ವಿಧ: ಬ್ಲಾಗ್ ಬರಹ
January 29, 2007
ಹುಡುಗಿ ಹೇಳಿದಳು ತನ್ನ ಪ್ರೀತಿಯ ಹುಡುಗನಿಗೆ -"ಪ್ರಿಯಾ, ನಾ ನಿನ್ನ ಪ್ರೀತಿಸುವೆ ಪ್ರಾಣಕ್ಕಿಂತ ಹೆಚ್ಚು,ನನ್ನನ್ನು ನಂಬು; ಬೇಕಿದ್ದರೆ ಆ ದೇವರ ಮೇಲಾಣೆ,ಭೂತಾಯಿ ಮೇಲಾಣೆ. ಇನ್ನೂ ಅನುಮಾನ ಏಕೆ?"ಆ ಹುಡುಗ ಉಪ್ಪಿ ಅಭಿಮಾನಿ; ಕೇಳಿದ ತಣ್ಣಗೆ - "ಹುಚ್ಚು ಹುಡುಗಿ ನೀನು; ಪ್ರೀತಿ ಓಕೆ, ಆಣೆ ಯಾಕೆ?"
ವಿಧ: Basic page
January 27, 2007
ಬೆಳಗಿನಜಾವದಲಿ ಮೆತ್ತನೆಯ ಮುತ್ತಿಟ್ಟು
ಹೂಗಳನು ಎಬ್ಬಿಸುವ ಈ ನಿನ್ನ ಪರಿ,
ಕೊಮಲೆಯ ಮೈ ಸೋಕಿ ನಲ್ಲನನು ನೆನೆವಂತೆ ಮಾಡುವ
ಈ ನಿನ್ನ ರಸಿಕತೆ, ನಾಲ್ಕು ಮಾಸಗಳ ನಿರಂತರ ಕಥೆ.
ಪ್ರತಿ ವರುಷವೂ ನೀನು ಹೀಗೆ,
ಮಾಘಿಯ ಕಾಲದಲಿ ಮೈ ಜುಮ್ಮೆ ನಿಸಿ,
ಸುಗ್ಗಿಯಾ ಸಂಭ್ರಮ ಎಲ್ಲೆಲ್ಲೂ ಹಬ್ಬಿಸಿ
ಮದುವೆಯಾ ಹೆಣ್ಣಂತೆ ಬಾಗಿರುವ ತೆನೆಗಳಲಿ
ಮುಗುಳ್ನಗೆಯ ಮೂಡಿಸಿದ ಹಾಗೆ...
ಯಾರೋ ಹೀಗೆ, ಕಿವಿಯಲ್ಲಿ ಪಿಸುಗುಟ್ಟಿದ ಹಾಗೆ,
ಬೇಸಿಗೆಯ ಬಿಸಿಲಾದರು ಸಹಿಸೇನೂ... ಚಳಿಯನಾಗದುಯೆಂದು..
ಚಳಿಯನೋಡಿಸಲೆಂದು…
ವಿಧ: ಬ್ಲಾಗ್ ಬರಹ
January 27, 2007
ಕರ್ನಾಟಕದ ೨೦೦೬-೦೭ ಋತುವಿನ ರಣಜಿ ಅಭಿಯಾನ ಸೆಮಿಫೈನಲ್ ಹಂತದಲ್ಲಿ ಮುಕ್ತಾಯ ಕಂಡಿದೆ. ೭ ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿದ್ದ ಕರ್ನಾಟಕ ಅಲ್ಲೇ ಮುಗ್ಗರಿಸಿದೆ. ೧೯೯೯-೨೦೦೦ ದಲ್ಲಿ ವಿ.ವಿ.ಎಸ್ ಲಕ್ಷ್ಮಣ್ ಮತ್ತು ಮೊಹಮ್ಮದ್ ಅಜರುದ್ದೀನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಸೆಮಿಫೈನಲ್ ನಲ್ಲಿ ತಡೆಹಿಡಿದರೆ ಈಗ ೨೧ರ ಹರೆಯದ ಭಾರತ ಕಿರಿಯರ ತಂಡಕ್ಕೆ ಆಡಿರುವ ಯುವ ಪ್ರತಿಭಾವಂತ ಆಟಗಾರ ಮನೋಜ್ ತಿವಾರಿ ಅದೇ ಕೆಲಸ ಮಾಡಿದ್ದಾರೆ.
