ವಿಧ: ಚರ್ಚೆಯ ವಿಷಯ
February 08, 2007
'ಮುಂಗಾರು ಮಳೆ'ಯ ಗೆಲುವಿನ ನಂತರ, ಗಾಂದಿನಗರ ಗಣೇಶ್ ಮುಂದಿನ ಸಿನಿಮಾ ಬಗ್ಗೆ ಸುದ್ದಿ ಕೊಟ್ಟಿತೇ ಹೊರತು ಯೋಗರಾಜ್ ಭಟ್‍ರ ಸುದ್ದಿನೇ ಇಲ್ಲ. ಇವರ ಮೊದಲ ಸಿನಿಮಾ 'ಮಣಿ' ಕೂಡ ಚೆನ್ನಾಗಿದೆ, ಆದರೆ ಇದು ಸೋತಿದ್ದು ಅತಿಯಾದ ಹಿಂಸೆಯನ್ನು ತೋರಿಸಿದ್ದರಿಂದ. ಆದರೆ ಕತೆ ಮತ್ತು ಅದನ್ನು ಹೆಣೆದಿರುವ ರೀತಿ, ದ್ರುಶ್ಯಗಳು ಚೆನ್ನಾಗಿವೆ. ಉಮಾಶ್ರಿ ಮತ್ತು ರಂಗಾಯಣ ರಘು ಪ್ರತಿಭೆ ಒರೆಗೆ ಹಚ್ಚಿದಂತಿದೆ.
ಒಂದು ಸಿನಿಮಾ ಗೆಲ್ಲೋಕೆ ಮೂರು ವಿಷಯಗಳು ಚೆನ್ನಾಗಿರಬೇಕು. ೧) ಹಾಡುಗಳು ೨)ಕತೆ ೩) ಡೈರೆಕ್ಷನ್.…
ವಿಧ: ಚರ್ಚೆಯ ವಿಷಯ
February 07, 2007
ಕೊನೆಗೂ ಸಿರೀಸ್ ಗೆದ್ರು ಎಂದು ಖುಷಿಪಟ್ಟ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ಮುಟ್ಟಿಸುವಂತಹ ಸುದ್ದಿ ಇವತ್ತು ಹೊರಬಂದಿದೆ. ವೆಸ್ಟ್ ಇಂಡೀಸ್ ಆಟಗಾರ [:http://content-ind.cricinfo.com/ci/content/player/52983.html|ಮಾರ್ಲನ್ ಸ್ಯಾಮ್ಯುಯೆಲ್ಸ್] ನಾಗಪುರ ಮ್ಯಾಚ್ ಹಿಂದಿನ ದಿನ ಭೂಗತ ಲೋಕದವರೊಂದಿಗೆ ಮಾತುಕತೆ ನಡೆಸಿದ, ಮಾಹಿತಿ ಹಂಚಿಕೊಂಡ ಎಂಬುದರ ಬಗ್ಗೆ ನಾಗಪುರ ಪೋಲೋಸರಿಗೆ ಪುರಾವೆ ದೊರೆತಿದೆಯಂತೆ.
ಈಗಾಗಲೇ ಭಾರತದಲ್ಲಿರೋ ಎಲ್ಲ ಹೆಸರಿರುವ ನ್ಯೂಸ್ ಚ್ಯಾನಲ್ಲುಗಳೂ ಇದನ್ನು…
ವಿಧ: ಬ್ಲಾಗ್ ಬರಹ
February 07, 2007
ಗೆಳೆಯರೆ ಸಮಯ ಸಿಕ್ಕಾಗ ನನ್ನ ಬ್ಲಾಗ್ `ಅಂತರಗಂಗೆ' ಓದಿ ನಿಮ್ಮ ಅನಿಸಿಕೆ ತಿಳಿಸಿ
[:http://antaragange.blogspot.com]
ಜೆ.ಬಾಲಕೃಷ್ಣ
ವಿಧ: ಬ್ಲಾಗ್ ಬರಹ
February 07, 2007
ಹೋದ ವಾರ teach yourself writing poetry ಕೊಂಡಿದ್ದೆ . ಕೆಲವು ಭಾಗ ನೋಡಿದೆ. ಪೂರ್ತಿ ಓದಲಿಲ್ಲವಾದರೂ ಅಲ್ಲಿನ ಕೆಲವು ವಿಚಾರ ಹೇಳುವೆ.
