ಎಲ್ಲ ಪುಟಗಳು

ಲೇಖಕರು: arunhegde
ವಿಧ: Basic page
July 13, 2007
ಪುಟ್ಟಣ್ಣ ಕಣಗಾಲ್ (೧ ಡಿಸೆಂಬರ್ ೧೯೩೩ - ೫ ಜೂನ್ ೧೯೮೫) ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರು. ಕನ್ನಡ ಚಿತ್ರರಂಗದಲ್ಲಿ ಮಹೋನ್ನತ ಚಿತ್ರಗಳನ್ನು ನಿರ್ದೇಶಿಸಿ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ಬೆರಗಾಗಿ ನೋಡುವಂತೆ ಮಾಡಿದ ಮೇಧಾವಿ. ಪುಟ್ಟಣ್ಣನವರ ಒಂದೊಂದು ಚಿತ್ರವೂ ಒಂದೊಂದು ಅನರ್ಘ್ಯ ರತ್ನವಿದ್ದಂತೆ. ಪುಟ್ಟಣ್ಣನವರ ನಿರ್ದೇಶನದ ಚಿತ್ರಗಳನ್ನು ಮತ್ತೊಮ್ಮೆ ನೆನೆದು ಹೆಮ್ಮೆ ಪಡೋಣ........ಕನ್ನಡ ಚಿತ್ರಗಳು 0 - ಬೆಟ್ಟದ ಹಾದಿ (ಬಿಡುಗಡೆಯಾಗಿಲ್ಲ)1 ಬೆಳ್ಳಿಮೋಡ - (1966 -…
ಲೇಖಕರು: girish.shetty
ವಿಧ: Basic page
July 13, 2007
ಹುಡುಕಾಟ ಕಪ್ಪು ಕತ್ತಲಲಿ, ಗೊಂಡಾರಣ್ಯದಲಿ, ಬಾಳ ಬೆಳಕಿನ ಹುಡುಕಾಟ ರವಿಯೇ ಬರಲೊಲ್ಲೆ ಎನುತಿರೆ, ನಾ ಬಿಡಲಾರೆ ನನ್ನ ತಿಣುಕಾಟ ಕಲ್ಲು ಮುಳ್ಳೆನದೆ, ಹಳ್ಳ ದಿಣ್ಣೆ ಎನದೆ, ನಾ ಸಾಗುತಿರೆ ಗುರಿಯತ್ತ ಭರದಿ ಮೂರ್ಖತನ ಎನಬೇಡ ನಂಬಿಕೆಯಿದೆ, ನಾನೊಬ್ಬ ಆಶಾವಾದಿ ಮಿಂಚುಹುಳದ ಬೆಳಕ ನಿರ್ಲಕ್ಷಿಸಲಾರೆ ನನ್ನ ದೀಪದ ಹುಡುಕಾಟವ ನಿಲ್ಲಿಸಲಾರೆ ಮುನ್ನುಗ್ಗುವೆ ನಾ, ಕಗ್ಗತ್ತಲ ಸೀಳಿ ಹಾಲೆರೆವ ಸೂರ್ಯಕಿರಣದ ತೆರದಿ ಆಸೆಬುರುಕ ಅಂತೆನಬೇಡ ಭರವಸೆಯಿದೆ, ನಾನೊಬ್ಬ ಛಲವಾದಿ ಎಣ್ಣೆ ಆರುವ ಮುಂಚೆ ಬೆಳಕ ಕಾಣುವ…
ಲೇಖಕರು: girish.shetty
ವಿಧ: Basic page
July 13, 2007
