ವಿಧ: ಬ್ಲಾಗ್ ಬರಹ
May 06, 2007
ಮತ್ತೆ ಮಳೆ ಹುಯ್ಯುತಿದೆ..ಎಲ್ಲ ನೆನಪಾಗುತಿದೆ.... ಆಮೇಲೆ ಏನೂಂತ ತಿಳಿದವರು ತಿಳಿಸಿ..ತುಂಬಾ ಕಾಡುತ್ತಿದೆ ಈ ಕವನ...ಮುಂಗಾರು ಆರಂಭವಾಗುತ್ತಿದೆ..ಏನೆಲ್ಲಾ ಹೊಸ ಕನಸುಗಳಿಗೆ ಮುನ್ನುಡಿ ಬರೆಯುತಿದೆ. ಮಳೆಗೆ ಸಿಲುಕಿ ಮುರಿದು ಬಿದ್ದ ಮನೆ, ಅಂಗಳದಲಿ ಆರಳಿದ ಮುಗಿಲ ಮಲ್ಲಿಗೆ..
ವಿಧ: Basic page
May 06, 2007
(ಬಂಟ್ವಾಳ ತಾಲೂಕಿನ ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಡಾ.ವಿಶ್ವೇಶ್ವರ ವಿ ಕೆ ಅವರ ಕಾಂತಾವರ ಕನ್ನಡ ಸಂಘದ "ನಾಡಿಗೆ ನಮಸ್ಕಾರ" ಸರಣಿಯ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಹತ್ತನೇ ಪುಸ್ತಕದಿಂದ ಆಯ್ದ ಭಾಗಗಳು. ಅಧಿಕೃತ ಮಾರಾಟಗಾರರು: ಜ್ಞಾನಗಂಗಾ ಪುಸ್ತಕ ಮಳಿಗೆ ,ಪ್ರವಾಸಿ ಮಂದಿರದ ಎದುರು,ದರ್ಬೆ, ಪುತ್ತೂರು-574202 ದ.ಕ. tel:08251-232421 cell: 9448381511)
ತಂತ್ರಜ್ಞಾನದ ಪ್ರಗತಿ ಮತ್ತು ವೈದ್ಯ ವಿಜ್ಞಾನದಲ್ಲಿ ಸಾಧಿಸಿರುವ ಪ್ರಗತಿ ಅಚ್ಚರಿ…
ವಿಧ: ಕಾರ್ಯಕ್ರಮ
May 05, 2007
ಕಾಂತಾವರ ಕನ್ನಡ ಸಂಘದ "ನಾಡಿಗೆ ನಮಸ್ಕಾರ" ಸರಣಿಯಲ್ಲಿ ಮೊದಲ ಬಾರಿಗೆ ಪ್ರಕಟಿಸಲಿರುವ ಮೊದಲ ಕಂತಿನ ಹತ್ತು ಪುಸ್ತಕಗಳ ಅನಾವರಣ ಮೇ ಆರರಂದು ನಡೆಯಲಿದೆ.
ಸ್ಥಳ: ಉಡುಪಿಯ ಕಿದಿಯೂರು ಹೋಟೆಲ್ ಮಹಾಜನ್ ಹಾಲ್
ಅಧ್ಯಕ್ಷತೆ: ಪ್ರೊ. ಎಸ್ ಜಿ ಸಿದ್ಧಲಿಂಗಯ್ಯ, ಅಧ್ಯಕ್ಷರು, ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರ
ಅನಾವರಣ: ಹರಿಕೃಷ್ಣ ಪುನರೂರು, ರಾಜ್ಯ ಕಸಾಪ ನಿಕಟಪೂರ್ವ ಅಧ್ಯಕ್ಷ
ಹಿರಿಯ ಸಾಹಿತಿ,ಕಲಾಪೋಷಕ ಡಿ ಕೆ ಚೌಟ ಅವರನ್ನು ಸನ್ಮಾನಿಸಲಿರುವವರು: ವಿ. ಪೊನ್ನುರಾಜ್,ಜಿಲ್ಲಾಧಿಕಾರಿ,ಉಡುಪಿ.…
ವಿಧ: Basic page
May 05, 2007
ಕವಿತೆಯೆಂದರೆ ಏಕೆ,
ಯಾವಾಗಲೂ ಹೀಗೆ,
ಅರ್ಥವಾಗದು ಓದಿದರೆ ಒಮ್ಮೆ,
ಓದಲೇಬೇಕೆ ಇನ್ನೊಮ್ಮೆ, ಮತ್ತೊಮ್ಮೆ?
ಕವಿತೆಯಲಿ ಏಕೆ, ಕಠಿಣ ಪದಗಳ ಬಳಕೆ,
ಕವಿತೆ ಓದಲು, ಜೊತೆಗೆ ಕನ್ನಡ-ಕನ್ನಡ ನಿಘಂಟು ಬೇಕೆ?