೧. ಕವಿತೆಯನ್ನು ಬರೆವುದನ್ನು ಕಲಿಯಬಹುದು. ಹುಟ್ಟಾಪ್ರತಿಭೆ ಇರಲೇಬೇಕೆಂದಿಲ್ಲ.
೨. ಮೊದಲು ಇತರರು ಬರೆಯುವುದನ್ನು ಓದಬೇಕು . ( ಇದನ್ನು ನಮ್ಮ ಕವಿಗಳು ಮಾಡುತ್ತಿಲ್ಲ!- ಇನ್ನೊಬ್ಬರದನ್ನು ಓದಲೇಬಾರದು ಎಂದು ಬಹುತೇಕ ಕವಿಗಳು ಪ್ರತಿಜ್ಞೆ ಮಾಡಿದಂತಿದೆ!)
೩. ಮೊದಲು ಅನುಕರಣೆ ಮಾಡಿ(ಮೊದಲಿಗೆ ತಪ್ಪಲ್ಲ.), ನಂತರ ನಿಮ್ಮತನ ಕಂಡುಕೊಳ್ಳಬಹುದು.
೪.…
ವಿಧ: ಬ್ಲಾಗ್ ಬರಹ
February 07, 2007
ಕನ್ನಡಕ್ಕೆ ಅನುವಾದ ಕುರಿತು ಹೊಸ ಆಲೋಚನೆ
ನಾನು ಕುವೆಂಪುರವರ 'ಮಲೆಗಳಲ್ಲಿ ಮದುಮಗಳು' ಮತ್ತು 'ಕಾನೂರು ಹೆಗ್ಗಡಿತಿ' ಓದಿಲ್ಲ ( ಅಷ್ಟೇ ಏಕೆ , ಭೈರಪ್ಪ , ಕಾರಂತರ ಕಾದಂಬರಿಗಳನ್ನೂ ಓದಿಲ್ಲ) .
ವರ್ಷಕ್ಕೊಮ್ಮೆ ಮುಂಬೈಯಲ್ಲಿ Strand Book exhibiTion and Sale ನಡೆಯುತ್ತದೆ . ಭಾರೀ ಪ್ರಮಾಣದಲ್ಲಿ ರಿಯಾಯಿತಿ ಕೊಡುವದರಿಂದ ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳು ಮಾರಾಟವಾಗುತ್ತವೆ . ( ನಿಮಗೆ ಗೊತ್ತಿರಬಹುದು . ಈ Strand Book stall ಬಹಳ ಹೆಸರುವಾಸಿ . ಅತಿ ಗಣ್ಯ ವ್ಯಕ್ತಿಗಳು ಹಿಂದೆ…
ವಿಧ: ಬ್ಲಾಗ್ ಬರಹ
February 07, 2007
ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಅಳಿಯಲು ಬೇಡ
ಇದೇ ಅಂತರಂಗ ಶುದ್ದಿ
ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
-ಬಸವಣ್ಣ
ವಿಧ: ಚರ್ಚೆಯ ವಿಷಯ
February 07, 2007
'ಸಂಪದ'ದ ಜನವರಿ ತಿಂಗಳ ಅಂಕಿ ಅಂಶ ಹೀಗಿದೆ:
* Total hits recorded: 1,078,408
( ಒಂದು ಮಿಲಿಯನ್ ಪಾರು ಮಾಡಿದ್ದೇವೆ ;) )
* Total number of unique visitors: 1,59,959
* Average hits per day: 34,787
ಅತಿ ಹೆಚ್ಚು ಟ್ರಾಫಿಕ್ ರೆಕಾರ್ಡ್ ಆಗಿರುವುದು [:http://sampada.net/archive/2007/1/16|ಜನವರಿ 16ರಂದು].
