ವಿಧ: ಬ್ಲಾಗ್ ಬರಹ
January 31, 2007
*ಪ್ರೇಮಿಗಳ ಹಾಡು*
ಮಾಡಿಮ್ಯಾಲೆನಿಂತುಕೊಂಡು ಮಲ್ಗೆಹೂವಮುಡ್ದುಕೊಂಡು
||ಮೆಲ್ಲಮೆಲ್ಲಗೆ ನಡಿಯೋಳೆ ಮುದ್ದಾದಮೊಗದವಳೆ ನೀನಾರೆ||
ಕೊಡವ ಹಿಡಿದು ಕೆರೆಕಡೆಗೆ ಹೊರಟವಳೆ ಕನಕಾಂಗಿ ನಾ ಬರುವೆ ನಿಲ್ಲೆ ಕೆರೆತನಕ ||ಪಲ್ಲವಿ||
ಕಿಲಕಿಲನೆ ನಗುತ್ತಾ ನೀರನ್ನು ತುಂಬುತ್ತಾ ||ಮನಸನ್ನು ಕಲಕಿದವಳೆ ನೀನಾರೆ||
ನನಚಲುವೆ||ಎದೆಯ ಕದವನ್ನು ತೆಗೆದವಳೆ ನೀನಾರೆ|| "ಮಾ"
ಅಂದಾನೆ ನಾನೆಂದು ಚಂದಾನೆ ತಾನೆಂದು ||ಬಿಂಕದಲಿ ನಿಂತವಳು ನೀನ್ಯಾರೆ
ನನಚಲುವೆ||ಬಾವದ ಚಿಲುಮೆ ಚಿಮ್ಮಿಸಿದವಳೆ ನೀನ್ಯಾರೆ||"ಮಾ"
ಮಂದಹಾಸ…
ವಿಧ: ಬ್ಲಾಗ್ ಬರಹ
January 31, 2007
ಬೊಗಳೂರು, ಜ.31- ಗಾಂಧೀಜಿ ಪ್ರಣೀತ ಸತ್ಯಾಗ್ರಹದ ಶತಮಾನೋತ್ಸವವನ್ನು ಪಕ್ಷಕ್ಕೆ ಸೀಮಿತಗೊಳಿಸಿ ಆಚರಿಸಿದೆ ಎಂದು ವಿರೋಧಿಗಳಿಂದ ಶ್ಲಾಘನೆಗೆ ಕಾರಣವಾಗಿರುವ ಕಾಂguess, ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. [http://bogaleragale.blogspot.com/]
ತಮ್ಮ ಪಕ್ಷವನ್ನು ಗಾಂಧೀಜಿ ಅವರೇ ಕಟ್ಟಿದ್ದು, ಈಗ ಕೂಡ "ಗಾಂಧೀಜಿ" ಅವರೇ ಪಕ್ಷಾಧ್ಯಕ್ಷೆಯಾಗಿ ಮುನ್ನಡೆಸುತ್ತಿದ್ದಾರೆ. ಹಾಗಾಗಿ ಸತ್ಯಾಗ್ರಹದ ಪೂರ್ಣ ಕ್ರೆಡಿಟ್ ತಮಗೇ ಸಲ್ಲಬೇಕು ಎಂದು ಕಾಂguess ವಕ್ತಾರರಾದ ಶಣಿ ಮಂಕರ್ ಅಯ್ಯೋರು…
ವಿಧ: Basic page
January 30, 2007
