ವಿಧ: ಬ್ಲಾಗ್ ಬರಹ
July 06, 2007
ನಾನು,ಯಜಮಾನರು ಚರ್ಚಿಸಿ,ಅನೇಕ ಮಿತ್ರರ ಅಭಿಪ್ರಾಯ ಕೇಳಿ,ಸ್ಯಾಮ್ ಸಂಗ್ ಟಿ.ವಿ ತೆಗೆದುಕೊಳ್ಳಲು ಹೋದೆವು. ತೆಗೆದುಕೊಂಡುದು ಒನಿಡಾ.
ಇದೇ ರೀತಿ ಐ ಎಫ಼್ ಬಿ ವಾಷಿಂಗ್ ಮೆಷಿನ್ ತೆಗೆದು ಕೊಳ್ಳಲು ಹೋಗಿ ಕೊಂಡದ್ದು ವಿಡಿಯೊಕಾನ್.
ಸೊನಿ ಡಿ.ವಿ.ಡಿ ಪ್ಲೇಯರ್ ತೆಗೆದುಕೊಳ್ಳಲು ಹೋಗಿ ಡೇಪಿಕ್ ನೊಂದಿಗೆ ಮನೆಗೆ ಬಂದೆವು.ನೋಕಿಯಾ ಬದಲಿಗೆ ಸಾಮ್ಸಂಗ್ ಮೊಬೈಲ್ ಬಂತು.ಇದೆಲ್ಲಾ ಬೇರೆ ಬೇರೆ ಅಂಗಡಿಗಳಲ್ಲಿ,ಬೇರೆ ಬೇರೆ ಸೇಲ್ಸ್ ಮ್ಯಾನ್ ಗಳ ಮಾತಿನ ಮೋಡಿಯಿಂದ ಆದುದು.ಒಬ್ಬ ಸಾಧಾರಣ ಸೇಲ್ಸ್ ಮ್ಯಾನ್ ಗೆ…
ವಿಧ: ಬ್ಲಾಗ್ ಬರಹ
July 06, 2007
ಎಂದಿನಂತೆ ಚಡಪಡಿಕೆ ಶುರುವಾಗಿತ್ತು..ರುಟೀನ್ ಇರೋದೇ ಮುರಿಯಕ್ಕೆ ಎನ್ನುವ ಧ್ಯೇಯವಾಕ್ಯದ ಗೆಳೆಯರ ಪುಟ್ಟ ಗುಂಪು ನಮ್ಮದು. ಮುರಿಯುವ ದಾರಿ - ಗಜಿಬಿಜಿಯಿಂದ ದೂರಕ್ಕೆ, ಹಸಿರು ಹೊದ್ದ ಕಾಡಿನ ಮಡಿಲಿಗೆ ಹೋಗಿ, ಇಲ್ಲ ನಂಗೇನೂ ಗೊತ್ತಾಗ್ತಾ ಇಲ್ಲ, ಅಲ್ಲಿ ಏನ್ ನಡೀತಾ ಇದೆ - ಸರಿಯಾಗಿ ಕೆಲಸ ಮಾಡದ ಕೋಡ್, ಪೂರ್ತಿ ಮುಗಿಸಿರದ ರಿಪೋರ್ಟ್, ಹಾಗೇ ಉಳಿಸಿದ ಬಗ್, ಬಗೆಹರಿಯದ ಬಜೆಟ್ ಅನಲಿಸಿಸ್, ಎಲ್ಲ ಏನೋ ಗೊತ್ತಿಲ್ಲ, ಅಂತ ಕಣ್ಣು ಮುಚ್ಚಿಕೊಂಡು ಹಾಲುಕುಡಿವಂತೆ, ನಾವು ಕಾಡಿನ ಮಡಿಲು ಹುಡುಕಿ…
ವಿಧ: ಬ್ಲಾಗ್ ಬರಹ
July 06, 2007
ನಿನ್ನ ನೋಡದೆ
ಮಾತು ಆಡದೆ
ಮನಸು ನೊಂದಿದೆ
ಗೆಳತಿ, ಮನಸು ನೊಂದಿದೆ
ಸಂಜೆ ಉಷೆಯ ಕಿರಣಗಳಲ್ಲಿ
ನಿನ್ನ ಜೊತೆ ನಾ ನಡೆಯಲು ಇಲ್ಲ
ಒಲಿದು ಸುರಿವಾ, ಜಡಿಮಳೆಯಲ್ಲಿ
ನಿನ್ನ ಜೊತೆ ನಾ ಬರಲು ಇಲ್ಲ
ನೀಕರೆದಲ್ಲಿಗೆಲ್ಲ, ಕರೆದಾಗಲೆಲ್ಲ
ನಿನ್ನೊಡನೆ ನಾನು ಬರಲಾಗಲಿಲ್ಲ
ನೀನಲಿದಾಗಲೆಲ್ಲ, ನೊಂದಾಗಲೆಲ್ಲ
ನಿನ್ನೊಡನೆ ನಾನು ಇರಲಾಗಲಿಲ್ಲ.