ಕವಿತೆಯಲಿ ಏಕೆ, ಯಾವಾಗಲೂ ಹೀಗೆ,
ಎಂದೂ ಕೇಳದ ಪದಗಳ ಚರಣ,
ಸುತ್ತಿ-ಬಳಸಿ, ಮುಂದೆ-ಹಿಂದೆ ತಿರುಚಿ,
ಬರೆದ ಉದ್ದುದ್ದ ಸಾಲುಗಳ ತೋರಣ?
ಕವಿತೆಯಲಿ ಏಕೆ, ಇರಬಾರದೆ ಹೀಗೆ
ಸ್ವಲ್ಪ ನೀತಿ, ಲಘು ಹಾಸ್ಯ,
ಸರಳ ಪದಗಳ ಪ್ರಯೋಗ,
ಇರಲಿ ಬೇಕಾದರೆ ಛಂದಸ್ಸು, ಮಾತ್ರೆ, ಪ್ರಾಸ!
ಏಕಿರಬಾರದು…
ವಿಧ: Basic page
May 05, 2007
ಪ್ರಕಾಶನ :
ಕರ್ನಾಟಕ ಸಾಹಿತ್ಯ ಅಕಾಡೆಮಿ
ಇದು ಹೊರ ನೋಟಕ್ಕೆ ಒಂದು ಪ್ರವಾಸ ಕಥನ. ಆದರೆ, ಅದರಲ್ಲಿ ಬರುವ ಸನ್ನಿವೇಶಗಳನ್ನೆ ಹೋಲಿಸಿ ರಾಯರ ಕೊಡುವ ಒಳನೋಟಗಳು ಅವರ್ಣನೀಯ. ಇದಕ್ಕೆ ಕಾರಣ ಅವರಲ್ಲಿ ಅಡಗಿರುವ ಅವರ ಅದ್ಭುತ ಜ್ಞಾನ ಭಂಡಾರ. ಅದಕ್ಕೆ ತಕ್ಕ ಹಾಗೂ ಪೂರಕವಾದ ಭಾಷಾ ಸಂಪತ್ತು. ಎಲ್ಲವನ್ನು ನಿಧಾನವಾಗಿ ನೋಡಿ ಅದನ್ನು ಸರಿಯಾಗಿ ಅರ್ಥೈಸಿಕೊಂಡು ಓದುಗರ ಮನಸ್ಸಿನಲ್ಲಿ ಒಂದು ಹೊಸ ಅನುಭವ ಲೋಕವನ್ನು ನಿರ್ಮಾಣಮಾಡುವಲ್ಲಿ ಅವರು ಸಾರ್ಥಕರಾರಿದ್ದಾರೆ. ಮುನ್ನುಡಿಯನ್ನು ಬರೆದ ಪ್ರಸಿದ್ಧ ವ್ಯಕ್ತಿ…
ವಿಧ: ಬ್ಲಾಗ್ ಬರಹ
May 05, 2007
ಇವತ್ತು 'ಕನ್ನಡಿಗರ ಜನ್ಮ ಸಾರ್ಥಕತೆ' ಎಂಬ ಪುಸ್ತಕವನ್ನು ಮತ್ತೆ ಓದುತ್ತಿದ್ದೆ.
ಅದರಲ್ಲಿ ಇತ್ತು - 'ಪರಭಾಷೆಯ ವಿಚಾರಗಳನ್ನು ಸ್ವಭಾಷೆಯ ಅಜ್ಞಾನವಿದ್ದುದರಿಂದ ಅಚ್ಚಗನ್ನಡದಲಿ ತಿಳಿಸಲಿಕ್ಕೆ ಬರದಿದ್ದರೆ ಅದು ಕನ್ನಡದ ದೋಷವಲ್ಲ. ತಾನು ಕುಣಿಯಲಾರದೆ ನೆಲ ಡೊಂಕೆಂದು ಹೇಳುವದೂ ಕನ್ನಡದಲ್ಲಿ ವಿಚಾರಗಳನ್ನು ಪ್ರಕಟಿಸಲಿಕ್ಕೆ ಬರುವದಿಲ್ಲವೆನ್ನುವದೂ ಒಂದೇ ಸರಿ' .
ಇರಲಿ.