ಕನ್ನಡವನ್ನು ಕಲಿತವರಿಗೆ, ಕಲಿಸುವವರಿಗೆ ಮತ್ತು ಇತರ ಆಸಕ್ತರಾದವರಿಗೆಂದು ಈ ಲೇಖನವನ್ನು ಇಲ್ಲಿ ಹಾಕಿದ್ದೇನೆ. ಪ್ರತಿಕ್ರಿಯೆಗಳಿಗೆ ಸ್ವಾಗತ. ಪದವಿ ತರಗತಿಗಳಲ್ಲಿ ಭಾಷಾಶಿಕ್ಷಣ: ಕನ್ನಡ ಈ ಬರವಣಿಗೆಯು , ಈ ಪುಸ್ತಕದಲ್ಲಿ ಇದೇ ವಿಷಯವನ್ನು ಕುರಿತಂತೆ ಬಂದಿರುವ ಇತರ ಲೇಖನಗಳ ಜೊತೆಯಲ್ಲಿ ಇರುತ್ತದೆ ಮತ್ತು ಅವುಗಳಿಗಿಂತ ಬೇರೆಯಾಗಿರುತ್ತದೆ. ಏಕೆಂದರೆ , ಕರ್ನಾಟಕದಲ್ಲಿಪದವಿ ತರಗತಿಗಳಲ್ಲಿ ಕನ್ನಡವನ್ನು ಓದುವ ಎಲ್ಲ ಹುಡುಗ-ಹುಡುಗಿಯರಿಗೂ ಕನ್ನಡವನ್ನುಮಾತನಾಡಲು ಬರುತ್ತದೆ. ಓದಲು ಮತ್ತು…
ವಿಧ: ಬ್ಲಾಗ್ ಬರಹ
January 30, 2007
ಭೂಗೋಲದ ಕೆಳಾರ್ಧದ ಬೇಸಿಗೆಯ ಉರಿ ಇರುಳು ಇದನ್ನು ಬರೀತಿದೀನಿ. ನನ್ನ ಹೆಸರು ಸುದರ್ಶನ. ಮೂಲ ಬೆಂಗಳೂರಿನವ, ಈಗ ವಾಸ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ. ಕಂಪ್ಯೂಟರಿನ ಜತೆ ಕೆಲಸವಾದರೂ ಕೂಡ ಇಲ್ಲಿವರೆಗೆ ಬ್ಲಾಗ್ ಬರೆಯುವ ತುರುಸು ಬಂದಿರಲಿಲ್ಲ. ಸಂಪದದ ವಾತಾವರಣ ಮನಸ್ಸಿಗೆ ಹಿಡಿಸಿ ಬ್ಲಾಗಿಸಲು ಶುರುಮಾಡ್ತಿದೀನಿ.
ವಿಧ: ಬ್ಲಾಗ್ ಬರಹ
January 30, 2007
2010ರಲ್ಲಿ ವಿಶ್ವದಾದ್ಯಂತ ದೂರ ಸಂಪರ್ಕ ಸ್ಥಗಿತಗೊಳ್ಳುತ್ತದೆಯಂತೆ. ಸೂರ್ಯನ ಉಜ್ವಲ ಕಿರಣದಿಂದಾಗಿ ಹೀಗಾಗುತ್ತದೆಯೆಂದು ಹೇಳಲಾಗಿದೆ. ಆದರೆ ಈ ಫೆಬ್ರವರಿ 27 ರಂದು ನಮ್ಮ ಸುದ್ದಿ ಮಾಧ್ಯಮಗಳ ಮೇಲೆ ಪ್ರಭಾವ ಬೀರಬಲ್ಲ ಘಟನೆಯ ಬಗ್ಗೆ ಎಲ್ಲೂ ವರದಿಯಾಗಿಲ್ಲ.