ಮೂರುವರೆ ದಿನಗಳ ಕಾಲ ಸತತವಾಗಿ ಹೋರಾಡಿದ ಬಳಿಕ…
ವಿಧ: ಬ್ಲಾಗ್ ಬರಹ
January 27, 2007
ನಾ ಬರೆದೆ ಕವನ ಚಲುವೆ
ನಿನ್ನ ಹೆಸರ ಹಚ್ಚಿ
ನೀ ಓದಿ ಪ್ರೀತಿಸುತ್ತಿದ್ದೆ
ನಿನ್ನ ಮನೆಯವರ ಮುಚ್ಚಿ
ತಿನ್ನಿಸಿದೆ ಜೇನ ನಿನ್ನ ತುಟಿಕಚ್ಚಿ
ಆಗ
ಹೊಗಬಹುದೇ ನೀನು
ಹಣ,ಅದಿಕಾರ ನೆಚ್ಚಿ
ನನಗೆ ಚಿಂತೆ ಹಚ್ಚಿ
ಈಗ
ಪ್ರೀತಿಯ ಮುಂದೆ ಹೆಚ್ಚೇನೆ
ಹಣ,ಅದಿಕಾರ ಹುಚ್ಚಿ
ಯೋಚಿಸಿ ಬಾ ತಿರುಗಿ
ನಿನ್ನ ಪ್ರೀತಿಸುತ್ತಿರುವೆ ನೆಚ್ಚಿ
ನಿನ್ನ ವಿರಹ ಸಾಗರದಿ ನಾ
ಹೊಗುವ ಮುನ್ನ ಕೊಚ್ಚಿ
ಹಿಡಿದುಕೊ ಬಾ ಕಚ್ಚಿ
ಮೆಚ್ಚಿ
ನೀ ಪ್ರೀತಿಸುವ ಅವನುನಿನ್ನ
ನಡುನೀರಲ್ಲಿ ಬಿಟ್ಟಾನು
ಆಗಲೂ ನಾ ನಿನ್ನ ಕೈ ಹಿಡಿವೆ
ಮರೆಯದೆ ಬಾ ನೀನು…
ವಿಧ: ಬ್ಲಾಗ್ ಬರಹ
January 27, 2007
ನೀ ಬಾ ಎಂದು ಹೇಳಿದ್ದೆ
ಆಲದ ಮರದ ಕಡಿ(ಕಡೆ)
ಆದರಾಗ ಬರುತ್ತಿತ್ತು ತುಂತುರು ಜಡಿ(ಮಳೆ)
ಆ ಮಳೆಯಲ್ಲೂ ನಾ ಬರುತ್ತಿದ್ದಾಗ ಓಡಿ
ನಗುತ್ತಿದ್ದವು ಮಳೆಹನಿ
ನೀನಿಲ್ಲದಿದ್ದರೂ ನೆನೆವ ನನ್ನ ನೋಡಿ
ನಿನ್ನ ಮಾತದೇನು ಮೋಡಿ
ಮಾತುತಪ್ಪದ ನನ್ನ ನೀ ಮಳೆಯಲ್ಲಿ ನೆನೆಸಿ
ಮನೆಯಲ್ಲಿ ಕೂರಬಹುದೇ
ನನ್ನ ಬಯಸಿ
ಪ್ರೀತಿಸುವುದು ಎಂದರೆ ನೀ ಏನೆಂದುಕೊಂಡೆ
ಅದು ನಿನ್ನ ಕೈಲಿರುವ ಚಂಡೇ
ನಾ ಎಂದೂ ನೆನೆದವನಲ್ಲ ಮಳೆಯಲ್ಲಿ
ಇಂದು ಕೊಚ್ಚಿ ಹೋಗುತ್ತಿದ್ದೇನೆ
ನಿನ್ನ ಪ್ರೀತಿಹೊಳೆಯಲ್ಲಿ
ಕೃಷ್ಣಮೊರ್ತಿಅಜ್ಜಹಳ್ಳಿ
ವಿಧ: ಬ್ಲಾಗ್ ಬರಹ
January 27, 2007
