ಎಲ್ಲ ಪುಟಗಳು

ಲೇಖಕರು: keshav
ವಿಧ: ಬ್ಲಾಗ್ ಬರಹ
June 30, 2007
ಇತ್ತೀಚೆ ಅನಿವಾಸಿಯವರು ಲಂಕೇಶರ ನೀಲು ಕವನಗಳ ಬಗ್ಗೆ ಸುಂದರವಾದ ಲೇಖನ ಬರೆದಿದ್ದಾರೆ. ನಾನು ಬರೆದ ಕೆಲವು ನೀಲುಗಳನ್ನು ಹಾಗೂ ಬೇರೆಯವರು ಬರೆದ ನೀಲುಗಾಳನ್ನು ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ, http://kannada-nudi.blogspot.com/2007/06/blog-post_01.html. ಸಮಯವಾದಾಗ ಓದಿ ಅಭಿಪ್ರಾಯ ತಿಳಿಸಿ. ಧನ್ಯವಾದಗಳು.
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
June 29, 2007
ಒಂದು ದಿನ ಅಳಿಲುಮರಿಯೊಂದು(ಕಾಗೆ ಅಟ್ಟಿಸಿಕೊಂಡು ಬರುವಾಗ) ಸೀದಾ ನಮ್ಮ ಮನೆ ಬಾಗಿಲಿಗೆ ಬಂತು.ಕಾಗೆಯನ್ನು ಓಡಿಸಿ ಮರಿಯನ್ನು ತೆಂಗಿನಮರದ ಬುಡದಲ್ಲಿ ಬಿಟ್ಟು ಹಿಂದೆ ಬಂದು ನೋಡಿದರೆ ನನ್ನ ಬಳಿಯಲ್ಲೇ ಬಂದಿತ್ತು. ಅಲ್ಲೆಲ್ಲೂ ಅದರ ತಾಯಿ ಕಾಣಿಸದಿದ್ದುರಿಂದ ಸ್ವಲ್ಪ ದೊಡ್ಡದಾಗುವವರೆಗೆ ಸಾಕುವ ಎಂದು ಒಳಗೆ ತಂದೆನು.ಅದೇ ಸಮಯದಲ್ಲಿಧರ್ಮಸ್ಥಳಕ್ಕೆ ಹೋಗಲಿಕ್ಕಿದ್ದುದರಿಂದ ಅದನ್ನೂ ಬುಟ್ಟಿಯಲ್ಲಿಟ್ಟುಕೊಂಡು,ಪಿಲ್ಲರಿನಲ್ಲಿ ಹಾಲು ಕೊಟ್ಟು,ಕಾರಲ್ಲಿ ೩ ದಿನ್ ಸುತ್ತಾಡಿಸಿ ಬಂದಿದ್ದೆವು. ಹಿಂದಿರುಗಿದ…
ಲೇಖಕರು: cmariejoseph
ವಿಧ: Basic page
June 29, 2007
ಕನ್ನಡದ ಮಕ್ಕಳು ತಮ್ಮ ಪ್ರಾಂತ್ಯವನ್ನು ಮಾತ್ರವಲ್ಲ ಇಂಡಿಯಾ ರಾಷ್ಟ್ರವನ್ನೂ ಬೆಳಗಿ ಕರ್ನಾಟಕದ ಕೀರ್ತಿವೈಜಯಂತಿಯನ್ನು ಗಗನದೆತ್ತರಕ್ಕೆ ಹಾರಿಸಿದ್ದಾರೆ. ಅಂತಹ ಮಹಾಮಹಿಮರಲ್ಲಿ ಒಬ್ಬರು ವಾಸ್ತುಶಿಲ್ಪಜ್ಞ, ದಕ್ಷ ಆಡಳಿತಗಾರ, ಧೀಮಂತ ಹಾಗೂ ನಿಸ್ಪೃಹರಾಗಿದ್ದ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರು. ಸರ್ ಎಂ ವಿ ಅವರು ಜನಿಸಿದ್ದು ೧೮೬೧ನೇ ಸೆಪ್ಟೆಂಬರ್ ೧೫ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ. ಇವರ ಬಾಲ್ಯದ ಐದು ವರ್ಷಗಳು ಕಳೆದ ಮೇಲೆ ಇವರ ತಂದೆ ಶ್ರೀನಿವಾಸಶಾಸ್ತ್ರಿಗಳು…
ಲೇಖಕರು: santoshbhatta
ವಿಧ: ಬ್ಲಾಗ್ ಬರಹ
June 29, 2007
ನಿಮಗೆ ಅಥವಾ ನಿಮ್ಮ ಪರಿಚಯದವರಿಗೆ ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದಲ್ಲಿ ದಯವಿಟ್ಟು ೧೦೬೨(1062) ಸಂಖ್ಯೆಗೆ ಕರೆ ಮಾಡಿ ಇದು ಬ್ಲಡ್ ಬ್ಯಾಂಕ್ ಗಳ ಬಗ್ಗೆ ಮಾಹಿತಿ ನೀಡುವ ಕಾಲ್ ಸೆಂಟರ್ ಮತ್ತು ಇದು ದಿನದ ೨೪ ಘಂಟೆಗಳೂ ಕಾರ್ಯನಿರತವಾಗಿರುತ್ತೆ. ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ತಿಳಿದವರಿಗೆಲ್ಲ ಹೇಳಿ. ನೀವು ಒಂದು ಜೀವವನ್ನ ಉಳೀಸಬಹುದು.
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 29, 2007
ಮೊದಲು ಇದನ್ನು ಓದಿ.... ಜಗತ್ತು ಎಷ್ಟೊಂದು ಸುಂದರವಾಗಿ ಇದೆ ! ಬಂದುಬಿಡಿ ನಿಮ್ಮ ಅವಶ್ಯಕತೆ ಇದೆ ! ಬಯಕೆಯ ಕಿಡಿಗಳು ಬೆಳಕನ್ನು ಮಾಡಿವೆ , ಬಾಳಿನುದ್ದ ನಿಮ್ಮೊಡನಿರಲು ನಾ ಬಂದೆನು. ಎಷ್ಟು ಒಳ್ಳೆಯ ರಾತ್ರಿ ! ಏನು ಮುಹೂರ್ತ ! ಬಂದುಬಿಡಿ ನಿಮ್ಮ ಅವಶ್ಯಕತೆ ಇದೆ ! ಹೀಗೆ ನೀವು ನಾಚದಿರಿ , ಹೀಗೆ ನನ್ನ ಕಾಡದಿರಿ ಮುಸುಕು ತೆಗೆದುಬಿಡಿ , ಹರಡಲಿ ಹಾಲು ಬೆಳದಿಂಗಳು ಚಂದ್ರನ ಅಗತ್ಯವಾದರೂ ಏನಿದೆ ? ಬಂದುಬಿಡಿ ನಿಮ್ಮ ಅವಶ್ಯಕತೆ ಇದೆ ! ---- ಇದು ಒಂದು ಹಿಂದಿ ಚಿತ್ರಗೀತೆಯ ಅನುವಾದ . ಹೇಮಂತ್…
ಲೇಖಕರು: srinivasps
ವಿಧ: ಬ್ಲಾಗ್ ಬರಹ
June 29, 2007
ಅಮ್ಮ ಇರಲು ಅಮ್ಮನ ಮಡಿಲಲ್ಲಿ ಸಿಗುವುದೆನಗೆ ನೆಮ್ಮದಿ, ಸುಖ, ಶಾಂತಿ, ಸಂತೋಷ... ಹೊಡಿ ವೈಕುಂಠಕ್ಕೆ ಗೋಲಿ, ಅಮ್ಮನ ಅಡಿಯಲ್ಲೇ ದೊರಕುವುದು ಎನಗೆ ಪರಮ ಮೋಕ್ಷ... (೨೦-ಏಪ್ರಿಲ್-೨೦೦೭)
ಲೇಖಕರು: radha.kh
ವಿಧ: ಬ್ಲಾಗ್ ಬರಹ
June 28, 2007
ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಮನುಷ್ಯಳಾದ ಮೇಲೆ ಬ್ಲಾಗೊಂದು ಇರಬೇಕು ಎಂದು. ಈಗ ನನ್ನ ಬ್ಲಾಗಿನ ಮೊದಲ ಬರಹ ಬರೆಯುತ್ತಿದ್ದೇನೆ. ಮುಂದುವರೆಸಲು ಪ್ರಯತ್ನ ಮಾಡುತ್ತೇನೆ. ಪತ್ರಿಕೆಗಳಿಗೆ ಬರೆಯುವುದು ಒಂದು ರೀತಿಯಿಂದ ಸುಲಭ. ಅದಕ್ಕೊಂದು ಕೊನೆ ದಿನಾಂಕ ಇರುತ್ತೆ. ಶತಾಯ ಗತಾಯ ಅದರೊಳಗೇ ಬರೆದು ಮುಗಿಸಬೇಕು. ಎಂದೂ ಏಳದಿದ್ದವಳು ಮೊನ್ನೆಯೊಂದು ದಿನ ಬೆಳಿಗ್ಗೆ ಐದು ಗಂಟೆಗೇ ಎದ್ದು ಕುಳಿತು ಒಂದು ಲೇಖನ ಮುಗಿಸಬೇಕಾಯ್ತು. ಪ್ರೆಷರ್‌ ಜಾಸ್ತಿ ಇದ್ದಾಗ ಕೆಲಸ ಬೇಗ ಆಗುತ್ತೆ ಅನ್ನೋದು ಮತ್ತೊಮ್ಮೆ…