ಕಾವೇರಿ ರಾಮರಾಜ್ಯದ ಜನ ಕಾದರು, ರಾಮ ಮುಗಿಸಿ ಬರುವನು ವನವಾಸದ ಹದಿನಾಲ್ಕು ವರುಷ ಜನ ಮತ್ತೆ ಕಾದರು, ಕಾವೇರಿ ತೀರ್ಪು ಬರಲು ಇನ್ನೂ ಹದಿನಾಲ್ಕು ವರುಷ ಕಾದು ಕಾದು ಬೇಸತ್ತಿರಬೇಕು ಆಕೆಯೂ ಜೀವನಾಡಿಯಲ್ಲಿ ನೆತ್ತರಂತೆ ಹರಿವ ನೀರ ಸುಡುಬಿಸಿಲಿಗೆ ಮೈಯೊಡ್ಡಿ ಒಣಗಿಸಿ ಬರಿದಾಗಿಸಿ ಜೀವನದಿಗೇನಾದರು ಜೀವವಿದ್ದಿದ್ದರೆ! ಕಾವೇರಿ ನಕ್ಕಳೆಷ್ಟೊ, ಅತ್ತಳೆಷ್ಟೊ? ತನ್ನನ್ನೇ ಹಂಚಿ ತಿನ್ನ ಹೊರಟ ಜನರ ಮರಳುತನ ನೋಡಿ ಅಡೆ ತಂದಿಟ್ಟರು, ಹರಿವ ನೀರ ಸ್ವಾತಂತ್ರ್ಯ ಕಸಿದು ಬದಲಾಗಿ, ಹಿತವಾಗಿ ಅಲೆಯೆಬ್ಬಿಸಿದಳು,…
ಲೇಖಕರು: girish.shetty
ವಿಧ: Basic page
July 13, 2007
ಪ್ರಕ್ರತಿ ಅಪರೂಪಕೊಮ್ಮೆ ಎಂಬಂತೆ ಹೊರ ನಡೆದಿದ್ದೆ ಕಾವೇರಿ ತಡಲಿಗೆ ತಂಪಾದ ಗಾಳಿ ಬೀಸಲು ಜಾರಬೇಕೆನಿಸಿತು ಹಸಿರ ಮಡಿಲಿಗೆ ದೂರದಿ ನದಿ ನೀರು ಹರಿಯೆ ಕೇಳುತಿದೆ ಜುಳು ಜುಳು ಚಿಂವ್ ಚಿಂವ್ ಎಂದು ದನಿಗೂಡಿ ಹಾಡಿವೆ ಗಿಣಿಗಳು ಘಮ್ಮನೆ ಕಂಪ ಸೂಸುತಿರೆ ಅರಳಿ ಬೀಗುತಿಹ ಮಂದಾರ ಪುಷ್ಪ ನೋಡುಗನ ಕಣ್ಣಿಗೆ, ಧರೆಗಿಳಿದು ಬಂದ ದೇವತೆಯ ಪ್ರತಿರೂಪ ಪ್ರಕ್ರತಿ ಹಸಿರು ಜರಿ ಸೀರೆಯುಟ್ಟು ಮಾಡುತಿರೆ ವಯ್ಯಾರ ಆಸೆಬುರುಕನಂತೆ ದುರುಗುಟ್ಟಿ ದೂರದಿ ನೋಡುತಿಹ ನೇಸರ __________________________________ ಕಾಲ…
ಲೇಖಕರು: girish.shetty
ವಿಧ: Basic page
July 13, 2007
ಸೋಲು ಕುಹುಕ ನಗುವಿನ ಪ್ರಪಂಚ ಕಾಡಿ ಕದಡುತಿತ್ತು ಮನವ ಮೈಯ ತುಂಬ ಉಟ್ಟಿತ್ತು ಏಮಾರಿಸಿದ ಜಂಬತನವ ಅರೆಕ್ಷಣದಲಿ ವಿಲಕ್ಷಣವಾಗಿ ಬಂದೆರಗಿದ ಸೋಲು ಹಾಕಿ ಉಳಿಸಿಕೊಂಡ ಅಡಿಪಾಯಕ್ಕೆ ಮುಟ್ಟಗೋಲು ಅಟ್ಟಹಾಸದಿ ಮೆರೆಯುತಾ ನಡೆಸುತ್ತಿತ್ತು ವಿಜಯದ ವಿಜ್ರಂಮಣೆ ಸೋಲಿನ ಅಳಲು, ಅಸಹಾಯಕತೆಯ ಮಡಿಲು, ಮಾಡಿತ್ತು ಮತಿಭ್ರಮಣೆ ಇಲ್ಲಿ ಒಮ್ಮೆ ಮೌನಗಳ ನಡುವೆ ಗುದ್ದಾಟ, ಮಗದೊಮ್ಮೆ ಮೌನ ರೋದನ ಅಲ್ಲಿ ಹೊರಗೆ ಕೋಲಾಹಲ, ಮಳೆ ಗುಡುಗು ಮಿಂಚುಗಳ ರುದ್ರನರ್ತನ _______________________________________________…