ಇದೀಗ ನನ್ನ ಸ್ವಭಾಷೆಯ ಅಜ್ಞಾನ ಬೆಳಕಿಗೆ ಬಂತು -
ಈಗ ಕಂಪ್ಯೂಟರ್‌ಗಳಲ್ಲಿ ಕೆಲಸಮಾಡುವ ನಾವು ಕಡತ(file)ಗಳನ್ನು…
ವಿಧ: Basic page
May 05, 2007
ಅಮೆರಿಕಾದ ಮಿಲಿಟರಿಗೋಸ್ಕರ ಪುರ್ಡ್ಯೂ ವಿಶ್ವವಿದ್ಯಾಲಯದ ಸಂಶೋಧಕರು ರಚಿಸಿದ, ವಿದ್ಯುಜ್ಜನಕ ಯಂತ್ರಕ್ಕೆ ದನದ ಹೊಟ್ಟೆಯೇ ಸ್ಪೂರ್ತಿ. ದನದ ಜಠರವು ಮಿಥೇನ್ ಅನಿಲವನ್ನು ಉತ್ಪಾದಿಸುತ್ತದಂತೆ. ಅದೇ ರೀತಿ ಕೆಲಸ ಮಾಡಿ ಅನಿಲ ಉತ್ಪಾದಿಸುವಂತೆ ವಿದ್ಯುಜನಕ ಯಂತ್ರವನ್ನು ರಚಿಸಬಾರದೇಕೇ ಎಂದು ಯೋಚಿಸಿದ ಸಂಶೋಧಕರು, ಯಂತ್ರದಲ್ಲಿ ಬೇಡದ ಕಸವನ್ನು ಇಂಧನವಾಗಿ ಬಳಸುತ್ತಾರೆ. ಯಂತ್ರದ ಘಟಕವೊಂದರಲ್ಲಿ ಜೈವಿಕ ವಸ್ತುಗಳ ಕೊಳೆತು ಮಿಥೇನ್ ಅನಿಲ ಉತ್ಪಾದನೆಯಾಗುತ್ತದೆ.ಈ ಕ್ರಿಯೆಯನು ಚುರುಕುಗೊಳಿಸಲು ಕಿಣ್ವಗಳ…
ವಿಧ: ಚರ್ಚೆಯ ವಿಷಯ
May 04, 2007
ನಾನು ಸಂಪದದ ಹೊಸ ಸದಸ್ಯ. ಬರಹ ಕೂಡ ನನಗೆ ಹೊಸತೇ.
ಕನ್ನಡದಲ್ಲಿ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸಬೇಕಾದರೆ ಏನು ಮಾಡಬೇಕು? ಬರಹದಿಂದ ಹೊರಬರಬೇಕೆ? ಅಥವಾ ಬೇರೆ ಸುಲಭ ದಾರಿ ಇದೆಯೆ? ದಯವಿಟ್ಟು ತಿಳಿಸಿ.
ವಿಧ: Basic page
May 04, 2007
ಈವತ್ತು ನನ್ನ ಮಿತ್ರನೊಬ್ಬ ಜೀನ್ ಎ೦ಬ ಕಲೆಗಾರ ಇನ್ನಿಲ್ಲಾ ಎ೦ಬ
ಸುದ್ದಿಯನ್ನು ತಿಳಿಸಿದ. ಆತನನ್ನು ಒಮ್ಮೆ ಭೇಟಿ ಯಾದ ನೆನಪು .
ಇ೦ದು ಆತನ ವೆಬ್ ಪೇಜ್ ನೋಡಿದಾಗ ಆಶ್ಚರ್ಯವಾಯ್ತು ...
ಅದ್ಭುತ ಚಿತ್ರಗಾರ, ತ೦ತ್ರ ವಿದ್ಯಾ, ಉಪನಿಷತ್ ಇತ್ಯಾದಿ
ಅಧ್ಯಾಯನ.ಸ೦ಸ್ಕೃತವನ್ನು ಚೆನ್ನಾಗಿ ಅಧ್ಯಾಯನ ಮಾಡಿದ್ದಾನೆ.
ಈ ಸಾಧಕನ ಕಲೆಯನ್ನು ನೀವು ನೋಡಿ,
http://jeanletschert.com/
ಆತ ಬೆ೦ಗಳೂರಿನ ನಿವಾಸಿಯಾಗಿದ್ದ.
ವಿಧ: ಬ್ಲಾಗ್ ಬರಹ
May 04, 2007
ಏಳು ಸ್ವರವು ಸೇರಿ ಸಂಗೀತವಾಯಿತು- ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು - ಏಳು ದಿನವು ಸೇರಿ ಒಂದು ವಾರವಾಯಿತು - ಏಳು ತಾರೆ ಸಪ್ತಋಷಿಯ ಚಿಹ್ನೆಯಾಯಿತು ಎಂದು ಪಿ.ಸುಶೀಲಾ ಅವರು ಮಧುರವಾಗಿ ಹಾಡಿರುವ ಹಾಡನ್ನು ನಾವೆಲ್ಲಾ ಕೇಳಿಯೇ ಇದ್ದೇವೆ. ಸ್ವರಗಳು ಏಳೇ ಏಕಿರಬೇಕು? ಇದಕ್ಕೆ ಉತ್ತರ ಹೇಳಲು ಸಾಧ್ಯವಾದರೂ, ಸ್ವಲ್ಪ ಕಷ್ಟ. (ಇಲ್ಲದಿದ್ದರೆ ಆ ಪಾಟಿ ಸಂಗೀತ ಲಕ್ಷಣ ಗ್ರಂಥಗಳು ಇರುತ್ತಿದ್ದವೇ!?) ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗುವುದನ್ನು ನಾವೆಲ್ಲ ವರ್ಣಚಕ್ರದಲ್ಲಿ ನೋಡೇ ಇದ್ದೇವೆ. ಏಳು…