ಎಲ್ಲ ಪುಟಗಳು

ಲೇಖಕರು: girish.shetty
ವಿಧ: Basic page
July 13, 2007
ಕಾತುರ ಹಳೆಯ ಗಾಯವಾದರೆ ಮಾಸಬಹುದು, ಮಾಸಗಳು ಕಳೆಯಲು ನೆನಪುಗಳು ಮರೆಯಬಹುದು. ಬೆಳದಿಂಗಳ ಹಿಡಿಯ ಬಯಸುವ ಮುಗ್ದ ಮನಸಿನ ಪ್ರೀತಿ, ವಸಂತಕ್ಕೆ ಕಾದು ಮನ ಮಿಡಿತವ ಹಿಡಿದಿಡುವ ಕೋಗಿಲೆಯ ರೀತಿ. ಮುಗಿಲ ಮರೆಮಾಚುವ ಕಾರ್ಮುಗಿಲ ಕಾದ ನವಿಲಿನಂತೆ, ನಿನ್ನ ಸವಿ ನುಡಿಗಾಗಿ ಕಾಯುತಿರುವೆ ಮುಂಗಾರಿನ ಮಿಂಚಿನಂತೆ. ನಿರೀಕ್ಷೆ ಸಂಜೆ ಸೂರ್ಯ ಕಡಲಿಗಿಳಿದ ಭೂತಾಯಿಯ ಮೈಯ ತೋಯ್ದು ತೋಯ್ದು ಕಿವ್ ಕಿವ್ ಹಕ್ಕಿಗಳು ಹಾರ ಹತ್ತವು ಆತುರದಿ ಗೂಡತ್ತ ಎದ್ದು ಬಿದ್ದು ಕೆಂಪು ಗುಲಾಬಿ ಎಸಳ ಮುಚ್ಚುತಿತ್ತು ಬಾರದ ದುಂಬಿಯ…
ಲೇಖಕರು: girish.shetty
ವಿಧ: Basic page
July 13, 2007
ಬರ ಹಸಿದ ಹೊಟ್ಟೆಗೆ ಹಿಡಿ ಅನ್ನವೆ ಸಾಕು, ನೊಂದ ಮನಕೆ ಅವಳ ಮುಗುಳ್ನಗೆಯಷ್ಟೆ ಸಾಕು ಮತ್ತೆ ಜೀವ ಬರಿಸಲು ಕುಡಿ ನೊಟವೆ ಸಾಕು ಅನ್ನವೀಯಲೇ ಇಲ್ಲ, ಮುಗುಳ್ನಗೆಗೆ ಬರವಿಲ್ಲಿ, ಕುಡಿ ನೋಟಕೆ ನೀನೆಲ್ಲಿ! ಪರದೆ ಪ್ರಪಂಚ ಕಾಣಿಸದು, ಬರಿದೇ ಕೇಳಿಸುವುದು ಕತ್ತಲು ಕವಿದರೆ, ಕಣ್ಣು ಕುರುಡಾದರೆ   ಮಾತುಗಳಷ್ಟೆ ಕೇಳಿಸುವುದು, ಸತ್ಯಾಸತ್ಯಥೆಯಲ್ಲ ಮನದ ತುಂಬೆಲ್ಲ ಅಜ್ನಾನ ಮನೆ ಮಾಡಿದರೆ   ಹೊಟ್ಟೆಗಷ್ಟೆ ಪಚನ, ಸಿಹಿಯ ಸುಖವಿಲ್ಲ ನಾಲಿಗೆಯು ತನ್ನ ರುಚಿಯ ಕಳೆದರೆ   ಪ್ರೀತಿ, ಭರವಸೆಗಳಲ್ಲ,…
ಲೇಖಕರು: hpn
ವಿಧ: ಚರ್ಚೆಯ ವಿಷಯ
July 13, 2007
