ಎಲ್ಲ ಪುಟಗಳು

ಲೇಖಕರು: cmariejoseph
ವಿಧ: Basic page
June 27, 2007
೧೮೭೬ ರಿಂದ ೧೮೭೮ರವರೆಗೆ ತಲೆದೋರಿದ ಭೀಕರ ಕ್ಷಾಮಕ್ಕೆ ಸಾವಿರಾರು ಜನರು ಮರಣವನ್ನಪ್ಪಿ, ಅನೇಕ ಸಾವಿರ ಜನರು ತಮ್ಮ ಹಳ್ಳಿಗಳನ್ನು ತೊರೆದು ಉದರ ಪೋಷಣೆಗಾಗಿ ಪಟ್ಟಣಗಳನ್ನು ಆಶ್ರಯಿಸಬೇಕಾಯಿತು. ಹೀಗೆ ಘೋರ ಬರದಿಂದ ಸರ್ವಸ್ವವನ್ನೂ ಕಳೆದುಕೊಂಡ ಅನಾಥರಿಗೆ ಜಮೀನು, ಮನೆ, ದೇವಸ್ಥಾನ ಮತ್ತು ಶಾಲೆಗಳನ್ನು ಒದಗಿಸಿಕೊಡಲು ಪ್ರತ್ಯೇಕ ಗ್ರಾಮಗಳನ್ನು ನಿರ್ಮಿಸಬೇಕಾಯಿತು. ಹೀಗೆ ಉಗಮವಾದ ಹಳ್ಳಿಗಳಲ್ಲಿ ದೊರೆಸಾನಿಪಾಳ್ಯ (ತಾಯಿಪಾಳ್ಯ)ವೂ ಒಂದು. ಈ ಗ್ರಾಮವನ್ನು ೧೮೭೬ರಲ್ಲಿ ಬಿಷಪ್ ಷೆವಾಲಿಯೇ ಎಂಬುವರು…
ಲೇಖಕರು: cmariejoseph
ವಿಧ: Basic page
June 27, 2007
ಇಟಾಲಿಯನ್ ಜೆಸ್ವಿತರಾದ ಸ್ವಾಮಿ ಚಿಮಾವೊ ಮಾರ್ಟಿನ್ರವರು ೩೧-೧೦-೧೯೬೨ ರಲ್ಲಿ ರೋಮ್ಗೆ ಕಳಿಸಿದ ವರದಿಯ ಪ್ರಕಾರ ಅವರು ಕೊಳ್ಳೇಗಾಲ ತಾಲೂಕಿನ ಮಾರ್ಟಳ್ಳಿಯಲ್ಲಿ ಕ್ಷೇತ್ರಕಾರ್ಯ ಕೈಗೊಂಡಿರುವಾಗ ಕ್ರಿಸ್ತಶಕ ೧೬೬೦ರಲ್ಲಿ ಕಾನಕಾನಹಳ್ಳಿಯಲ್ಲಿ ಧರ್ಮಪ್ರಚಾರ ಮಾಡಲು ಸ್ಥಳೀಯ ಉಪದೇಶಕನೊಬ್ಬನನ್ನು ಕಳಿಸಿದರಂತೆ. ಆ ಉಪದೇಶಕ ಮತ್ತು ಆ ಸ್ಥಳಗಳ ಪರಿಚಯವಿದ್ದ ಮತ್ತೊಬ್ಬ ಕ್ರೈಸ್ತ ಎರಡು ದಿನಗಳ ಪ್ರಯಾಣ ಮಾಡಿ ಉಯ್ಯಂಬಳ್ಳಿ ಎಂಬ ಊರಿಗೆ ಬರುತ್ತಾರೆ. ಅಲ್ಲಿ ಪಟ್ಟಿ ಜನಾಂಗದ ಯುವಕ, ಅವನ ತಾಯಿ ಮತ್ತು ತಮ್ಮ…
ಲೇಖಕರು: cmariejoseph
ವಿಧ: Basic page
June 27, 2007
