ಎಲ್ಲ ಪುಟಗಳು

ವಿಧ: Basic page
January 17, 2007
ಒಡೆಯರ ನುಡಿಮುತ್ತುಗಳು ೧. "ವೈವಿಧ್ಯತೆಯೇ ಪ್ರಾಚಿನ ಭಾರತದ ವೈಶಿಷ್ಟ್ಯ. ವಿವಿಧ ವರ್ಣ, ವಿವಿಧ ರಾಗ, ನಾನಾ ಜನ, ನಾನಾ ಮತ, ನಾನಾ ಶಿಲ್ಪ, ಈ ವೈವಿಧ್ಯ ಪೋಷಣೆಯ ಜೊತೆಗೆ ಐಕ್ಯತೆಯನ್ನೂ ಧೃಢ ಪಡಿಸಬೇಕು ಇಲ್ಲದಿದ್ದರೆ ನಾವು ಗಳಿಸಿದ ಸ್ವಾತಂತ್ರ್ಯ ವೆಂಬ ಆಸ್ತಿ ಕರಗಿ ಹೋದೀತು".೨. "ಭಾರತೀಯ ಸಂಗೀತದಲ್ಲಿ ಆಧ್ಯಾತ್ಮದ ಅಂಶ ಹೆಚ್ಚು. ಪಾಶ್ಚಾತ್ಯ ಸಂಗೀತದಲ್ಲಿ ಸ್ವರ ಸಮ್ಮೇಳನ ಹೆಚ್ಚು".೩. "ನಾವೆಲ್ಲರೂ ವಿಶ್ವಾತ್ಮನಾದ ಪರಮಾತ್ಮನ ಅಂಶಗಳು. ಈ ಒಂದು ಅರಿವೇ ನನ್ನನ್ನು ಸದಾ ಕಾಪಾಡುತ್ತಿರುವ ಹಿರಿಯ…
ಲೇಖಕರು: rajeshnaik111
ವಿಧ: ಬ್ಲಾಗ್ ಬರಹ
January 17, 2007
ಗೆಳೆಯರೆ, ನಮ್ಮ ಸಂಗೀತ ನಿರ್ದೇಶಕರಾಗಿರುವ ಗುರುಕಿರಣ್ ಈಗ ತೆಲುಗು ಚಲನಚಿತ್ರ 'ಮಹಾರಥಿ(ಧಿ)' ಗೆ ಸಂಗೀತ ನೀಡಿದ್ದು ಕನ್ನಡದ ಗಾಯಕರಿಂದಲೇ ಹಾಡಿಸಿದ್ದಾರೆ. ಜೈ ಕನ್ನಡ. ಕನ್ನಡದವರು ಯಾಕಪ್ಪಾ ತೆಲುಗು ಹಾಡನ್ನು ಕೇಳ್ಬೇಕು..ಅಂತೀರಾ? ಆದರೆ ನಮ್ಮ ಕನ್ನಡದ ಹುಡುಗ ಹ್ಯಾಗೆ ಸಂಗೀತ ನೀಡಿದ್ದಾನೆ ಎಂದು ಕೇಳಬಹುದಲ್ಲವೆ. ನಾನು ಬಹಳ ಇಷ್ಟಪಟ್ಟ ಹಾಡು 'ಮಂಗಮ್ಮಾ ಮಂಗಮ್ಮಾ'... ಹಾಡಿದ್ದು ಗುರುಕಿರಣ್ ಮತ್ತು ಉಡುಪಿಯ ಚೇತನಾ ಆಚಾರ್ಯ. ಆಂದ ಹಾಗೇ ರಾಜೇಶ್ ಕೃಷ್ಣನ್ ಕೂಡಾ ಒಂದು ಹಾಡು ಹಾಡಿದ್ದಾರೆ.…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
January 17, 2007
ಕಾಸರಗೋಡು ಹೊರನಾಡಲ್ಲುಳಿದು ಹೋದ ಕನ್ನಡದ ಕೂಸು ಅನ್ನಲು ಇದಕ್ಕಿಂತ ರುಜುವಾತು ಬೇಕೆ? ಇಲ್ಲಿ ನೋಡಿ ಅಂದ ಹಾಗೆ ಪೋರ್ಕುಳಿ-ಇದು ಕನ್ನಡದ್ದೇ, ಪೋರ್ಕುಳಿ ಅಂದರೆ 'ಶಕ್ತಿ ಪ್ರದರ್ಶನ'. ಇದು ಆಡುನುಡಿಯಲ್ಲಿ ಈಗಲೂ ಬಳಕೆಯಲ್ಲಿದೆ.
