ವಿಧ: ಬ್ಲಾಗ್ ಬರಹ
January 24, 2007
ಈಚೆಗೆ ನಾನು ಶೃಂಗೇರಿ ಮತ್ತು ಮುರುಡೇಶ್ವರ ಪ್ರವಾಸ ಮಾಡಿದಾಗ ನನ್ನ ಮನಸ್ಸಿನಲ್ಲಿ ಈ ಪ್ರಶ್ನೆ ಬಂದಿತ್ತು. ಕೆಲವು ದಿನಗಳ ನಂತರ ವಿಜಯ ಕರ್ನಾಟಕ ದಲ್ಲಿ(ದಿನಾಂಕ ನೆನಪಿಲ್ಲ) ಈ ಪ್ರಶ್ನೆಯನ್ನೇ ಕರ್ನಾಟಕದ ಹೆಸರಾಂತ ಶಿಲ್ಪಿಗಳು ಮಾಡಿರುವುದು ವರದಿಯಾಗಿತ್ತು. ಈ ಮೇಲಿನ ದೇವಳಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.ಆದರೆ ಶಿಲ್ಪಿಗಳನ್ನು ತಮಿಳುನಾಡಿನಿಂದ ಕರೆಸಲಾಗಿದೆ ಹಾಗು ಶೃಂಗೇರಿ ದೇವಳದ ಮೇಲ್ಛಾವಣಿಯಲ್ಲಿ ನೀವು ತಮಿಳು ಲಿಪಿಯನ್ನು ಕಾಣಬಹುದು. ಬೇಲೂರು -ಹಳೇಬೀಡಿನಂಥ ಇತಿಹಾಸವಿರುವ ನಮ್ಮ…
ವಿಧ: ಕಾರ್ಯಕ್ರಮ
January 24, 2007
ಶಕುಂತಳಾಗುರುಪ್ರಸಾದ್ ಕಾಗಿನೆಲೆ
ಹಟ್ಟಿಯೆಂಬ ಭೂಮಿಯ ತುಣುಕುಲೋಕೇಶ ಅಗಸನಕಟ್ಟೆ
ಹಕೂನ ಮಟಾಟನಾಗರಾಜ ವಸ್ತಾರೆ
ಪುಸ್ತಕಗಳ ಬಿಡುಗಡೆ ಸಮಾರಂಭ.
ಜನವರಿ ೨೮ರ ಭಾನುವಾರ ಬೆಳಿಗ್ಗೆ ೧೦:೦೦ಕ್ಕೆ
ಅತಿಥಿಗಳು:ಸಿ ಎನ್ ರಾಮಚಂದ್ರನ್ ಎಸ್ ದಿವಾಕರ್ ಎಂ ಎಸ್ ಶ್ರೀರಾಮ್ ವಿಶ್ವನಾಥ್
ವಿಧ: ಬ್ಲಾಗ್ ಬರಹ
January 23, 2007
ನಿಮಗೆ ಗೊತ್ತಿರುವ ಹಾಗೆ firfox/mozilla ಮತ್ತಿತರ ತಂತ್ರಾಂಶಗಳ ಅನುವಾದದಲ್ಲಿ ನಾನು ತೊಡಗಿ(ಕಿ?!) ಕೊಂಡಿದ್ದೇನೆ.
ಈ ಕೆಳಕಂಡ ಶಬ್ದಗಳಿಗೆ ಸಮಾಧಾನಕರ ಕನ್ನಡ ಶಬ್ದ ಸಿಕ್ಕಿಲ್ಲ : ನಿಮಗೆ ಹೊಳೆದರೆ ತಿಳಿಸಿ.
Resume :
Reset : ಮರುನಿಶ್ಚಯಿಸಿ?
default :- ಪೂರ್ವನಿಶ್ಚಿತ ? ಪೂರ್ವನಿಯೋಜಿತ?
theme
Column :- ಕಂಬ ಸಾಲು ?
ವಿಧ: ಚರ್ಚೆಯ ವಿಷಯ
January 23, 2007
ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಹೇಗೆ ಮುಗ್ಧರ ತಲೆ ಕೆಡಿಸಿ ಮೋಜು ನೋಡುತ್ತಾರೆಂಬುದಕ್ಕೆ ಬಹುಷಃ ಇದಕ್ಕಿಂತ ಬೇರೆ ಮಾದರಿ ಸಿಗಲಿಕ್ಕಿಲ್ಲ.
ಸದ್ದಾಮ್ ಎಂಥವನಾಗಿದ್ದ ಅಂಬೋದಾದರೂ ಇವರಿಗೆ ಗೊತ್ತಾ? ಲೆಕ್ಕ ಇಲ್ಲದಷ್ಟು ಮುಸ್ಲೀಮರನ್ನೇ ಅವನು ಕೊಂದಿದ್ದಾನೆಂಬುದು ಇವರಿಗೆ ಗೊತ್ತಾ?
ಇರಾಕಿನ ವಿಷಯದಲ್ಲಿ ಮೂಗು ತೂರಿಸೋಕೆ ಅಮೆರಿಕೆಗೆ ಯಾವ ಹಕ್ಕಿದೆ ಎಂಬುದು ಬೇರೆ ವಿಷಯ, ಆದರೆ ಎಲ್ಲೋ ಯಾರನ್ನೋ ಗಲ್ಲಿಗೆ ಹಾಕಿದರೆ ಇವರು ಇಲ್ಲಿ ಮಂದಿಯ ತಲೆ ಕೆಡಿಸಿ ಅವರ ನೆಮ್ಮದಿ ಹಾಳು ಮಾಡಲು ಯಾವ…
ವಿಧ: ಬ್ಲಾಗ್ ಬರಹ
January 23, 2007
ಬೊಗಳೂರು, ಜ.23- ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮಾವೇಶಕ್ಕೆ ಗ್ಲ್ಯಾಮರಸ್-ಸ್ಪರ್ಷ ನೀಡಲು ಉದ್ದೇಶಿಸಿರುವ ಆಯೋಜಕ ಬಳಗದವರೊಬ್ಬರ ಸಲಹೆಗೆ ಬೊಗಳೆ ವಲಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. (bogaleragale.blogspot.com)
ಇದುವರೆಗೆ ಕನ್ನಡಕ್ಕಾಗಿ, ಕನ್ನಡದ ಏಳಿಗೆಗಾಗಿ ಹೇಳಿಕೊಳ್ಳುವಂಥದ್ದೇನನ್ನು ಮಾಡದಿರುವ ಆಕೆಗೆ ಕನ್ನಡಕ್ಕಾಗಿ ಏನಾದರೂ ಮಾಡಲು ಈ ಸದವಕಾಶವನ್ನು ಒದಗಿಸಲು ನಿರ್ಧರಿಸಿರುವುದಾಗಿ ಬೊಗಳೆ ರಗಳೆ ಬ್ಯುರೋ ನಡೆಸಿದ ತನಿಖೆಯಿಂದ ಸಾಬೀತಾಗಿದೆ. ಕನ್ನಡದಾ…
ವಿಧ: ಚರ್ಚೆಯ ವಿಷಯ
January 22, 2007
ಮೈಕ್ರೋಸಾಫ್ಟ್ ನ 'ವಿಸ್ತಾ' ಇನ್ನೇನು ಮಾರುಕಟ್ಟೆಗೆ ಬರಲಿದೆಯಂತೆ. ಎಕ್ಸ್ ಪಿಯಲ್ಲಿ ಇದ್ದ ಕನ್ನಡ ಅಕ್ಷರಗಳ ಸಮಸ್ಯೆ ಇಲ್ಲಿಯೂ ಮುಂದುವರಿದಿದೆ ಎಂಬುದು ವಿಸ್ತಾದ ರಿಲೀಸ್ ಕ್ಯಾಂಡಿಡೇಟ್ -2 ಪರೀಕ್ಷಿಸಿದವರಿಗೆಲ್ಲಾ ತಿಳಿಯುತ್ತದೆ. Rank ಈಗ ರ್ಯಾಂಕ್ ಆಗುವುದಿಲ್ಲ. ಆದರೆ ಸಾಫ್ಟ್ ವೇರ್ ಎಂದು ಬರೆದರೆ ಅದು ಸಾ ಫ್ ಟ್ ವೇ ರ್ ಆಗುತ್ತದೆ.
