ಎಲ್ಲ ಪುಟಗಳು

ಲೇಖಕರು: ನಿರ್ವಹಣೆ
ವಿಧ: ಕಾರ್ಯಕ್ರಮ
January 19, 2007
ಜ್ಞಾನಪೀಠ ಪುರಸ್ಕೃತ ಲೇಖಕಿ ಅಮೃತಾ ಪ್ರೀತಂ ಅವರ ಖ್ಯಾತ ಕಾದಂಬರಿ ಪಿಂಜರ್ (ಪ್ರಕಟಣೆ: ಅಂಕಿತ ಪುಸ್ತಕ ಬೆಂಗಳೂರು) ಬಿಡುಗಡೆ ಸಮಾರಂಭ ಭಾನುವಾರ ೨೧ - ೧ - ೨೦೦೭ರಂದು ಸಂಜೆ ೫.೩೦ಕ್ಕೆ ಶ್ರೀರಾಮಮಂದಿರ, ತೀರ್ಥಹಳ್ಳಿ
ಲೇಖಕರು: hpn
ವಿಧ: Basic page
January 19, 2007
ಮುಕ್ತ ಸಾಫ್ಟ್ವೇರ್ ಪ್ರತಿಪಾದಕರಾದ ರಿಚರ್ಡ್ ಸ್ಟಾಲ್ಮನ್ ರವರ ಕೆಲವು ಲೇಖನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ನನ್ನದೊಂದು ಪ್ರಯತ್ನ. ಅನುವಾದದಲ್ಲಿ ಸಾಧ್ಯವಾದಷ್ಟು ಬಳಕೆಗೆ ಹತ್ತಿರವಾದ ಭಾಷೆ ಬಳಸಲು ಪ್ರಯತ್ನಿಸಿದ್ದೇನೆ. ಇದು ಹಲವರಿಂದ ಹಲವು ರೀತಿ ಸ್ವೀಕೃತವಾಗಬಹುದು - ಲೇಖನ ಗಾಂಭೀರ್ಯ ಕಳೆದುಕೊಂಡಂತೆ ಕೆಲವರಿಗೆ ಅನಿಸಿಬಿಡಬಹುದು, ಕೆಲವರಿಗೆ ಇನ್ನೂ ಹತ್ತಿರವಾದ ಭಾಷೆಯಲ್ಲಿದ್ದಂತನಿಸಬಹುದು. ಒಟ್ಟಾರೆ ಸ್ಟಾಲ್ಮನ್ನರ ಆಲೋಚನಾ ಲಹರಿ ಹೆಚ್ಚು ಮಂದಿಗೆ ತಲುಪಿದರೂ ನನ್ನ ಪ್ರಯತ್ನ ಫಲ…
ಲೇಖಕರು: santoshbhatta
ವಿಧ: ಬ್ಲಾಗ್ ಬರಹ
January 19, 2007
ನನ್ನ ಬ್ಲಾಗು ಒಂದುಸಲ ನೋಡಿ ಹರಸಿ ಹಜಾಮನ ಹರಟೆhttp://hajamanaharate.blogspot.com/
ವಿಧ: Basic page
January 19, 2007
ಒಂದಾನ್ನೊಂದು ಕಾಲದಲ್ಲಿ, ಒಂದು ಸೇಬಿನ ಮರ ಇತ್ತು, ಅದರಲ್ಲಿ ಒಂದು ಮುಗು ಸೇಬು ತಿನ್ನುತಾ, ಮರದ ನೆರಳಲ್ಲಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತ, ಆ ಮರದ ಮೇಲೆ ಕೂರುವ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳುತ್ತ, ಆಟವಾಡಿಕೊಂಡಿತ್ತು. ವರುಷಗಳುರುಳಿದವು....... ಮಗು ಈಗ ಹುಡುಗನಾಗಿದ್ದನೆ.. ಈಗ ಅವನು ಮರದ ಕೆಳಗೆ ಆಟವಾಡುವುದಿಲ್ಲ, ಹೀಗಿರಲು ಒಂದು ದಿನ ಆ ಹುಡುಗನ್ನನು ಕುರಿತು ಮರ ಪ್ರಶ್ಣಿಸಿತು: "ಮಗು ಬಾ ನನ್ನ ಜೊತೆ ಆಟವಾಡು" ಅಗ ಹುಡುಗ ಹೇಳ್ತಾನೆ "ನಿನ್ನ ಜೊತೆ ಆಟವಾಡಲು ನಾನೇನು ಚಿಕ್ಕ…
ಲೇಖಕರು: Shyam Kishore
ವಿಧ: ಬ್ಲಾಗ್ ಬರಹ
January 19, 2007