ಕೆಲವು ದಿನಗಳಿಂದ ಸ್ನೇಹಿತರೊಬ್ಬರು ತಮ್ಮ IM (instant messenger) ನಲ್ಲಿ "ಅಹಿರಾಮೃಗ ನೋಡ್ದೆ" ಅನ್ನೋ ಸ್ಟೇಟಸ್ ಮೆಸೇಜ್ ಹಾಕಿಕೊಂಡು ಯಾರಿಗೂ ಅದೇನೆಂದು ಹೇಳದೆ ಮಜಾ ತಗೊಳ್ಳುತ್ತಿದ್ದಾರೆ. ನಿಮಗ್ಯಾರಿಗಾದರೂ ಗೊತ್ತುಂಟೋ? "ಅಹಿರಾಮೃಗ" ಅಂದರೆ ಏನು ಎಂಬುದು? ಅಥವ [:http://mysorepost.wordpress.com/|ರಶೀದ್] ಸ್ಟೈಲಿನಲ್ಲಿ ಕೇಳೋದಾದ್ರೆ - ಈ ವಾಕ್ಯದ ಅರ್ಥವನ್ನು ಬಿಡಿಸುವವರು ಯಾರಿದ್ದೀರಿ ಕೈಯೆತ್ತಿ ನೋಡೋಣ? ;)
ಲೇಖಕರು: girish.shetty
ವಿಧ: Basic page
July 13, 2007
ಜರಿ ಜರಿಯಾಗಿ ಧರೆಗಿಳಿವ ರಮಣೀಯ ಜಲಧಾರೆ ಬೆಳ್ಳನೆ ಬೆಳದಿಂಗಳೋಪಾದಿ ದುಮ್ಮುಕ್ಕಿ ಹರಿಯುತಿರೆ. ದಟ್ಟಡವಿಯಲ್ಲಿ, ಬೆಟ್ಟದತಡಿಯಲ್ಲಿ ಸಾಗುತಿರೆ ಭರದಿ ಮುಂದೆ ಮುಂದೆ ನಾ ಒಲ್ಲೆನೆನದೆ ಯಾರಿಗೂ, ಸೆಳೆದುಕೊಳ್ಳುತ್ತಾ ಎಲ್ಲವ ತನ್ನ ಹಿಂದೆ ಹಿಂದೆ. ಕಡಲ ಮಡಿಲ ಸೇರುವಾಗ ನೀ ತಾಳಿದರೇನಿಲ್ಲ ರೌದ್ರವ ರೂಪವ ಅತಿಶಯೋಕ್ತಿ ಆದರೂ ಅದು ಎನಿತು ಸಾಧ್ಯ ಪ್ರಶಾಂತವಾಗಿ ಹರಿವ ನಿನ್ನೀ ಆ ಶಕ್ತಿ. ಬೋರ್ಗರೆವ ಮಳೆಯಂತೆ ನೀ ಸ್ರಸ್ಟಿಸುವೆ ಸುಂದರ ಜಲಪಾತ ನಿನ್ನ ಭಾವನೆಗಳೇ ನೀರ ಹನಿಗಳಾಗಿ ನಿರ್ಮಿಸಿದೆ ಅಗಾಧ…
ಲೇಖಕರು: girish.shetty
ವಿಧ: Basic page
July 13, 2007
ಬಾಳ ದಾರಿಯಲಿ ಪಕ್ಕನೆ ಎದುರಾಯ್ತು ಒಂದು ಸುಂದರ ಹೂವು ಮಿಂಚಂತೆ ಬಳಿ ಬಂದು ನಕ್ಕು ಮರೆಸಿತು ನನ್ನೆಲ್ಲ ಹಳೆಯ ನೋವು ಮರುಳಾದೆ ಗಾಳಿಯಲ್ಲಿ ತೇಲಿ ಬಂದ ಆ ಹೂವ ಮಧುರ ಕಂಪಿಗೆ ನಾಚಿ ಬಳುಕಿತದು ಸಂಜೆ ಸೂರ್ಯನೆದಿರು ಮಾಡಿ ಮೈಯ ಕೆಂಪಗೆ ಗಾಳಿಯ ಹಾಡಿಗೆ ತಲೆದೂಗಿ ನನ್ನೆದೆಗೆ ಸೋಕಿದಾಗ ಅರಿಯದ ಹೊಸ ಕಂಪನ ಗಮ್ಮೆನಿಸುವ ಹೂವ ಪರಿಮಳ ಸೋಕಿ ತುಂಬಿ ಬಂತು ನನ್ನ ಮೈಮನ ಹೂವ ಮುಡಿಯೇರಿಸುವ ಮನದಾಳದಾಸೆಯ ಅದುಮಿಟ್ಟೆ ಸ್ವಚಂದವಾಗಿ ಹಾಡಿ ನಲಿವ ಹೂವ ನೋಡೇ ಖುಶಿಪಟ್ಟೆ ಕಾಯುತಲಿದ್ದೆ ಹಗಲಿರುಳು ಉರಿ ಬಿಸಿಲಲಿ…
ಲೇಖಕರು: girish.shetty
ವಿಧ: Basic page