ಲೇಖಕರು: gangadharg
ವಿಧ: ಚರ್ಚೆಯ ವಿಷಯ
July 13, 2007
ಈ ನಡುವೆ ಬಹಳಷ್ಟು ಜನಗಳು ಕನ್ನಡ ಕನ್ನಡ ಎಂದುಕೊಂಡು ಅಂಗಡಿಗಳನ್ನೊಡೆಯೋದು, ಚಿತ್ರಮಂದಿರಗಳನ್ನ ಚೂರು ಮಾಡೋದು, ಪೇಪರುಗಳನ್ನ ಬೈಯೋದು ಇವೆಲ್ಲಾ ಕಸುಬು ಮಾಡಿಕೊಂಡಿರುವುದು ಗಮನಕ್ಕೆ ಬರದೇ ಇರೋದಿಲ್ಲ. ಕನ್ನಡ ಪ್ರೇಮೆ ಇದೇನಾ? ಕನ್ನಡ ತಾಯಿ ಹೀಗೆ ಮಚ್ಚು ದಿಣ್ಣೆ ಹಿಡಿದು ಜಗಳ ಕಾರುವವರು ತನ್ನ ಮಕ್ಕಳೆಂದು ಹೆಮ್ಮೆ ಪಡುವಳಾ? ತಮಿಳರ ಬುದ್ಧಿ ಬಂದುಬಿಟ್ಟಿದೆಯಾ ನಮ್ಮ ಜನಕ್ಕೆ? ಸಮಸ್ತ ಕನ್ನಡಿಗರು ಕನ್ನಡ ಪ್ರೇಮವನ್ನ ಇಷ್ಟಕ್ಕೇ ಸೀಮಿತಗೊಳಿಸಿಕೊಂಡಿರಬೇಕಾ? ಭಾಷೆ ಬೇರೊಬ್ಬರ ಮೇಲೆ ಹೇರುವ…
ಲೇಖಕರು: girish.shetty
ವಿಧ: Basic page
July 13, 2007
ನಾಚಿಕೆ ನಾಚಿ ನೀರಾದಳು ನಾರಿ, ಎನಿತು ಹೇಳಲಿ ನಾಚಿದ ಆ ಪರಿ. ಅವಳುಟ್ಟಿದ್ದಳು ಆಗಸವ ಹೊಲುವ ನೀಲ ಜರಿ ಸೀರೆ, ಅವಳಾಗಿದ್ದಳು ಕಣ್ಣ ಕುಕ್ಕಿಸುವ ಸೌಂದರ್ಯ ಧಾರೆ. ಆಹ್ವಾನ ನೀಡುವಂತೆ ಕೂಗಿ ಕರೆಯುತಿತ್ತು, ಹಾರಾಡುತಿದ್ದ ಅವಳ ಸೀರೆ ಸೆರಗು. ಮರವ ಸುತ್ತಿಹ ಲತೆಯಂತೆ ನಲಿಯುತಿತ್ತು ಜರಿ ಸೀರೆಯ ನೆರಿಗು. ನೋಟ ಬದಲಿಸಲೆಂತು, ಎದುರಿಗಿರಲು ಈ ಸೊಬಗು, ಕೆಂಪೇರಿದ ಮುಖವ ತಗ್ಗಿಸಿ ನೀರಾದಳಾಕೆ ನಾಚಿಕೆಯಲ್ಲಿ ಕೊನೆಗೂ. _____________________________________________ ನಗು ತುಟಿ ಬಿಚ್ಚಿ…
ಲೇಖಕರು: girish.shetty
ವಿಧ: Basic page
July 13, 2007
