ವಿಧ: ಬ್ಲಾಗ್ ಬರಹ
July 16, 2007
ಕಳೆದೆರೆಡು ವಾರ ಕನ್ನಡದ ಬ್ಲಾಗುಗಳೆನ್ನೆಲ್ಲ ನನ್ನ ಗೂಗಲ್ ರೀಡರ್ ನಲ್ಲಿ ಚಂದಾ ಮಾಡಿ, ಮತ್ತೆ ನನ್ನ ಬ್ಲಾಗಿನಲ್ಲಿ ಲಿಂಕ್ (ಕನ್ನಡ ಬ್ಲಾಗುಲೋಕ) ಕೊಟ್ಟುಕೊಂಡು ಸುಸ್ತಾಗಿ ಏನನ್ನೂ ಬರೆದಿರಲಿಲ್ಲ. ಆದರೆ ಈ ವಿಷಯದ ಬಗ್ಗೆ ತುಂಬ ದಿನಗಳಿಂದ ಬರೆಯಬೇಕು ಎಂದುಕೊಂಡಿದ್ದೆ. ಅನಿವಾಸಿಯವರು 'ಮುಂಗಾರು ಮಳೆ' ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಯನ್ನು ಸಂಪದದಲ್ಲಿ ಬರೆದಾಗ ಅದಕ್ಕೆ ಬಂದ ಖಾರವಾದ ಪ್ರತಿಕ್ರಿಯೆಗಳನ್ನು ಓದಿದ ಮೇಲಂತೂ ತುಡಿತ ಇನ್ನೂ ಜಾಸ್ತಿಯಾಯಿತು.
ನಾನು ನನ್ನ ವಿಚಾರವನ್ನು ಸರಳೀಕರಿಸಲು…
ವಿಧ: ಚರ್ಚೆಯ ವಿಷಯ
July 15, 2007
ಬಂಜಗೆರೆ ಜಯಪ್ರಕಾಶ ಅವರು ಬರೆದಿರುವ “ಆನುದೇವಾ ಹೊರಗಣವನು” ಎಂಬ ಸಂಶೋಧನಾ ಪ್ರಬಂಧದ ಕುರಿತಂತೆ ದೊಡ್ಡ ವಿವಾದ ನಡೆದಿದೆ. ಈ ಪುಸ್ತಕದಲ್ಲಿ ಅವರು ಬಸವಣ್ಣನವರು ವಿಚಾರಕ್ರಾಂತಿಗೆ ನಾಂದಿಯಾಗಿ ಬ್ರಾಹ್ಮಣತ್ವವನ್ನು ತೊರೆದರೆಂಬ ಸಿದ್ಧ ನಿಲುವಿಗೆ ವ್ಯತಿರಿಕ್ತವಾದ ವಾದವನ್ನು ಮುಂದಿಡುತ್ತಾ ತಮ್ಮ ವಾದಕ್ಕೆ ಪೂರಕವಾದ ಪುರಾವೆಯನ್ನು ಎಳೆಎಳೆಯಾಗಿ ಬಿಡಿಸಿಡುತ್ತಾ ಹೋಗುತ್ತಾರೆ.
ಹಾಗೆ ನೋಡಿದರೆ ಬಸವಣ್ಣನವರ ಬಗ್ಗೆ ಬರೆದ ಪರಿಚಯ ಸಾಹಿತ್ಯವೆಲ್ಲವೂ ಅವರ ಸಮಕಾಲೀನರು ಬರದಿದ್ದಲ್ಲ. ಬಸವನ ನಂತರ ಅಂದರೆ…
ವಿಧ: Basic page
July 15, 2007
ಸತ್ಯ ಅಹಿಂಸೆಯ ಹಾದಿಯಲ್ಲಿ ಹೋರಾಡಿ ಪರಕೀಯ ಅಳ್ವಿಕೆಯಿಂದ ಬಿಡುಗಡೆ ಹೊಂದಿ ವಿಷ್ವ ಸಮುದಾಯದಲ್ಲಿ ಜವಾಬ್ದಾರಿಯುತ ರಾಷ್ಟ್ರವಾಗಿ ಭಾರತ ಸ್ಥಾನಮಾನ ಪಡೆದಿದೆ. ಸ್ವತಂತ್ರ ಬಂದ ಹೊಸತರಲ್ಲೇ ನಡೆದ ಈ ಘಟನೆ ನಂಬಲಸಾಧ್ಯವಾದರೂ ಸತ್ಯ.
ಸೆಪ್ಟೆಂಬರ್ ೬,೧೯೪೭ ರಂದು ನವದೆಹಲಿಯಲ್ಲಿ ನಡೆದ ಈ ಗುಪ್ತ ಸಭೆ ಮುಂದಿನ ಕಾಲು ಶತಮಾನದ ಕಾಲ ಗುಟ್ಟಾಗಿರದಿದ್ದರೆ ಮುಂದೆ ಜಗತ್ತಿನ ಪ್ರಮುಖ ರಾಜಕೀಯ ಮುತ್ಸದ್ದಿಯಾಗಿ ಮೆರೆದ ಪಂಡಿತ್ ಜವಹರಲಾಲ್ ನೆಹರುರವರ ಭವಿಷ್ಯ ಏನಾಗಿರುತ್ತಿತ್ತೆಂದು ಹೇಳಲು ಕಷ್ಟಕರ.…
ವಿಧ: ಚರ್ಚೆಯ ವಿಷಯ
July 15, 2007
ಕಳೆದೆರೆಡು ವಾರ ಕನ್ನಡದ ಬ್ಲಾಗುಗಳೆನ್ನೆಲ್ಲ ನನ್ನ ಗೂಗಲ್ ರೀಡರ್ ನಲ್ಲಿ ಚಂದಾ ಮಾಡಿ, ಮತ್ತೆ ನನ್ನ ಬ್ಲಾಗಿನಲ್ಲಿ ಲಿಂಕ್ (ಕನ್ನಡ ಬ್ಲಾಗುಲೋಕ) ಕೊಟ್ಟುಕೊಂಡು ಸುಸ್ತಾಗಿ ಏನನ್ನೂ ಬರೆದಿರಲಿಲ್ಲ. ಆದರೆ ಈ ವಿಷಯದ ಬಗ್ಗೆ ತುಂಬ ದಿನಗಳಿಂದ ಬರೆಯಬೇಕು ಎಂದುಕೊಂಡಿದ್ದೆ. ಅನಿವಾಸಿಯವರು 'ಮುಂಗಾರು ಮಳೆ' ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಯನ್ನು ಸಂಪದದಲ್ಲಿ ಬರೆದಾಗ ಅದಕ್ಕೆ ಬಂದ ಖಾರವಾದ ಪ್ರತಿಕ್ರಿಯೆಗಳನ್ನು ಓದಿದ ಮೇಲಂತೂ ತುಡಿತ ಇನ್ನೂ ಜಾಸ್ತಿಯಾಯಿತು.
ನಾನು ನನ್ನ ವಿಚಾರವನ್ನು ಸರಳೀಕರಿಸಲು…
ವಿಧ: ಚರ್ಚೆಯ ವಿಷಯ
July 15, 2007
ಗೆಳೆಯ ಗೆಳತಿಯರೆ,
ಕಾರ್! ಕಾರ್!! ಕಾರ್!!! ಕಾರ್!!!! .... ಎಲ್ನೋಡಿ ಕಾರ್ !!!!!!!
ಇದೇನಪ್ಪ "ಟ್ರಾಫಿಕ್ ಜಾಮ್ ಮುಕ್ತ ಬೆಂಗಳೂರು" ಅಂತ ಯೋಚನೆ ಮಾಡ್ತಿದೀರ? ನಾವಾದರು ಬೆಂಗಳೂರು ತ್ರಾಫಿಕ್ ಜಾಮ್ ಗಳ ನಿರ್ಮೂಲನೆ ಬಗ್ಗೆ ಯೋಚಿಸಬೇಕು: ಯಾಕಂದ್ರೆ ನಮ್ಮ ಸರ್ಕಾರವಾಗಲಿ, ಮಹಾನಗರ ಪಾಲಿಕೆಯಾಗಲಿ ಇದರ ಬಗ್ಗೆ ಹೆಚ್ಹು ಗಮನ ಕೊಡುತ್ತಿಲ್ಲ ಅದಕ್ಕೆ ......
- ಆಫೀಸಿಗೆ ತಡವಾಗಿ ಹೋದಾಗ
- ಪರೀಕ್ಷೆಗೆ ತಡವಾಗಿ ಹೋದಾಗ
- ರಸ್ತೆಯಲ್ಲಿ ಆಂಬುಲೆನ್ಸ್ ಟ್ರಾಫೀಕಿನಲ್ಲಿ ಸಿಕ್ಕಿ ಹಾಕಿಕೊಂಡಿರುವುದನ್ನು…
ವಿಧ: ಬ್ಲಾಗ್ ಬರಹ
July 14, 2007
ಜೀವನದ ಸಿಂಹಪಾಲು ಸಮಯ ಹುಟ್ಟಿದ ಹಳ್ಳಿಯ ಹೊರಗೇ ಕಳೆದರೂ ಊರಿನ ಅವಿಸ್ಮರಣೀಯ ಅನುಭವಗಳು ನನ್ನನ್ನು ಸೆರೆಹಿಡಿದಿವೆ. ತಿಳುವಳಿಕೆ ಬಂದಾಗಿನಿಂದ ಸಮಾಜವನ್ನು ಅರ್ಥೈಸಿಕೊಳ್ಳಬೇಕೆಂಬ ಹಂಬಲ ಬರೆಯಲು ಪ್ರೇರೇಪಿಸಿದರೂ ಸಮಯದ ಒತ್ತಡಕ್ಕೆ ಸಿಕ್ಕು ಮೈಗಳ್ಳಾನಾಗಿದ್ದ ನನಗೆ ಕಣ್ತೆರೆಸಿದವಳು ಚಂದ್ರವ್ವ ಮುದುಕಿ. ಪ್ರತಿ ಸಲ ಊರಿಗೆ ಹೋದಾಗಲೆಲ್ಲಾ ಊರಿನ ಹಿರಿಯರ ಜೊತೆ ಸ್ವಲ್ಪ ಕಾಲ ಕಳೆಯುವ ಹವ್ಯಾಸ ನನ್ನದು. ಹಾಗೆಯೇ ಎಲ್ಲರಿಗೂ ಹಾಜರಿ ಕೊಟ್ಟು ಬರುವ ನೆಪದಲ್ಲಿ ಚಂದ್ರವ್ವ ಮುದುಕಿಯನ್ನು ಕಾಣಲು ಹೋದೆ.…
ವಿಧ: ಬ್ಲಾಗ್ ಬರಹ
July 14, 2007
ನನ್ನ ಕಣ್ಣಿಗೆ ನನ್ನಾಕೆ
ತುಂಬಾ ಅಂದ.