ಮೈಕ್ರೋಸಾಫ್ಟ್ ನಲ್ಲಿ ಇದೆಲ್ಲಾ ಸರಿಯಾಗಿರಲೇಬೇಕು ಎಂದು ವಾದಿಸುವುದರ ಬದಲಿಗೆ ಅದನ್ನು ಬಳಸುವುದನ್ನೇ ಬಿಟ್ಟು ಬಿಡಿ ಎಂಬ ವಾದವನ್ನು ಮಂಡಿಸಬಹುದು. ಇದು…
ವಿಧ: ಬ್ಲಾಗ್ ಬರಹ
January 22, 2007
ಅಂದು ಅತ್ತಿಂದಿತ್ತ ಇತ್ತಿಂದತ್ತ ಓಲಾಡುತಿತ್ತು
ಹುಡುಗಿಯರ ಬೆನ್ನ ಹಿಂದೆ
ಉದ್ದನೆಯ ಜಡೆ!!
ಇಂದು ಅತ್ತಿಂದಿತ್ತ ಇತ್ತಿಂದತ್ತ
ಓಲಾಡುತ್ತಿರುತ್ತೆ ಹುಡುಗಿಯರ ಮುಂದೆ
ಐಟಿ ಕಂಪನಿಯ ಐಡಿ ಕಾರ್ಡ್ ಟ್ಯಾಗ್!!
ಅಂದು ಕಟ್ಟು-ಪಾಡು ಸಂಪ್ರದಾಯ!
ಇಂದು ಕಟ್ಟು, ಬಾಬ್-ಕಟ್ಟು ಸಮ್-ಆದಾಯ!!
ಜನಪದ, ಗೀಯಪದ, ಹಾಡು-ಹಸೆ
ಜಾವ, ಸ್ಯಾಪ್, ಚಾಟ್, ಎಸ್ಸೆಮ್ಮೆಸ್ಸೆ!!
ಸೀರೆ, ದಾವಣಿ, ಕಾಲುಗೆಜ್ಜೆ, ಥಯ್ ಥಕ!
ಇವೆಲ್ಲ ವೇಷ ಫ್ಯಾನ್ಸಿ ಶೋ ಕಂಟೆಸ್ಟಿಗೆ!!
ಬಹುಮಾನಕ್ಕೆ! ಬಿಗುಮಾನಕ್ಕೆ!!
