ವಿಧ: ಬ್ಲಾಗ್ ಬರಹ
May 01, 2007
“ಹೌದು. ಉದಾತ್ತ ಪ್ರೇಮದ ಕನಸು ಕಾಣುತ್ತಾ, ಪ್ರೀತಿಯ ಹೆಸರು ಹೇಳಿಕೊಂಡು ಹತ್ತು ವರ್ಷ ಅಸಹ್ಯವಾಗಿ ಬದುಕಿದೆ. ನನ್ನ ಹೆಂಡತಿಯನ್ನು ಹೇಗೆ ಕೊಂದೆ--ಹೇಳಬೇಕು. ಅದಕ್ಕೆ ನಾನೆಂಥ ಲಂಪಟ ಎಂದು ತಿಳಿಯಬೇಕು. ನನಗೆ ಅವಳು ಗೊತ್ತಾಗುವ ಮೊದಲೇ ಕೊಂದುಬಿಟ್ಟೆ. ಪ್ರೀತಿ ಕಿಂಚಿತ್ತೂ ಇಲ್ಲದೆ ಮೈಯ ಸುಖವನ್ನು ಮೊದಲ ಬಾರಿಗೆ ಉಂಡಾಗಲೇ ‘ಹೆಂಡತಿ’ಯನ್ನು ಕೊಂದುಬಿಟ್ಟೆ. ಆಮೇಲೆ ‘ನನ್ನ’ ಹೆಂಡತಿಯನನ್ನು ಕೊಂದೆ. ಹೌದು. ನರಳಿ ನರಳಿ, ನನಗೇ ಹಿಂಸೆ ಕೊಟ್ಟುಕೊಂಡು, ಕೆಡುಕಿನ ಬೇರು ಬುಡ ತಿಳಿದುಕೊಂಡೆ. ಹೇಗೆ…
ವಿಧ: ಚರ್ಚೆಯ ವಿಷಯ
May 01, 2007
"ವಿಚಿತ್ರಾನ್ನ"ದೊಂದಿಗೆ ಕರಾವಳಿ ಕರ್ನಾಟಕದ ಹಲಸಿನ ಹಪ್ಪಳದ ರುಚಿ ನೋಡಿ. ಶ್ರೀವತ್ಸ ಜೋಷಿಯವರು ತಮ್ಮ ಅಂಕಣದಲ್ಲಿ ಹಲಸಿನ ಹಪ್ಪಳದ ಹಳೆಯ ನೆನಪುಗಳನ್ನು ಬಿಚ್ಚಿದ್ದಾರೆ. ಹಲಸಿನ ಹಪ್ಪಳದ ರುಚಿ ಅಮೋಘ ಎಂದು ತಿಂದವರಿಗೆಲ್ಲಾ ಗೊತ್ತು. ಆದರೆ ನಿಮಗೇನನಿಸುತ್ತೆ? ಯಾವ ಹಪ್ಪಳ ಹೆಚ್ಚು ರುಚಿ? ನಿಮ್ಮ ನೆನಪಿನ ಬುತ್ತಿಯನ್ನೂ ಬಿಚ್ಚಿದರೆ ಸ್ವಾಗತ.
ಹಪ್ಪಳ ಎಂದರೆ ಹಲಸಿನ ಹಪ್ಪಳವಯ್ಯಾ
ಚಿತ್ರಸಂಪುಟ
ವಿಧ: ಚರ್ಚೆಯ ವಿಷಯ
May 01, 2007
ಉತ್ತರ ಕರ್ನಾಟಕದಲ್ಲಿ ಬಿಸಿಲು ಸಿಕ್ಕಾಪಟ್ಟೆ ಜಾಸ್ತಿಯಾಗಿದೆ ಎಂದು ಇವತ್ತಿನ ಬೆಳಿಗ್ಗೆಯ ಪತ್ರಿಕೆಯಲ್ಲಿ ಹಲವರು ಓದಿರುತ್ತೀರಿ. ಬೆಂಗಳೂರಿನಲ್ಲೇ ಶೆಖೆ ಹತ್ತಿರುವಾಗ ಉತ್ತರ ಕರ್ನಾಟಕದ ಪರಿಸ್ಥಿತಿ ಅರ್ಥವಾಗದೆ ಇರದು. ಆದರೆ ನನಗೆ ಕಾಡುವ ಪ್ರಶ್ನೆಯೆಂದರೆ ಕಳೆದ ಹಲವು ವರ್ಷಗಳಲ್ಲಿ ಮಾತ್ರ ಹೀಗಾಗುತ್ತಿದೆಯೋ, ಮುಂಚೆಯೂ ಹೀಗೆಯೇ ಇತ್ತೊ ಎಂಬುದು.
