತುಂಬಾ practical ((ಕ್ಷಮಿಸಿ, practicalನ ಕನ್ನಡ ಪದವೇನು?).
ಉದಾಹರಣೆಗೆ ನಡೆದ ಕತೆಯೊಂದನ್ನು ಹೇಳುತ್ತೇನೆ.
ನಮ್ಮ ಮನೆಮಾತು ಕನ್ನಡವಲ್ಲ, ಹಿಂದಿಜಾತಿಯ ಒಂದು ಉಪಭಾಷೆ.
RSS ನಲ್ಲಿ ಒಂದು ಕಾಲದಲ್ಲಿದ್ದ ನನ್ನ ಸೋದರಮಾವ ಕಟ್ಟಾ ಕನ್ನಡ ಹಾಗೂ ಹಿಂದಿ ಅಭಿಮಾನಿ. ತಮ್ಮ ದಸ್ಕತ್ತನ್ನು ಕೂಡಾ ಹಿಂದಿಯಲ್ಲಿ ಮಾಡುವವರು. ತಮ್ಮ ನಾಲ್ಕೂ ಮಕ್ಕಳನ್ನು ಹಟ ಹಿಡಿದು ಕನ್ನಡಶಾಲೆಗೇ…
ವಿಧ: ಬ್ಲಾಗ್ ಬರಹ
July 28, 2007
ಕರ್ನಾಟಕದಲ್ಲಿನ ನಕ್ಸಲೀಯರಿಂದ ಬಂದದ್ದು ಎನ್ನಲಾಗುವ ಇ-ಮೇಯ್ಲ್ ಅದು. ಅದನ್ನು ನಂಬಬಹುದಾದರೆ, ಎರಡು ವಾರಗಳ ಹಿಂದೆ ಮಲೆನಾಡಿನಲ್ಲಿ ಪೋಲಿಸರಿಂದ ಹತ್ಯೆಯಾದವರಲ್ಲಿ ಇಬ್ಬರು ಸಕ್ರಿಯ ನಕ್ಸಲೀಯರು. ಮಿಕ್ಕ ಮೂವರು ಅವರೇ ಹೇಳುವ ಪ್ರಕಾರ ನಕ್ಸಲೀಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ, ಅವರ ಬಗ್ಗೆ ಸಹಾನುಭೂತಿ ಹೊಂದಿದ್ದ ಅಲ್ಲಿನ ಆದಿವಾಸಿ ರೈತರು. ಆ ಐದು ಜನರ ಮರಣದ ನಂತರ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಂದ ನಕ್ಸಲೀಯ ಚಟುವಟಿಕೆಗಳ ಬಗ್ಗೆ ಸುದ್ದಿಗಳು ಬರುತ್ತಲೆ ಇವೆ. ಅಲ್ಲಿ ಮನೆ ದೋಚಿದರು,…
ವಿಧ: ಬ್ಲಾಗ್ ಬರಹ
July 27, 2007
ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ.ಎನ್.ಸೀತಾರಾಂ ನಿರ್ದೇಶನದ ಹಿರಿತೆರೆಯ ಚಿತ್ರ ಮೀರಾ ಮಾಧವ ರಾಘವ ನೋಡಲು ಇಂದು ಪಿ.ವಿ.ಆರ್ ಗೆ 4.20 ರ ಆಟಕ್ಕೆ ಹೋಗಿದ್ದೆ. ಚಿತ್ರಮಂದಿರ ಭಾಗಶಃ ತುಂಬಿತ್ತು. ಕಿರುತೆರೆಯ ಕೆಲವು ಕಲಾವಿದರೂ ಸಹ ಸಿನಿಮಾ ನೋಡಲು ಬಂದಿದ್ದರು.
ಚಿತ್ರ ಅತ್ಯದ್ಭುತವಲ್ಲದಿದ್ದರೂ ಒಂದು ಉತ್ತಮ ಸಾಂಸಾರಿಕ ಚಿತ್ರವಾಗಿ ಮೂಡಿಬಂದಿದೆ. ಮಧ್ಯಮ ವರ್ಗದ ಹೆಣ್ಣು ಮಗಳೊಬ್ಬಳ ಜೀವನದಲ್ಲಿ ನಡೆಯುವ ಸಂಘರ್ಷದ ಕಥೆಯನ್ನು ಸೀತಾರಾಂ ಸಮರ್ಥವಾಗಿ ನಿರೂಪಿಸಿದ್ದಾರೆ. ಕಥೆಯ ವಿಚಾರಕ್ಕೆ ಬರೋಣ.…
ವಿಧ: ಬ್ಲಾಗ್ ಬರಹ
July 27, 2007
ಬೆಂಗಳೂರೆಂಬ ರಾಕ್ಷಸ ನಗರಿಯೂ, ಭಯೋತ್ಪಾದನೆಯೂ...