ಸಂಕೇತ್ ಗುರುದತ್ತ,…
ವಿಧ: ಬ್ಲಾಗ್ ಬರಹ
January 22, 2007
ಅಥವ ಇಂಗ್ಲಿಷ್ ತರಹ ಇರುವ ಕನ್ನಡ ಪದಗಳು.......ಏನಾದರೂ ಅಂದುಕೊಳ್ಳಿ.....ಈ ವಿಚಿತ್ರ ಆಲೋಚನೆ ಏಕೆ ಬಂತು ಅಂದರೆ ಈ ಕೆಳಗಿನ ಪದಗಳು ನನ್ನ ತಲೆಯಲ್ಲಿ ಕೊರಿತ ಇದ್ದವು:-
ದಬಾಕಳ್ - debacle ( ಉದಾ: ನಮ್ಮವರೆಲ್ಲ ದಬಾಕೊಂಡರು )ಕೊಲ್ಲು - killಮಾರುಕಟ್ಟೆ - marketಸಂತ - Saint, Santa(ಇದು ಅಮೆರಿಕದಲ್ಲಿ ಪ್ರಚಲಿತದಲ್ಲಿದೆ ಉದಾ: Santa Clara, Santa Barbara)
ನನಗೆ ತಿಳಿದ ಮಟ್ಟಿಗೆ ಮೇಲಿನ ಕನ್ನಡ ಪದಗಳು, ಇಂಗ್ಲಿಷ್ ಪದಗಳ ಅರ್ಥವನ್ನೆ ಹೊಂದಿವೆ . ತಪ್ಪಿದ್ದರೆ ತಿದ್ದಿ.…
ವಿಧ: Basic page
January 22, 2007
ಇದೊಂದು ಸರಳ, ಸುಂದರ ಕಥೆ. ಆದರೆ ಅಷ್ಟೇ ಅರ್ಥವುಳ್ಳದ್ದು ಕೂಡ. ಇದು ಸಿದ್ಧಾರ್ಥ ಗೌತಮ ಬದ್ಧನಾಗಲು ಕಾರಣವಾದ ಘಟನೆ ಅಂತ ಕೆಲವು ಮೂಲಗಳಲ್ಲಿ ಹೇಳಿದ್ದರೆ, ಇನ್ನು ಕೆಲವೆಡೆ ಗೌತಮ ಬುದ್ಧ ತನ್ನ ಶಿಷ್ಯಂದಿರಿಗೆ ಉಪದೇಶ ನೀಡಲು ಬಳಸಿದ ಕಥೆ ಅಂತ ಹೇಳಿದೆ. ಯಾವುದು ಸರಿ ಅನ್ನುವ ಚರ್ಚೆ ನಮಗೇಕೆ ಅಲ್ಲವೇ? ಏಕೆಂದರೆ ಎರಡು ವಾದಗಳಿಗೂ ಖಚಿತ ಪುರಾವೆಗಳಿಲ್ಲ. ಹಾಗೆ ನೋಡಿದರೆ ಬುದ್ಧನ ಕಾಲದ ಬಗೆಗೇ ಇನ್ನೂ ಇತಿಹಾಸಕಾರರು ಚರ್ಚೆ ಮಾಡುತ್ತಾ ಇದ್ದಾರೆ. ಸಾಕು, ನಿನ್ನ ಮಾತೇ ಬಹಳ ಆಯಿತು, ಕಥೆ…
ವಿಧ: ಚರ್ಚೆಯ ವಿಷಯ
January 22, 2007
ಗೆಳೆಯರೇ,
ನವರಂಗ್ ಸಿನಿಮಾ ಮನೆಗೆ ರಾತ್ರಿ ೧೦ ರ ಆಟಕ್ಕೆ ನಾನು ಮೊದಲ ಸಲ 'ಮುಂಗಾರು ಮಳೆ' ನೋಡೋಕೆ ಹೋದಾಗ, ಬಾಲ್ಕನಿ ಟಿಕೇಟ್, ಕಿಂಡೀಲೇ ಸಿಗುತ್ತಿತ್ತು. ಸಿನಿಮಾ ಚೆನ್ನಾಗಿದೆ ಅಂತ ಎರಡನೇ ಸಲ ಹೋದರೆ, ಇನ್ನೂ ಅರ್ಧ ಗಂಟೆ ಮೊದಲೇ sold out ಅಂತ ಮಾಡ್ಕೊಂಡು theator ನವರೇ ಮೂವತ್ತೈದು ರೂಪಾಯಿ ಟಿಕೇಟ್‍ನಾ ಅರವತ್ತು ರೂಪಾಯಿಗೆ ಬ್ಲಾಕ್‍ನಲ್ಲಿ ಮಾರುತ್ತಿದ್ದರು. ಅವನ್ನೇ ಎಷ್ಟೋ ಜನ ತುಗೋತಿದ್ದರು. ಆದರೆ ಇಂತದಕ್ಕೆ ಮಂದೀನೇ ಹೀಗೆ ಕುಮ್ಮಕ್ಕು ಕೊಡೋದು ಸರೀನಾ? ನನಗಂತೂ ಅದು ಸರಿ ಕಾಣದೇ…