ಲೇಖಕರು: Shyam Kishore
ವಿಧ: ಬ್ಲಾಗ್ ಬರಹ
January 17, 2007
     ಗೂಗಲ್ ಮೈಲಿನಲ್ಲಿ (ಜಿ-ಮೈಲ್) ಅಳಿಸಿದ ಪತ್ರಗಳನ್ನು ಹಾಕುವ "ಕಸದ ಬುಟ್ಟಿ"ಯನ್ನು (ಟ್ರಾಶ್ ಫೋಲ್ಡರ್!) ಒಮ್ಮೊಮ್ಮೆ ಭೇಟಿ ನೀಡಿ, ಅದನ್ನು ಗಮನಿಸುವುದು ನನ್ನ ಅಭ್ಯಾಸ. "ಇದೇನಪ್ಪ, ಇದೂ ಒಂದು ಅಭ್ಯಾಸವೇ?" ಅಂತ ಹುಬ್ಬೇರಿಸಬೇಡಿ. ಸರಿಯಾಗಿ ಗಮನಿಸದಿದ್ದಲ್ಲಿ, ಅದನ್ನೊಮ್ಮೆ (ಟ್ರಾಶ್ ಫೋಲ್ಡರ್ ಒಳಗೆ ಹೋಗಿ) ಗಮನಿಸಿ. ಅಳಿಸಿದ ಪತ್ರಗಳ ಪಟ್ಟಿಯ ಮೇಲೆ ಒಂದಷ್ಟು "ಪುನರ್ಬಳಕೆಯ ಬಗ್ಗೆ ಮಾಹಿತಿಗಳು" ಆಗಾಗ ಮೂಡಿ ಬರುತ್ತಿರುತ್ತವೆ. ಕೆಲವೊಂದು ಅಂಶಗಳು ನಿಜಕ್ಕೂ ನಮ್ಮನ್ನು "ಹೌದಾ?" ಅಂತ…
ಲೇಖಕರು: venkatesh
ವಿಧ: ಚರ್ಚೆಯ ವಿಷಯ
January 17, 2007
ಹೇಗಿದ್ದರೂ, ಈ ಶಿರ್ಷಕೆಯ ಅಡಿಯಲ್ಲಿ ಏಕೆ 'ಚರ್ಚೆ' ಶುರು ಮಾಡಬಾರದು ಎನ್ನಿಸಿತು. ನಿನ್ನೆ ನಾನು 'ತ್ರಿವಿಕ್ರಮ ಹೆಜ್ಜೆಗಳು 'ಎಂಬ ಅತ್ಯಂತ ಸೊಗಸಾದ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಮೊದಲನೆಯ ಲೇಖನವೇ, ನಮ್ಮ ಪೂಜ್ಯ,ಶ್ರೀ.ಡಾ.ಸರ್.ಎಂ.ವಿಶ್ವೇಶ್ವರಯ್ಯನವರದು ! ಅವರು ಮೈಸೂರು ರಾಜ್ಯಕ್ಕೆ ಕೊಟ್ಟ ಕೊಡುಗೆಗಳನ್ನು ಓದಿ ಆನಂದವಾಯಿತು. ವಿಶ್ವೇಶ್ವರಯ್ಯನವರು ಅಂದು ಇಲ್ಲದಿದ್ದರೆ, ನಮ್ಮ ರಾಜ್ಯದ ಗತಿ ಏನಾಗುತ್ತಿತ್ತು ? ಎಂದು ಮನಸ್ಸು ಹೊಯ್ದಾಡುತ್ತಿತ್ತು. ಅವರ ದೂರದೃಷ್ಟಿ, ಕೆಲಸದಲ್ಲಿನ…
ಲೇಖಕರು: rajeshnaik111
ವಿಧ: ಬ್ಲಾಗ್ ಬರಹ
January 17, 2007