ನಿನ್ನೆದೆಯ ಒಲವ ಹಾಡುಗಳನ್ನೆಲ್ಲಾ
ಕೋಗಿಲೆಯ ದನಿಯಿಂದ ನೀನು ಹಾಡಿದಾಗಲೆಲ್ಲ
ಹಾಡಕೇಳಿಸಿಕೊಂಡೆನೇ ಹೊರತು
ಹಾಡೊಳಡಗಿದ್ದ ಇಂಪಿಗೆ ಕಿವಿಗೊಡದಿದ್ದೆನಲ್ಲ.
ನಿನ್ನೆಲ್ಲಾ…
ವಿಧ: ಚರ್ಚೆಯ ವಿಷಯ
July 06, 2007
>> ಮಾಧ್ಯಮಗಳ ಸನ್ಮಿತ್ರರಿಗೊಂದು ಸವಿನಯ ಮನವಿ.
>> ------------------------------------------------
>>
>> ಸತ್ಯಶೋಧನೆ, ಸಾರ್ವಜನಿಕ ಹಿತಾಸಕ್ತಿಗಳು ಪತ್ರಿಕೋದ್ಯಮದ - ಸಮೂಹ ಮಾಧ್ಯಮಗಳ
>> ಅಡಿಪಾಯಗಳಾಗಿದ್ದ ಕಾಲವೊಂದಿತ್ತು. ಅದು ಸತ್ಯಯುಗದ ಕಾಲ, ಇಂದಿನ ಕಲಿಯುಗಕ್ಕೆ
>> ಹೊಂದುವುದಿಲ್ಲ ಎಂಬ ಭಾವನೆ, ಮಾಧ್ಯಮಗಳ ಇಂದಿನ ಕೆಲವು ಮಿತ್ರರಿಗೆ ಇದ್ದಂತಿದೆ.
>> ಕನ್ನಡದ ಕೆಲವು ಸುದ್ದಿವಾಹಿನಿಗಳು, ಹಿಂದಿ / ಇಂಗ್ಲಿಷ್ ಭಾಷೆಗಳ…
ವಿಧ: ಬ್ಲಾಗ್ ಬರಹ
July 06, 2007
ಮುಡುಕುತೊರೆ - ಈ ಇಕ್ಕೆ/ಸ್ತಳ ನಂಗೆ ಬೊ ಇಶ್ಟ. ಮೈಸೂರಿನ ತಿರುಮಕೂಡಲು ನರಸೀಪುರ ತಾಲ್ಲೂಕಿಗೆ ಸೇರಿದೆ. ಇಂದಿಗೂ ಹೆಸರಾಗಿರುವ ತಲಕಾಡಿಗೆ ಇದು ತುಂಬಾ ಹತ್ತಿರ. ಇಲ್ಲಿ ಕಾವೇರಿ ಚೂಪಾಗಿ ತಿರುವಿರುವುದು ನೋಡಲು ಬಲು ಚೆನ್ನ. ಇದರ ಹೆಸರೇ ಹೇಳುವಂತೆ ಮುಡುಕು+ತೊರೆ = ತಿರುವು+ತೊರೆ = ತಿರುಗಿರುವ ನದಿ ಎಂದು ತಿಳಿಯಬಹುದು. ನಮ್ಮ ಹಿರಿಯರನ್ನು ನೋಡಿ ಏನ್ ಚೆಂದ ಹೆಸರು ಇಟ್ಟಿದ್ದಾರೆ. ಇಲ್ಲಿ ಮುಡುಕುತೊರೆ ಜಾತ್ರೆಯಾದಾಗ ದನಗಳ ಜಾತ್ರೆ ಕೂಡ ಮಾಡುತ್ತಾರೆ. ಇಂದಿಗೂ ನಮ್ಮ ಕಡೆ ಮುಡುಕುತೊರೆ…
ವಿಧ: ಚರ್ಚೆಯ ವಿಷಯ
July 06, 2007
ನಾನು ಈ ಶೀರ್ಷಿಕೆಗಳನ್ನು ಆಟೋ ರಿಕ್ಷಾಗಳ ಮೇಲೆ ನೋಡಿದ್ದು .....