ಮುಂಚೆಯೂ ಹೀಗಿತ್ತು ಎಂಬುದಾದರೆ ಹಿಂದಿನವರು ಇದಕ್ಕೇನು ಮಾಡುತ್ತಿದ್ದರು?
ಮುಂಚೆ ಹೀಗಿರಲಿಲ್ಲ ಎಂಬುದಾದರೆ, ಇತ್ತೀಚೆಗೆ ಹೀಗಾಗುವುದಕ್ಕೆ…
ವಿಧ: Basic page
May 01, 2007
ರಾಯಚೂರಿನಲ್ಲಿ ಕೊಳವೆಬಾವಿಗೆ ಬಿದ್ದು ಬಾಲಕ ಅಸುನೀಗಿದ ಬಳಿಕ, ಸರಕಾರ ಎಚ್ಚೆತ್ತುಕೊಂಡು, ವಿಫಲವಾದ ಕೊಳವೆಬಾವಿಗಳನ್ನು ಮುಚ್ಚಿ, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಆರಿಂಚಿನಷ್ಟು ವ್ಯಾಸ ಹೊಂದಿದ ಕೊಳವೆಬಾವಿಗಳು ತೆರೆದೇ ಇದಾಗ ಅಪಾಯವನ್ನು ಆಹ್ವಾನಿಸುವುದಕ್ಕೆ ಹೇತುವಾಗಬಹುದು ಎನುವುದು ನಿಸ್ಸಂಶಯ. ಆದರೆ ಇವನ್ನು ಸುಮ್ಮನೆ ಮುಚ್ಚಿ ಬಿಡುವ ಬದಲು, ಅವನ್ನು ಜಲಮರುಪೂರಣಕ್ಕೆ ಬಳಸುವುದು ಸೂಕ್ತವಲ್ಲವೇ? ಮರುಪೂರಣಕ್ಕೆ…
ವಿಧ: Basic page
May 01, 2007
ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ
ಗೆಳೆಯರೆ,
ಸಂಪದದಲ್ಲಿ... ನನ್ನ ಬ್ಲಾಗ್ ... ನನ್ನ ಚಟುವಟಿಕೆ...
ವಿಧ: ಚರ್ಚೆಯ ವಿಷಯ
April 30, 2007
ವಂಶವಾಹಿ ಜೀನ್ಸ್‍ಗಳ ಬಗೆಗೆ ನಡೆದಿರುವ ಸಂಶೋಧನೆಗಳು ಬಹಳ ಪ್ರಗತಿ ಕಂಡಿವೆ.ಸಂಶೋಧನೆಯಲ್ಲಿ ಕಂಪ್ಯೂಟರುಗಳ ಬಳಕೆ ಜೈವಿಕ ತಂತ್ರಜ್ಞಾನದ ಸಂಶೋಧನೆಯ ಪರಿಯನ್ನೆ ಬದಲಾಯಿಸಿದೆ. ಹೇಗೆಂದು ತಿಳಿಯಲು ಸುಧೀಂದ್ರ ಹಾಲ್ದೊಡೇರಿಯವರ "ನೆಟ್‌ನೋಟ" ಅಂಕಣದ ಈ ವಾರದ ಅಂಕಣ ಲೇಖನ ಓದಿ.
ವಿಧ: Basic page
April 30, 2007
ಸಲೂನ್ ಶಾಪಿಗೆ ಬಂದು ಇಪ್ಪತ್ತು ನಿಮಿಷವಾಗಿತ್ತು. ಮೆತ್ತನೆಯ ಸೊಫಾದ ಮೇಲೆ ಕುಳಿತು, "ಫಿಲ್ಮ್ ಫೇರ್" ಓದುತ್ತಿದ್ದೆ. ಎಂದಿನ ಭಾನುವಾರದಂತೆ ಬಹಳ ಜನ. ಕನ್ನಡಿ ಮುಂದಿನ ಒಂದು ಜಾಗ ಖಾಲಿಯಾಗಿತ್ತು. ಕ್ಷೌರಿಕ, "ಸಾರ್" ಎಂದು ಕೂಗಿ ಕರೆದು ಮೆತ್ತನೆಯ ಕುರ್ಚಿಯನ್ನೊಮ್ಮೆ ತಟ್ಟಿ ಕುಳಿತುಕೊಳ್ಳುವಂತೆ ಸನ್ಹೆ ಮಾಡಿದ. ನನ್ನ ಕನ್ನಡಕವನ್ನು ತೆಗೆದು, ಮಡಿಸಿ, ಮುಂದಿದ್ದ ಟೇಬಲ್ ಮೇಲಿಟ್ಟ. ಮುಂದಿನ ಕಪಾಟಿನಿಂದ ಮಡಿಸಿಟ್ಟಿದ್ದ ಹೊದಿಕೆಯನ್ನು ತೆಗೆದು, ಕೊಡವಿ, ನನ್ನ ಮೇಲೆ ಹೊದಿಸಿ, ಕತ್ತಿನ…
ವಿಧ: ಬ್ಲಾಗ್ ಬರಹ
April 30, 2007
“ಹೇಳುತ್ತೇನೆ. ನಿಜವಾಗಿಯೂ ಕೇಳುತ್ತೀರಾ?”