July 13, 2007
ಒಣ ಮರದ ಕೊನೆ ಕೊನೆಯಲಿ ಚಿಗುರೊಡೆದ ಎಳೆ ರೆಂಬೆ ಸುಡು ಬಿಸಿಲ ಕಡು ಕೋಪಕೆ ಕರಟಿಹೊಯ್ತ ಮುರುಟಿ ಮುರುಟಿ ಧರೆಗೊರಗುವ ನೋವ ನಡುವೆ ವಿಶಾದದ ನಗು, ಏನಿದು ಸತ್ವಹೀನ ಬದುಕು? ಸುಗ್ಗಿ ಕಾಲದ ಕಂಪಿನಲಿ ಸೊಕ್ಕಿ ಬೆಳೆದ ದಪ್ಪನೆಯ ಕಬ್ಬು ಕಬ್ಬಿನಾಲೆಯ ಗಾಣಕ್ಕೆ ಸಿಕ್ಕಿ ಹಿಂಡಿ ಹಿಪ್ಪೆಯಾಯ್ತು ಸೊರಟಿ ಸೊರಟಿ ತೊಟ್ಟಿಯ ಸೇರಿದ ಕಬ್ಬಜಲ್ಲೆಗೊಂದು ಕಹಿ ನಗು, ಏನಿದು ರಸಹೀನ ಬದುಕು? ಕಪ್ಪು ಕತ್ತಲೆಯಲಿ ಬೆತ್ತಲೆ ನೆಲವನಪ್ಪಿ ಮಲಗಿದ ತಬ್ಬಲಿ ದೇಹ ಹಸಿದೊಡಲಿಗೆ ಸಂತ್ವಾನ ಹೇಳಲು ಬಿಕ್ಷೆಗಿಳಿಯಿತು ಊರು…
ಲೇಖಕರು: girish.shetty
ವಿಧ: Basic page
July 13, 2007
ಮನದ ಹೊಸ್ತಿಲ ದಾಟಿ, ನಡುಮನೆಯ ಸೇರಿದಳಾಕೆ ತಿಳಿನೀರ ಕೊಳದಲಿ ತುಂಬಿ ಅರಿವಾಗದ ಹೊಸ ಬಯಕೆ ಆಸೆ ಹೊತ್ತ ಮನಕೆ ತಿಳಿ ಹೇಳ ಹೊರಟೆ, ನಿನದಲ್ಲದ್ದು ಈಗ್ಯಾಕೆ? ಕಣ್ಣ ಮುಚ್ಚಿದರೆ ಕಣ್ಣ ಬಿಂಬದಿ ನಿಂತು ಬಾಗಿಲ ತೆರೆದು ನಗುವಳವಳು ಹೊರ ಹೋಗೆಂದು ಕಣ್ಣ ತೆರೆದರೆ, ಎದೆಯ ಕೋಣೆಯಲಿ ಬಚ್ಚಿಟ್ಟುಕೊಳುವಳು ಕಣ್ಣೀರಾಗಿ ಹೊರ ದುಮುಕೆಂದರೆ, ಕಂಬನಿಯ ಬರಿದಾಗಿಸಿದಳವಳು ಸೆಳೆದುಕೊ ಈಕೆಯ ಎಂದು ಬೀಸೊ ಗಾಳಿಗೆ ಎದೆಯೊಡ್ಡಿ ನಿಂತರೆ ಒಳ ಸೇರಿ ಮುದುಡಿ ಕುಳಿತಳು ಎದೆಯ ಗೂಡೊಳಗೆ ಅವಳ ನೆನಪ ನೀರಾಗಿ ಹರಿಸೆಂದು ಮಳೆಯ…
ಲೇಖಕರು: girish.shetty
ವಿಧ: Basic page
July 13, 2007
ಬಿಟ್ಟು ಬಿಟ್ಟಳು ಬಿಗುಮಾನ, ಹಿಡಿದಿಟ್ಟಳು ಓಡುತ್ತಿರುವ ಮನಸ್ಸನ್ನ ಕೂಗುತಿತ್ತು ಹ್ರದಯ ಸೋಲುತಿಹೆನು ನಾನು, ಸೋಲ ಬಿಡಬೇಡ ನೀನನ್ನ ಮನಸ್ಸು ಹ್ರದಯಗಳ ನಡುವೆ ಭಾವನೆಗಳು ನಡೆಸುತಿರೆ ಕೋಲಾಹಲ ಹಿನ್ನಲೆ ಎಂಬಂತೆ, ಮಿಂಚು ಗುಡುಗುಗಳು