ಹನೀಫ್, ಕಫೀಲ್ ಮತ್ತು ಸಬೀಲ್‌ರೆಂಬ ಮೂವ್ವರು ಸೋದರ ಸಂಬಂಧಿಗಳ ಭಯೋತ್ಪಾದನಾ ಸಾಹಸಗಳ ಸುದ್ದಿಯಿಂದ ಕಂಗೆಟ್ಟಿರುವ ಬೆಂಗಳೂರಿನ ಜನತೆ ತನ್ನ ಇತ್ತೀಚಿನ ಜಾಯಮಾನಕ್ಕೆ ತಕ್ಕಂತೆ, 'ವಿಪ್ರೋ'ದ ಮುಖ್ಯಸ್ಥ ಅಝೀಂ ಪ್ರೇಮ್ಜಿ ಎಂಬ ಪಾರ್ಸಿ ಉದ್ಯಮಿಯ ಮೂಲಕ ತನ್ನ ಆತಂಕವನ್ನು ವ್ಯಕ್ತಪಡಿಸಿದೆ... ಈ ಪ್ರೇಮ್ಜಿ ಪ್ರಕಾರ, ಬೆಂಗಳೂರು ಭಯೋತ್ಪಾದನೆಯ ತಾಣವಾಗುತ್ತಿರುವುದರಿಂದ ಆಗುತ್ತಿರುವ ದೊಡ್ಡ ತೊಂದರೆ ಎಂದರೆ, ತಮ್ಮಂತಹವರೆಲ್ಲ ಸೇರಿ ರೂಪಿಸಿದ್ದ…
ವಿಧ: ಬ್ಲಾಗ್ ಬರಹ
July 27, 2007
”ದೇವರು ಎಲ್ಲಿದ್ದಾನೆ ಬಿಡಿ! ಅವನು ಇದ್ದಿದ್ದರೆ ಇಷ್ಟೆಲ್ಲ ಅನ್ಯಾಯ-ಅನಾಚಾರ ಆಗುತ್ತಿರಲಿಲ್ಲ. ಅವನು ಕಣ್ಮುಚ್ಚಿ ಕುಳಿತಿದ್ದಾನೆ. ಕಲ್ಲಾಗಿದ್ದಾನೆ” ಹೀಗೆ ಹೇಳುವವರಿದ್ದೇವೆ. ಅತೀವ ಕಷ್ಟ ಕಾರ್ಪಣ್ಯಗಳಿಂದ,ಮಾನಸಿಕ ತಳಮಳ,ಹಿಂಸೆ-ಕಿರುಕುಳದಿಂದ ಬೇಸತ್ತಾಗ ನಿಜವಾಗಲೂ ದೇವರು ಎಲ್ಲಿದ್ದಾನೆ? ದೇವರು ಎಂದರೇನು ಚಿಂತಾಕ್ರಾಂತರಾಗುತ್ತೇವೆ... ಚನ್ನ ವೀರ ಎಂಬ ಶರಣರೊಬ್ಬರು-ದೇವರು ಎಲ್ಲಿಲ್ಲ? ದೇವರಲ್ಲಿ ಇದ್ದವರು ಗೆದ್ದವರು ಎಂಬ ಮಾರ್ಮಿಕ ಪ್ರಶ್ನೆಯಿಂದ ನಮ್ಮೊಳಗೇ ನಾವು ದೇವರನ್ನು ಹುಡುಕುವಂತೆ…
ವಿಧ: ಚರ್ಚೆಯ ವಿಷಯ
July 27, 2007
ಝಣ ಝಣ ಝಣ ಝಣ ಕಾಂಚಾಣದಲ್ಲಿಅಮೇರಿಕದ ಲಾಂಛನದಲ್ಲಿ..........................................................ಎಲ್ಲಾ ಮಾಯ, ಇನ್ನು ನೀವೂ ಮಾಯ!ನಾವೂ ಮಾಯ, ಇನ್ನು ನೀವೂ ಮಾಯ!
'ಮಾತಾಡು ಮಾತಾಡು ಮಲ್ಲಿಗೆ' ಚಿತ್ರದ ಈ ಹಾಡು ಇಂದಿನ ರಾಜಕೀಯಕ್ಕೆ ಸನ್ನಿವೇಶಕ್ಕೆ ತಕ್ಕುದಾಗಿದೆ. ಈ ಚಿತ್ರದಿಂದ ಇನ್ನಷ್ಟು ನಿರೀಕ್ಷಿಸೋಣ.
