ವಿಧ: Basic page
July 18, 2007
ಸರಿಯಾಗಿ ಒಂದು ವಾರದ ಮೇಲಾಯ್ತು ಆಫೀಸಿಗೆ ಬಂದು ಮತ್ತು ಮಾನಿಟರಿನ ಮುಖ ನೋಡಿ, ಮೌಸ್ ಮೈದಡವಿ, ಕೀ ಬೋರ್ಡಿನ ಕೀಲಿ ಕುಟ್ಟಿ.ಇಲ್ಲಿನ ಬದುಕೆ ವಿಚಿತ್ರ, ಗೋಡೆಯ ಮೇಲಿನ ಕ್ಯಾಲೆಂಡರಿನ ದಿನಗಳು ಬದಲಾಗುತ್ತವೆಯೆ ವಿನಾಃ ಬದುಕಲ್ಲಾ! ಪ್ರತಿದಿನವು ಅದೇ ರಾಗ, ಅದೇ ಎಕತಾನತೆ, ಮತ್ತದೆ ಚಕ್ರ..
ನನ್ನ ಬೆಳಗು ಆರಂಭವಾಗುವದೇ ನನ್ನ ಆಜನ್ಮ ಶತ್ರು ಅಲಾರ್ಮ್ ಬಡಿದುಕೊಳ್ಳುವದರೊಂದಿಗೆ, ಆಗ್ಲೆ FM ನಲ್ಲಿ " ಸುಪ್ರಭಾತ ವಿಥ್ ರಚನಾ" ಅಂತ ಆಯಮ್ಮ ಬಡಿದುಕೊಳ್ಳುವದಕ್ಕೆ ಶುರು ಮಾಡಿರುತ್ತೆ.…
ವಿಧ: ಬ್ಲಾಗ್ ಬರಹ
July 18, 2007
ತುಂಬಾ ದಿವಸಗಳ ಹಿಂದೆ, http://kannadablogs.co.nr ಬಗ್ಗೆ ಬರೆದಿದ್ದೆ. ಕೆಲ Technical ತೊಂದರೆಗಳಿತ್ತು. ಈಗ ಅದು ಅಗದಿ ಕೆಲಸ ಮಾಡುತ್ತಿದೆ. ನಿಮ್ಮ ಕೊಂಡಿ/URL ಸೇರಿಸಲು ಮರೆಯಬೇಡಿ.
ನನ್ನಿ,ಸಂಗನ.
ವಿಧ: ಬ್ಲಾಗ್ ಬರಹ
July 18, 2007
ತುಂಬಾ ದಿವಸಗಳ ಹಿಂದೆ, http://kannadablogs.co.nr ಬಗ್ಗೆ ಬರೆದಿದ್ದೆ. ಕೆಲ Technical ತೊಂದರೆಗಳಿತ್ತು. ಈಗ ಅದು ಅಗದಿ ಕೆಲಸ ಮಾಡುತ್ತಿದೆ. ನಿಮ್ಮ ಕೊಂಡಿ/URL ಸೇರಿಸಲು ಮರೆಯಬೇಡಿ.
ನನ್ನಿ,ಸಂಗನ.
ವಿಧ: ಬ್ಲಾಗ್ ಬರಹ
July 18, 2007
ತುಂಬಾ ದಿವಸಗಳ ಹಿಂದೆ, http://kannadablogs.co.nr ಬಗ್ಗೆ ಬರೆದಿದ್ದೆ. ಕೆಲ Technical ತೊಂದರೆಗಳಿತ್ತು. ಈಗ ಅದು ಅಗದಿ ಕೆಲಸ ಮಾಡುತ್ತಿದೆ. ನಿಮ್ಮ ಕೊಂಡಿ/URL ಸೇರಿಸಲು ಮರೆಯಬೇಡಿ.
ನನ್ನಿ,ಸಂಗನ.
ವಿಧ: ಬ್ಲಾಗ್ ಬರಹ
July 18, 2007
ಕಾಸರಗೋಡಿನಲ್ಲಿ ಬೇಕಲ ಕೋಟೆ ಎಂದು ಪ್ರಾಚೀನ ಕೋಟೆಯಿದೆ, ಸಮುದ್ರಕ್ಕೆ ಹೊಂದಿಕೊಂಡು. ಬಾಂಬೆ ಚಿತ್ರದ 'ತೂಹೀ ರೇ' ಹಾಡಿನಲ್ಲಿ ಈ ಜಾಗ ಕಾಣಲು ಸಿಗುತ್ತದೆ. ಈ ಚಿತ್ರ ಅಲ್ಲಿನ ಬೀಚ್ ನಲ್ಲಿ ತೆಗೆದದ್ದು.
ವಂದನೆಗಳು,
ವಸಂತ್ ಕಜೆ
ವಿಧ: ಬ್ಲಾಗ್ ಬರಹ
July 17, 2007
ಹೇಳೇ ನೀ ಒಮ್ಮೆ...
ಕಣ್ಣಿನಿಂದ ದೂರವಾದ್ರೂ
ನೆನಪಲ್ಲೆ ನಿಂತೇಕೆ ನಲ್ಲೆ?
ವಿರಹ ಧಗೆಯಲಿ
ನೆನಪ ಮಳೆಯಾಗಿ ಬರುವೆಯಲ್ಲೆ?