ಅಂದು 'ಐಶ್ ಮದುವೆ' ಎಂಬ ಘಟನೆಯ ತೀಕ್ಷಣ ಪ್ರಭಾವದಿಂದಾಗಿ ಇತರೆ ಎಲ್ಲಾ ಸುದ್ದಿಗಳು ಪತ್ರಿಕೆಗಳಲ್ಲಿ, ಟಿ ವಿ ಚಾನೆಲ್ ಗಳಲ್ಲಿ ಮೂಲೆಗುಂಪಾಗಲಿವೆ. ರಾಜಕಾರಣಿಗಳು,ನೇತಾರರು ಅಂದು ಯಾವುದೇ ಹೇಳಿಕೆಗಳಾಗಲಿ, ವಿರೋಧಿಗಳ ವಿರುದ್ದ ಆರೋಪ…
ವಿಧ: ಬ್ಲಾಗ್ ಬರಹ
January 30, 2007
ಇದನ್ನು ನನ್ನ ಅಮಾಯಕತನವೋ ಇಲ್ಲಾ ನನಗಾದ ಸಾಂಸ್ಕೃತಿಕ ಆಘಾತ ಅಂತಾದರೂ ಅಂದ್ಕೋಬಹುದು.ಅಥವಾ ನನ್ನನ್ನು ತೀವ್ರ ಕ್ಶುಲ್ಲಕ ಬುದ್ಧಿಯ ಮನುಷ್ಯ ಅಂತಾದರೂ ಅನ್ನಿ ಆದರೆ ನನಗಾದ ಅನುಭವವನ್ನ ಹಂಚಿಕೋತಾ ಇದ್ದೇನೆ. ನಾನು ಬೆಂಗಳೂರಿಗೆ ಬಂದು ಸುಮಾರು ೫ ವರ್ಷ ಆಯ್ತು. ಇಲ್ಲಿಗೆ ಬರುವ ಮುಂಚೆ ಬೆಂಗಳೂರು ಹೀಗೆ ಬೆಂಗಳೂರು ಹಾಗೆ ಅಂತ ನಾನಾ ತರಹದ ರಂಗು ರಂಗಿನ ಕಥೆಗಳನ್ನ ಕೇಳಿದ್ದೆ, ಆದರೆ ಯಾವದೇ ರೀತಿಯ ಘಟನೆಗಳನ್ನು ಕಣ್ಣಾರೆ ನೋಡಿರಲಿಲ್ಲ.ಇಲ್ಲಿ ಬಂದ ಮೇಲೂ ನಾನಿದ್ದದ್ದು ಪಕ್ಕಾ ಕನ್ನಡಿಗರ ಪ್ರದೇಶಗವಾದ…
ವಿಧ: Basic page
January 30, 2007
(೧೯೩೨-೨೦೦೭) ಶ್ರಿ. ಕಮಲೇಶ್ವರ್- ಒಬ್ಬ ಶ್ರೇಷ್ಟ ಸಾಹಿತಿ, ಮಾತುಗಾರ, ದೂರದರ್ಶನ ಆಂಕರ್, ಶ್ರೇಷ್ಟ ಚಿತ್ರಪಟ ಲೇಖಕ. ಹೃದಯಾಘಾತದಿಂದ ಸ್ವಲ್ಪ ಸಮಯದಿಂದ ನರಳುತ್ತಿದ್ದ ೭೫ ವರ್ಷ ವಯಸ್ಸಿನ ಕಮಲೇಶ್ವರ್, ಶನಿವಾರದಂದು ತಮ್ಮ ಕೊನೆಯುಸಿರೆಳೆದರು. ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ೧೯೭೩-೭೫ ರಲ್ಲಿ ದೂರದರ್ಶನದ ಕಾರ್ಯಕ್ರಮಗಳು ಆಗ ತಾನೇ ಪ್ರಾರಂಭವಾಗಿ ಗರಿಕೆದರುತ್ತಿದ್ದ ಕಾಲ. ನಾನು ದೂರದರ್ಶನದಲ್ಲಿ ಕಂಡ ಕಮಲೇಶ್ವರ್, ಒಬ್ಬ ಪ್ರಭಾವಿ, ಪ್ರತಿಭಾನ್ವಿತ…
ವಿಧ: ಚರ್ಚೆಯ ವಿಷಯ
January 30, 2007
ಈ ಕೆಳಗಿನ ಕೊಂಡಿಯಲ್ಲಿ ಮಂಕುತಿಮ್ಮನ ಕಗ್ಗದ ಪದ್ಯಗಳು ಆಂಗ್ಲ ರೂಪಾಂತರದೊಂದಿಗೆ ಲಭ್ಯವಿವೆ.ಶ್ಯಾ ಮ್‍ರವರ ಬ್ಲಾಗ್‍ನಲ್ಲಿ ಕಗ್ಗದ ಪದ್ಯವೊಂದನ್ನು ನೋಡಿದಾಗ ನೆನಪಾಯಿತು. ಹೇಗಿದೆ ನೋಡಿ. ಹೆಚ್ಚಿನವರಿಗೆ ಆಂಗ್ಲ ಅನುವಾದ ನೋಡಿದ ಬಳಿಕ ಕಗ್ಗ ಹೆಚ್ಚು ಸ್ಪಷ್ಟವಾದರೆ ಅಚ್ಚರಿಯಿಲ್ಲ!