____________________________________ ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ! ಕೃಷ್ಣ ಪ್ರಕಾಶ ಬೊಳುಂಬು
ವಿಧ: Basic page
July 27, 2007
ಒ೦ದು ಸಾಹಿತ್ಯ ಕೃತಿಯನ್ನು ಕೊಳ್ಳುವ ಮೊದಲು ಯೋಚನೆಗೆ ಬರುವುದು - ಯಾವ ಪುಸ್ತಕವನ್ನು ಕೊಳ್ಳಲಿ ? ಕಾವ್ಯವಾದರೆ, ಯಾವ ಕವಿಯದ್ದು ? ಕಾದ೦ಬರಿಯಾದರೆ, ಯಾರದ್ದು ಚೆನ್ನ ? ಯಾವ ಕತೆಗಾರನ ಕತೆಗಳು ಸೊಗಸು ? ... ಹೀಗೇ ಅಲ್ಲವೇ ಲಕ್ಷಾ೦ತರ ಕೃತಿಗಳಲ್ಲಿ ನಾವು ಒ೦ದೆರಡನ್ನು ಆರಿಸಿಕೊಳ್ಳುವ ವಿಧಾನ ? ಇದು ಸತ್ಯ ಮತ್ತು ಸಹಜ ಎ೦ದೆನಿಸುತ್ತದೆ.
ಸ್ನೇಹಿತನ ಶಿಫಾರಸ್ಸಿನ ಮೇರೆಗೋ, ಪ್ರಸಿದ್ಧ ಸಾಹಿತಿಯದೆ೦ದೋ ಅಥವಾ ಭಾರೀ ಚರ್ಚೆಗೆ ಗ್ರಾಸವಾಗಿದ್ದೆ೦ದೋ, ಒ೦ದು ಪುಸ್ತಕವನ್ನು ಕೊ೦ಡು ಓದಲು…
ವಿಧ: Basic page
July 27, 2007
ಇದೀಗ ಸೀಮೋಲ್ಲಂಘನೆ ಮಾಡಿ ಪ್ರಪಂಚದಲ್ಲೇ ಪ್ರಸಿದ್ಧವಾದ ಕರ್ನಾಟಕ ಕರಾವಳಿಯ ಯಕ್ಷಗಾನ ಕಲೆಯು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಸಾಮಾನ್ಯ ಜನರಿಗೆ ಸೀಮಿತವಾಗಿತ್ತು.ಈ ಕಲೆಯ ಪ್ರಗತಿಗಾಗಿ ದುಡಿದ ಪ್ರಮುಖರಲ್ಲಿ ದಿ|ಪುತ್ತೂರು ಗೋಪಾಲಕೃಷ್ಣಯ್ಯನವರು ಗಮನಾರ್ಹರು.ಪುತ್ತೂರು ಗೋಪಣ್ಣನೆಂದೇ ಜನಪ್ರಿಯರಾಗಿದ್ದ ಶ್ರೀಯುತರು ಕಾಸರಗೋಡಿನ ಕೂಡ್ಲು ಎಂಬಲ್ಲಿ ಜನಿಸಿದರು.ಅವರಿಗೆ ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಉಂಟಾಗಲು ಕಾರಣ ಕೂಡ್ಲು ಮೇಳದ ಬಯಲಾಟಗಳು ಮತ್ತು ಚೆಂಡೆಯ ಶಬ್ದ…
ವಿಧ: Basic page
July 27, 2007
ಹಾಸನ ಜಿಲ್ಲೆಯ ಹೊಳೆನರಸೀಪುರದ ಬಳಿ ಕಂದುಕೆರೆ ಎಂಬ ಪುಟ್ಟ ಗ್ರಾಮ, ಹಿಂದೆಲ್ಲೆ ಹತ್ತಾರು ಬ್ರಾಹ್ಮಣರ ಮನೆಗಳಿಂದ ತುಂಬಿರುತಿದ್ದ ಗ್ರಾಮದಲ್ಲಿ ಈಗ ಕೇವಲ ಬೆರಳೆಣಿಕೆಯಷ್ಟೇ ಮನೆಗಳು.
ಅಗ್ರಹಾರದ ಮುಖ್ಯ ರಸ್ತೆಯಲ್ಲಿರುವ ಮೊದಲನೆಯ ಮನೆಯೇ ಶಂಕರ ಶಾಸ್ತ್ರಿಗಳದ್ದು,ಇನ್ನು ಬೀದಿಯಲ್ಲಿ ಉಳಿದಿರುವ ಇತರ ಮನೆಗಳಿಗೆ ಬೀಗ ಬಿದ್ದಿದೆ, ಬೆಳೆ ಮಳೆ ಇಲ್ಲದೆ ಕಂಗಾಲಾಗಿ " ಉದರ ನಿಮಿತ್ತಂ ಬಹುಕ್ರುತ ವೇಶಂ " ಎನ್ನುವ ಉಕ್ತಿಯಂತೆ ಬೇರೆ ಬೇರೆ ವೇಶಗಳನ್ನು ಹಾಕಿ ಪರಸ್ಥಳದಲ್ಲಿ ಹೊಟ್ಟೆ ಹೊರೆಯುತ್ತಿರುವವರು…