ಎಲ್ಲ ಪುಟಗಳು

ಲೇಖಕರು: pramodbiligiri
ವಿಧ: ಬ್ಲಾಗ್ ಬರಹ
January 16, 2007
ಕನ್ಡಡದಲ್ಲಿ ಬರೆಯಲು ಮೊದಲ ಪ್ರಯತ್ನ.
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
January 16, 2007
ನಮ್ಗೆಲ್ಲಿರಿಗೂ ಗೊತ್ತಿರುವ ಹಾಗೆ ಮುದ್ದು ಮುದ್ದಾಗಿ ಕಾಣುವ ಈ ಪಕ್ಷಿಯನ್ನು ನೋಡ ಸಿಗುವುದೇ ಈಗ ಅಪರೂಪವಾಗಿದೆ. ಅದರ "ನೆನೆಪನ್ನು ಹಸಿರಾಗಿಸಲು" ಈ ಕವನ:- ನಿನ್ನ ಸ್ವಚ್ಚಂದ ಹಾರಾಟಅಚ್ಚಳಿಯದೆ ಉಳಿದಿದೆ ಮನದಲ್ಲಿಎತ್ತ ಹೋದೆ ನೀನುನೆನಪಿನಂಗಳದಿಂದ ಹಾರುತ ಚುಚ್ಚಿತೆ ನಿನಗೀ ಕಿವಿಗಿಚ್ಚಿಡುವ ಶಬ್ದಉಸಿರುಗಟ್ಟಿತೆ ಹಾಳು ಹೊಗೆಯಿಂದಸ್ವಾರ್ಥಿಗಳಾದವೆ ನಾವು ಕಾಳುಗಳಾಕದೆಅಗಾಗ ಕಾಣುವೆ ನೀನು ಗುಡ್ಡ-ಬೆಟ್ಟಗಳ ಮೇಲೆನನ್ನ ನೆನಪ ಹಸಿರಾಗಿಸಲು ನೀ ಎನ್ನ ಬಾಲ್ಯದ ಸಂಕೇತದೂರ ಹೋದೆಯ ಹಾರುತಮರಳಿ ಬಾ…
ಲೇಖಕರು: ravee...
ವಿಧ: ಬ್ಲಾಗ್ ಬರಹ
January 16, 2007
ಕನ್ನಡಸಾಹಿತ್ಯಡಾಟ್‌ಕಾಂ ಕನ್ನಡ ತಂತ್ರಾಂಶಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಲಿರುವ ಮನವಿಗೆ ಪಾರ್ವತಮ್ಮ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಸಹಿ ಹಾಕಿ ಬೆಂಬಲ ಸೂಚಿಸಿ ಕನ್ನಡಸಾಹಿತ್ಯಡಾಟ್‌ಕಾಂನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.ಹಂಪಿ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಹಾಗೂ ಭಾಷಾ ತಜ್ಞರಾಗಿರುವ ಕೆ ವಿ ನಾರಾಯಣ್, ಹಿರಿಯ ಚಿಂತಕರು, 'ಹೊಸತು' ಮಾಸಪತ್ರಿಕೆಯ ಸಂಪಾದಕರೂ ಆದ ಜಿ ಆರ್ ರಾಮಕೃಷ್ಣರವರು ಮನವಿಗೆ ಸಹಿ ಹಾಕಿರುವ ಪ್ರಮುಖರ ಪಟ್ಟಿಗೆ ಸೇರಿದ್ದಾರೆ. ಮನವಿಯ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 16, 2007