“ಖಂಡಿತ” ಅಂದೆ.
ಸ್ವಲ್ಪಹೊತ್ತು ಸುಮ್ಮನಿದ್ದ. ಮುಖ ಉಜ್ಜಿಕೊಂಡ. ಶುರುಮಾಡಿದ.
“ಸರಿಯಾಗಿ ಹೇಳಬೇಕು ಅಂದರೆ ಮೊದಲಿನಿಂದ ಹೇಳಬೇಕು. ಹೇಗೆ ಮದುವೆಯಾದೆ, ಯಾಕೆ ಮದುವೆಯಾದೆ, ಮದುವೆಗೆ ಮೊದಲು ಹೇಗಿದ್ದೆ ಎಲ್ಲಾ ಹೇಳಬೇಕು.
“ಮದುವೆಗೆ ಮೊದಲು ಎಲ್ಲರ ಹಾಗೇ ಇದ್ದೆ. ನಮ್ಮಂಥ ಶ್ರೀಮಂತವರ್ಗದವರು ಇರುತ್ತಾರಲ್ಲ ಹಾಗೆ. ಉಡಾಳ. ನಮ್ಮದು ಜಮೀನುದಾರೀ ಮನೆ. ಯೂನಿವರ್ಸಿಟಿಯಲ್ಲಿ ಲಾ ಓದಿ ಡಿಗ್ರಿ ತೆಗೆದುಕೊಂಡೆ. ಮಾರ್ಷಲ್ ಆಫ್ ನೊಬಿಲಿಟಿ ಪದವಿ ಇತ್ತು.…
ವಿಧ: Basic page
April 29, 2007
ಬಳಸೋದು ಬಹಳ ಸುಲಭ. ಕೆಳಗಿನಿಂದ ಕಾಪಿ - ಪೇಸ್ಟ್ ಮಾಡಿ ನಿಮ್ಮ ಬ್ಲಾಗು/ಸೈಟುಗಳಲ್ಲಿ ಹಾಕಿಕೊಳ್ಳಿ.
Font - Unicode Help
<a href="http://sampada.net/fonthelp"><img border="0" alt="Kannada Unicode - Font Help" title="Kannada Unicode - Font Help" src="http://www.sampada.net/files/font-help.png"/></a>
Baraha IME (ಬರಹ ಕನ್ನಡ IME)
<a href="http://baraha.com/BarahaIME.htm"><img border="0" alt…
ವಿಧ: ಬ್ಲಾಗ್ ಬರಹ
April 29, 2007
ಆಗಿನ್ನು ಮದುವೆ ಆಗಿ ಆರೇಳು ತಿಂಗಳಾಗಿತ್ತಷ್ಟೆ. ನಾವು ಆಗ ಡೊಮಿನಿಕನ್ ರಿಪಬ್ಲಿಕ್ (Dominican Republic) ನಲ್ಲಿ ವಾಸವಾಗಿದ್ದೆವು. ಫ಼್ಲೋರಿಡ ತೀರದಿಂದ ಸುಮಾರು ಆರನೂರು ಮೈಲಿ ದೂರ ಕೆರಿಬ್ಬಿಯನ್ ಸಮುದ್ರದಲ್ಲಿದೆ. ಇಲ್ಲಿಂದ ಜಮೈಕ ಸಮುದ್ರದಾಚೆ ಸುಮಾರು ಇನ್ನೂರು ಮೈಲಿರಬಹುದು. ನಾವು ವಾಸಿಸಿದ/ಪ್ರಯಾಣಿಸಿದ ಎಲ್ಲ ಕಡೆಗಳಲ್ಲಿ ನಮಗೆ ಅತ್ಯಂತ ಪ್ರಿಯವಾದ ದೇಶವಿದು. ಈ ದೇಶ-ಜನರ ಬಗ್ಗೆ ಮುಂದೆ ಸಾಕಷ್ಟು ಬರೆಯುವುದಿದೆ.
ಡೊಮಿನಿಕನ್ ರಿಪಬ್ಲಿಕ್ ನ ರಾಜಧಾನಿ “ಸ್ಯಾನ್ತೊ ದೊಮಿಂಗೊ” (Santo…