ವಿಧ: ಚರ್ಚೆಯ ವಿಷಯ
July 11, 2007
ಕೋಮಲ್ ! ಕೋಮಲ್ !! ಕೋಮಲ್ !!! ....... ಯಾರಿಗೆ ಗೊತ್ತಿಲ್ಲ ಇವರು .... ಇವರ ಒಂದು ಕಿರು ಪರಿಚಯ .....
ಕೋಮಲ್ - ಮಿಲ್ಟ್ರಿ ಮಾವ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಕೋಮಲ್ ರವರ ಇನ್ನೊಂದು ಹೆಸರು ಚಿರಂಜೀವಿ. ಇವರು ಖ್ಯಾತ ನಟ ಜಗ್ಗೇಶ್ ರವರ ಸಹೋದರ. ಇವರ ಹುಟ್ಟೂರು ತುಮಕೂರು ಜಿಲ್ಲೆ ತುರುವ್ವೇಕೆರೆ ತಾಲೂಕಿನ ಮಾಯಸಂದ್ರ (ಯಡೆಯೂರಿಗೆ ಹತ್ತಿರ). ಮಾಯಸಂದ್ರದಲ್ಲಿ ಇವರ ನಳಿನಿ-ಕೋಮಲ್ ಎಂಬ ಚಿತ್ರಮಂದಿರವಿತ್ತು. ಇವರ ಶ್ರೀಮತಿಯವರು ಐಟಿ ಉದ್ಯೋಗಿ. ನಿರ್ಮಾಪಕ ಕೇ. ಮಂಜು ಕೂಡ…
ವಿಧ: ಚರ್ಚೆಯ ವಿಷಯ
July 10, 2007
ಇದು 2006ಲವ್ ಸ್ಟೋರಿ! ಹಾಲುಜೇನಿನಂತಿದ್ದ ಅವನು ಮತ್ತು ಅವಳ ನಡುವೆ, ಇನ್ಯಾವಳೋ ಬಂದು ಹುಳಿಹಿಂಡಿದ ಕತೆ! ಕಾಲನಲೀಲೆಗೆ ಸುಖಿ ಸಂಸಾರ ಸಂಕಷ್ಟಕ್ಕೆ ಸಿಕ್ಕ ಕತೆ! ಅವಳು ಸತ್ತ ಮೇಲೆ ಅವನು ವಿರಹದಿಂದ ನೊಂದ ಕತೆ! ಈಗ ಎಲ್ಲವನ್ನು ಮರೆತು ಅವನು, ಇನ್ಯಾವಳೊಂದಿಗೋ ಸರಸವಾಡುತ್ತಿರುವ ಕತೆ! ಇದು ಕಾಗೆಗುಬ್ಬಿ ಕತೆಯಲ್ಲ! ಒಂದು ಸತ್ಯ ಕತೆ! ಶ್ರೀವತ್ಸ ಜೋಷಿಯವರ ವಿಚಿತ್ರಾನ್ನ ಅಂಕಣದಲ್ಲಿ ಮನಮಿಡಿಯುವ ಕತೆ
ಆದರೆ ಈ ಕತೆ ಮನುಷ್ಯರದಲ್ಲ, ಹದ್ದುಗಳ ಸಂಸಾರದ್ದು! ಕಟ್ಟುಕತೆಯಲ್ಲ, ನಿಜವಾಗಿ ನಡೆದದ್ದು!…
ವಿಧ: Basic page
July 10, 2007
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಹೊಸ ಹರುಷವ ತರುವೆನು ಇನ್ನು ಎಂದು!!
ಎಂಥಾ ಮಾತಾಡಿದೆ ಇಂದು ನೀ
ಎಂಥಾ ಮಾತಾಡಿದೆ ನನ್ನ ಮನಸಿನ ಭಾವನೆ ನೀನೆ ಹೇಳಿದೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಪ್ರೀತಿಯೆಂದರೇನು ಎಂದು ಈಗ ಅರಿತೆನು
ಪ್ರೀತಿಯೆಂದರೇನು ಎಂದು ಈಗ ಅರಿತೆನು
ಸವಿನುಡಿಯಲಿ ತನು ಅರಳಿತು
ಸವಿಗನಸಲಿ ಮನ ಕುಣಿಯಿತು
ಒಲವಿನ ಈ ಮಾತಿಗೆ
ಕರೆಗಿ ಹೋದೆ ನೋಟಕೆ
ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು
ಮೋಡದಲ್ಲಿ ಜೋಡಿಯಾಗಿ…
ವಿಧ: ಬ್ಲಾಗ್ ಬರಹ
July 10, 2007
ಚಿಗುರು ಮೀಸೆ, ಎಳೆ ಮೊಲೆಗಳ ಕೌಮಾರ್ಯಮೋಹ ಹಾಗು ಕಾಮದ ಕುರುಡಿಂದಹುಚ್ಚಾಗದೆ ಹೋದರೆ
ಯವ್ವನದ ಸೊಕ್ಕುದೇಶ ಹಾಗು ನೆಲದ, ಆದರ್ಶ ಮತ್ತು ನಿರಾಶೆಯಕಾಟಕ್ಕೆ ಕಂಗೆಡದೇ ಹೋದರೆ
ನಡುವಯಸ್ಸಿನ ಬಿರುಸಲ್ಲೇಜಪಮಣಿ-ಪಾರಮಾರ್ಥ ಸುತ್ತಿಕೊಳ್ಳುವುದನ್ನುತಪ್ಪಿಸಲಾದೀತೆ?