ಸ್ರಷ್ಟಿಸಿವೆ ಮನಸ್ಸಲ್ಲಿ ಹಾಲಾಹಲ ಬಿಟ್ಟು ಬಿಟ್ಟಳು ಬಿಗುಮಾನ, ಹಿಡಿದಿಟ್ಟಳು ಓಡುತ್ತಿರುವ ಮನಸ್ಸನ್ನ ಋಷಿ ಪತ್ನಿ ಅಹಲ್ಯೆ ಆಗಲಿಲ್ಲವೆ ಬಲಿ ತನ್ನದಲ್ಲದ ತಪ್ಪಿಗೆ? ಮರ್ಯಾದ ಪುರುಷೊತ್ತಮನ ಸತಿಯೂ ಬೀಳಬೇಕಾಯ್ತಲ್ಲ ಕೊನೆಗೆ ಬೆಂಕಿಗೆ! ಹಡೆದೈದು ಮಕ್ಕಳ…
ಲೇಖಕರು: girish.shetty
ವಿಧ: Basic page
July 13, 2007
"ಎದೆ ಮುಗಿಲಿನಲ್ಲಿ, ರಂಗು ಚೆಲ್ಲಿ ನಿಂತಳು ಅವಳು, ಬರೆದು ಹೆಸರ ಕಾಮನಬಿಲ್ಲು...", ಮೊಬೈಲಿಂದ ಮುಂಗಾರು ಮಳೆಯ ಶೀರ್ಷಿಕೆ ಗೀತೆ ಕೇಳುತಲಿದ್ದೆ. ಹಾಗೆ ಬಸ್ಸಿನ ಕಿಡಕಿಯನ್ನ ಸ್ವಲ್ಪ ಸರಿಸಿದೆ. ಹಿಂದಿನ ದಿನ ಬಿದ್ದ ಮಳೆಯಿಂದಾಗಿ ಬೆವರಿಳಿಯುವಷ್ಟು ಸೆಕೆ, ಒಡೋಡಿ ಬಂದು ಬಸ್ಸು ಹತ್ತಿದ ಕಾರಣ ಇನ್ನೂ ಜೋರಾಗೆ ಮೈ ಸುಡುತಿತ್ತು. ಹಾಡು ಕೇಳುತ್ತಾ ಮುಂಗಾರು ಮಳೆಯೊಳಗೆ ಹೊಕ್ಕಿದ್ದೆ. "excuse me" ತುಸು ಜೋರಾಗೆ ಯಾರೊ ಕೂಗಿದ ಹಾಗೆ ಅನ್ನಿಸಿ ಕತ್ತು ತಿರುಗಿಸಿದರೆ, ಗಡಸು ಮುಖ ಮಾಡಿ ನಿಂತ ಹುಡುಗಿ…
ಲೇಖಕರು: anilkumar
ವಿಧ: ಕಾರ್ಯಕ್ರಮ
July 13, 2007
ಕೆನ್ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸ೦ಘ (ರಿ) ಕೆನ್ ಕಲಾಶಾಲೆಯ ಪ್ರಾಚಾರ್ಯರಾಗಿ ನಿವೃತ್ತರಾಗಿರುವ ಕಲಾವಿದ ಹಾಗೂ ಕಲಾಶಿಕ್ಷಕ ಜೆ.ಎ೦.ಎಸ್. ಮಣಿಯವರಿಗೆ ಅಭಿನ೦ದನಾ ಸಮಾರ೦ಭ ಮುಖ್ಯ ಅತಿಥಿಗಳು: ಕಲಾವಿದ ಕೆ.ಟಿ.ಶಿವಪ್ರಸಾದ್, ಜೆ.ಎ೦.ಎಸ್.ಮಣಿಯವರ ವ್ಯಕ್ತಿತ್ವವನ್ನು ಪರಿಚಯಿಸುವ ಪುಸ್ತಕ "ಕೆನ್ ದೃಶ್ಯ ನಿರ್ಮಿತಿ: ಜೆ.ಎ೦.ಎಸ್.ಮಣಿ" ಬಿಡುಗಡೆ ಕಲಾವಿದ ಎನ್. ಮರಿಶಾಮಾಚಾರ್‍ರಿ೦ದ ಅಧ್ಯಕ್ಷತೆ: ಕಲಾವಿದ ಕೆ.ಚ೦ದ್ರನಾಥ್ ಆಚಾರ್ಯ ದಿನಾ೦ಕ: ೧೫ನೇ ಜುಲೈ, ೨೦೦೭ ಕಾಲ: ಬೆಳಿಗ್ಗೆ…