ಕಾರಣ, ಅವಳಿಲ್ಲದಾಗ
ನಾನೊಬ್ಬ ಅಂಧ.
ವಿಧ: ಬ್ಲಾಗ್ ಬರಹ
July 14, 2007
ನೋಡಿ ಮದುವೆಯಾದೆ ನನ್ನವಳ
ರ್‍ಯಾಂಕು, ಸರ್ಟಿಫಿಕೇಟು.
ಆದರೀಗ ನನ್ನ ಕೈಲಿರುವುದು
ಬರೇ ಪಾತ್ರೆ, ಸೌಟು!
ವಿಧ: ಚರ್ಚೆಯ ವಿಷಯ
July 14, 2007
ಪ್ರೀತಿಯ ಗೆಳೆಯ - ಗೆಳತಿಯರೆ ....
ಅವನೊಬ್ಬ ಆದರ್ಶ ವಿಧ್ಯಾರ್ಥಿ, ಅತಿ ಬುದ್ಧಿವಂತ, ಮೌನಿ ಮತ್ತು ಸರಳ ಜೀವಿಯಾಗಿದ್ದ ಕಣ್ರೀ. ಅಪ್ಪ - ಅಮ್ಮ ಇಬ್ಬರೂ ವೈದ್ಯರು ಆದರೆ ಇವನು ಇಂಜಿನಿಯರಿಂಗ್ ಓದೋವಾಗ ಹೊಡೆದದ್ದು ಬೈಸಿಕಲ್. ನಾವು ಓದಿದ್ದು ದಾವಣಗೆರೆಯ ಬಾಪೂಜಿ ಕಾಲೇಜು ಅವನು ಓದಿದ್ದು ಅಲ್ಲಿಯ ಬೀಡೀಟಿ ಕಾಲೇಜು, ಒಂದೇ ವರ್ಷ ಕಾಲೇಜು ಮುಗಿಸಿದ ನಾವು, ನಮ್ಮವನೊಬ್ಬ ಭಯೋತ್ಪಾದಕ ಆಗ್ತಾನೆ ಅಂದು ಕೊಂಡಿರಲಿಲ್ಲ. ಒಂದು ದಿನ ಲಂಡನ್ ನ ವಿಮಾನ ನಿಲ್ದಾಣಕ್ಕೆ ಮಾನವ ಬಾಂಬ್ ಆಗಿ ಕಾರನ್ನು ಡಿಕ್ಕಿ…
ವಿಧ: ಬ್ಲಾಗ್ ಬರಹ
July 14, 2007
ಈ ವರ್ಷ ಮುಂಗಾರುಮಳೆಯ ಹಾಡುಗಳುsuper hit.ಕಳೆದ ವರ್ಷ ಜೋಗಿ ಹಾಡುಗಳು super super hit.ಅದಕ್ಕೂ ಹಿಂದೆ ಆಪ್ತಮಿತ್ರhitಮೇಲೆhitಮೇಲೆhit.
ಈವಾಗ ಸ್ವಲ್ಪ flashbackಗೆ ಹೋಗೋಣ.ಹಿಂದೆ ಸಿನೆಮಾ ಬಿಡುಗಡೆಗಿಂತ ಮೊದಲೇ ರೇಡಿಯೋದಲ್ಲಿ ಹಾಡುಗಳು ಬರುತ್ತಿರಲಿಲ್ಲ.ಬಿಡುಗಡೆಗೆಯಾಗಿ ತಿಂಗಳುಗಳ ನಂತರ ಹೊಸ ಸಿನೆಮಾ ಹಾಡು ಎಂದು ರಾತ್ರಿ ೧೦ ಗಂಟೆ ಮೇಲೆ ಕೇಳಬೇಕಿತ್ತು.ಅದೂ ಸರಿಯಾಗಿ ಕೇಳುತ್ತಿರಲಿಲ್ಲ. ಎಲ್ಲೋ ಪಟ್ಟಣಗಳಲಿದ್ದ ಕ್ಯಾಸೆಟ್ ಅಂಗಡಿಯಲ್ಲೂ ಹಾಡುಗಳನ್ನು ಕೇಳುವ ಅವಕಾಶವಿರಲಿಲ್ಲ…