     ಮೊನ್ನೆ, ಒಬ್ಬರಿಂದೊಬ್ಬರಿಗೆ ಬರುವ "ಸರಪಳಿ ವಿ-ಪತ್ರ"ವೊಂದು ಬಂತು ("ಫಾರ್ವರ್ಡ್ ಈ-ಮೈಲ್" ಇಲ್ಲವೇ, ಅದಕ್ಕೆ ನಾನು ಇಟ್ಟಿರುವ ಹೆಸರು). ಸಾಮಾನ್ಯವಾಗಿ ಈ ರೀತಿಯ ಪತ್ರಗಳ ಮೂಲ ಹುಡುಕೋದು ಅಸಾಧ್ಯ ಬಿಡಿ. ಅದರಲ್ಲಿ ಇದ್ದ ವಿಚಾರ: "ಹಾಲಿವುಡ್ ಸಿನೆಮಾಗಳನ್ನು ಕನ್ನಡದಲ್ಲಿ ತೆಗೆದರೆ, ಅವುಗಳ ಹೆಸರುಗಳು ಹೇಗಿರಬಹುದು?" ಅಂತ! ಸುಮ್ನೆ ನಕ್ಕು ಮರೆಯೋದಕ್ಕೆ ಒಳ್ಳೆಯ ವಿಷಯ ಅನ್ನಿಸಿತು. ಅದರಲ್ಲಿ ಕೆಲವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೀನಿ. ಇಲ್ಲಿರುವ ಎಲ್ಲ ಹೆಸರುಗಳೂ ಯಥಾವತ್ ಅನುವಾದ…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
January 19, 2007
ಬೊಗಳೂರು, ಜ.19- ಸದ್ದಾಂ ಹುಸೇನ್‌ನನ್ನು ಮುದ್ದಾಂ ಆಗಿ ಗಲ್ಲಿಗೇರಿಸಿದ ಬಳಿಕ ವಿಶ್ವದ ದೊಡ್ಡಣ್ಣನಾಗಲು ಹೊರಟ ದೇಶದ ಮುಂದಿನ ಗುರಿ ಭಾರತ ಎಂದು ಗೊತ್ತಾಗಿದೆ. (bogaleragale.blogspot.com) ಈಗಾಗಲೇ ಗಲ್ಲಿಗೇರಿಸಲ್ಪಟ್ಟು ಸತ್ತು ಬದುಕಿದಂತಿರುವ ಸದ್ದಾಂನ ಹಲವಾರು ಅವತಾರಗಳು ಭಾರತದಲ್ಲಿ ಪತ್ತೆಯಾಗಿರುವುದೇ ಇದಕ್ಕೆ ಕಾರಣವಾಗಿದ್ದು, ತಾವು ಗಲ್ಲಿಗೇರಿಸಿರುವುದು ನಿಜವಾದ ಸದ್ದಾಂನನ್ನೇ ಎಂಬುದು ಅಮೆರಿಕದ ಶಂಕೆಗೆ ಈಗ ಕಾರಣವಾಗಿದೆ! ಉತ್ತರ ಭಾರತಕ್ಕೆ ಪ್ರವಾಸ ಮಾಡಿದ ಸಂದರ್ಭ ಅಲ್ಲಿ ನೂರಾರು…
ಲೇಖಕರು: H.S.R.Raghavendra Rao
ವಿಧ: Basic page
January 18, 2007
ಈ ಬರವಣಿಗೆಯ ತಲೆಬರೆಹವು ಅನೇಕ ಓದುಗರ ಹುಬ್ಬುಗಳು ಮೇಲೇರುವಂತೆ ಮಾಡುತ್ತದೆ. ಕರ್ನಾಟಕ ಮತ್ತು ಕನ್ನಡಗಳು ಒಂದೇ ಎಂದು ತಿಳಿದವರಿಗೆ, ಇದು ಅಚ್ಚರಿಯನ್ನು ಉಂಟುಮಾಡುತ್ತದೆ. ಆದರೆ ನಮ್ಮ ಈ ನಾಡಿನ ನಿಜವಾದ ಸ್ಥಿತಿಗತಿಗಳನ್ನು ಗಮನಿಸಿದಾಗ ಅಂತಹ ಆಶ್ಚರ್ಯಕ್ಕೆ ಕಾರಣವಿರುವಂತೆ ತೋರುವುದಿಲ್ಲ. ಕರ್ನಾಟಕ ಎನ್ನುವುದು ಒಂದು ಭೌಗೋಳಿಕ ಪ್ರದೇಶ. ಇಲ್ಲಿನ ಬಹುಪಾಲು ಜನರು ಬಳಸುವ ಭಾಷೆಯು ಕನ್ನಡ. ಆದರೆ, ಇಲ್ಲಿ ಬೇರೆ ಬೇರೆ ಭಾಷೆಗಳನ್ನು ಮಾತನಾಡುವ ಜನರೂ ಇದ್ದಾರೆ. ಅಲ್ಲದೆ, ಕನ್ನಡಕ್ಕಿಂತ ಹೆಚ್ಚಾಗಿ…
ಲೇಖಕರು: pavanaja
ವಿಧ: ಬ್ಲಾಗ್ ಬರಹ