ವಿಧ: ಚರ್ಚೆಯ ವಿಷಯ
January 30, 2007
ಸಂಪದದ [:http://translate.sampada.net|ಮುಕ್ತ ತಂತ್ರಾಂಶ ಅನುವಾದ ಮಾಡುವ ಪ್ರಾಜೆಕ್ಟಿನಲ್ಲಿ] ಪಾಲ್ಗೊಳ್ಳುತ್ತಿರುವವರಿಗೊಂದಷ್ಟು ಸಲಹೆಗಳು:
ಮೊನ್ನೆ ಗೈಮ್ ಅನುವಾದಗಳನ್ನ ಫೈನಲೈಸ್ ಮಾಡುವಾಗ ಕೆಲವು ವಿಷಯಗಳು ಕಂಡುಬಂದವು. ಅವುಗಳಲ್ಲಿ ಕೆಲವನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ಈ ತಪ್ಪುಗಳು ನಿಮ್ಮದಾಗಿಲ್ಲದಿರಬಹುದು ಎಂಬುದನ್ನು ಗಮನಿಸಿ. ನಾನು ಸುಮ್ಮನೇ ಎಲ್ಲ ಒಟ್ಟಿಗೆ ಇರಲಿ ಎಂದು ಪಟ್ಟಿ ಮಾಡುತ್ತಿದ್ದೇನೆ. ನೀವು ಬಹುಶಃ ಇದನ್ನು ಉಳಿದವರಿಗೆ propagate ಮಾಡುವಲ್ಲಿ ಸಹಾಯ…
ವಿಧ: ಬ್ಲಾಗ್ ಬರಹ
January 30, 2007
ಬೊಗಳೂರು, ಜ.30- ಶಾಲಾ ಮಕ್ಕಳನ್ನು ಬೆತ್ತಲೆಗೊಳಿಸಲಾಗಿದೆ ಎಂಬ ಸುದ್ದಿ ಕೇಳಿ ಬೊಗಳೆ ರಗಳೆ ಬ್ಯುರೋ ಭೋಪಾಲಕ್ಕೆ ತೆರಳಿ ವರದಿಯ ಅನೈಜತೆಯೇನು ಎಂಬುದನ್ನು ಪರೀಕ್ಷಿಸಿ ಓದುಗರಿಗೆ ಅಸತ್ಯಾಂಶ ತಿಳಿಯಪಡಿಸಲು ನಿರ್ಧರಿಸಿತು.
ಈ ಪ್ರಕಾರವಾಗಿ ಭೋಪಾಲದ ನರ್ಮದಾ ಶಾಲೆಗೆ ಹೋದ ನಮ್ಮ ಒದರಿಗಾರ ಪ್ರಮುಖರಾದ ಅಸತ್ಯಾನ್ವೇಷಿಯು, ಅಲ್ಲಿ ತಮ್ಮ ಪ್ರಾಧ್ಯಾಪಕರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಅರೆಬೆತ್ತಲೆಯಾಗಿಯೇ ಶಾಲೆಗೆ ಬಂದು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು…