ವಿಧ: ಬ್ಲಾಗ್ ಬರಹ
July 03, 2007
ಪಾಳೇಕರ್ ರಿಂದ ಕಂಡ "ಗೋಮಾತೆ" ಮತ್ತು ವಿಶ್ವ ಗೋ ಸಮ್ಮೇಳನ.
ರೈತಾಪಿ ಬದುಕನ್ನು ನಡೆಸುವ ನಾವು ಕೂಡು ಕುಟುಂಬದಲ್ಲೇ ಇದ್ದು ಬೆಳೆಯುವಾಗ ಅನೇಕ ನಾಟಿ ದನಗಳ ಹಾಗೂ ಹೈಬ್ರೀಡ್ ದನಗಳ ದೊಡ್ಡ ಕೊಟ್ಟಿಗೆ ಇತ್ತು. ಗೊಬ್ಬರಕ್ಕಾಗಿ ಈ ನಾಟಿ ದನಗಳನ್ನೂ ಹಾಲಿಗಾಗಿ ಹೈಬ್ರ್‍ಇಡ್ ದನಗಳನ್ನೂ ಸಾಕಿದ್ದರು. ರಸಾಯನಿಕ ಗೊಬ್ಬರದ ಬಳಕೆ ಪ್ರಾರಂಭವಾದಂತೆ ಕ್ರಮೇಣ ನಾಟೀ ದನಗಳ ಸಂಖ್ಯೆ ಕಡಿಮೆಯಾಗುತ್ತಾ ಬರೀ ಜರ್ಸಿ ದನಗಳು ಮಾತ್ರಾ ಉಳಿದವು. ಹೈಬ್ರ್‍ಈಡ್ ದನಗಳು ಗೊಬ್ಬರವನ್ನೂ ಹಾಲನ್ನೂ ದೊಡ್ಡ ಪ್ರಮಾಣದಲ್ಲಿ…
ವಿಧ: Basic page
July 03, 2007
"ತುಂಗಾ ಮೂಲ ಚಳುವಳಿ"ಯ ಕೆಲವು ಸಂಗತಿಗಳು:
" ತುಂಗಾ ಮೂಲ ಚಳುವಳಿ" ಕುರಿತಾಗಿ ದಿನಾಂಕ ೧/೭/೨೦೦೭ ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಹಳ ಲಘುವಾಗಿ ಬರೆದಿದ್ದಾರೆ. ಅದು ಶ್ರೀ. ಅನಂತಮೂರ್ತಿಯವರನ್ನು ಲೇವಡಿ ಮಾಡಲು ಬರೆದದ್ದು. ಇದು ಅತ್ಯಂತ ಬೇಜವಾಬ್ದಾರಿ ನಡುವಳಿಕೆಯಾಗಿದ್ದು ಇದನ್ನು ನಾವು ಖಂಡಿಸುತ್ತಿದ್ದೇವೆ. 'ತುಂಗಾ ಮೂಲ ಉಳಿಸಿ ಹೋರಾಟ' ಈ ನಾಡಿನ ಕೋಟ್ಯಾಂತರ ಜನರ, ರೈತರ ಬದುಕಿನಮೇಲೆ ನೇರವಾಗಿ ಪರಿಣಾಮ ಬೀರುವ ತುಂಗಾ- ಭದ್ರಾ ನದಿಗಳ ಉಳಿವಿನ ಹೋರಾಟವದು. ಈ ಅಹಿಂಸಾತ್ಮಕ…
ವಿಧ: ಬ್ಲಾಗ್ ಬರಹ
July 03, 2007
ಬುದ್ಧ ಮತ್ತು ಹಿಂದೂ ಧರ್ಮ: ಕೆಲವು ಚಿಂತನೆಗಳು
'ವಿಕ್ರಾಂತ ಕರ್ನಾಟಕ'ದ ಕಳೆದ ಸಂಚಿಕೆಯಲ್ಲಿ, ಮೈಸೂರಿನಲ್ಲಿ ಕೆಲವು ವಾರಗಳ ಹಿಂದೆ ಕೆಲವು ದಲಿತ ಗೆಳೆಯರ ನೇತೃತ್ವದಲ್ಲಿ ಎರಡು ಸಾವಿರ ಜನರು ಬೌದ್ಧ ಧರ್ಮಕ್ಕೆ ಮತಾಂತರವಾದ ಘಟನೆ ಬಗ್ಗೆ ಎರಡು ಬರಹಗಳಿವೆ. ಒಂದು, ಸಹಾನುಭೂತಿಪರವಾದ ವರದಿಯಂತಿದ್ದರೆ, ಇನ್ನೊಂದು ಅದನ್ನು ವಿಮರ್ಶಿಸುವ ಸಂಪಾದಕೀಯ ಲೇಖನವಾಗಿದೆ. ಮತಾಂತರ ಇಂದು ಭಾವನೆಗಳನ್ನು ಕೆರಳಿಸುವ ವಿದ್ಯಮಾನವೆನಿಸಿದ್ದರೆ, ಅದಕ್ಕೆ ಕಾರಣ ಬಹುಪಾಲು ಎಲ್ಲ ಮತಾಂತರಗಳೂ ಬಹು ಸಂಖ್ಯಾತ…
ವಿಧ: ಬ್ಲಾಗ್ ಬರಹ
July 03, 2007
ಬುದ್ಧ ಮತ್ತು ಹಿಂದೂ ಧರ್ಮ: ಕೆಲವು ಚಿಂತನೆಗಳು
'ವಿಕ್ರಾಂತ ಕರ್ನಾಟಕ'ದ ಕಳೆದ ಸಂಚಿಕೆಯಲ್ಲಿ, ಮೈಸೂರಿನಲ್ಲಿ ಕೆಲವು ವಾರಗಳ ಹಿಂದೆ ಕೆಲವು ದಲಿತ ಗೆಳೆಯರ ನೇತೃತ್ವದಲ್ಲಿ ಎರಡು ಸಾವಿರ ಜನರು ಬೌದ್ಧ ಧರ್ಮಕ್ಕೆ ಮತಾಂತರವಾದ ಘಟನೆ ಬಗ್ಗೆ ಎರಡು ಬರಹಗಳಿವೆ. ಒಂದು, ಸಹಾನುಭೂತಿಪರವಾದ ವರದಿಯಂತಿದ್ದರೆ, ಇನ್ನೊಂದು ಅದನ್ನು ವಿಮರ್ಶಿಸುವ ಸಂಪಾದಕೀಯ ಲೇಖನವಾಗಿದೆ. ಮತಾಂತರ ಇಂದು ಭಾವನೆಗಳನ್ನು ಕೆರಳಿಸುವ ವಿದ್ಯಮಾನವೆನಿಸಿದ್ದರೆ, ಅದಕ್ಕೆ ಕಾರಣ ಬಹುಪಾಲು ಎಲ್ಲ ಮತಾಂತರಗಳೂ ಬಹು ಸಂಖ್ಯಾತ…
ವಿಧ: ಚರ್ಚೆಯ ವಿಷಯ
July 03, 2007
ಅನುವಾದ ಕಾರ್ಯದಲ್ಲಿ ನಿಘಂಟುಗಳ ಮರೆಹೊಗುವುದು (ಮರೆಹೊಗು = ಪುಟ್ಟಮಗು ಬೆದರಿದಾಗ ತಾಯಿಯ ನಿರಿಗೆಯ ಮರೆ ಹೊಕ್ಕು ಅಲ್ಲಿಂದ ಇಣುಕಿ ನೋಡುತ್ತದೆ) ಅನಿವಾರ್ಯ. ಪದಶಃ ಅನುವಾದಗಳು ಹಾಗೂ ನಮ್ಮ ಪರಿಕಲ್ಪನೆಯ ಇತಿಮಿತಿಗಳು ಅನುವಾದಕ್ಕೆ ನ್ಯಾಯ ಒದಗಿಸುವುದಿಲ್ಲ. ಜನಪ್ರಿಯ ಪತ್ರಿಕೆಯೊಂದರಲ್ಲಿ ವಿದೇಶದ ಪ್ರಸಿದ್ಧ ಕ್ರಿಕೆಟಿಗನೊಬ್ಬ (ಲಕ್ನೋ ಬಳಿ) ತಾನು ಹುಟ್ಟಿದ ಆಸ್ಪತ್ರೆಯನ್ನೂ ಅದರಲ್ಲಿನ ಕಾರ್ಮಿಕರ ಕೋಣೆಯನ್ನೂ ಸಂದರ್ಶಿಸಿದನೆಂದು ವರದಿಯಾಗಿತ್ತು. ಈ ಕಾರ್ಮಿಕರ ಕೋಣೆಯೆಂಬುದು Labour Ward…
ವಿಧ: ಬ್ಲಾಗ್ ಬರಹ
July 03, 2007
ಹೂವು ಮುಳ್ಳಿನ ನಂಟು
ಒಂದೆ ಗಿಡದಲಿ ಉಂಟು
ಹಗಲು ರಾತ್ರಿಯ ಗುಟ್ಟು
ಒಂದಿರದು ಇನ್ನೊಂದ ಬಿಟ್ಟು
ಕಷ್ಟವೆಂದರೆ ಬಾಳು
ನೋವು ನಲಿವಿನ ನೆರಳು
ಇಷ್ಟವೆಂದು ಬಗೆಯಲು
ನಲಿವು ತಾ ನೋವಿನ ಗೆಲುವು..
--------------------------------------------
ನನ್ನದು ಕವಿ ಹೃದಯವಲ್ಲ ಆದರೂ ಗೀಚಿದ್ದೀನಿ.. ಹೇಗಿದೆಯೆಂದು ತಿಳಿಸಿದರೆ.. ಸಂತೋಷ
ವಿಧ: ಬ್ಲಾಗ್ ಬರಹ
July 03, 2007
ಅರಿತ ಮೇಲೆ ನೀ ಬರುವಳಲ್ಲನನ್ನ ಬಾಳಲಿ ಎಂದು;ಏನೋ ಕಳೆದುಕೊಂಡವನಾ ಆಗಿರುವೆ ಇಂದು;
ತಳಮಳ... ನೀ ದೂರ ಅಂತ ತಿಳಿದ ಕ್ಷಣದಿಂದ; ಉಲ್ಲಾಸವಾಗಿದೆ ಮಾಯ ನನ್ನಿಂದ;
ಎದೆಯಲಿ ಬರಿ ಬೇಸರದ ಉಸಿರಿದೆ;ಕಣ್ಣಲಿ ಬರಿ ನಿನ್ನಬಿಂಬವೇ ತುಂಬಿದೆ;
ಮನದಲ್ಲಿ ನಿನ್ನ ನೆನಪ ಮಳೆಯಿದೆ; ಮತ್ತೆ ಮತ್ತೆ ಕಣ್ಣೀರಾಗಿ ಹೊರ ಬರುತಲಿದೆ;
ಎಲ್ಲಿ ನೋಡಿದರೂನಿನ್ನ ಮೊಗವ ಕಾಣುತ,ಇಹವ ನಾ ಮರೆಯುತಿರುವೆ;
ಪ್ರೇಮದ ಕುರುಹು ಕಂಡದ್ದು ಮರಳಲಿ ಎಂದು ಅರಿಯಲು ತಡವಾಯಿತಲ್ಲ; ಹೃದಯವೀಗ…
ವಿಧ: ಬ್ಲಾಗ್ ಬರಹ
July 03, 2007