ಚಾಮರಾಜ ನಗರ ತಾಲೋಕು ಮೈಸೂರು ಜಿಲ್ಲೆ
ಸಿಂಗಾನಲ್ಲೂರು ಬಳಿಯ ಗಾಜನೂರಿನ
ಪುಟ್ಟಸ್ವಾಮಯ್ಯನವರ ಪುತ್ರರಾಗಿ ಜನಿಸಿದಿರಿ
ತಂದೆಯೊಂದಿಗೆ ಗುಬ್ಬಿವೀರಣ್ಣನವರ ನಾಟಕ
ಕಂಪನಿಯ ಗರಡಿಯಲ್ಲಿ ಪಳಗಿದಿರಿ
ಚಿತ್ರರಂಗಕ್ಕೆ ಪಾದಾರ್ಪಣೆಮಾಡಿದನೀವು
"ಆಡುಮುಟ್ಟದ ಸೊಪ್ಪಿಲ್ಲ ರಾಜ್ ಮಾಡದ ಪಾತ್ರವಿಲ್ಲ"
ಎಂಬ ಹೆಸರಿಗೆ ಪಾತ್ರರಾದಿರಿ
ಪಾರ್ವತಮ್ಮನವರ ಕೈಹಿದಿದ ನೀವು
ಶಿವ,ರಾಘವ,ಪುನೀತರೆಂಬ
ಪುತ್ರರತ್ನಗಳನ್ನು ಪಡೆದಿರಿ
ಆದರ್ಶಗಳ ಬಿಟ್ಟುಕೊಡದ ರಾಜರಂತೆ ಇದ್ದನೀವು
ರಾಜಕುಮಾರರೆಂದು ಪ್ರಖ್ಯಾತಿ ಪಡೆದಿರಿ
ನಿಮ್ಮ…
ವಿಧ: ಬ್ಲಾಗ್ ಬರಹ
January 27, 2007
ಅಲ್ಲಿಂದ ಇಲ್ಲಿಗೆ ನಾ ಬಂದುದೇ
ಅವಳಿಗೆ(ಅವಳಿಗಾಗೆ)
ಅವಳು ಹೇಗಿದ್ದರೇನು
ಹಿಡಿಸಿದಳು ನನ್ನ ಮನಸ್ಸಿಗೆ
ನಾನು ಬೆಲೆ ಕೊಡುವುದು
ಗುಣ ನಡತೆಗೆ
ಬಿಡು ಸೌಂದರ್ಯ ಸೈಡಿಗೆ
ಒಳ್ಳೆಮನಸಿದ್ದರೆ ಸಾಕು
ಚಲೋ ಬಾಳ್ವೆಗೆ
ನಾ ಹಿಡಿಸಿದರೆ ಅವಳಿಗೆ
ಮಾತನಾಡಲು ಹೇಳು
ನನ್ನೋಟ್ಟಿಗೆ ಕೇಳುವೆ
ಪ್ರಶ್ನೆಗಳ ನಮ್ಮ ಭವಿಷ್ಯತ್ತಿಗೆ.
ಕೃಷ್ಣಮೊರ್ತಿಅಜ್ಜಹಳ್ಳಿ
ವಿಧ: ಬ್ಲಾಗ್ ಬರಹ
January 27, 2007
*ಪರಿಣಾಮ*
ಇಳಿದದ್ದೇ ತಪ್ಪಾಯಿತು
ಪ್ರಿಯೆ ನಿನ್ನ ಪ್ರೀತಿಯ
ಹೊಳೆಯಲ್ಲಿ
ನಿತ್ಯ ಬೇಯುತ್ತಿದ್ದೇನೆ
ಈಗ ವಿರಹದ ಉರಿಯಲ್ಲಿ.
*ಐಕ್ಯ(ಲೀನ)*
ಅವಳ ಎದೆ (ಗೂಡಲ್ಲಿ)ಮೇಲೆ
ನಾನು ಬಂಗಾರದ
ತುಂಡು
ಈ ಬಾಹುಗಳ ನಡುವೆ
ಅವಳು ಬಾಳೆಯ
ದಿಂಡು
ಒಲವಲ್ಲಿ ನಾವು ಐಕ್ಯಗೊಂಡು.