ವಿಧ: ಬ್ಲಾಗ್ ಬರಹ
July 10, 2007
ಇದು ೧೯೩೧ರಲ್ಲಿ ಬರೆದದ್ದು, ಕತೆಯು ಮುಸ್ಲೀಮ್ ಅರಸರ ಆಳ್ವಿಕೆಯ ಹೊತ್ತಿನದು, ಇಲ್ಲಿಂದ ಇಳಿಸಿಕೊಂಡು ಓದಿ ನೋಡಿ.
http://www.mykannada.net/gopalnarayan-allaahoo
ಈ ಹೊತ್ತಗೆ ಮುಸ್ಲೀಮ್ ಆಳ್ವಿಕೆಯ ಬಗ್ಗೆ ತುಸು ಬೆಳಕು ಚೆಲ್ಲೀತು.
ವಿಧ: ಚರ್ಚೆಯ ವಿಷಯ
July 10, 2007
'ಸಂಪದ'ದ ಹೊಸ ಆವೃತ್ತಿಯನ್ನು ಹೊರತರುವತ್ತ ಈಗಿನಂತೆ ಹಿನ್ನೆಲೆಯಲ್ಲಿ ಕೆಲಸ ನಡೆದಿದೆ. ಈ ಸಮಯದಲ್ಲಿ ಸಂಪದವನ್ನು ಉತ್ತಮಪಡಿಸುವಲ್ಲಿ ನೀವೂ ಪಾಲ್ಗೊಳ್ಳಬಹುದು.
ಸಂಪದದಲ್ಲಿ ಏನೇನು ಬದಲಾವಣೆಗಳನ್ನು ಬಯಸುವಿರಿ? ಸಂಪದದಲ್ಲಿ ನೀವು ಮುಂದೆ ಏನು ನೋಡಬಯಸುತ್ತೀರಿ? ಈಗಿರುವುದರಲ್ಲಿ ಯಾವುದು ಇಷ್ಟವಾಗಿದೆ? ಯಾವುದು ರೇಜಿಗೆಯಾಗಿದೆ?
ನಿಮ್ಮ ಸಲಹೆ ಅಭಿಪ್ರಾಯಗಳನ್ನು [:http://sampada.net/contact|ಇ-ಮೇಯ್ಲ್ ಮೂಲಕ ಕಳುಹಿಸಿ].
ಸೂಕ್ತವಾದವುಗಳನ್ನು ಗಮನದಲ್ಲಿಟ್ಟುಕೊಂಡು 'ಸಂಪದ'ದ ಹೊಸ…
ವಿಧ: ಚರ್ಚೆಯ ವಿಷಯ
July 10, 2007
ಕಳೆದ ವಾರಗಳಲ್ಲಿ ಸಂಪದದ ಓದುಗರು ಹಲವರು ಈ ಬಗ್ಗೆ ಪತ್ರ ಬರೆದಿದ್ದರು. ಸಮಯಾಭಾವದಿಂದ ಎಲ್ಲರಿಗೂ ಉತ್ತರಿಸಲಾಗದೆ ಇಲ್ಲಿಯೇ ಬರೆಯುತ್ತಿರುವೆ.