೧: ಡಜನ್ ಮಕ್ಕಳು .... ಅರ್ಧ ತಿಕ್ಕಲು ... ಅರ್ಧ ಪುಕ್ಕಲು
೨: ಜೂಟ್ .....
೩: ಆಕಸ್ಮಾತಾಗಿ ಸಿಕ್ಕಳು! ...ನೋಡಿ ನಕ್ಕಳು!! ...ಈಗ ಎರಡು ಮಕ್ಕಳು!!!
೪: ಹೋಡೋಗೋಣ ಬಾರೇ! .......
೫: ತಾಯಿಯ ಪ್ರೀತಿ .. ತಂದೆಯ ಆಶಿರ್ವಾದ ..
೬: ಸಕ್ಕತ್ ಹಾಟ್ ಮಗ!
೭: ಓ ಗೆಳೆಯ .... ಹುಡುಗಿ ಬಣ್ಣದ ಚಿಟ್ಟೇ ಕಣೊ ....
ನೀವೂ ಈ ತರಹದ ಶೀರ್ಷಿಕೆಗಳನ್ನು ನೋಡಿರಬಹುದು ..... ನಮಗೂ ತಿಳಿಸಿ .... ಪ್ಲೀಸ್!!!!!
ಜೈ ಕರ್ನಾಟಕ ......…
ವಿಧ: ಚರ್ಚೆಯ ವಿಷಯ
July 06, 2007
ಜಗಮಗಿಸುತ್ತಿರುವ ಕನ್ನಡ ಚಿತ್ರರ್‍ಅಂಗ .....
೧: ಮುಂಗಾರು ಮಳೆ: ಕರ್ನಾಟಕ, ಪುಣೆ, ಅಮೇರಿಕ, ಲಂಡನ್ ನಲ್ಲಿ ಭರ್ಜರಿ ಯಶಸ್ಸು (~೭೫% ಬೆಂಗಳೂರಿನ ಜನ ನೋಡಿದ್ದಾರೆ)
೨: ದುನಿಯ: ಮತ್ತೊಂದು ಶತದಿನ ದಾಟಿದ ಭರ್ಜರಿ ಚಿತ್ರ
೩: ॑೭೩ ಶಾಂತಿ ನಿವಾಸ: ಎಲ್ಲರ ಪ್ರೀತಿಗೆ ಪಾತ್ರವಾಗಿರೋ ಹಿಟ್ ಚಿತ್ರ
೪: ಸತ್ಯವಾನ್ ಸಾವಿತ್ರಿ: ಯಶಸ್ವಿಯಾಗಿ ನಡೆಯುತ್ತಿರುವ, ನಗಿಸುವ ಬೊಂಬಾಟ್ ಚಿತ್ರ ....