ನಮ್ಮ ಮಾತು ಮೌನವಾದ್ರೂ
ನೆನಪಲ್ಲೆ ಮಾತಾಡುವೆಯಲ್ಲೆ!
ಹಸೆಮಣೆ ಏರದೆ,
ಆಸೆಯ ಧಾರೆಯ ಸುರಿಸುವೆಯಲ್ಲೆ?
ಕರಿಮಣಿ ಮಾಲೀಕ ನಾನಾಗಲು
ನನ್ನ ಕರೆಯದೆ
ಕಣ್ಮರೆಯಾಗಿರುವೆಯಲ್ಲೆ?
ನನ್ನನ್ನೇಕೆ ಕರಿಯಲೊಲ್ಲೆ
ಹೇಳೇ ನೀ ಒಮ್ಮೆ...
ನನ್ನ ಮನದನ್ನೆ...
---ಅಮರ್
ವಿಧ: Basic page
July 17, 2007
ನಮ್ಮ ಬ್ರಹ್ಮಚಾರಿ ಮಹೇಶರು ಲಿಂಬೆ ಹಣ್ಣಿನ ಚಿತ್ರಾನ್ನ ಮಾಡಿ ತಿಂದು, ಅದಕ್ಕೊಂದು ಮುಕ್ತಿ ಕೊಡಿಸಿದ ಸ್ವಾರಸ್ಯ ಹೇಳುತ್ತಾ ಹೋದಂತೆ, ಸಾಯಂಕಾಲ ಆರು ಗಂಟೆಯ ಹಸಿವು ಇನ್ನಷ್ಟು ಚುರುಗುಟ್ಟಿ, ಬಾಯಲ್ಲಿ ನೀರೂರಿ, ಅದರ ಮುಂದುವರಿದ ಭಾಗವೋ ಎಂಬಂತೆ ನಾಲಿಗೆ ಇದ್ದಕ್ಕಿದ್ದಂತೆ ಬೆಂಡೇಕಾಯಿ ಫಿಶ್ ಕರಿಯ ರುಚಿಯನ್ನು ನೆನಪಿಸಿ ಲೊಚಗುಟ್ಟಿತು. ಇವತ್ತು ಮನೆಯಲ್ಲಿ ಇದನ್ನು ಮಾಡಬೇಕು ಅಂದುಕೊಂಡು ನಾಲಿಗೆಯನ್ನು ಸಂತೈಸಿದೆ.
ಹೆಸರು ವಿಚಿತ್ರವಾಗಿದೆಯಲ್ಲ? `ಬೆಂಡೇಕಾಯಿ ಫಿಶ್ ಕರಿ!' ಬೆಂಡೇಕಾಯಿ ಎಂಬ…
ವಿಧ: Basic page
July 17, 2007
ಭಾವದ ಕಡಲಿನ ಮೊರೆತಕ್ಕೆ ಸಿಕ್ಕಿ
ಜೀವವ ತಣಿಸಲು ಹೊರಟೆ
ಅಲೆಗಳಬ್ಬರದಿ ಮೂಕಾಗಿ ನಿಂತಿದೆ ಹ್ರುನ್ಮನ
ಎನೊಂದು ಅರಿಯದಂತೆ
ವಿಧ: ಬ್ಲಾಗ್ ಬರಹ
July 17, 2007
ಲವ್ ಪ್ರವರ
ನನ್ನ ರೂಮ ಮೇಟ ಮನೋಜ ರಾತ್ರಿ ಲೈಟ ಆರಿಸಿ ಹಾಸಿಗೆಗೆ ಒರಗಿ "ಸಂತೋಷರ ನಿದ್ದೆ ಬಂದಿಲ್ವಾ? ಎಂದು ಮಾತಿಗೆಳೆದರೆ ಮುಂದೇನೊ ಅನಾಹುತ ಕಾದಿದೆ ಅಂತಾನೇ ಅರ್ಥ,ಮೊನ್ನೆನೂ ಹಿಂಗೇ ಅಯ್ತು ಅವತ್ತೂ ಸಹ ಯಥಾಪ್ರಕಾರ ತನ್ನೆಲ್ಲಾ ಪ್ರಯೋಗಗಳಿಗೆ ಮೊದಲ ಬಲಿಪಶುವಾದ ನನ್ನನ್ನು ಹಾಸಿಗೆಯಲ್ಲಿ ಕೆಡವಿ, ನನ್ನ ಮೆದುಳು ಬಗೆಯುವ ಸತ್ಕಾರ್ಯವನ್ನು ಸಾಂಗೋಪಾಂಗವಾಗಿ ಶುರು ಮಾಡೇ ಬಿಟ್ಟ.
ಪೀಠಿಕೇಯಾಗಿ" ನಿಮ್ಮ 'True love' ಎಲ್ಲಿಗೆ ಬಂತು ಎಂದು ಪ್ರಶ್ನೆ ಎಸೆದು ಕುಂತ. ಅವನು ಯಾವಾಗ ರಾತ್ರಿಯ…
ವಿಧ: Basic page
July 17, 2007
ಮನದೊಳಗಣ ಮಂಥನ
ವೈಚಾರಿಕತೆಯ ಚಿಂತನ
ಬಿಡು ನಿನ್ನ ವ್ಯಸನ
ಮಾಡಿಕೊ ಇದ ನೀ ಪಚನ
ಅಳವಡಿಸಿಕೊ ಇದರ ಸಿಂಚನ
ಬಾಳು ಆಗುವುದು ಹಸನ