ಮಿಥುನ್ ಬೀರಾಲ: ಆರಂಭಿಕ ಆಟಗಾರನಾಗಿ ೬೦ರ ದಶಕದ ಕೊನೆಯಲ್ಲಿ ಮತ್ತು ೭೦ರ ದಶಕದ ಆರಂಭದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಾಜಿ ರಣಜಿ ಆಟಗಾರ ರಘುನಾಥ್ ಬೀರಾಲ ಇವರ ಮಗನೇ ಮಿಥುನ್. ಸಾಧಾರಣ ಮಟ್ಟದ ಆರಂಭಿಕ ಆಟಗಾರನಾಗಿರುವ ಮಿಥುನ್, ತನ್ನ ಚೊಚ್ಚಲ ರಣಜಿ ಪಂದ್ಯವನ್ನಾಡಿದ್ದು ೧೯೯೯-೨೦೦೦ ಋತುವಿನಲ್ಲಿ. ತನ್ನ ನೈಜ ಪ್ರತಿಭೆಯ ಬಲಕ್ಕಿಂತಲೂ ಹೆಚ್ಚಾಗಿ ತಂದೆಗೆ ಕೆ.ಎಸ್.ಸಿ.ಎ ಯಲ್ಲಿರುವ 'ಇನ್-ಫ್ಲುಯನ್ಸ್' ನಿಂದ ತಂಡಕ್ಕೆ ಬಂದವರು ಮಿಥುನ್. ಆಯ್ಕೆಗಾರರು ಎಡವಿದ್ದೇ ಇಲ್ಲಿ. ಪ್ರತಿಭೆಯುಳ್ಳ…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
January 17, 2007
ಬೊಗಳೂರು, ಜ.17- ಪೊಲೀಸ್ ಠಾಣೆ ಧ್ವಂಸ ಮಾಡಿದ ಸುದ್ದಿಯನ್ನು ತಡವಾಗಿ ಸಮರ್ಥಿಸಿಕೊಂಡಿರುವ ಸಂಬಂಧಪಟ್ಟ ಸೈನಿಕರು, ತಮ್ಮ ಪೂರ್ವಜರು ಕೂಡ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸಿಡಿದೆದ್ದು ಪ್ರತಿಭಟನೆ ನಡೆಸಿದ ಘಟನೆಯನ್ನು ಉಲ್ಲೇಖಿಸಿದ್ದಾರೆ. (bogaleragale.blogspot.com) ತಮ್ಮದು ಸಿಪಾಯಿ ದಂಗೆ-II ಎಂದು ಕರೆದುಕೊಂಡಿದ್ದಾರವರು. ಹಿಂದಿನ ಕಾಲದಲ್ಲಿ ದುರಾಡಳಿತ, ದೌರ್ಜನ್ಯ, ತುಳಿತ ಇತ್ಯಾದಿಗಳ ವಿರುದ್ಧ ನಮ್ಮವರು ಬ್ರಿಟಿಷ್ ಆಡಳಿತದ ವಿರುದ್ಧ ತಿರುಗಿಬಿದ್ದು, 1857ರಲ್ಲಿ ದಂಗೆ ಎದ್ದಿದ್ದರು…
ಲೇಖಕರು: ASHOKKUMAR
ವಿಧ: ಚರ್ಚೆಯ ವಿಷಯ
January 17, 2007
ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಸಾಕು ಎನ್ನುವ ಪರಿಕಲ್ಪನೆ ಬದಲಾಗುತ್ತಿದೆ. ಬಡ ಮಕ್ಕಳಿಗೆ ಮಧ್ಯಾಹ್ನದೂಟ ಕೊಡಬೇಕು.ಜತೆಗೆ ಪೌಷ್ಟಿಕ ಆಹಾರವಾಗಿ ಮೊಟ್ಟೆಯನ್ನೋ ಹಾಲನ್ನೋ ನೀಡಬೇಕು ಎನ್ನುವ ಯೋಚನೆ ನಮ್ಮ ರಾಜಕಾರಣಿಗಳದ್ದು.ಇದನ್ನೆಲ್ಲಾ ಕೊಡಲು ಸರ್ಕಾರಕ್ಕೆ ಸಾಧ್ಯವೇ? ಅದು ಕಾರ್ಯಸಾಧ್ಯವೇ ಎಂದವರು ತಲೆ ಕೆಡಿಸಿಕೊಳ್ಳುತ್ತಿಲ್ಲ.ಆರಂಭಿಸಿ ಹೆಸರು ಮಾಡಿಕೊಳ್ಳುವ ಹಂಚಿಕೆ ಅವರದು. ಈ ಬಗ್ಗೆ ನಿಮಗೇನಿಸುತ್ತದೆ?