ಇಂಡಿಯಾದ ಪೂರ್ವ ಕಡಲತೀರವನ್ನು ಫ್ರೆಂಚರು ಕೊರೊಮ್ಯಾಂಡೆಲ್ ತೀರ ಎನ್ನುತ್ತಿದ್ದರು. ಈ ಕೊರೊಮ್ಯಾಂಡೆಲ್ ತೀರ ಪ್ರದೇಶದ ಪಾಂಡಿಚೇರಿ ಅವರ ವಸಾಹತು ಆಗಿತ್ತು. ಈ ಕೇಂದ್ರದಿಂದಲೇ ಅವರು ದಕ್ಷಿಣ ಭಾರತದಾದ್ಯಂತ ತಮ್ಮ ಧರ್ಮ ಪ್ರಚಾರದ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದರು. ಅದನ್ನು ಅವರು ಕರ್ನಾಟಿಕ್ ಮಿಷನ್ (Carnatic Mission) ಎಂಬುದಾಗಿ ಕರೆಯುತ್ತಿದ್ದರು. ಈ ರೀತಿ ಹೊರ ದೇಶಗಳಲ್ಲಿ ಸುವಾರ್ತಾ ಪ್ರಚಾರ ಕೇಂದ್ರಗಳನ್ನು ಸ್ಥಾಪಿಸಿ ಕ್ರೈಸ್ತಧರ್ಮವನ್ನು ಬೇರೂರಿಸಿದಾಗ ಪೋಪ್…
ಲೇಖಕರು: cmariejoseph
ವಿಧ: Basic page
June 27, 2007
ವ್ಯಾಟಿಕನ್ ಸುಧಾರಣೆಗಳು ಘೋಷಣೆಯಾಗುವ ಮುನ್ನ ಚರ್ಚ್ ವಲಯದಲ್ಲಿ "ಕೀರ್ತನೆ ಪುಸ್ತಕ" ತುಂಬಾ ಜನಪ್ರಿಯವೆನಿಸಿತ್ತು. ಅದರಲ್ಲಿ ಮೂರು ಭಾಗಗಳಿದ್ದು ಫ್ರೆಂಚ್ ಧಾಟಿಯ ಹಾಡುಗಳ ಕನ್ನಡ ರೂಪಾಂತರವೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಕನ್ನಡ ಗೀತೆಗಳೂ, ಕೊನೆಯಲ್ಲಿ ಲಾತಿನ್ ಗೀತೆಗಳೂ ಮುದ್ರಿತವಾಗಿದ್ದವು. ೧೯೬೨ರ ವ್ಯಾಟಿಕನ್ ಸಮಾವೇಶದ ಸುಧಾರಣೆಯ ನಂತರ ಚರ್ಚು ಲ್ಯಾಟಿನ್ ಭಾಷೆಯನ್ನು ತೊರೆದು ಜನರ ಆಡುಭಾಷೆಯತ್ತ ಮುಖಮಾಡಿದಾಗ ಹಾಡುಗಳಲ್ಲಿ ಸ್ವಕಪೋಲಕಲ್ಪಿತ ಸಾಹಿತ್ಯಕ್ಕಿಂತ ಪವಿತ್ರಗ್ರಂಥದ ಪಠ್ಯಗಳೇ…
ಲೇಖಕರು: cmariejoseph
ವಿಧ: Basic page
June 27, 2007
ಹಾರೋಬೆಲೆ ಮಹಿಮೆ ಎಂಬ ನಾಟಕ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮವು ಪುರಾತನ ಕ್ರೈಸ್ತ ಕೇಂದ್ರವಾಗಿದ್ದು ಮಹಿಮೆ ಎಂಬ ನಾಟಕ ಪ್ರದರ್ಶನದಿಂದ ಪ್ರಖ್ಯಾತವಾಗಿದೆ. ೧೯೦೬ರಿಂದಲೂ ನಿರಂತರವಾಗಿ ಪ್ರತಿ ವರ್ಷ ಶುಭಶುಕ್ರವಾರ, ಪವಿತ್ರ ಶನಿವಾರಗಳಂದು ಪ್ರದರ್ಶಿತವಾಗುತ್ತಿರುವ ಈ ನಾಟಕವನ್ನು ಪ್ರಾರಂಭಿಸಿದವರು ಸ್ವಾಮಿ ಲಾಜರ್ ಅವರು. ಇವರು ೧೯೦೦ರಿಂದ ೧೯೨೫ರವರೆಗಿನ ಅವಧಿಯಲ್ಲಿ ಸೋಮನಹಳ್ಳಿ, ಕಾನಕಾನಹಳ್ಳಿ, ಬೆಟ್ಟಹಲಸೂರು, ಮಾರ್ಟಳ್ಳಿ, ಕೌದಳ್ಳಿ, ಪರಸೇಗೌಡನಪಾಳ್ಯ, ಕೊಳ್ಳೆಗಾಲ, ಶಿವಸಮುದ್ರಗಳನ್ನು…