ಹೆಚ್ಚು ಡೌನ್ಲೋಡ್ ಮಾಡಲ್ಪಟ್ಟ Podcast [:http://sampada.net/podcasts/1|ಕೆ ಪಿ ಪೂರ್ಣಚಂದ್ರ ತೇಜಸ್ವಿಯವರೊಂದಿಗಿನ ಮಾತುಕತೆ]. (ಕಳೆದ ತಿಂಗಳು…
ವಿಧ: ಬ್ಲಾಗ್ ಬರಹ
February 07, 2007
ಎಲ್ಲಾದರು ಇರು ಎಂತಾದರು ಇರುಎಂದೆಂದಿಗು ನೀ ಕನ್ನಡವಾಗಿರುಕನ್ನಡ ಗೋವಿನ ಓ ಮುದ್ದಿನ ಕರುಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!ನೀ ಮೆಟ್ಟುವ ನೆಲ- ಅದೆ ಕರ್ನಾಟಕ!ನೀನೇರುವ ಮಲೆ-ಸಹ್ಯಾದ್ರಿನೀ ಮುಟ್ಟುವ ಮರ-ಶ್ರೀಗಂದದ ಮರನೀ ಕುಡಿಯುವ ನೀರ್-ಕಾವೇರಿ!ಪಂಪನನೋದುವ ನಿನ್ನಾ ನಾಲಿಗೆಕನ್ನಡವೇ ಸತ್ಯಕುಮಾರವ್ಯಾಸನನಾಲಿಪ ಕಿವಿಯದುಕನ್ನಡವೇ ನಿತ್ಯ-ಕುವೆಂಪು
ವಿಧ: ಬ್ಲಾಗ್ ಬರಹ
February 06, 2007
ದಬ್ಬೆ - ಕಾನೂರು ಕೋಟೆ - ಬಸ್ತಿ ಚಾರಣದ ಅನುಬವ. ಬಾಗ ೧
ಮುನ್ನುಡಿ,ಸದರಿ ಚಾರಣಕ್ಕಿ೦ತ ಮು೦ಚೆ ಡಿಸೆ೦ಬರ್ ೨೫ರ ಕ್ರಿಸ್ಮಸ್ ರಜೆಯಲ್ಲಿ ಚಾರಣಕ್ಕೆ೦ದು ಮೇಘಾನೆ-ಬಸವನಬಾಯಿ-ಗೂದನಗು೦ಡಿ ಜಲಪಾತಕ್ಕೆ ಚಾರಣ ಮಾಡಿದ್ದೆವು. ಈ ಚಾರಣ ಬಹಳ ಚೆನ್ನಾಗಿತ್ತು ಮತ್ತು ಈ ಚಾರಣದ ಯಶಸ್ಸಿನಿ೦ದ ಬೀಗುತ್ತಿದ್ದ ಚಾರಣಿಗರು ಅ೦ದೆ, ಜನವರಿ ೨೬ ಶುಕ್ರವಾರ ಎಲ್ಲರಿಗೂ ರಜೆ ಇರುವುದರಿ೦ದ, ಇನ್ನೊ೦ದು ಒಳ್ಳೆಯ ೩ ದಿನಗಳ ಚಾರಣ ಮಾಡಬೇಕೆ೦ದು ತೀರ್ಮಾನಿಸಿದರು. ಅ೦ತೆಯೇ ದ್ವಾರಕ ರೈಲಿನಲ್ಲಿ ಶಿವಮೊಗ್ಗೆಗೆ ಪ್ರಯಾಣ…
ವಿಧ: ಬ್ಲಾಗ್ ಬರಹ
February 06, 2007
ದಬ್ಬೆ - ಕಾನೂರು ಕೋಟೆ - ಬಸ್ತಿ ಚಾರಣದ ಅನುಬವ. ಬಾಗ ೨
ಹೊಸಗದ್ದೆಗೆ ವಿದಾಯ ಹೇಳಿ ಬೆಳಿಗ್ಗೆಯ ಹೊಸ ಉರುಪಿನಿ೦ದ ಚಾರಣವನ್ನ ಪ್ರಾರ೦ಬಿಸಿದೆವು. ಸ್ವಲ್ಪ ದೂರ ರಸ್ತೆಯಲ್ಲಿ ನಡೆದ ನಾವು ನ೦ತರ ಕಾಡಿನ ಕಡೆಗೆ ಬಲಕ್ಕೆ ತಿರುಗಿ ಗದ್ದೆ/ತೋಟಗಳ ಮದ್ಯೆ ನಡೆದೆವು. ಈಗ ತಾನೆ ನಾಟಿ ಮಾಡಿದ ಗದ್ದೆ ಹಾಗೂ ನಾಟಿ ಮಾಡಲು ತಯಾರಾಗಿದ್ದ ಗದ್ದೆಗಳು ನೋಡಲು ಸೊಗಸಾಗಿದ್ದವು. ಅಷ್ಟರಲ್ಲಿ ಒ೦ದು ತೊರೆ ಅಡ್ಡವಾಯಿತು, ಈ ತೊರೆಯನ್ನ ದಾಟಲು ಸ್ಥಳೀಕರು ಮರದ ದಿಮ್ಮಿಗಳನ್ನ ಹಾಕಿದ್ದರು ಆದರೆ ಅವು ನೀರಿನ ರಬಸಕ್ಕೆ…