ಹಿಂದೆ ನಾನು ಓದಿ ಓದಿ ಬೇಸತ್ತ ವಿಷಯ ತಿಳಿಸಿದ್ದೆ. ಇನ್ನು ಓದು ಸಾಕು ಎಂದು ಏಕೋ ಅನ್ನಿಸುತ್ತಿತ್ತು. ಕೊಂಡ ಪುಸ್ತಕಗಳು ಓದದೆಯೇ ಉಳಿದಿದ್ದವು , ಓದಿ/ಓದದೆ ಬೇಡವಾದ ಪುಸ್ತಕಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂದೂ ಚಿಂತೆಯಲ್ಲಿದ್ದೆ. ಶ್ರೇಷ್ಠವೆನಿಸಿದ ಪುಸ್ತಕಗಳನ್ನು ( ಇನ್ನೊಮ್ಮೆ ಓದಬೇಕೆಂಬ ಆಸೆಯಿಂದ) ಇಟ್ಟುಕೊಂಡು ಉಳಿದವನ್ನು ವಿಲೇವಾರಿ ಮಾಡಿದೆ. ಪ್ರತಿಸಲ ಊರಿಗೆ ಹೋದಾಗಲೂ ಎಷ್ಟೇ ಬೇಡ ಎಂದು ತೀರ್ಮಾನಿಸಿದ್ದರೂ ಐದಾರುನೂರು ರೂಪಾಯಿಗಳ ಪುಸ್ತಕ ಹೊತ್ತು ತರುತ್ತಿದ್ದೆ.…
ಲೇಖಕರು: ವಿನಾಯಕ
ವಿಧ: ಬ್ಲಾಗ್ ಬರಹ
January 16, 2007
ಒಂದು ಕಿಟಕಿ ಒಂದು ಬೆಳಗುಕೋಣೆಯೆಲ್ಲ ಬೆಳಕುಒಂದು ಹಾಡು ಒಂದು ಗುನುಗುಮನದೊಳಿಡಿಯೆ ನೆನಪು... ಒಂದು ಹಾಳೆ ಒಂದು ಪೆನ್ನುಬರೆಯಲೇನು ಕವನ?ಒಂದು ಗೆರೆಯ ಒಂದು ಪದಕೆನೆನಪು ಮತ್ತೆ ಚಲನ ಒಂದು ಸಂಜೆ ಒಂದು ಕಡಲುಮತ್ತೆ ನಾನು-ಅವಳುಒಂದು ನೋಟ ಒಂದು ಒಲವುಮಾತು ಹರಳು ಹರಳು ಒಂದು ಗಲ್ಲ ಒಂದು ಮುತ್ತುಮಾತು ಮುಗಿಸೊ ಮೊದಲುಒಂದು ಅಲೆಯ ಒಂದೆ ಝೋಕುಒದ್ದೆ ಎಲ್ಲ ಒಡಲು ಒಂದು ಮೌನ ಒಂದು ಉಸಿರುಲಜ್ಜೆ ಮುಡಿಯಲವಳುಒಂದು ನೋಟ ಒಂದು ಸ್ಪರ್ಷನೆಲವು ಮನವು ಮರಳು ಒಂದು ಫೋನು ಒಂದು ರಿಂಗುವಾಸ್ತವತೆಗೆ ತಂದುಮತ್ತೆ…
ಲೇಖಕರು: rajeshnaik111
ವಿಧ: Basic page
January 16, 2007