ಲೇಖಕರು: cmariejoseph
ವಿಧ: Basic page
June 27, 2007
೧. ಹಟದಿಂದ ಹೆಣ್ಣು ಕೆಟ್ಟಳು ಚಟದಿಂದ ಗಂಡು ಕೆಟ್ಟ ೨. ಗಂಡಸರ ಕೈಯಲ್ಲಿ ಕೂಸು ನಿಲ್ಲದು ಹೆಂಗಸರ ಕೈಯಲ್ಲಿ ಮಾತು ನಿಲ್ಲದು ೩. ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ ೪. ಮೇಲೆ ಬಸಪ್ಪ ಒಳಗೆ ವಿಷಪ್ಪ ೫. ಹೊರಗೆ ಬೆಳಕು ಒಳಗೆ ಕೊಳಕು ೬. ಹಿಟ್ಟೂ ಹಳಸಿತ್ತು ನಾಯಿಯೂ ಹಸಿದಿತ್ತು ೭. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ೮. ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ ೯. ಒಪ್ಪವಿಲ್ಲದ ಮಾತು ತುಪ್ಪವಿಲ್ಲದ ಊಟ ೧೦. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ೧೧. ಇದ್ದಾಗ ಹಿರಿಯಣ್ಣ…
ಲೇಖಕರು: cmariejoseph
ವಿಧ: Basic page
June 27, 2007
ಯೇಸುಕ್ರಿಸ್ತ ಶಿಲುಬೆಗೇರುವ ಮುನ್ನ ಆತನ ವಿರೋಧಿಗಳು ಅವನನ್ನು ಬಂಧಿಸುವ ಪರಿ, ಆತನ ನ್ಯಾಯವಿಚಾರಣೆ, ಅವನಿಗೆ ನೀಡಿದ ಹಿಂಸೆ, ನಂತರ ಶಿಲುಬೆ ಹೊರಿಸಿ ಮೆರವಣಿಗೆ ಮಾಡಿದ್ದು ಇವೆಲ್ಲವನ್ನೂ ಶುಭಶುಕ್ರವಾರಕ್ಕೆ ಮುಂಚಿನ ೪೦ ದಿನಗಳಲ್ಲಿ ಮತ್ತೆ ಮತ್ತೆ ಸ್ಮರಿಸಿಕೊಳ್ಳುವುದು ಕ್ರೈಸ್ತರಲ್ಲಿ ವಾಡಿಕೆ. ಈ ಸರಣೆಯು ಗಾಢವಾಗಿರುವಂತೆ ಮಾಡಲು ಅವರು ಯೇಸುಕ್ರಿಸ್ತನ ಆ ಅಂತಿಮ ಕ್ಷಣಗಳ ವೃತ್ತಾಂತವನ್ನು ಪಾರಾಯಣ ಮಾಡುವ ಇಲ್ಲವೇ ಅಭಿನಯಿಸುವ ಪರಿಪಾಠವೂ ಇದೆ. ಶಿಲುಬೆಯಾತ್ರೆಯ ವಿವಿಧ ಹಂತಗಳನ್ನು ಸೂಚಿಸುವ…