ಲೇಖಕರು: Shyam Kishore
ವಿಧ: Basic page
January 17, 2007
     ಆ ಊರಿನ ಎಲ್ಲರ ಬಾಯಲ್ಲೂ ಮುಲ್ಲಾ ನಸ್ರುದ್ದೀನ್ ಮಾತೇ. ಮುಲ್ಲಾ ಆ ಊರಿನಲ್ಲಿ ಭಿಕ್ಷೆ ಬೇಡಲು ಹೋದ ಕಡೆಯಲ್ಲೆಲ್ಲ, ಯಾರೇ ಆಗಲಿ ಅವನ ಮುಂದೆ ಒಂದು ದೊಡ್ಡ ಮತ್ತು ಇನ್ನೊಂದು ಚಿಕ್ಕ ನಾಣ್ಯಗಳನ್ನು ಇಟ್ಟರೆ, ಮುಲ್ಲಾ ಚಿಕ್ಕ ನಾಣ್ಯವನ್ನೇ ಆರಿಸಿಕೊಳ್ಳುತ್ತಿದ್ದ. ಆ ಊರಿನಲ್ಲಿ ಚಿಕ್ಕ ನಾಣ್ಯದ ಬೆಲೆ ದೊಡ್ಡ ನಾಣ್ಯಕ್ಕಿಂತ ಕಡಿಮೆ. ಹಾಗಾಗಿ ಮುಲ್ಲಾನ ಈ ಆಯ್ಕೆ ಎಲ್ಲರಿಗೂ ಬಹಳ ತಮಾಶೆಯಾಗಿ ಕಾಣುತ್ತಿತ್ತು. ಜನ ನಾ ಮುಂದು, ತಾ ಮುಂದು ಅನ್ನುವಂತೆ ಮುನ್ನುಗ್ಗಿ ಭಿಕ್ಷೆ ಹಾಕಿ ಮಜ…
ಲೇಖಕರು: venkatesh
ವಿಧ: ಕಾರ್ಯಕ್ರಮ
January 16, 2007
ಬೆಳ್ಳಿ ಹಬ್ಬ ದ ಉದ್ಘಾಟನೆ, ೨೧-೦೧-೨೦೦೭ ರಂದು, ಪ್ರಾರಂಭವಾಗಿ ವರ್ಷಪೂರ್ತಿಯಾಗಿ, ಸಂಗೀತೋತ್ಸವ, ವಿಚಾರ ಸಂಕಿರಣ, ಕಾರ್ಯಾಗಾರ, ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರು ಸಂಗೀತ ವಿದ್ಯಾಲಯದ ರುವಾರಿ ಶ್ರೀಮತಿ ಉಮಾ ನಾಗಭೂಷಣ ರವರು. ಶ್ರೀಮತಿ ಉಮಾ ನಾಗಭೂಷಣ ರವರು, ಮೈಸೂರು ವಿಶ್ವವಿದ್ಯಾಲಯದ ಬಿ.ಎ; ಯ 'ಕರ್ಣಾಟಕ ಸಂಗೀತ ಪರೀಕ್ಷಾಮಂಡಲಿ'ಯ ಸೀನಿಯರ್ ಗ್ರೇಡ್ ನಲ್ಲಿ ಪ್ರಥಮ Rank ಹಾಗೂ 'ವಿದ್ವತ್ ಪದವಿ' ಪಡೆದ ಅವರು ತಮ್ಮ ವಿವಾಹದ ನಂತರ 'ಡೊಂಬಿವಲಿ'ಯಲ್ಲೇ ನೆಲಸಿ, ಮಕ್ಕಳಿಗೆ ಸಂಗೀತ…