*ಅಶಾಶ್ವತ*
ದಿನಬಿಡದೆ ದೇವರ ಸ್ಮರಿಸಿದ
ಕನಕ,ಪುರಂದರರಿಲ್ಲ,ಅಕ್ಕ,ಬಸವರಿಲ್ಲ
ಗುರುರಾಜ,ಘಂಟಸಾಲರಿಲ್ಲ
ಗುಡಿ,ಚರ್ಚು,ಮಸೀದಿ,ಕಟ್ಟಿಸಿದ
ರಾಜ,ಪಾದ್ರಿ,ಮಹಮದೀಯರಿಲ್ಲ
ಎಂದಮೇಲೆ ಅಲ್ಪರಾದ ನಾವು
ಅಶಾಶ್ವತರಲ್ಲವೇ.
ಕೃಷ್ಣಮೊರ್ತಿಅಜ್ಜಹಳ್ಳಿ
ವಿಧ: ಬ್ಲಾಗ್ ಬರಹ
January 27, 2007
*ಮಡದಿ*
ಗಂಡನ ಮನೆಯಲ್ಲಿ
ಡಂಬಾಚಾರ(ಡೌಲು)ತೋರದೆ
ದಿಟ್ಟತನದಿಂದ ಸಂಸಾರ ಮಾಡುವವಳೇ
ಮಡದಿ.
*ಮದುವೆ*
ಹಣ,ಅದಿಕಾರ,ಆಸ್ಥಿ,ವಯಸ್ಸು
ಇರುವಾಗ ಮದುವೆ
ಹಣ,ಅದಿಕಾರ,ಆಸ್ಥಿ,ವಯಸ್ಸು
ಇಲ್ಲದಿರುವಾಗ ಯಾಕದುವೆ.
*ಹೃದಯ ಮೀಸಲು*
ನನ್ನ ಹೃದಯದಲ್ಲಿ
ಗೆಳತಿ......
ನಿನ್ನೊಬ್ಬಳಿಗೆ ಸ್ಥಾನ
ಏಕೆಂದರೆ
ಎಲ್ಲರಿಗೂ ಸಮ್ಮತಿಸಲು
ಆಗಿಲ್ಲ
ನನ್ನ ಹೃದಯ ದೇವಸ್ಥಾನ.
ಕೃಷ್ಣಮೊರ್ತಿಅಜ್ಜಹಳ್ಳಿ
ವಿಧ: ಬ್ಲಾಗ್ ಬರಹ
January 27, 2007
ಚೇತನವು ನೀ ನನ್ನ ಬಾಳಿಗೆ
ನೀ ಬರಲು ಸ್ವಾಗತವು ನಯನದೊಳಗೆ
ಪ್ರೀತಿತುಂಬಿ ಎದೆಯೊಳಗೆ
ಗೆಳತಿ ನೀ ಬಾ ಒಳಗೆ ಈ ಗಳಿಗೆ
ಬರಲಿ ನನಗೆ ನೂರುಚಿಂತೆ
ನೀನಿರು ಜೊತೆಗೆ ನನ್ನ ಕಾಂತೆ
ನಗುವೆ ಮರೆತು ಎಲ್ಲ ಚಿಂತೆ
ಹಾರುವೆ ಮರಿಹಕ್ಕಿಯಂತೆ
ಇರಲಿ ನೂರು ಬದುಕ ಬವಣೆ
ಇರಲು ನೀನು ಸಾಕು ರಮಣಿ
ತೂರಿ ಬಿಡುವೆ ಕವಣೆ
ಹಾರಿ ಬರುವೆ ನಿನ್ನ ಬಳಿಗೆ ಮೃಗನಯನೆ
ಅರಳಿ ಮನದೊಳಗೆ ನೂರು ಆಸೆ
ಕೊರಳ ಹಿಡಿದಿದೆ ನುಡಿಯದೆ ಕೂಸೆ
ಸರಳವಲ್ಲವೆ ಈ ನನ್ನ ಕವನದ ಬಾಷೆ
ವಿರಳವು ಕೇಳು ನನ್ನಂತವರು ಬಿಡು ಸಂಶೆ
ಕೃಷ್ಣಮೊರ್ತಿಅಜ್ಜಹಳ್ಳಿ