January 18, 2007
ಭಾಷಾಇಂಡಿಯ ಅಂತರಜಾಲ ತಾಣ ಈಗ ಕನ್ನಡದಲ್ಲೂ ಲಭ್ಯ. ಕನ್ನಡ ಆವೃತ್ತಿಯ ವಿಳಾಸ - [http://www.bhashaindia.com/Patrons/PatronsHome.htm?lang=Kn|http://www.bhashaindia.com/Patrons/PatronsHome.htm?lang=Kn]. ಚರ್ಚಾ ವೇದಿಕೆಯಲ್ಲಿ ಕನ್ನಡಕ್ಕಾಗಿ ನಾಲ್ಕು ವಿಭಾಗಗಳನ್ನು ಮಾಡಲಾಗಿದೆ. ಚರ್ಚೆಗಳಲ್ಲಿ ಭಾಗವಹಿಸಲು ಭೇಟಿ ನೀಡಿ - [http://bhashaindia.com/ForumV2/displaygroup.aspx?GroupID=5|http://bhashaindia.com/ForumV2/displaygroup.aspx?GroupID=5…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
January 18, 2007
ಬೊಗಳೂರು, ಜ.18- ಮಕ್ಕಳ ಮೂಳೆ ಮಾಂಸಗಳು ದೊರೆತು ತತ್ತರ ಪ್ರದೇಶವಾಗಿರುವ ಉತ್ತರ ಪ್ರದೇಶದಲ್ಲಿ, ಐದು ವರ್ಷಗಳ ಆಡಳಿತದ ಸವಿಯನ್ನು ಸಂಪೂರ್ಣವಾಗಿ ಸವಿದು, ತಿಂದು ತೇಗಿದ ಬಳಿಕ, ಶೀಘ್ರವೇ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ತಾವು ಮುಲಾಮು ಸಿಂಗ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಂಡಿರುವುದಾಗಿ ಸತ್ತವರ ಪ್ರದೇಶ ಕಾಂ-guess ಸಮಿತಿ ಸ್ಪಷ್ಟಪಡಿಸಿದೆ.(bogaleragale.blogspot.com) ಸದ್ಯಕ್ಕೆ ಮುಲಾಮು ಜತೆ ಗುರುತಿಸಿಕೊಂಡರೆ ಮತದಾರರು ತಮ್ಮ ಮೇಲೆ ಆಕ್ರೋಶಗೊಳ್ಳುತ್ತಾರೆ, ಈಗಾಗಲೇ…
ಲೇಖಕರು: ವಿನಾಯಕ
ವಿಧ: Basic page
January 17, 2007
ಒಂದು ಕಿಟಕಿ ಒಂದು ಬೆಳಗು ಕೋಣೆಯೆಲ್ಲ ಬೆಳಕು ಒಂದು ಹಾಡು ಒಂದು ಗುನುಗು ಮನದೊಳಿಡಿಯೆ ನೆನಪು...   ಒಂದು ಹಾಳೆ ಒಂದು ಪೆನ್ನು ಬರೆಯಲೇನು ಕವನ? ಒಂದು ಗೆರೆಯ ಒಂದು ಪದಕೆ ನೆನಪು ಮತ್ತೆ ಚಲನ   ಒಂದು ಸಂಜೆ ಒಂದು ಕಡಲು ಮತ್ತೆ ನಾನು-ಅವಳು ಒಂದು ನೋಟ ಒಂದು ಒಲವು ಮಾತು ಹರಳು ಹರಳು   ಒಂದು ಗಲ್ಲ ಒಂದು ಮುತ್ತು ಮಾತು ಮುಗಿಸೊ ಮೊದಲು ಒಂದು ಅಲೆಯ ಒಂದೆ ಝೋಕು ಒದ್ದೆ ಎಲ್ಲ ಒಡಲು   ಒಂದು ಮೌನ ಒಂದು ಉಸಿರು ಲಜ್ಜೆ ಮುಡಿಯಲವಳು ಒಂದು ನೋಟ ಒಂದು ಸ್ಪರ್ಷ ನೆಲವು ಮನವು ಮರಳು   ಒಂದು ಫೋನು…