ಇನ್ನೇನು ಮಳೆ ಬರುವ ಸೂಚನೆಯಲ್ಲಿ ಕಪ್ಪುಗಟ್ಟಿದ ಮೋಡ, ಇನ್ನೆಲ್ಲೋ ಮಳೆಬಿದ್ದ ಕುರುಹಾಗಿ ತೀಡಿ ಬಂದ ತಂಗಾಳಿಯ ಆ ಸಂಜೆ ನಾನು ಮತ್ತು ತಮ್ಮ ಗಾಂಧಿ ಬಜಾರಿಗೆ ಹೊರಟಿದ್ದೆವು. ಊರಿಗೆ ಹೊರಟ ಅವನಿಗೆ ಅಲ್ಲಿರುವ ಪುಟ್ಟ ಮಕ್ಕಳಿಗೆ ಆಟ ಸಾಮಾನು, ಕತೆ ಪುಸ್ತಕ ಕೊಳ್ಳಬೇಕಿತ್ತು. ಗಡಿಬಿಡಿಯಲ್ಲಿ ಪಾರ್ಕ್ ಮಾಡಿ, ಇಳಿದು ಪುಸ್ತಕದಂಗಡಿ ಹೊಕ್ಕರೆ ಅಲ್ಲಿ ಕುರ್ಚಿಯಲ್ಲಿ ಪುಸ್ತಕವೊಂದನ್ನು ಹಿಡಿದು ಏನೋ ಮಾತಾಡುತ್ತ ಕುಳಿತ ನನ್ನ ಪ್ರೀತಿಯ ಕತೆಗಾರ. ಅಲ್ಲಲ್ಲಿ ಜನರಿದ್ದರು. ಹೇಗೆ ಮಾತಾಡುವುದೆಂಬ…
ವಿಧ: ಚರ್ಚೆಯ ವಿಷಯ
July 03, 2007
ನೆನೆಯುವುದು ಎಲ್ಲರಿಗೂ ಇಷ್ಟ! ಮನಸ್ಸಿಗೆ ಹತ್ತಿರವಾದವರನ್ನು ನೆನೆಯುವುದಾದರೂ ಇರಬಹುದು.. ಮಳೆಯಲ್ಲಿ ನೆನೆಯುವುದಾದರೂ ಆಗಬಹುದು.. ಒಟ್ಟಿನಲ್ಲಿ ನೆನೆಯುವ ಪ್ರಕ್ರಿಯೆಯಲ್ಲಿ ಏನೋ ಒಂದು ಸುಖವಿದೆ. ಸುಖದ ಜೊತೆಗೆ ಸ್ವಾರಸ್ಯವೂ ಇದೆ.
ನಿಘಂಟು ತೆರೆದು ನೋಡಿದರೆ `ನೆನೆ' ಎಂಬ ಕ್ರಿಯಾಧಾತುರೂಪದ ಶಬ್ದಕ್ಕೆ ನಿಮಗೆ ನಾನಾ ಅರ್ಥಗಳೂ, ಸಮಾನಾರ್ಥಕ ಪದಗಳೂ ಸಿಗಬಹುದು. ಆದರೆ ಸ್ಥೂಲವಾಗಿ ಮತ್ತು ಮುಖ್ಯವಾಗಿ ಎರಡು ಅರ್ಥಗಳು - ಒಂದು, `ನೆನಪಿಸಿಕೊಳ್ಳು'; ಇನ್ನೊಂದು `ಒದ್ದೆಯಾಗು'. ಇವೆರಡೂ…
ವಿಧ: ಬ್ಲಾಗ್ ಬರಹ
July 03, 2007
ದೂರದರ್ಶನದ ’ಚಂದನ’ ವಾಹಿನಿಯಲ್ಲಿ ಪ್ರತಿದಿನ ಮುಂಜಾನೆ ೬.೩೦ ಕ್ಕೆ ಸರಿಯಾಗಿ ವಚನ ಕುರಿತಾದ ಕಾರ್ಯಕ್ರಮ ಬರುತ್ತಿದೆ. ಒಳ್ಳೆಯ ಹಾಡುಗಾರಿಕೆ , ಹಿನ್ನೆಲೆಯಲ್ಲಿ ಸುಂದರ ದೃಶ್ಯಗಳು ಇವೆ . ನಂತರ ಅದರ ವಿವರಣೆ .
ಆಸಕ್ತರು ನೋಡಬೇಕು.