ಸುಮಾರು ೩ ವರ್ಷಗಳ ಹಿಂದೆ ಉದಯವಾಣಿಯಲ್ಲಿ ದೇವಕಾರದ ಬಗ್ಗೆ ಸೀತಾರಾಮ ಭಟ್ಟರ ಲೇಖನವೊಂದು ಬಂದಿತ್ತು. ದೇವಕಾರಿಗೆ ಭೇಟಿ ನೀಡಬೇಕೆಂದು ಅಂದೇ ನಿರ್ಧರಿಸಿಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಕದ್ರಾದಿಂದ ೨೫ಕಿಮಿ ದೂರದಲ್ಲಿದೆ ದೇವಕಾರು. ಕದ್ರಾ ಜಲಾಶಯದ ಒಂದು ಮಗ್ಗುಲಲ್ಲಿ ದೇವಕಾರಿದ್ದರೆ ಮತ್ತೊಂದು ಮಗ್ಗುಲಲ್ಲಿರುವುದು ಕೈಗಾ. ನನ್ನ ೩ ಭೇಟಿಗಳಲ್ಲಿ ಮೊದಲ ಭೇಟಿಯೇ ಅವಿಸ್ಮರಣೀಯ. ಅಕ್ಟೋಬರ್ ೨, ೨೦೦೪ರಂದು ನಾವು ದೇವಕಾರ ಕಡವು ತಲುಪಿದಾಗ ಸಂಜೆ ೫ ಆಗಿತ್ತು. ದೋಣಿಯವನಿಗೆ 'ಕೂ' ಹಾಕಿ, ಆತ ಬಂದು…
ಲೇಖಕರು: Shyam Kishore
ವಿಧ: ಬ್ಲಾಗ್ ಬರಹ
January 16, 2007
     ಚಿಕ್ಕಂದಿನಲ್ಲಿ ನಾವೆಲ್ಲ "ಪಾಡ್ಯ, ಬಿದಿಗೆ, ತದಿಗೆ.....ಹುಣ್ಣಿಮೆ/ಅಮಾವಾಸ್ಯೆ" ಅಂತ ಹದಿನೈದು ದಿನಗಳ ಬಾಯಿಪಾಠ ಮಾಡಿರುತ್ತೀವಿ ಅಲ್ಲವೇ? ಮನೆಯಲ್ಲಿ ಅಜ್ಜ ಅಥವಾ ಅಜ್ಜಿ ಇದ್ದರಂತೂ, ಈ ಬಾಯಿಪಾಠಗಳು ಬಹುತೇಕ "ಕಂಪಲ್ಸರಿ"ಯೇ ಬಿಡಿ! ಸುಮ್ಮನೆ ಪಾಡ್ಯ, ಬಿದಿಗೆ ಅಂತ ಬಾಯಿಪಾಠ ಮಾಡಿಸುವುದು ಒಂದು ರೂಢಿಯಾದರೆ, ಪ್ರತಿ ತಿಥಿ(ದಿನ)ಗೂ ಒಂದು ಹಬ್ಬವನ್ನು ತಳಕು ಹಾಕಿ ಅದರ ಮೂಲಕ ಬಾಯಿಪಾಠದಲ್ಲಿ ಇನ್ನಷ್ಟು ಆಸಕ್ತಿ ಚಿಗುರುವಂತೆ ಮಾಡುವುದು ಇನ್ನೊಂದು ಪದ್ಧತಿ. ನಮ್ಮಲ್ಲಿ ಹಬ್ಬಗಳಿಗೇನು ಕೊರತೆ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
January 15, 2007
ಕನ್ನಡದಲ್ಲಿ ವರ್ಷದ ಪ್ರತಿಯೊಂದು ಹುಣ್ಣಿಮೆಗೂ ಬೇರೆ ಬೇರೆ ಹೆಸರುಗಳಿವೆ. ಈ ಹೆಸರುಗಳು ಕನ್ನಡದ ಮನಸ್ಸು ಹುಣ್ಣಿಮೆಯನ್ನು ಯಾವ ಬಗೆಯ ಶ್ರೀಮಂತಿಕೆಯಲ್ಲಿ ಗ್ರಹಿಸಿಕೊಂಡಿದೆ ಅನ್ನುವುದನ್ನೂ ಸೂಚಿಸುವಂತಿದೆ. ಜನವರಿ-ಬನದ ಹುಣ್ಣಿಮೆ ಫೆಬ್ರವರಿ-ಭಾರತ ಹುಣ್ಣಿಮೆ ಮಾರ್ಚ್-ಹೋಳಿ ಹುಣ್ಣಿಮೆ ಏಪ್ರಿಲ್-ದವನದ ಹುಣ್ಣಿಮೆ ಮೇ-ಆಗಿ ಹುಣ್ಣಿಮೆ ಮತ್ತು (ಅಧಿಕ) ಕಾರಹುಣ್ಣಿಮೆ ಜೂನ್- ಕಾರ ಹುಣ್ಣಿಮೆ ಜುಲೈ-ಕಡ್ಲಿ ಕಡುಬು ಹುಣ್ಣಿಮೆ [ಗುರುಪೂರ್ಣಿಮಾ] ಆಗಸ್ಟ್-ನೂಲ ಹುಣ್ಣಿಮೆ ಸೆಪ್ಟೆಂಬರ್-ಅನಂತ ಹುಣ್ಣಿಮೆ…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
January 15, 2007
ಕನ್ನಡ ಕುಲ ಕೋಟಿಗೆ ಉತ್ತರಾಯಣ ಪುಣ್ಯಕಾಲವಾದ ಮಕರ ಸಂಕ್ರಾಂತಿಯ ಶುಭಾಶಯಗಳು. (bogaleragale.blogspot.com) ಓದುಗರ ಪ್ರೀತಿಯ ಒದೆತಗಳಿಂದಾಗಿ 2006 ಏಪ್ರಿಲ್ ತಿಂಗಳಲ್ಲಿ ಆರಂಭವಾದ ಈ ಬೊಗಳೆಯು ಆಗಸ್ಟ್ ಅಂತ್ಯದ ವೇಳೆಗೆ 10 ಸಾವಿರ ಒದೆತಗಳನ್ನು ತಾಳಿಕೊಂಡಿದ್ದು, ಇದೀಗ ಬೊಗಳೆ ರಗಳೆ ಬ್ಯುರೋದ ಅರಿವಿಗೆ ಬಾರದೆ ನಮ್ಮ (ಚಪಾತಿ) ಹಿಟ್ಟಿನ ಕೌಂಟರ್ 20K ದಾಟಿಬಿಟ್ಟಿದೆ. ಇದೇ ವೇಳೆ ಲೇಖನಗಳ ಸಂಖ್ಯೆಯೂ ದ್ವಿಶತಕ ದಾಟಿದೆ. ಇದಕ್ಕೆ ನಿಜವಾಗಿಯೂ ಕನ್ನಡ ನೆಟ್ಟೋದುಗರ ಮತ್ತು ಅನಿವಾರ್ಯ…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
January 15, 2007
ಇಂಗ್ಲಿಷ್ ಪತ್ರಿಕೆಯ ಸುದ್ದಿ-ಲೇಖನಗಳನ್ನು ಕನ್ನಡದಲ್ಲಿ ಅನುವಾದ ಮಾಡಿ ಕೊಡುವ ಪತ್ರಿಕೆಯೊಂದು ಆರಂಭವಾಗಲಿದೆಯಂತೆ. ಹಾಗೆ ನೋಡಿದರೆ ಇತರ ಕನ್ನಡ ಪತ್ರಿಕೆಗಳೂ ಕೂಡಾ ಇಂಗ್ಲಿಷಿನಿಂದ ಸುದ್ದಿ ಮತ್ತು ಲೇಖನಗಳನ್ನು ಅನುವಾದ ಮಾಡಿ ಕೊಡುವುದು ಸಾಮಾನ್ಯ. ಆದರೆ ಇದು The Times Of Indiaವನ್ನು ಯಥಾ ರೀತಿ ಕನ್ನಡಕ್ಕೆ ಭಟ್ಟಿ ಇಳಿಸಿ ಕೊಡುವ ಉದ್ದೇಶ ಹೊಂದಿದೆ.ನಿಮ್ಮ ಪ್ರತಿಕ್ರಿಯೆ ಏನು? India Today ಅಂತಹ ಪತ್ರಿಕೆಗಳ ಗುಜರಾಥಿ,ಮಲೆಯಾಳ ಆವೃತಿ ಬಹಳ ಹಿಂದಿನಿಂದ ಲಭ್ಯವಿವೆ ಎನ್ನುವುದನ್ನು…