ಲೇಖಕರು: Aravinda
ವಿಧ: ಬ್ಲಾಗ್ ಬರಹ
June 28, 2007
ನನ್ನ ಅಂತರ್ಜಾಲ ಪುಟ ಕನ್ನಡ ಮತ್ತು ಇಂಗ್ಲಿಷ್ ನಲ್ಲಿದೆ. ಅದನ್ನು ಇನ್ನೂ ಚೆಂದ ಮಾಡಲು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ನಿಮ್ಮ ಅನಿಸಿಕೆಗಳನ್ನ ನನಗೆ ತಿಳಿಸಿ. ನನ್ನ ಅಂತರ್ಜಾಲದ ಹೆಸರು belaku.net 
ಲೇಖಕರು: srinivasc
ವಿಧ: ಬ್ಲಾಗ್ ಬರಹ
June 28, 2007
ಧಿಗ್ಗನೆ ತಿರುಗಿ ಕೇಳಿದ ಪ್ರಶ್ನೆಗೆ ಉತ್ತರ ಏನು ನೀಡಲಿ ``ಬೇಗ ಬೇಗ'' ಎಂದು ಒತ್ತಾಯಿಸಿದರೆ ಮತ್ತಿನ್ನೇನು ಹೇಳಲಿ ಯಾಕೀ ಪ್ರಶ್ನೆ? ನಾನೇ ಕೇಳಿದೆ ಮರು ಪ್ರಶ್ನೆ ಪ್ರಶ್ನೆಗೆ ಪ್ರಶ್ನೆ ಅಲ್ಲ ಉತ್ತರ ನನ್ನ ಪ್ರಶ್ನೆಗೇನು ಉತ್ತರ ಮತ್ತದೇ ಪ್ರಶ್ನೆ ನೀನು ಯಾರು? ಅರೇ ನಾನು ನಾನೇ ಇನ್ಯಾರು ಆಗಲು ಸಾಧ್ಯ? ಪ್ರಶ್ನೆ ಬೇಡ ಬೇಕು ಉತ್ತರ ಕೊಟ್ಟಾಯಿತಲ್ಲ ಮತ್ತಿನ್ನೇಕೆ ಉತ್ತರ ಅದು ಸರಿ ಈಗ ಹೇಳು ನೀನು ಯಾರು? ಕೇಳಿದ ಪ್ರಶ್ನೆಗೆ ಅವರು ಓಡಿಹೋದದ್ದೇ ಉತ್ತರ
ಲೇಖಕರು: sindhu
ವಿಧ: ಬ್ಲಾಗ್ ಬರಹ
June 28, 2007
ಮನದೊಳಗೆ ಮೊನೆಯಾಡಿಸುವ ಹಳೆ ನೆನಪಿನ ಮುಳ್ಳಿಗೆ, ಕೇಳುತ್ತಿರುವ ಗಝಲ್ ಭಾವಗಳು ಬಲ ತುಂಬಿ, ಹೀಗೊಂದು (ಅಕ್ಷರ) ದುಃಖ ನಿವೇದನೆ. ಹಚ್ಚಿದ ದೀಪ ಆರಲೇಬೇಕು,ಮುಡಿದ ಹೂವು ಬಾಡಲೇಬೇಕು,ಮತ್ತೆ ಮತ್ತೆ ನೆನಪಾಗಿಯೂನಿನ್ನ ಮರೆಯಲೇಬೇಕು.. ಒಂಟಿ ನಾನು ನೀನು ಬರುವ ಮುಂಚೆ;ಒಂಟಿ ನಾನು ನೀನು ಹೋದ ಮೇಲೆ ಕೂಡಾ;ನೀನು ಬಂದರೇನು, ಬರದಿದ್ದರೇನು.. ಬಂದರೆ ಅರೆಘಳಿಗೆ ನಲಿವಲ್ಲಿ ಅದ್ದಿ ತೆಗೆದೀತು ಜೀವ,ಹೊರಟ ಮೇಲೆ ಕೆಲ ದಿನಗಳು ಸವೆಯುತ್ತವೆ-ಹಸಿ ಗಾಯದಂತೆ,ಬೇಸರವಿಲ್ಲ, ಉರಿ ಗೊತ್ತಾಗುವುದಿಲ್ಲನಿನ್ನ ಕನಸು…