ಕಣ್ಣ ತೆರೆದ ನೆನಪಿಲ್ಲ, ಮೊಲೆಯುಂಡ ನೆನಪಿಲ್ಲ ನೆನಪಿದೆ ಆ ಬಿಸಿಯಪ್ಪುಗೆ ಅಮ್ಮನ ತೋಳಲ್ಲಿ ಮೆಲ್ಲಗೆ ತಂಗಿಯ ಕೆನ್ನೆ ಹಿಂಡಿದ ನೆನಪು ಕೆಣ್ಣೆ ಬೆಣ್ಣೆಯಂತೆ ನುಣುಪು ಬಣ್ಣದ ಚಿಟ್ಟೆಯ ಹಿಡಿದ ನೆನಪು ಮರೆಯಲಾಗದ ಆ ಪುಟ್ಟ ಹುಡುಗಿಯ ಒನಪು ಆಡುತ ಕೆರೆಯ ತಡಿಯಲಿ, ಕಟ್ಟಿ ಮನೆಯ ಮರಳಲಿ ಓಡಿದ ನೆನಪು ಮುಖಕೆ ಮರಳೆರಚಿ ಅಮ್ಮನ ಕೂಗಿದ ನೆನಪು ಜೋರಗಿ ಅರಚಿ ಚಿನ್ನಿದಂಡು, ಕಬ್ಬಡಿ, ಮರದಿಂದ ಮರಕ್ಕೆ ಮರಕೋತಿ ಆಡಿದ ಆಟಕ್ಕೆ, ಓಡುವ ಕಾಲಿಗೆ ಇರಲಿಲ್ಲ ಇತಿಮಿತಿ ಮನೆ ತುಂಬ ಊರ ಹಬ್ಬದ ಸಡಗರ ನನ್ನ ತುಂಬ…
ಲೇಖಕರು: HV SURYANARAYANA SHARMA
ವಿಧ: ಬ್ಲಾಗ್ ಬರಹ
July 13, 2007
ಎಡಚರ ಅವಾಂತರಗಳು ‘ಜಾತಿ ಬಿಡಿ ಮತ ಬಿಡಿ’, ‘ಮನುಜಕುಲ ತಾನೊಂದೆವಲಂ’ ಈ ಅರ್ಥದ ಮಾತುಗಳನ್ನು ಕೇಳಿ ಕೇಳಿ ತಲೆ ಚಿಟ್ಟು ಹಿಡಿದಿರಬಹುದು, ಆದರೆ ಇದನ್ನು ಗಳಹುವವರಿಗೇನೂ ಬೇಸರವಾದಂತಿಲ್ಲ. ಅಜ್ಞಾನದಲ್ಲಿರುವ ಪ್ರಜಾಕೋಟಿಯ ಕಣ್ಣು ತೆರೆಸಲು ಪಣ ತೊಟ್ಟಿರುವ ಜಾಣ ಜಾಣೆಯರು ಇವರು. ಸರಿಸುಮಾರು ಇದೇ ಶೃತಿಯಲ್ಲಿ ಮೊರೆಯುತಿರುವ ಮತ್ತೊಂದು ಘೋಷಣೆ, ಶೋಷಣೆ ಹಾಗೂ ಅದರ ವಿರುದ್ಧ ಹೋರಾಟದ ಆಟಾಟೋಪ. ಈ ಎಲ್ಲಾ ಸಮಸ್ಯೆಗಳ ಮೂಲವನ್ನು ಸ್ವಯಂ ಘೋಷಿತ ಬುದ್ಧಿ ಜೀವಿಗಳು, ಯಾವ ಯಾವುದೋ ಪರದೇಶೀ ‘ಇಸಂ’ ಗಳಿಗೆ…
ಲೇಖಕರು: girish.shetty
ವಿಧ: Basic page
July 13, 2007
ಪರದೆ ಪ್ರಪಂಚ ಕಾಣಿಸದು, ಬರಿದೇ ಕೇಳಿಸುವುದು ಕತ್ತಲು ಕವಿದರೆ, ಕಣ್ಣು ಕುರುಡಾದರೆ ಮಾತುಗಳಷ್ಟೆ ಕೇಳಿಸುವುದು, ಸತ್ಯಾಸತ್ಯಥೆಯಲ್ಲ ಮನದ ತುಂಬೆಲ್ಲ ಅಜ್ನಾನ ಮನೆ ಮಾಡಿದರೆ ಹೊಟ್ಟೆಗಷ್ಟೆ ಪಚನ, ಸಿಹಿಯ ಸುಖವಿಲ್ಲ ನಾಲಿಗೆಯು ತನ್ನ ರುಚಿಯ ಕಳೆದರೆ ಪ್ರೀತಿ, ಭರವಸೆಗಳಲ್ಲ, ಬರೀ ಕುರುಡು ಮರ್ಯಾದೆ ಅಸಡ್ಡೆ, ಭಯಗಳೇ ಉಳಿವುದು ನಂಬಿಕೆ ಮುರಿದರೆ ಬದುಕೊಂದು ಶಿಕ್ಷೆ, ನಿತ್ಯದ ಗೋಳು ಸ್ವಾರ್ಥ ತುಂಬಿದರೆ, ಸಂಬಂಧಗಳ ಮರೆತರೆ ಅತ್ತ ಇತ್ತಲು, ಸುತ್ತಲು, ಬರಿ ಕತ್ತಲು ಮನದ ಹೊರಗೂ, ಒಳಗೂ ಪರದೆಗಳದ್ದೆ…