ಲೇಖಕರು: srinivasps
ವಿಧ: Basic page
June 27, 2007
ಮನೆ ಹತ್ರ ಒನ್ದ್ ಮಾರುತಿ ವಾನ್-ನಲ್ಲಿ ಸೀರೆ ಮಾರಕ್ಕೆ ಅಂಥ ತಂದ್ರಪ್ಪ... ಹೆಣ್ಮಕ್ಕಳು ಏನು ನೂಕು ನುಗ್ಗಲು ಅಂತೀರ... ಅದನ್ನ ನೋಡ್ದಾಗ ನನ್ೆ ಯೋಚನೆ ಬಂದಿದ್ದು ಗಂಡಂದಿರ್ ಪಾಡು... ಸ್ಯಾರೀ!! ಬೇಕೆಂದು Saree, ದುಂಬಾಲು ಬಿದ್ದಳು ಎನ್ನ ನಾರಿ. ನಾನೆಂದೆ - "ಈಗ ಬೇಡ, Sorry! ಅಡಿಗೆ ಮನೆಯಿಂದಲೇ ಗುಡುಗಿದಳು - ನನಗೆ ಗಾಬರಿ! "ನೀವೇ ಆರಿಸಿರಿ!" "ನನಗೆ Saree, ಇಲ್ಲ - ನಿಮಗೆ ಗೋರಿ!!!" ಆ ಶಬ್ದಕ್ಕೆ ನಾ ಬೆದರಿ ಆದೆ ಒಂದು ಕುರಿ ಮರಿ 'ಇವಳೊಂದು ಹೆಮ್ಮಾರಿ" ಎಂದು ನಾ ಒದರಿ ದುಡ್ಡನಿತ್ತು…
ಲೇಖಕರು: santoshbhatta
ವಿಧ: ಬ್ಲಾಗ್ ಬರಹ
June 27, 2007
ಇದಲ್ಲ ಇಂದ್ರಜಾಲ, ಮಂತ್ರ ಮಾಯ ಹೆರುವದು ಹಗರಣದ ಮಗುವ, ಮಾಸುವಮುನ್ನ ಹಳೆಯ ಗಾಯ ಹರಿಯುವುದು ಹಣದ ಹೊಳೆ, ಹರಿದಂತೆ ಬಾರಿನಲಿ ಪೇಯ ಹೆದರಬೇಡ ಗೆಳೆಯ, ಇದುವೇ ರಾಜಕೀಯ.
ಲೇಖಕರು: rajeshnaik111
ವಿಧ: ಬ್ಲಾಗ್ ಬರಹ
June 27, 2007
ಕಳೆದ ರಣಜಿ ಋತುವಿಗೆ ಕರ್ನಾಟಕ ತಂಡದ ಆಯ್ಕೆ ಆದಾಗ ದೊಡ್ಡ ಗಣೇಶ್ ಹೆಸರು ಇರದಿರುವುದನ್ನು ನೋಡಿ ಆಶ್ಚರ್ಯವಾಯಿತು. ಹೊಸದಾಗಿ ಕೋಚ್ ಆಗಿ ನೇಮಕಗೊಂಡಿದ್ದ ವೆಂಕಟೇಶ್ ಪ್ರಸಾದ್ ತಂಡವನ್ನು ಆಯ್ಕೆ ಮಾಡುವಾಗ ಮುಖ್ಯ ಆಯ್ಕೆಗಾರ ಅಶೋಕಾನಂದ್ ಅವರಿಗೆ ತಿಳಿಸಿದ ವಿಷಯವೇನೆಂದರೆ 'ನನಗೆ ಇವರು ಬೇಕು ಮತ್ತು ಇವರು ಬೇಡ' ಎಂದು. ದೊಡ್ಡ ಗಣೇಶ್ ಹೆಸರು 'ಇವರು ಬೇಡ' ಪಟ್ಟಿಯಲ್ಲಿತ್ತು. ಇದಕ್ಕೆ ಪ್ರಮುಖ ಕಾರಣ ಗಣೇಶನ ಕ್ಷೇತ್ರರಕ್ಷಣೆ. ಕಳೆದೆರಡು ಋತುಗಳಲ್ಲಿ ಅವರ ಕ್ಷೇತ್ರರಕ್ಷಣೆಯ ಗುಣಮಟ್ಟ ಕಡಿಮೆಯಾಗಿತ್ತು…