೫: ಹುಡುಗಾಟ: ಸಖತ್ ಸಂಗೀತ, ಹಾಡುಗಳಿರುವ ಹಿಟ್ ಚಿತ್ರ
೬: ಚೆಲುವಿನ ಚಿತ್ತಾರ: ಒಳ್ಳೆಯ ಅಭಿನಯ, ಪ್ರೇಮ…
ವಿಧ: ಬ್ಲಾಗ್ ಬರಹ
July 05, 2007
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ವಾತಾವರಣನೇ ಒಂಥರಾ ಆಗೋಗ್ಬಿಟ್ಟಿದೆ. ರಾಜಕಾರಣಿಗಳ ಜತೆ ಇರೋ ಈ ಪರಿಸರಾನೂ ಅವರ ಥರಾನೇ ಆಗೋಗ್ಬಿಟ್ಟಿದೆ ಮೋಡ ಮಳೆ ಸುರಿಸ್ತೀನಿ ಅಂತ ಆಶ್ವಾಸನೆ ಕೊಡ್ತಾ ಇದೆಯೇ ಹೊರ್ತು ತೊಟ್ಟೂ ಹನಿಸಿಲ್ಲ ಇನ್ನ. ಸಹ-ವಾಸ ದೊಷ ಇರ್ಬೇಕು... ಈ ಥರಾ ವಾತಾವರಣ ಇದ್ರೆ ಕೆಮ್ಮು ಜ್ವರ ನೆಗ್ಡಿಗಳಿಗೆ ಹಬ್ಬ ಅಲ್ವ. ನಮ್ಮ ಕಛೇರಿಯಲ್ಲಂತೂ ಆಸ್ಟ್ರೇಲಿಯಾ ಎದ್ರುಗಡೆ ಆಡ್ತಾ ಇರೋ ನಮ್ಮ ಪ್ಲೇಯರ್ಗಳ ಥರ ಒಬ್ರಾದ ಮೇಲೆ ಒಬ್ರು ಈ ಜ್ವರಕ್ಕೆ ಬಲಿ ಆಗ್ತಾನೇ ಇದಾರೆ. ಇವತ್ತು ನೋಡಿದ್ರೆ…
ವಿಧ: ಬ್ಲಾಗ್ ಬರಹ
July 05, 2007
ಸಂತ ಕವಿಯಪೋಲಿ ಪದ್ಯದ ಸೊಲ್ಲುಗಳೆಲ್ಲಾಭಜನೆಯಂತಿದೆ ಎಂಬ ಪೋಲಿಗಳ,ಪೋಲಿಯಾಗಿದೆ ಎಂಬ ಭಕ್ತಾದಿಗಳಚೀತ್ಕಾರ-ಸಂತ ಕವಿಯ ಗಂಟು ಮುಖದಲ್ಲಿ ನಗುವಿನ ಸಣ್ಣ ಗೆರೆ ಎಬ್ಬಿಸಿದ್ದು ನೋಡಿದಿರ?
ವಿಧ: ಚರ್ಚೆಯ ವಿಷಯ
July 05, 2007
'ನನ್ನಿ'ಯ ಮೂಲ???
ಸಂಪದದಲ್ಲಿ ಸುತ್ತಲು ಶುರು ಮಾಡಿದ ಮೇಲೆ ಕೇಳ್ಪಟ್ಟ ಪದ - 'ನನ್ನಿ'.
ನಾನು 'ನನ್ನಿ' ಎಂಬುದು ಕನ್ನಡದಲ್ಲಿ Thanks ಹೇಳಲು ಬಳಸುತ್ತಾರೆಂದು ಸ್ನೇಹಿತರಿಗೆ ತಿಳಿಸಿದಾಗ ನನಗೆ ತಿಳಿದು ಬಂದಿದ್ದು ಮಲಯಾಳದಲ್ಲಿ ಇಂದಿಗೂ 'ನನ್ನಿ'ಯ ಬಳಕೆ ಇದೆಯೆಂದು.
'ನನ್ನಿ' ಯ ಕನ್ನಡದ ಮೊದಲ ಉಪಯೋಗ ಎಲ್ಲಿ ಆಗಿದೆ?
ಮಲಯಾಳದಿಂದ ಕನ್ನಡಕ್ಕೆ ಬಂದದಲ್ಲವೆಂಬುದಕ್ಕೆ ಪುರಾವೆಗಳಿವೆಯೆ???
ಬಲ್ಲವರು ಬೆಳಕನ್ನು ಹರಿಸಿ...
ಇದರ ಬಗ್ಗೆ ಸಂಪದ ಕಟ್ಟೆಯಲ್ಲಿ ಚರ್ಚೆ ಆಗಲೇ ಆಗಿದ್ದಲ್ಲಿ ಸಂಬಂಧಿತ Link…