ಇತ್ತೀಚೆಗೆ ಸಂಪದ ಓದುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ - ಕಳೆದ ತಿಂಗಳು ಸಂಪದದಲ್ಲಿ ರೆಕಾರ್ಡ್ ಆದ ಒಟ್ಟು ಭೇಟಿಗಳ ಸಂಖ್ಯೆ (hits) ೨.೨ ಮಿಲಿಯನ್. ಇದು ಒಳ್ಳೆಯ ಬೆಳವಣಿಗೆಯೇ, ಆದರೆ ಸರ್ವರ್ ಮೇಲೆ ಇದರಿಂದಾಗುವ ಲೋಡ್ ಕಡಿಮೆ ಮಾಡಲು 'ಸಂಪದ'ದಲ್ಲಿ ಲಾಗಿನ್ ಆಗಿರದ ಸದಸ್ಯರಿಗೆ "cache" ಆದ ಪ್ರತಿ ಓದಲು ಸಿಗುವಂತೆ ಮಾಡಲಾಗಿದೆ. ಅರ್ಧ…
ವಿಧ: ಬ್ಲಾಗ್ ಬರಹ
July 10, 2007
ಕಾಲೇಜು ಮುಗಿಸಿ ಮನೆಗೆ ಹೊರಟವನು ಶಾಸ್ತ್ರಿನಗರ ಬಸ್ ಸ್ಟಾಂಡ್ ನಲ್ಲಿ ಕುಳಿತಿದ್ದೆ. ಸಣ್ಣಗೆ ಮಳೆ ಜಿನುಗುತ್ತಿದುದರಿಂದ ಸಂಜೆ ೫ ಗಂಟೆಗೇ ಕತ್ತಲಾಗಿತ್ತು. ನನಗೆ ಮನೆಗೆ ಹೊಗಲು ಮನಸ್ಸಾಗದೆ ಮಳೆಯನ್ನು ನೋಡುತ್ತಾ ಅಲ್ಲೇ ಕುಳಿತೆ. ಬಂದ ಎರಡು ಬಸ್ಸಲ್ಲೂ ಹೋಗದೆ ಅಲ್ಲೇ ಕುಳಿತಿದ್ದೆ. ಬಸ್ ಸ್ಟಾಂಡ್ ನಲ್ಲಿದ್ದ ಜನರೆಲ್ಲ ಆದಷ್ಟು ಬೇಗ ಮನೆ ತಲುಪಿಕೊಳ್ಳಬೇಕೆಂಬ ಅವಸರದಲ್ಲಿ ಬಂದ ಬಸ್ಸಿಗೇ ಹತ್ತಿ ಹೋಗಿಬಿಟ್ಟರು. ಬಸ್ ಸ್ಟಾಂಡ್ ನಲ್ಲಿ ಒಬ್ಬಳು ಹುಡುಗಿ ಕುಳಿತಿದ್ದಳು, ಅವಳು ಯಾರಿಗೋ…
ವಿಧ: ಚರ್ಚೆಯ ವಿಷಯ
July 09, 2007
ಮಕ್ಕಳನ್ನು ತೀವ್ರವಾಗಿ ಕಾಡುವ ‘ಕಿವಿ ನೋವಿನ’ ಉಗಮ ಸ್ಥಳ ನಡುಗಿವಿ. ಇಲ್ಲಿ ಉಂಟಾದ ಸೋಂಕನ್ನು ನಿವಾರಿಸುವ ಕೆಲಸ ಅಷ್ಟು ಸುಲಭವಲ್ಲ. ಗುಳಿಗೆಗಳ ಮೂಲಕ ಬಾಯಿಯಿಂದ ಅಥವಾ ದ್ರಾವಣದ ಮೂಲಕ ನೇರವಾಗಿ ಕಿವಿಯಿಂದ ಸ್ವೀಕರಿಸುವ ‘ಪ್ರತಿ ಜೈವಿಕ - ಆಂಟಿ ಬಯಾಟಿಕ್’ಕ್ಕೂ ಒಮ್ಮೊಮ್ಮೆ ಈ ಸೋಂಕುಕಾರಕ ಬ್ಯಾಕ್ಟೀರಿಯಗಳು ಬಗ್ಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ತೀವ್ರ ಸೋಂಕನ್ನು ನಿವಾರಿಸಬೇಕಾಗುತ್ತದೆ.
ಜೈವಿಕ ತೆರೆಯಲ್ಲಡಗಿರುವ ಬ್ಯಾಕ್ಟೀರಿಯಗಳು ಏಕಾಂಗಿಯಾಗಿ ಅಡ್ಡಾಡುವ…
ವಿಧ: Basic page
July 09, 2007
ದಕ್ಷಿಣ ಅಮೆರಿಕಾದ ಚಿಲಿಯಲ್ಲಿ ಸರೋವರದ ನೀರು ಖಾಲಿಯಾದುದನ್ನು ಜನ ಗಮನಿಸಿದರು.ಈ ಸಂಗತಿ ಗಮನಕ್ಕೆ ಬಂದುದು ಮೇ ತಿಂಗಳಲ್ಲಿ. ಇದಕ್ಕೆ ಕಾರಣವೇನು ಎಂದು ತಜ್ಞರು ತಲೆ ಕೆಡಿಸಿಕೊಳ್ಳುತ್ತಿದ್ದರು. ಕೊನೆಗೂ ಅದರ ಹಿಂದಿನ ಕಾರಣ ಪತ್ತೆಯಾಗಿದೆ. ಸರೋವರದ ನೀರು ಸರೋವರದಿಂದ ಇಳಿದು ಹೋಗದಂತೆ ತಡೆಯುತಿದ್ದ ಹಿಮಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿತಂತೆ. ಈ ಕಾರಣದಿಂದ, ಸರೋವರದ ನೀರು, ಸಮೀಪದ ಸಮುದ್ರ ಸೇರಿ, ಸರೋವರ ಖಾಲಿಯಾಯಿತು ಎನ್ನುವುದು ಈಗ ಸಿದ್ಧವಾಗಿದೆ.ಸರೋವರದ ಸಮೀಪ ಇರುವ ಹಿಮರಾಶಿ,ಸರೋವರದ…